ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬುಲೆಟ್ ತಡೆದು ವ್ಯಕ್ತಿಯ ಪ್ರಾಣ ಕಾಪಾಡಿದ ಮೊಬೈಲ್!

|
Google Oneindia Kannada News

ನವದೆಹಲಿ, ಸೆಪ್ಟೆಂಬರ್, 19: ಮೊಬೈಲ್ ಫೋನ್ ಒಂದು ವ್ಯಕ್ತಿಯ ಜೀವ ಕಾಪಾಡಿದ ಕತೆಯನ್ನು ಕೇಳಲೇಬೇಕು. ಗುಂಡೇಟಿನಿಂದ ವ್ಯಕ್ತಿಯನ್ನು ಬಚಾವ್ ಮಾಡಿದ ಸ್ಮಾರ್ಟ್ ಫೋನ್ ಆತನ ಬದುಕಿಗೆ ಬುಲೆಟ್ ಫ್ರೂಫ್ ಜಾಕೆಟ್ ಆಗಿ ಕೆಲಸ ಮಾಡಿದೆ.

ಕಳೆದ ತಿಂಗಳು ದಕ್ಷಿಣ ಆಫ್ರಿಕಾದಲ್ಲಿ ನಡೆದಿದ್ದ ಪ್ರಕರಣ ಇದೀಗ ಸುದ್ದಿ ಮಾಡುತ್ತಿದೆ. ಹುವೈ ಪಿ 8 ಲೈಟ್ ವ್ಯಕ್ತಿಯ ಜೀವ ಕಾಡಿದ ಸ್ಮಾರ್ಟ್ ಫೋನ್. ಬರ್ತ್ ಡೇ ಪಾರ್ಟಿಯೊಂದನ್ನು ಮುಗಿಸಿಕೊಂಡು ಮನೆಗೆ ಮರಳುತ್ತಿದ್ದ ಸಿರಾಜ್ ಅಬ್ರಾಂ ಎಂಬುವರ ಮೇಲೆ ದರೋಡೆಕೋರರು ದಾಳಿ ಮಾಡಿದ್ದಾರೆ. ಈ ವೇಳೆ ದರೋಡೆಕೋರರು ಹಾರಿಸಿದ ಗುಂಡು ಅಬ್ರಾಂ ಎದೆಭಾಗಕ್ಕೆ ಬಡಿದಿದೆ.[ಅಂತೂ ಇಂತೂ ಕನ್ನಡ ಪಾಠ ಕಲಿತ ಬಿಎಂಟಿಸಿ]

 Huawei P8 Lite Saves Man's Life By Stopping Bullet

ಆದರೆ ಅಬ್ರಾಂ ತಾವು ತೊಟ್ಟಿದ್ದ ಜಾಕೆಟ್ ನಲ್ಲಿ ಹುವೈ ಪಿ 8 ಮೊಬೈಲ್ ಇಟ್ಟುಕೊಂಡಿದ್ದರು. ದುಷ್ಕರ್ಮಿಗಳು ಹಾರಿಸಿದ ಗುಂಡು ಮೊಬೈಲ್ ನ್ನು ಸೀಳಿದೆ. ಪರಿಣಾಮ ಮೊಬೈಲ್ ನುಜ್ಜುಗುಜ್ಜಾಗಿದ್ದರೂ ಅಬ್ರಾಂ ಅವರಿಗೆ ಯಾವ ಅಪಾಯ ಆಗಿಲ್ಲ.[ಬೆಂಗಳೂರು ಸಾರ್ವಜನಿಕ ಸಾರಿಗೆ ಎಲ್ಲ ಮಾಹಿತಿ ಅಂಗೈನಲ್ಲಿ]

ಇದಾದ ಮೇಲೆ ಹುವೈ ಕಂಪನಿ ಅಬ್ರಾಂ ಅವರಿಗೆ ಹುವೈ ಪಿ 9 ಲೈಟ್ ಮೊಬೈಲ್ ನ್ನು ನೀಡುತ್ತೇನೆ ಎಂದು ತಿಳಿಸಿದೆ. ಒಟ್ಟಿನಲ್ಲಿ ಲೋಹದ ಹೊರಕವಚ ಹೊಂದಿದ್ದ ಸ್ಮಾರ್ಟ್ ಫೋನ್ ವ್ಯಕ್ತಿಯ ಜೀವ ಉಳಿಸಿದ್ದು ಮಾತ್ರವಲ್ಲದೇ ದರೋಡೆಕೋರರಿಂದ ಆತನನ್ನು ರಕ್ಷಣೆ ಮಾಡಿದೆ.

English summary
The Huawei P8 Lite has actually stopped a bullet and saved its owner's life. This incident occurred in South Africa when a man called Siraaj Abrahams got shot while he was returning home from a birthday party. Mr. Abrahams was just outside of his home when a couple of robbers shot him and stole $20 from his person, he did faint when he got shot, but the Huawei P8 Lite was able to save his life.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X