ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯುಕೆಯಲ್ಲಿ ಕೊರೊನಾ ಲಸಿಕೆ ಮನುಷ್ಯರ ಮೇಲೆ ಪ್ರಯೋಗ

|
Google Oneindia Kannada News

ಬ್ರಿಟನ್, ಏಪ್ರಿಲ್ 23 : ವಿಶ್ವದೆಲ್ಲೆಡೆ ಕೊರೊನಾ ಆತಂಕ ಸೃಷ್ಟಿ ಮಾಡಿದೆ. ಈ ಸೋಂಕಿಗೆ ಔಷಧಿಯನ್ನು ಯಾರು ಕಂಡು ಹಿಡಿಯಲಿದ್ದಾರೆ? ಎಂದು ವಿಶ್ವವೇ ಎದುರು ನೋಡುತ್ತಿದೆ. ಯುಕೆ ಇಂದು ಮಾನವನ ಮೇಲೆ ಔಷಧಿ ಪ್ರಯೋಗ ಮಾಡಲು ಮುಂದಾಗಿದೆ.

ಆಕ್ಸಫರ್ಡ್ ವಿಶ್ವವಿದ್ಯಾಲಯದ ವಿಜ್ಞಾನಿಗಳ ತಂಡ ಕಂಡು ಹಿಡಿದಿರುವ ಔಷಧಿಯನ್ನು ಗುರುವಾರ ಮಾನವನ ಮೇಲೆ ಪ್ರಯೋಗ ಮಾಡಲಾಗುತ್ತದೆ. ಇದರಿಂದಾಗಿ ಶೇ 80 ರಷ್ಟು ಸೋಂಕು ಕಡಿಮೆಯಾಗುವ ವಿಶ್ವಾಸವನ್ನು ವಿಜ್ಞಾನಿಗಳು ವ್ಯಕ್ತಪಡಿಸಿದ್ದಾರೆ.

20 ಮಿಲಿಯನ್‌ನಷ್ಟು ತೆರಿಗೆ ಹಣವನ್ನು ಈ ಔಷಧ ಕಂಡು ಹಿಡಿಯುವ ಯೋಜನೆಗಾಗಿ ಮೀಸಲಾಗಿಡಲಾಗಿದೆ. ಲಂಡನ್‌ನಲ್ಲಿರುವ ಇಂಪಿಯರಿಯಲ್ ಕಾಲೇಜ್ ಮತ್ತೊಂದು ಔಷಧ ಕಂಡು ಹಿಡಿಯುವ ಪ್ರಯತ್ನದಲ್ಲಿದೆ.

Human Trials Of Coronavirus Vaccine Begin In UK

18 ರಿಂದ 55 ವರ್ಷದ 510 ಜನರನ್ನು ಔಷಧಿ ನೀಡುವುದಕ್ಕೆ ಆಯ್ಕೆ ಮಾಡಲಾಗಿದೆ. "ಈ ಪ್ರಕ್ರಿಯೆ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ" ಎಂದು ಯುಕೆ ಆರೋಗ್ಯ ಸಚಿವ ಮ್ಯಾಟ್ ಹ್ಯಾಂಗ್‌ಕಾಕ್ ಹೇಳಿದ್ದಾರೆ.

ಇಡೀ ವಿಶ್ವದಲ್ಲಿ ಕೊರೊನಾಗೆ ಔಷಧಿ ಕಂಡುಹಿಡಿಯಲು 150ಕ್ಕೂ ಅಧಿಕ ಸಂಶೋಧನೆಗಳು ನಡೆಯುತ್ತಿವೆ. ಇವುಗಳಲ್ಲಿ ಜರ್ಮನಿ ಮತ್ತು ಯುಕೆ ಮಾತ್ರ ಮಾನವನ ಮೇಲೆ ಲಸಿಕೆ ಪ್ರಯೋಗ ಮಾಡಲು ಮುಂದಾಗಿವೆ.

ವಿಶ್ವದ ವಿವಿಧ ದೇಶಗಳಲ್ಲಿ ಕೊರೊನಾ ಆತಂಕ ಸೃಷ್ಟಿಮಾಡಿದೆ. ಸರಿಯಾದ ಲಸಿಕೆ ಕಂಡು ಹಿಡಿಯಲು 12 ರಿದ 18 ತಿಂಗಳು ಬೇಕಾಗಲಿದೆ ಎಂದು ತಜ್ಞರು ಅಂದಾಜಿಸಿದ್ದಾರೆ. ಈಗ ಲಸಿಕೆ ನೀಡಿರುವ ವ್ಯಕ್ತಿಗಳ ನಿಖರ ಫಲಿತಾಂಶ ಜೂನ್‌ನಲ್ಲಿ ಲಭ್ಯವಾಗಲಿದೆ.

ಇನ್ನು ಕೊರೊನಾ ಸೋಂಕು ಮೊದಲು ಹುಟ್ಟಿದ ಚೀನಾದಲ್ಲಿಯೂ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಹಾಂಗ್‌ಕಾಂಗ್‌ನ ಕ್ಯಾನ್‌ಸಿನೋ ಬಯೋಲಾಜಿಕಲ್ ಸಂಸ್ಥೆ ಅಭಿವೃದ್ಧಿಪಡಿಸಿದ ಲಸಿಕೆಯ ಕ್ಲಿನಿಕಲ್ ಟ್ರಯಲ್ ನಡೆಯುತ್ತಿದೆ.

ಬೀಜಿಂಗ್‌ ಇನ್‌ಸ್ಟಿಟ್ಯೂಟ್ ಆಫ್ ಬಯೋಟೆಕ್ನಾಲಜಿಯು ಲಸಿಕೆ ಅಭಿವೃದ್ಧಿಯ 2ನೇ ಹಂತದಲ್ಲಿದೆ. ಅಮೆರಿಕದ ಔಷಧಿ ತಯಾರಿಕಾ ಸಂಸ್ಥೆ ಮಾಡೆರ್ನಾ ಲಸಿಕೆಯೊಂದನ್ನು ಅಭಿವೃದ್ಧಿಪಡಿಸಿದ್ದು, ಇದನ್ನು ಮನುಷ್ಯರ ಮೇಲೆ ಇನ್ನೂ ಪ್ರಯೋಗ ಮಾಡಿಲ್ಲ.

English summary
Human trials of the potential coronavirus vaccine would commence in the UK. Scientists at the University of Oxford believe that there is an 80 per cent chance of success.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X