ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಕ್ಷಿಣ ಆಫ್ರಿಕಾದ ಖಾಸಗಿ ಪ್ರಯೋಗಾಲಯದಲ್ಲಿ ಓಮಿಕ್ರಾನ್ ವೈರಸ್ ಪತ್ತೆಯಾಗಿದ್ದು ಹೀಗೆ

|
Google Oneindia Kannada News

ಶುಕ್ರವಾರ ನವೆಂಬರ್ 19 ರಂದು ದಕ್ಷಿಣ ಆಫ್ರಿಕಾದ ಅತಿದೊಡ್ಡ ಖಾಸಗಿ ಪ್ರಯೋಗಾಲಯದಲ್ಲಿ ವಿಜ್ಞಾನದ ಮುಖ್ಯಸ್ಥ ರಾಕೆಲ್ ವಿಯಾನಾ ಎಂಟು ಕೊರೊನವೈರಸ್ ಮಾದರಿಗಳಲ್ಲಿ ಈ ವೈರಸ್ ಕಂಡುಕೊಂಡರು. ಜೊತೆಗೆ ಹಿಂದೆಂದೂ ಕಾಣದ ಈ ವೈರಸ್ ಬಗ್ಗೆ ಅನುಮಾನದ ಜೊತೆಗೆ ಜೀವದ ಬಗ್ಗೆ ಆತಂಕಗೊಂಡಿದ್ದಾರೆ. ಲ್ಯಾನ್ಸೆಟ್ ಪ್ರಯೋಗಾಲಯದಲ್ಲಿ ಪರೀಕ್ಷಿಸಿದ ಮಾದರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೊಸ ವೈರಸ್‌ನ್ನು ಹೊಂದಿದ್ದವು. ವಿಶೇಷವಾಗಿ ಇದರಲ್ಲಿ ಕೆಲವೊಂದು ರೂಪಾಂತರಗಳು ಮನುಷ್ಯನ ಪ್ರತಿರೋಧಕ ವ್ಯವಸ್ಥೆಯನ್ನು ತಪ್ಪಿಸಿಕೊಂಡು ಹೋಗುವಂತಹ ಶಕ್ತಿ ಹೊಂದಿರುವುದು ಕಂಡು ಬಂದಿದೆ.

ಈ ಬಗ್ಗೆ ವಿವರಿಸಿದ ರಾಕೆಲ್ ವಿಯಾನಾ ಅವರು, "ನನಗೆ ಇದನ್ನು ನೋಡಿ ಆಘಾತವಾಯಿತು. ಏನಾದರೂ ತಪ್ಪಾಗಿದೆಯೇ ಎಂದು ನಾನು ಮತ್ತೊಮ್ಮೆ ಪರೀಕ್ಷಿಸಿದೆ. ಆದರೆ ಪರೀಕ್ಷೆ ತಪ್ಪಾಗಿರಲಿಲ್ಲ. ವಾಸ್ತವಾಂಶ ಕಂಡು ಆತಂಕವಾಯಿತು. ಹೊಸ ವೈರಸ್ ದೊಡ್ಡ ಮಟ್ಟದ ಅಪಾಯವನ್ನೊಡ್ಡುವುದು ಎಂದು ನಾನು ಅರಿತುಕೊಂಡೆ" ಎಂದು ತಿಳಿಸಿದರು. ಬಳಿಕ ಜೋಹಾನ್ಸ್‌ಬರ್ಗ್‌ನ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಫಾರ್ ಕಮ್ಯುನಿಕಬಲ್ ಡಿಸೀಸ್‌ನಲ್ಲಿರುವ (NICD) ತಮ್ಮ ಸಹೋದ್ಯೋಗಿ, ಜೀನ್ ಸೀಕ್ವೆನ್ಸರ್ ಡೇನಿಯಲ್ ಅಮೋಕೊಗೆ ಕರೆ ಮಾಡಿದರು. ಆದರೆ ಅವರೂ ಕೂಡ ಇಂಥದ್ದೇ ರೂಪಾಂತರ ವೈರಸ್ ಗಮನಿಸಿದ್ದು "ಅದನ್ನು ಹೇಗೆ ನಿಯಂತ್ರಿಸಬೇಕೆಂದು ನನಗೆ ತಿಳಿದಿಲ್ಲ. ಇದು ಹೊಸ ವಂಶಾವಳಿಯಂತೆ ಕಾಣುತ್ತದೆ" ಎಂದು ಅವರು ಹೇಳಿದರು.

