ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಎದುರು ವೈಫಲ್ಯ ಅನುಭವಿಸಿದ ಯುಎಸ್!?

|
Google Oneindia Kannada News

ಕಾಬೂಲ್, ಅಕ್ಟೋಬರ್ 25: ಅಫ್ಘಾನಿಸ್ತಾನದಲ್ಲಿ ಯುನೈಟೆಡ್ ಸ್ಟೇಟ್ಸ್ ತಾಲಿಬಾನ್ ವಿರುದ್ಧದ ಯುದ್ಧವನ್ನು ಸೋತ ಹಿನ್ನೆಲೆ ಪರ್ಯಾಯವಾಗಿ ಮಾತುಕತೆ ಮಾರ್ಗವನ್ನು ಆಯ್ದುಕೊಂಡಿತು ಎಂದು ಯುಎಸ್ ಮಾಜಿ ವಿಶೇಷ ಪ್ರತಿನಿಧಿ ಝಲ್ಮೇ ಖಲೀಲ್ಜಾದ್ ಹೇಳಿದ್ದಾರೆ.

ಸಿಬಿಎಸ್ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಅಫ್ಘಾನಿಸ್ತಾನದಲ್ಲಿ ತನ್ನ ಸ್ಥಾನವನ್ನು ಬಲಿಷ್ಠಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಯುನೈಟೆಡ್ ಸ್ಟೇಟ್ಸ್ ಸೇನೆಯು ಹಲವು ರೀತಿ ಪ್ರಯತ್ನಗಳನ್ನು ಮಾಡಿತು, ಆದರೆ ಆ ಎಲ್ಲ ಪ್ರಯತ್ನಗಳಲ್ಲೂ ವೈಫಲ್ಯ ಅನುಭವಿಸಿತು ಎಂದಿದ್ದಾರೆ.

"ನಾವು ಯುದ್ಧವನ್ನು ಗೆಲ್ಲುವುದಕ್ಕೆ ಸಾಧ್ಯವಿಲ್ಲ, ಪರಿಸ್ಥಿತಿಯು ನಮ್ಮ ಪರವಾಗಿಲ್ಲ. ಶೀಘ್ರದಲ್ಲಿ ಶಾಂತಿ ಒಪ್ಪಂದ ಮಾಡಿಕೊಳ್ಳುವುದೇ ಸೂಕ್ತ ಎಂಬ ತೀರ್ಮಾನಕ್ಕೆ ಬಂದ ನಂತರದಲ್ಲೇ ಸಂಧಾನ ಮಾತುಕತೆ ಪ್ರಕ್ರಿಯೆ ಆರಂಭಿಸಲಾಯಿತು," ಎಂದು ಝಲ್ಮೇ ಖಲೀಲ್ಜಾದ್ ಅವರು ಟೋಲೋ ನ್ಯೂಸ್ ಗೆ ಹೇಳಿದ್ದಾರೆ.

How United States Failed to Defeat Taliban in Afghanistan: Ex-Envoy Khalilzad Explained

ಅಶ್ರಫ್ ಘನಿ ನಡೆಗೆ ಝಲ್ಮೇ ಖಲೀಲ್ಜಾದ್ ಆಕ್ಷೇಪ:

