ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸ್ಲೋವೆನಿಯಾಗೆ ಹೀಗೆ ಬಂದು ಹಾಗೆ ಹೋಯ್ತು ಕೊರೊನಾ ವೈರಸ್!

|
Google Oneindia Kannada News

ಲುಬ್ಲಜಾನ್, ಮೇ.15: ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆ ನಡುವೆ ಯುರೋಪ್ ಖಂಡದಲ್ಲೇ ಮೊದಲ ರಾಷ್ಟ್ರದಲ್ಲಿ ಲಾಕ್ ಡೌನ್ ತೆಗೆದು ಹಾಕಲಾಗಿದೆ. ಸ್ಲೋವೆನಿಯಾ, ಲಾಕ್ ಡೌನ್ ತೆರವುಗೊಳಿಸಿದ ಯುರೋಪ್ ನ ಮೊದಲ ರಾಷ್ಟ್ರ ಎನಿಸಿದೆ.

20 ಲಕ್ಷ ಜನಸಂಖ್ಯೆಯನ್ನು ಹೊಂದಿರುವ ಸ್ಲೋವೆನಿಯಾ ಕೊರೊನಾ ವೈರಸ್ ಮುಕ್ತ ರಾಷ್ಟ್ರವಾಗಿದೆ. ದೇಶದಲ್ಲಿ ಕೊವಿಡ್-19 ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿದ್ದು, ಅಸಾಧಾರಣವಾದ ವೈದ್ಯಕೀಯ ಕ್ರಮಗಳನ್ನು ವಿಸ್ತರಿಸುವ ಅಗತ್ಯವಿಲ್ಲ ಎಂದು ಯುರೋಪಿಯನ್ ಒಕ್ಕೂಟದ ಸರ್ಕಾರವು ತಿಳಿಸಿದೆ.

ಬೊಂಬಾಟ್ ಸುದ್ದಿ:ಭಾರತಕ್ಕೆ 76193000000ರೂ. ಘೋಷಿಸಿದ ವಿಶ್ವಬ್ಯಾಂಕ್!ಬೊಂಬಾಟ್ ಸುದ್ದಿ:ಭಾರತಕ್ಕೆ 76193000000ರೂ. ಘೋಷಿಸಿದ ವಿಶ್ವಬ್ಯಾಂಕ್!

ಸಾಂಕ್ರಾಮಿಕ ರೋಗಕ್ಕೆ ಸಿಲುಕಿದ ಯುರೋಪ್ ಖಂಡದ ರಾಷ್ಟ್ರಗಳಲ್ಲೇ ಸ್ಲೋವೆನಿಯಾ ಉತ್ತಮ ಸ್ಥಿತಿಯಲ್ಲಿದೆ. ಕೊವಿಡ್-19 ಒಂದು ಸಾಮಾನ್ಯ ಸಾಂಕ್ರಾಮಿಕ ರೋಗ ಎಂದು ಪ್ರಧಾನಮಂತ್ರಿ ಜಾನೆಜ್ ಜನ್ಸಾ ತಿಳಿಸಿದ್ದಾರೆ.

ಸಂಚಾರಕ್ಕೆ ಮುಕ್ತ ಅವಕಾಶ ನೀಡಿದ ಸ್ಲೋವೆನಿಯಾ

ಸಂಚಾರಕ್ಕೆ ಮುಕ್ತ ಅವಕಾಶ ನೀಡಿದ ಸ್ಲೋವೆನಿಯಾ

ಯುರೋಪ್ ರಾಷ್ಟ್ರಗಳಾದ ಆಸ್ಟ್ರಿಯಾ, ಇಟಲಿ, ಹುಂಗರಿ ರಾಷ್ಟ್ರಗಳಿಗೆ ಸಂಚರಿಸಲು ಸ್ಲೋವೆನಿಯಾ ಸರ್ಕಾರವು ಅನುಮತಿ ನೀಡಿದೆ. ಯುರೋಪ್ ರಾಷ್ಟ್ರಗಳಲ್ಲದೇ ಬೇರೆ ರಾಷ್ಟ್ರಗಳಿಂದ ಆಗಮಿಸಿದ ಪ್ರಜೆಗಳು ಕಡ್ಡಾಯವಾಗಿ 14 ದಿನ ಕ್ವಾರೆಂಟೈನ್ ನಲ್ಲಿ ಇರಿಸಲು ಸರ್ಕಾರವು ಕಟ್ಟಪ್ಪಣೆ ಹೊರಡಿಸಿದೆ.