NICD ತಂಡದಿಂದ ಪರೀಕ್ಷೆ

NICD ತಂಡದಿಂದ ಪರೀಕ್ಷೆ

NICD ಯಲ್ಲಿನ ಅಮೋಕೊ ಮತ್ತು ತಂಡವು ನವೆಂಬರ್ 20-21 ವಾರಾಂತ್ಯದಲ್ಲಿ ವಿಯಾನಾ ಅವರು ಕಳುಹಿಸಿದ ಎಂಟು ಮಾದರಿಗಳನ್ನು ಪರೀಕ್ಷಿಸಿದರು. ಇವೆಲ್ಲವೂ ಒಂದೇ ರೀತಿಯ ರೂಪಾಂತರಗಳನ್ನು ಹೊಂದಿವೆ ಎಂದು ಅವರು ಅರಿತುಕೊಂಡರು. ಇದು ಎಷ್ಟು ವಿಲಕ್ಷಣವಾಗಿತ್ತು ಎಂದರೆ, ಅವರ ಸಹೋದ್ಯೋಗಿ ಜೋಸಿ ಎವೆರಾಟ್ ಮತ್ತು ಇತರ ಸಹೋದ್ಯೋಗಿಗಳು ಸಹ ಇದರ ಬಗ್ಗೆ ಆತಂಕಗೊಂಡರು ಎಂದು ಅಮೋಕೊ ಹೇಳುತ್ತಾರೆ. ನಂತರ ಅವರು ಒಂದು ವಾರದಲ್ಲಿ ಹೊಸ ರೂಪಾಂತರವನ್ನು ಸೂಚಿಸುವ ಕೋವಿಡ್ -19 ಪ್ರಕರಣಗಳಲ್ಲಿ ತೀವ್ರ ಏರಿಕೆಯನ್ನು ಗಮನಿಸಿದ್ದಾರೆ.


ಜೊತೆಗೆ ಕಳೆದ ತಿಂಗಳ ಆರಂಭದಲ್ಲಿ ಮಾದರಿಯಲ್ಲಿನ ವಿಚಿತ್ರ ವೈರಸ್ ಬಗ್ಗೆ ವಿಯಾನಾಗೆ ಎಚ್ಚರ ವಹಿಸುವಂತೆ ತಿಳಿಸಿದ್ದಾರೆ. "ಹೊಸ ವೈರಸ್ ವೈಶಿಷ್ಟ್ಯವನ್ನು ಹೊಂದಿರುವ ಏಕೈಕ ಸಾಮಾನ್ಯ ರೂಪಾಂತರವೆಂದರೆ ಆಲ್ಫಾ. ಆದರೆ ನಾವು ಆಗಸ್ಟ್‌ನಿಂದ ದಕ್ಷಿಣ ಆಫ್ರಿಕಾದಲ್ಲಿ ಆಲ್ಫಾವನ್ನು ನೋಡಿರಲಿಲ್ಲ. ಬಳಿಕ ನಾವು ಇದರ ಬಗ್ಗೆ ಕಾಳಜಿ ತೋರಿದೆವು" ಎಂದು ಎವೆರಾಟ್ ಅವರು ಹೇಳುತ್ತಾರೆ.