ಅಫ್ಘಾನಿಸ್ತಾನದ ಮೇಲೆ ತಾಲಿಬಾನ್ ಹಿಡಿತ ಸಾಧಿಸುವುದಕ್ಕೆ ಅಂದಿನ ಅಧ್ಯಕ್ಷ ಅಶ್ರಫ್ ಘನಿ ವೈಫಲ್ಯವೇ ಕಾರಣ ಎಂದು ಝಲ್ಮೇ ಖಲೀಲ್ಜಾದ್ ದೂರಿದ್ದಾರೆ. ಅಫ್ಘಾನ್ ಭದ್ರತಾ ವೈಫಲ್ಯದಿಂದಾಗಿ ತಾಲಿಬಾನ್ ಪ್ರಾಬಲ್ಯ ಹೆಚ್ಚಿಸಿಕೊಳ್ಳುವುದಕ್ಕೆ ಸಾಧ್ಯವಾಯಿತು. ಒಂದು ಕಡೆಯಲ್ಲಿ ದೇಶದ ಗಡಿ ನುಗ್ಗುವುದಕ್ಕೆ ತಾಲಿಬಾನ್ ಸನ್ನದ್ಧವಾಗಿ ನಿಂತಿದ್ದರೆ ಅದನ್ನು ಎದುರಿಸಬೇಕಾಗಿದ್ದ ಅಶ್ರಫ್ ಘನಿ ಬೇರೆ ರಾಷ್ಟ್ರಕ್ಕೆ ಪಲಾಯನ ಮಾಡಿದ್ದು, ರಾಜಧಾನಿ ಅವ್ಯವಸ್ಥೆಗೆ ಪ್ರಚೋದನೆ ನೀಡುವಂತಿತ್ತು ಎಂದರು.

ಯುಎಸ್ ಸೇನೆ ಹಿಂತೆಗೆದುಕೊಳ್ಳಲು ನಿರ್ಧಾರ:

ಅಫ್ಘಾನಿಸ್ತಾನದಿಂದ ಯುನೈಟೆಡ್ ಸ್ಟೇಟ್ಸ್ ಸೇನೆ ವಾಪಸ್ ಕರೆಸಿಕೊಳ್ಳುವ ನಿರ್ಧಾರವನ್ನು ವಾಷಿಂಗ್ಟನ್ ಕ್ಯಾಲೆಂಡರ್ ಆಧಾರದಲ್ಲಿ ಮಾಡಲಾಯಿತು. ಈ ಸಂದರ್ಭದಲ್ಲಿ ದೇಶದ ವಾಸ್ತವ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಅಂದಿಗೆ ಉಳಿದ ಸವಾಲುಗಳು ಮತ್ತು ಹಿಂದಿನ ವೈಫಲ್ಯಗಳ ಹೊರತಾಗಿ ಯುಎಸ್ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ಯಶಸ್ವಿಯಾಗಿದೆ. ಹಿಂದೆಂದೂ ಕೂಡಾ ಅಫ್ಘಾನಿಸ್ತಾನದಿಂದ ಭಯೋತ್ಪಾದಕ ಬೆದರಿಕೆಗಳು ಇರಲಿಲ್ಲ ಮತ್ತು ಈಗಾಗಲೇ ಅಲ್-ಖೈದಾವನ್ನು ಧ್ವಂಸಗೊಳಿಸಲಾಗಿದೆ ಎಂದು ಖಲೀಲ್ಜಾದ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

How United States Failed to Defeat Taliban in Afghanistan: Ex-Envoy Khalilzad Explained

ಪ್ರಜಾಪ್ರಭುತ್ವ ಅಫ್ಘಾನಿಸ್ತಾನದ ನಿರ್ಮಾಣ ವಿಫಲ:

"ಯುನೈಟೆಡ್ ಸ್ಟೇಟ್ಸ್ ಉದ್ದೇಶ ಪ್ರಜಾಪ್ರಭುತ್ವ ಅಫ್ಘಾನಿಸ್ತಾನ ನಿರ್ಮಾಣ ಮಾಡುವುದೇ ಆಗಿತ್ತು. ಆದರೆ ಯುಎಸ್ ಅದರಲ್ಲಿ ಯಶಸ್ಸು ಕಾಣಲಿಲ್ಲ. ಹೋರಾಟ ಹಾಗೇ ಮುಂದುವರಿದಿದೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರು ಇರುವುದೇ ನೈಜ ಸಂಗತಿ. ನಾವು ಅವರನ್ನು ಸೋಲಿಸುವುದಕ್ಕೆ ಸಾಧ್ಯವಾಗಲಿಲ್ಲ," ಎಂದು ಝಲ್ಮೇ ಖಲೀಲ್ಜುಾದ್ ಹೇಳಿದ್ದಾರೆ. ದೇಶಕ್ಕಾಗಿ ತಾಲಿಬಾನ್ ವಿಭಿನ್ನ ದೃಷ್ಟಿಕೋನವನ್ನು ಇಟ್ಟುಕೊಂಡಿದೆ ಎಂಬುದು ಅದರ ಅರ್ಥವಲ್ಲ. ಆದರೆ ಯುಎಸ್ ಹೋರಾಟ ವಿಫಲವಾದ ಕಾರಣಕ್ಕೆ ಹೆಚ್ಚು ದೃಷ್ಟಿಕೋನಗಳಲ್ಲಿ ಮೇಲುಗೈ ಸಾಧಿಸಿದಂತೆ ಆಗುತ್ತದೆ.