ಮಾರ್ಚ್.04ರಂದು ಸ್ಲೋವೆನಿಯಾದಲ್ಲಿ ಕೊರೊನಾ ಪತ್ತೆ

ಮಾರ್ಚ್.04ರಂದು ಸ್ಲೋವೆನಿಯಾದಲ್ಲಿ ಕೊರೊನಾ ಪತ್ತೆ

ಸ್ಲೋವೆನಿಯಾದಲ್ಲಿ ಕಳೆದ ಮಾರ್ಚ್.04ರಂದು ಇಟಲಿಯಿಂದ ವಾಪಸ್ ಆದ ವ್ಯಕ್ತಿಯೊಬ್ಬರಲ್ಲಿ ಕೊವಿಡ್-19 ಸೋಂಕು ಕಾಣಿಸಿಕೊಂಡಿತ್ತು. ಇದು ಸ್ಲೋವೆನಿಯಾದಲ್ಲೇ ಮೊದಲ ನೊವೆಲ್ ಕೊರೊನಾ ವೈರಸ್ ಸೋಂಕಿತ ಪ್ರಕರಣವಾಗಿತ್ತು. ಇದಾಗಿ ಒಂದೇ ವಾರಕ್ಕೆ ಅಂದರೆ ಮಾರ್ಚ್.12ರಂದು ರಾಷ್ಟ್ರಾದ್ಯಂತ ಸಾಂಕ್ರಾಮಿಕ ರೋಗ ಎಂದು ಘೋಷಿಸಲಾಯಿತು. ಮೇ.13ರ ವೇಳೆದೆ ಸ್ಲೋವೆನಿಯಾದಲ್ಲಿ ಕೊರೊನಾ ವೈರಸ್ ನಿಂದ 103 ಮಂದಿ ಪ್ರಾಣ ಬಿಟ್ಟಿದ್ದರೆ, 1,467 ಮಂದಿ ಸೋಂಕಿತ ಪ್ರಕರಣಗಳು ಪತ್ತೆಯಾಗಿದ್ದುವು.

ಕೊರೊನಾ ವಿರುದ್ಧ ಸ್ಲೋವೆನಿಯಾ ಹೋರಾಟ ಹೇಗಿತ್ತು?

ಕೊರೊನಾ ವಿರುದ್ಧ ಸ್ಲೋವೆನಿಯಾ ಹೋರಾಟ ಹೇಗಿತ್ತು?

ಮಹಾಮಾರಿ ಕೊರೊನಾ ವೈರಸ್ ಹರಡುವಿಕೆ ಹೆಚ್ಚುತ್ತಿದ್ದಂತೆ ಸ್ಲೋವೆನಿಯಾ ಸರ್ಕಾರವು ಮುನ್ನೆಚ್ಚರಿಕೆ ವಹಿಸಿತು. ಸರ್ಕಾರವು ಕೆಲವು ಸಾಮಾನ್ಯ ಮತ್ತು ವಿಶೇಷ ಕ್ರಮಗಳನ್ನು ಜಾರಿಗೊಳಿಸಿತು. ಸಾರ್ವಜನಿಕ ಸಭೆ ಸಮಾರಂಭಗಳನ್ನು ನಿರ್ಬಂಧಿಸಲಾಯಿತು. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಹಾಗೂ ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಯಿತು. ಮೇ.23ರಿಂದ ಫುಟ್ ಬಾಲ್ ಮತ್ತು ಇತರೆ ಕ್ರೀಡಾಕೂಟಗಳನ್ನು ಕೂಡಾ ಆಯೋಜಿಸಲಾಗಿದೆ.

ಯುರೋಪಿಯನ್ ರಾಷ್ಟ್ರಗಳಲ್ಲಿ ಕೊವಿಡ್-19 ಜೀವಂತ

ಯುರೋಪಿಯನ್ ರಾಷ್ಟ್ರಗಳಲ್ಲಿ ಕೊವಿಡ್-19 ಜೀವಂತ

ನೊವೆಲ್ ಕೊರೊನಾ ವೈರಸ್ ಇನ್ನೂ ಜೀವಂತವಾಗಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಬೇರೆ ಯಾವ ರಾಷ್ಟ್ರಗಳೂ ಕೂಡಾ ಸಾಂಕ್ರಾಮಿಕ ರೋಗ ಮುಕ್ತ ದೇಶ ಎಂದು ಘೋಷಿಸಿಕೊಂಡಿಲ್ಲ. ಇಂಥ ಪರಿಸ್ಥಿತಿಯಲ್ಲಿ ಸಾಂಕ್ರಾಮಿಕ ರೋಗ ಮುಕ್ತ ಎಂದು ಘೋಷಿಸುವುದು ಸೂಕ್ತವಲ್ಲ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ.

English summary
How Slovenia Is A Coronavirus Free Country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X