ತೀವ್ರಗೊಂಡ ಬಿ.1.1.529

ತೀವ್ರಗೊಂಡ ಬಿ.1.1.529

ಮಂಗಳವಾರ ನವೆಂಬರ್ 23 ರ ಹೊತ್ತಿಗೆ ಜೋಹಾನ್ಸ್‌ಬರ್ಗ್ ಮತ್ತು ಪ್ರಿಟೋರಿಯಾದ ಸುತ್ತಮುತ್ತಲಿನ ಪ್ರಾಂತ್ಯಗಳಲ್ಲಿ 32 ಮಾದರಿಗಳು ಇದೇ ರೂಪಾಂತರವನ್ನು ಹೊಂದಿರುವುದು ಕಂಡು ಬಂತು. ಆಗ ಇದು ಕೊರೊನಾ ಹೊಸ ರೂಪಾಂತರಿ ವೈರಸ್ ಎನ್ನುವುದು ಸ್ಪಷ್ಟವಾಯಿತು ಎಂದು ಅಮೋಕೊ ಹೇಳಿದರು. ಅದೇ ಮಂಗಳವಾರ, NICD ತಂಡವು ದಕ್ಷಿಣ ಆಫ್ರಿಕಾದಾದ್ಯಂತ ಆರೋಗ್ಯ ಇಲಾಖೆ ಮತ್ತು ಇತರ ಪ್ರಯೋಗಾಲಯಗಳಿಗೆ ಸೀಕ್ವೆನ್ಸಿಂಗ್ ಮಾಡಲು ತಿಳಿಸಿತು. ಇದರ ಫಲಿತಾಂಶವೂ ಇದೇ ರೀತಿಯಾಗಿ ಬರಲು ಪ್ರಾರಂಭಿಸಿತು.


ಅದೇ ದಿನ, NICD GISAID ಜಾಗತಿಕ ವಿಜ್ಞಾನ ಡೇಟಾಬೇಸ್‌ಗೆ ಡೇಟಾವನ್ನು ನಮೂದಿಸಿತು ಮತ್ತು ಬೋಟ್ಸ್ವಾನಾ ಮತ್ತು ಹಾಂಗ್ ಕಾಂಗ್‌ಗಳು ಅದೇ ಜೀನ್ ಅನುಕ್ರಮದೊಂದಿಗೆ ಪ್ರಕರಣಗಳನ್ನು ವರದಿ ಮಾಡಿದೆ ಎಂದು ಕಂಡುಹಿಡಿದಿದೆ. ನವೆಂಬರ್ 24 ರಂದು NICD ಅಧಿಕಾರಿಗಳು ಮತ್ತು ಇಲಾಖೆಯು ವಿಶ್ವ ಆರೋಗ್ಯ ಸಂಸ್ಥೆಗೆ ಸೂಚನೆ ನೀಡಿತು.

ಸೋಂಕು ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ

ಸೋಂಕು ಮೂರು ಪಟ್ಟು ಹೆಚ್ಚಾಗುವ ಸಾಧ್ಯತೆ

ಆ ಹಂತದ ಹೊತ್ತಿಗೆ, ಪ್ರಿಟೋರಿಯಾ ಮತ್ತು ಜೋಹಾನ್ಸ್‌ಬರ್ಗ್ ಅನ್ನು ಒಳಗೊಂಡಿರುವ ದಕ್ಷಿಣ ಆಫ್ರಿಕಾದ ಪ್ರಾಂತ್ಯದ ಗೌಟೆಂಗ್‌ನಲ್ಲಿ ಮೂರನೇ ಎರಡರಷ್ಟು ಪರೀಕ್ಷೆ ವರದಿಗಳು ಹೊಸ ವೈರಸ್ (ಬಿ.1.1.529) ಪಾಸಿಟಿವ್ ಅನ್ನು ತೋರಿಸಿದವು ಎಂದು ವಿಯಾನಾ ಹೇಳುತ್ತಾರೆ. ಇದು ಓಮಿಕ್ರಾನ್ ಈಗಾಗಲೇ ಪ್ರಬಲವಾಗುತ್ತಿದೆ ಎಂಬುದರ ಸಂಕೇತವಾಗಿತ್ತು.


