ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗುಡ್ ನ್ಯೂಸ್: 2020ರ ವರ್ಷಾಂತ್ಯದ ವೇಳೆಗೆ ಕೊವಿಡ್-19 ಲಸಿಕೆ

|
Google Oneindia Kannada News

ನವದೆಹಲಿ, ಆಗಸ್ಟ್.30: ಕೊರೊನಾವೈರಸ್ ಸೋಂಕಿನ ಅಟ್ಟಹಾಸಕ್ಕೆ ಇಡೀ ಜಗತ್ತಿಗೆ ಜಗತ್ತು ತತ್ತರಿಸಿ ಹೋಗಿದೆ. ಚೀನಾದ ವುಹಾನ್ ನಲ್ಲಿ ಮೊದಲು ಕಾಣಿಸಿಕೊಂಡ ಮಹಾಮಾರಿ ವಿಶ್ವದಾದ್ಯಂತ ವ್ಯಾಪಿಸಿದ್ದು, ಲಕ್ಷಾಂತರ ಜೀವಗಳನ್ನು ಬಲಿ ತೆಗೆದುಕೊಂಡಿದೆ.

Recommended Video

Covid 19 ಲಸಿಕೆಗಾಗಿ ಭಾರತದಲ್ಲಿ Bangladesh ಹೂಡಿಕೆ | Oneindia Kannada

ಜಗತ್ತು ಇಂದು ಕೊವಿಡ್-19 ಮಹಾಮಾರಿ ವಿರುದ್ಧ ಹೋರಾಟಬಲ್ಲ ವ್ಯಾಕ್ಸಿನ್ ಅದೆಂದು ಸಿಗುತ್ತೆ ಎಂಬ ನಿರೀಕ್ಷೆಯಲ್ಲಿ ಎದುರು ನೋಡುತ್ತಿದೆ. ಸಾಂಕ್ರಾಮಿಕ ರೋಗತಜ್ಞರು, ವಿಜ್ಞಾನಿಗಳು, ವೈದ್ಯರು ಹಾಗೂ ಸಂಶೋಧಕರ ತಂಡ ವ್ಯಾಕ್ಸಿನ್ ಪತ್ತೆಗೆ ಹಗಲಿರುಳು ಪರಿಶ್ರಮ ಪಡುತ್ತಿದೆ. 2020ರ ವರ್ಷಾಂತ್ಯ ಅಥವಾ 2021ರ ಆರಂಭದಲ್ಲಿ ಕೊರೊನಾವೈರಸ್ ಸೋೆಂಕಿಗೆ ಲಸಿಕೆ ಹೊರಬರಲಿದೆ.

ಮತ್ತೆ ಮೂವರು ಸ್ವಯಂಸೇವಕರ ಮೇಲೆ ಕೋವಿಶೀಲ್ಡ್ ಲಸಿಕೆ ಪ್ರಯೋಗಮತ್ತೆ ಮೂವರು ಸ್ವಯಂಸೇವಕರ ಮೇಲೆ ಕೋವಿಶೀಲ್ಡ್ ಲಸಿಕೆ ಪ್ರಯೋಗ

ವಿಶ್ವದಲ್ಲಿ ಭಾನುವಾರ ಬೆಳಗ್ಗೆ ಅಂಕಿ-ಅಂಶಗಳ ಪ್ರಕಾರ, 2,51,82,313 ಕೊರೊನಾವೈರಸ್ ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಮಹಾಮಾರಿಗೆ 8,46,936 ಜನರು ಪ್ರಾಣ ಬಿಟ್ಟಿದ್ದು, ಇದುವರೆಗೂ 1,75,15,059 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.

ಕೊರೊನಾವೈರಸ್ ಲಸಿಕೆಗಾಗಿ ಡೊನಾಲ್ಡ್ ಟ್ರಂಪ್ ಶಪಥ

ಕೊರೊನಾವೈರಸ್ ಲಸಿಕೆಗಾಗಿ ಡೊನಾಲ್ಡ್ ಟ್ರಂಪ್ ಶಪಥ

ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ವರ್ಷಾಂತ್ಯದ ವೇಳೆಗೆ ಕೊರೊನಾವೈರಸ್ ಸೋಂಕಿಗೆ ಲಸಿಕೆ ಕಂಡು ಹಿಡಿಯಲು ವಿಜ್ಞಾನಿಗಳು ಶ್ರಮಿಸುತ್ತಿದ್ದಾರೆ. ಆಪರೇಷನ್ ವಾರ್ಪ್ ಸ್ಪೀಡ್ ಅಡಿಯಲ್ಲಿ ಲಸಿಕೆ ಅಭಿವೃದ್ಧಿ ಪಡಿಸಲು ಸಂಶೋಧನೆಗಳನ್ನು ನಡೆಸಲಾಗುತ್ತಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ.