ಕಳೆದ ವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ:

ಅಫ್ಘಾನಿಸ್ತಾನದ ವಿಶೇಷ ರಾಯಭಾರಿ ಸ್ಥಾನಕ್ಕೆ ಅಕ್ಟೋಬರ್ 18ರಂದು ಝಲ್ಮೇ ಖಲೀಲ್ಜಾದ್ ರಾಜೀನಾಮೆ ಸಲ್ಲಿಸಿದ್ದಾರೆ ಎಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಆಂಟನಿ ಬ್ಲಿಂಕನ್ ಘೋಷಿಸಿದ್ದರು. ಕಳೆದ ಆಗಸ್ಟ್‌ನಲ್ಲಿ ಅಫ್ಘಾನಿಸ್ತಾನದಿಂದ ಯುನೈಟೆಡ್ ಸ್ಟೇಟ್ಸ್ ನಿಂದ ಸೇನೆ ಹಿಂತೆಗೆದುಕೊಂಡ ನಂತರ ವಾಷಿಂಗ್ಟನ್ ಕಾಬೂಲ್‌ಗೆ ಹೊಸ ಹಂತದ ನೀತಿಯನ್ನು ಪ್ರಾರಂಭಿಸುತ್ತಿರುವ ಸಮಯದಲ್ಲಿ ಅವರು ರಾಜೀನಾಮೆ ನೀಡುವ ನಿರ್ಧಾರವನ್ನು ತೆಗೆದುಕೊಂಡಿರುವುದಾಗಿ ಅವರು ಹೇಳಿದ್ದಾರೆ.

ಹೊಸ ಸರ್ಕಾರ ರಚಿಸಿಕೊಂಡ ತಾಲಿಬಾನ್:

ಕಳೆದ ಆಗಸ್ಟ್‌ 15ರಂದು ಅಫ್ಘಾನಿಸ್ತಾನವನ್ನು ತಾಲಿಬಾನ್ ಸಂಘಟನೆಯು ಸಂಪೂರ್ಣವಾಗಿ ವಶಕ್ಕೆ ಪಡೆದುಕೊಂಡಿತು. ಎರಡು ದಶಕಗಳ ನಂತರ ಅಫ್ಘಾನ್‌ನಿಂದ ಯುನೈಟೆಡ್ ಸ್ಟೇಟ್ಸ್ ತನ್ನ ಸೇನಾ ಪಡೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ತೀರ್ಮಾನ ಮಾಡಿತು. ಈ ಬೆಳವಣಿಗೆ ಬೆನ್ನಲ್ಲೇ ತಾಲಿಬಾನಿಗಳು ಆಕ್ರಮಣ ಮಾಡಿ ಅಫ್ಘಾನಿಸ್ತಾನವನ್ನು ವಶಪಡಿಸಿಕೊಂಡಿದ್ದರು. ಆಗಸ್ಟ್‌ 31ರಂದು ಅಮೆರಿಕ ಪಡೆ ಅಫ್ಘಾನ್ ತೊರೆಯುತ್ತಿದ್ದಂತೆ ಸ್ವಾತಂತ್ರ್ಯ ಘೋಷಿಸಿಕೊಂಡ ತಾಲಿಬಾನ್, ಹೊಸ ಸರ್ಕಾರ ರಚಿಸಿತು.

English summary
"How United States Failed to Defeat Taliban in Afghanistan": Here Ex-Envoy Khalilzad Explained.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X