ದಕ್ಷಿಣ ಆಫ್ರಿಕಾದ ದೈನಂದಿನ ಕೋವಿಡ್ -19 ಸೋಂಕಿನ ಪ್ರಮಾಣವು ಈ ವಾರದ ಅಂತ್ಯದ ವೇಳೆಗೆ 10,000 ಕ್ಕಿಂತ ಹೆಚ್ಚು ಅಂದರೆ ನಾಲ್ಕು ಪಟ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದು ದೇಶದ ಪ್ರಮುಖ ಸಾಂಕ್ರಾಮಿಕ ರೋಗ ತಜ್ಞರಲ್ಲಿ ಒಬ್ಬರಾದ ಸಲೀಂ ಅಬ್ದುಲ್ ಕರೀಮ್ ಸೋಮವಾರ ಹೇಳಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಈ ಹೊಸ ರೂಪಾಂತರ ವೈರಸ್ ಅನ್ನು ಓಮಿಕ್ರಾನ್ ಎಂದು ಹೆಸರಿಸಿದೆ.

ಹಲವು ಪ್ರಶ್ನೆಗಳಿಗೆ ಸಿಕ್ಕಿಲ್ಲ ಉತ್ತರ

ಹಲವು ಪ್ರಶ್ನೆಗಳಿಗೆ ಸಿಕ್ಕಿಲ್ಲ ಉತ್ತರ

ಈ ವೈರಸ್ ಪತ್ತೆ ಬಳಿಕ ಹಲವಾರು ಪ್ರಶ್ನೆಗಳು ಉದ್ಬವಿಸಿವೆ. ಕೊರೊನಾ ಲಸಿಕೆಗಳು ಇದರ ಮೇಲೆ ಎಷ್ಟು ಪರಿಣಾಮಕಾರಿಯಾಗಿವೆ? ಹಿಂದಿನ ಆವೃತ್ತಿಗಳಿಗೆ ಹೋಲಿಸಿದರೆ ರೋಗಲಕ್ಷಣಗಳು ಎಷ್ಟು ತೀವ್ರವಾಗಿರುತ್ತವೆ? ವಯಸ್ಕರಿಗೆ ಇದು ಹೇಗೆ ಭಿನ್ನವಾಗಿರುತ್ತದೆ? ಇವೆಲ್ಲ ಪ್ರಶ್ನೆಗಳಿಗೆ ಇನ್ನೂ ನಿಖರವಾದ ಉತ್ತರ ಸಿಕ್ಕಿಲ್ಲ. ಈ ಪ್ರಶ್ನೆಗಳ ಮೇಲೆ ಕೆಲಸ ಮಾಡುತ್ತಿರುವ ಮೂವರು ವಿಜ್ಞಾನಿಗಳು ಸುಮಾರು 3-4 ವಾರಗಳಲ್ಲಿ ಉತ್ತರಗಳನ್ನು ನೀಡುವ ನಿರೀಕ್ಷಿಯಿದೆ.

ಈ ಮಧ್ಯೆ ದಕ್ಷಿಣ ಆಫ್ರಿಕಾದ ಅಧ್ಯಕ್ಷ ಸಿರಿಲ್ ರಾಮಾಫೋಸಾ ಅವರು ವ್ಯಾಕ್ಸಿನೇಷನ್ ಅನ್ನು ಕಡ್ಡಾಯಗೊಳಿಸಿದ್ದಾರೆ. ಕೊರೊನಾ ಸಮಯದಲ್ಲಿ ದೇಶವು 3 ಮಿಲಿಯನ್ ಕೋವಿಡ್ -19 ಸೋಂಕುಗಳಿಂದ ತತ್ತರಿಸಿತ್ತು ಮತ್ತು 89,000 ಕ್ಕೂ ಹೆಚ್ಚು ಸಾವುಗಳು ಸಂಭವಿಸಿವೆ. ಇನ್ನೂ ವಿದೇಶಿ ಪ್ರಯಾಣ ನಿಷೇಧದ ಬಗ್ಗೆ ದಕ್ಷಿಣ ಆಫ್ರಿಕಾ ಬೇಸರ ವ್ಯಕ್ತಪಡಿಸಿದೆ.

English summary
How is Omicron virus detected? South African scientists have described how the Omicron mutation was identified. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X