ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೂಯೆಜ್ ಕಾಲುವೆಯಲ್ಲಿ ಅಡ್ಡಲಾಗಿ ನಿಂತ ಬೃಹತ್ ಹಡಗು: ಭಾರಿ ಸಂಚಾರ ದಟ್ಟಣೆ

|
Google Oneindia Kannada News

ಕೈರೋ, ಮಾರ್ಚ್ 25: ಈಜಿಪ್ಟ್‌ನ ಸೂಯೆಜ್ ಕಾಲುವೆಯಲ್ಲಿ ಬೃಹತ್ ಕಂಟೇನರ್ ಹಡಗು ಸಿಲುಕಿಕೊಂಡಿದ್ದು, ಅದನ್ನು ಅಲ್ಲಿಂದ ತೆರವುಗೊಳಿಸುವ ಪ್ರಯತ್ನಗಳು ಇದುವರೆಗೂ ಸಫಲವಾಗಿಲ್ಲ. ಇದರಿಂದ ಈ ಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಜಗತ್ತಿನ ಅತ್ಯಂತ ಮುಖ್ಯ ಜಲಮಾರ್ಗ ಎಂದು ಕರೆಯಲಾಗುವ ಸೂಯೆಜ್ ಕಾಲುವೆಯಲ್ಲಿ ಹಡಗುಗಳ ಸಂಚಾರ ಹಿಂದಿನಂತೆ ಸುಗಮವಾಗಿ ನಡೆಯಲು ಹಲವು ದಿನಗಳೇ ಬೇಕಾಗಬಹುದು ಎನ್ನಲಾಗಿದೆ.

ಹಡಗನ್ನು ಮರಳಿ ಸಂಚಾರಕ್ಕೆ ತರುವ ಕಾರ್ಯಾಚರಣೆಯನ್ನು ಗುರುವಾರ ಬೆಳಗ್ಗಿನವರೆಗೂ ಸ್ಥಗಿತಗೊಳಿಸಲಾಗಿತ್ತು. ಹೂಳು ತೆಗೆಯುವ ಕೆಲಸಗಾರರು ಹಡಗು ನೀರಿನಲ್ಲಿ ತೇಲುವಂತೆ ಮಾಡಲು ಶ್ರಮಿಸುತ್ತಿದ್ದಾರೆ. ಬಳಿಕ ಅದನ್ನು ಮಧ್ಯಭಾಗಕ್ಕೆ ದೂಡುವ ಪ್ರಯತ್ನ ನಡೆಸಲಾಗುವುದು ಎಂದು ಹಡಗಿನ ವ್ಯವಸ್ಥಾಪಕರು ತಿಳಿಸಿದ್ದಾರೆ.

ಅಮೆರಿಕ ಯುದ್ಧನೌಕೆಯನ್ನು ಓಡಿಸಿದ ಚೀನಾ: ಜೋ ಬೈಡನ್‌ಗೆ ಮೊದಲ ಬಿಸಿ ಅಮೆರಿಕ ಯುದ್ಧನೌಕೆಯನ್ನು ಓಡಿಸಿದ ಚೀನಾ: ಜೋ ಬೈಡನ್‌ಗೆ ಮೊದಲ ಬಿಸಿ

ಈ ಹಡಗು ಸುಮಾರು 400 ಮೀಟರ್ ಉದ್ದವಿದ್ದು, ಅಂದಾಜು 200,000 ಮೆಟ್ರಿಕ್ ಟನ್ ತೂಕವಿದೆ. ಅದರ ಬೃಹತ್ ಗಾತ್ರದ ಕಾರಣ ತೆರವು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಇದರಲ್ಲಿ ಸುಮಾರು 12 ಮಹಡಿ ಕಟ್ಟಡದ ಎತ್ತರದಷ್ಟು ಕಂಟೇನರ್ ಇದೆ. ಹಡಗಿನ ಅಡಿಯಲ್ಲಿನ ಹೂಳನ್ನು ತೆರವುಗೊಳಿಸಲು ಹಡಗಿನ ಪಕ್ಕ ನಿಲ್ಲಿಸಿದ್ದ ಬೃಹತ್ ಎಸ್ಕವೇಟರ್, ಹಡಗಿನ ಎದುರು ಆಟದ ಸಾಮಾನಿನಂತೆ ಕಾಣಿಸುತ್ತಿತ್ತು.