ಅಮೆರಿಕಾದಲ್ಲಿ ಪರಿಣಾಮಕಾರಿ ಮತ್ತು ಸುರಕ್ಷಿತ ವ್ಯಾಕ್ಸಿನ್

ಅಮೆರಿಕಾದಲ್ಲಿ ಪರಿಣಾಮಕಾರಿ ಮತ್ತು ಸುರಕ್ಷಿತ ವ್ಯಾಕ್ಸಿನ್

ಕೊರೊನಾವೈರಸ್ ಸೋಂಕನ್ನು ನಿವಾರಿಸುವಂತಾ ವ್ಯಾಕ್ಸಿನ್ ನ್ನು ದಾಖಲೆಯ ವೇಗದಲ್ಲಿ ಅಭಿವೃದ್ಧಿಪಡಿಸಲಾಗುತ್ತದೆ. ಈ ವರ್ಷದ ಕೊನೆಯಲ್ಲಿ ವಿಶ್ವಕ್ಕೆ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡಬಲ್ಲ ಪರಿಣಾಮಕಾರಿ ಮತ್ತು ಸುರಕ್ಷಿತ ಲಸಿಕೆಯನ್ನು ಪರಿಚಯಿಸಲಾಗುತ್ತದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಇದರ ಜೊತೆಗೆ ಮೂರು ಕೊವಿಡ್-19 ಲಸಿಕೆಗಳನ್ನು ಸಂಶೋಧಕರು ಅಭಿವೃದ್ಧಿಪಡಿಸಿದ್ದು, 2020ರಲ್ಲಿ ಉತ್ಪಾದನಾ ಪ್ರಕ್ರಿಯೆ ಆರಂಭಿಸಲಾಗುತ್ತದೆ ಎಂದು ಟ್ರಂಪ್ ತಿಳಿಸಿದ್ದಾರೆ.

ಕೊರೊನಾವೈರಸ್ ಲಸಿಕೆಗಾಗಿ ಕಾನೂನು ತಿದ್ದುಪಡಿ

ಕೊರೊನಾವೈರಸ್ ಲಸಿಕೆಗಾಗಿ ಕಾನೂನು ತಿದ್ದುಪಡಿ

ಕೊವಿಡ್-19 ಲಸಿಕೆಯನ್ನು ತುರ್ತು ಪರಿಸ್ಥಿತಿಯಲ್ಲಿ ಬಳಸುವುದಕ್ಕಾಗಿ ಬ್ರಿಟನ್ ನಲ್ಲಿ ಕಾನೂನು ಪರಿಷ್ಕರಿಸಲಾಗುತ್ತಿದೆ. ದೇಶದಲ್ಲಿ ಸೃಷ್ಟಿಯಾಗಿರುವ ತುರ್ತು ಆರೋಗ್ಯ ಪರಿಸ್ಥಿತಿಯಲ್ಲಿ ಅಭಿವೃದ್ಧಿಪಡಿಸಿರುವ ವ್ಯಾಕ್ಸಿನ್ ಬಳಕೆಗೆ ಪೂರ್ಣ ಪ್ರಮಾಣದ ಪರವಾನಿಗೆ ದೊರೆಯುವ ಮೊದಲೇ ಬಳಕೆಗೆ ಅನುಮತಿ ನೀಡಲಾಗುತ್ತಿದೆ. ಆದರೆ ಲಸಿಕೆಯು ಎಷ್ಟರ ಮಟ್ಟಿಗೆ ಸುರಕ್ಷಿತ ಮತ್ತು ಗುಣಮಟ್ಟವನ್ನು ಹೊಂದಿದೆ ಎನ್ನುವುದನ್ನು ದೃಢಪಡಿಸಿ ಕೊಳ್ಳಬೇಕಾಗುತ್ತದೆ.