Huge Container Ship Blocking Egypts Suez Canal Costs About $400 Million An Hour

2018ರಲ್ಲಿ ನಿರ್ಮಾಣಗೊಂಡಿರುವ, ತೈವಾನ್ ಸಾರಿಗೆ ಕಂಪೆನಿ ಎವರ್‌ಗ್ರೀನ್ ಮರೈನ್ ಹೆಸರಿನ ಹಡಗು, ಸೂಯೆಜ್ ಕಾಲುವೆಯ ಕಿರಿದಾದ ಸ್ಥಳದಲ್ಲಿ ಅಡ್ಡಲಾಗಿ ನಿಂತಿರುವುದರಿಂದ, ಈ ಮಾರ್ಗದ ಮೂಲಕ ಅನೇಕ ದೇಶಗಳಿಗೆ ಸಾಗುವ ಹಡಗುಗಳ ಸಂಚಾರ ಸ್ಥಗಿತಗೊಂಡಿದೆ. ದಿನಕ್ಕೆ ಈ ಮಾರ್ಗದಲ್ಲಿ ಸರಾಸರಿ 50 ಹಡಗುಗಳು ಸಂಚರಿಸುತ್ತವೆ. ಕೆಲವು ಸಮಯದಲ್ಲಿ ಇನ್ನೂ ಹೆಚ್ಚಿನ ಹಡಗುಗಳು ಓಡಾಡುತ್ತವೆ. ಜಾಗತಿಕ ವ್ಯಾಪಾರದ ಶೇ 12ರಷ್ಟು ಉತ್ಪನ್ನಗಳು ಇಲ್ಲಿಂದಲೇ ಸಾಗಾಟವಾಗುತ್ತವೆ. ಬುಧವಾರದಿಂದ ಹಡಗು ಇಲ್ಲಿಯೇ ಸಿಲುಕಿಕೊಂಡಿದ್ದು, ಸುಮಾರು 150 ಹಡಗುಗಳು ಜಲಮಾರ್ಗ ತೆರವಿಗಾಗಿ ಕಾದಿವೆ.

ಮಂಗಳವಾರ ಈ ಕಿರಿದಾದ ಜಲಮಾರ್ಗದಲ್ಲಿ ಹಡಗು ತೆರಳುವಾಗ ಭಾರಿ ಗಾಳಿ ಬೀಸಿತ್ತು. ಇದರಿಂದ ತೀರಗಳಲ್ಲಿನ ಮರಳು ನೀರಿಗೆ ಸೇರಿತ್ತು. ಮುಂದಿನ ಮಾರ್ಗ ಸರಿಯಾಗಿ ಕಾಣಿಸದ ಕಾರಣ ಹಡಗು ಸಾಗಿಸುವುದು ಕಷ್ಟಕರವಾಗಿತ್ತು. ಇದರಿಂದ ನಿಯಂತ್ರಣ ಕಳೆದುಕೊಂಡ ನಾವಿಕರು ಅದನ್ನು ಮರಳಿನ ಮೇಲೆ ಸಾಗಿಸಿದ್ದರಿಂದ ಈ ಅವಘಡ ಉಂಟಾಗಿದೆ. ಇದರಿಂದ ಪ್ರತಿ ಗಂಟೆಗೆ ಸುಮಾರು 400 ಮಿಲಿಯನ್ ಡಾಲರ್ ವೆಚ್ಚವಾಗುತ್ತಿದೆ.

English summary
A massive container ship named Ever Green blocking Egypt's Suez Canal costs About $400 million per an hour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X