ಬಲವರ್ಧಿತ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಧಾನಿ ಸ್ಪಷ್ಟನೆ

ಬಲವರ್ಧಿತ ಸುರಕ್ಷತಾ ಕ್ರಮಗಳ ಬಗ್ಗೆ ಪ್ರಧಾನಿ ಸ್ಪಷ್ಟನೆ

ಬ್ರಿಟನ್ ನಲ್ಲಿ ಕೊರೊನಾವೈರಸ್ ಸೋಂಕಿನ ವಿರುದ್ಧ ಹೋರಾಡುವ ಲಸಿಕೆ ಅಭಿವೃದ್ಧಿಪಡಿಸುವುದಕ್ಕೆ ಔಷಧಿಗಳ ನಿಯಂತ್ರಕ ಸಂಸ್ಥೆಗಳಿಗೆ ತಾತ್ಕಾಲಿಕ ಅನುಮತಿ ನೀಡುವ ಬಗ್ಗೆ ಪ್ರಧಾನಿ ಬೋರಿಸ್ ಜಾನ್ಸನ್‌ರ ಕನ್ಸರ್ವೇಟಿವ್ ಸರ್ಕಾರವು ಸ್ಪಷ್ಟನೆ ನೀಡಿತ್ತು. ದೇಶದ ಸುರಕ್ಷತೆ ಮತ್ತು ಗುಣಮಟ್ಟದ ಮಾನದಂಡಗಳನ್ನು ಪೂರೈಸಲು ಅವಕಾಶ ಮಾಡಿಕೊಡಲಾಗುತ್ತದೆ. ಆದರೆ "ಬಲವರ್ಧಿತ ಸುರಕ್ಷತಾ ಕ್ರಮಗಳನ್ನು" ಅಳವಡಿಸಿಕೊಳ್ಳುವುದು ಕಡ್ಡಾಯಗೊಳಿಸಲಾಗಿದೆ.

ಪೂರ್ಣ ಅನುಮತಿ ನಂತರವಷ್ಟೇ ಲಸಿಕೆ ಬಳಸಲು ಅವಕಾಶ

ಪೂರ್ಣ ಅನುಮತಿ ನಂತರವಷ್ಟೇ ಲಸಿಕೆ ಬಳಸಲು ಅವಕಾಶ

ಬ್ರಿಟನ್ ನಲ್ಲಿ ಪ್ರಸ್ತಾಪಿಸಿದ ನಿಯಮಗಳ ಪ್ರಕಾರ, ಕೊವಿಡ್-19 ಲಸಿಕೆಯ ತುರ್ತು ಬಳಕೆಗೆ ಪರವಾನಗಿ ನೀಡುವುದಕ್ಕೆ ಕಾನೂನು ಪರಿಷ್ಕರಿಸಲಾಗುತ್ತಿದೆ. ಈ ಹಿಂದೆ ವ್ಯಾಕ್ಸಿನ್ ಅಭಿವೃದ್ಧಿಪಡಿಸಲು ತಿಂಗಳುಗಟ್ಟಲೆ ಸಮಯ ತೆಗೆದುಕೊಳ್ಳಲಾಗುತ್ತಿತ್ತು. ಆದರೆ ಇದೀಗ ಅಷ್ಟೊಂದು ಸಮಯ ತೆಗೆದುಕೊಳ್ಳುವುದಕ್ಕೆ ಮೊದಲು ಲಸಿಕೆ ಅಭಿವೃದ್ಧಿಪಡಿಸಿ, ಅನುಮತಿ ಪಡೆದ ನಂತರ ಸಾರ್ವಜನಿಕ ಬಳಕೆಗೆ ನೀಡುವಂತಾ ನಿಯಮವನ್ನು ರೂಪಿಸಲು ತಯಾರಿ ನಡೆಸಲಾಗುತ್ತಿದೆ.

ಕೊವಿಡ್-19 ವ್ಯಾಕ್ಸಿನ್ ಅಭಿವೃದ್ಧಿಪಡಿಸಿವುದು ಎಷ್ಟು ಮುಖ್ಯವೋ ಅದೇ ರೀತಿ ಲಸಿಕೆಯು ಪ್ರತಿಯೊಬ್ಬರಿಗೂ ಸೂಕ್ತ ಸಮಯದಲ್ಲಿ ತಲುಪುವಂತೆ ಮಾಡುವುದು ಅಷ್ಟೇ ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಸರ್ಕಾರವು ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಬ್ರಿಟನ್ ನ ಡೆಪ್ಯೂಟಿ ಚೀಫ್ ಮೆಡಿಕಲ್ ಆಫಿಸರ್ ಆಗಿರುವ ಜೋಂಥನ್-ವ್ಯಾನ್-ತಮ್ ತಿಳಿಸಿದ್ದಾರೆ.

English summary
How US, Britain Plans For A Coronavirus Vaccine By End Of 2020. Know More.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X