ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾವಿನ ರಹಸ್ಯ: ಕೊರೊನಾ ವೈರಸ್ + ಸೈಲೆಂಟ್ ಹೈಪೋಕ್ಸಿಯಾ = ಸಾವು!

|
Google Oneindia Kannada News

ನವದೆಹಲಿ, ಮೇ.08: ನೊವೆಲ್ ಕೊರೊನಾ ವೈರಸ್ ಸೋಂಕಿನ ವಿರುದ್ಧ ಹೋರಾಟಕ್ಕೆ ವಿಶ್ವವೇ ಅಣಿಯಾಗಿದೆ. ಸೋಂಕಿತರನ್ನು ಸಾವಿನ ದವಡೆಯಿಂದ ರಕ್ಷಿಸಲು ಮಹಾಮಾರಿಗೆ ಮದ್ದು ಕಂಡು ಹಿಡಿಯಲು ವೈದ್ಯರು, ಸಂಶೋಧಕರ ತಂಡ ಹಗಲು-ರಾತ್ರಿ ಶ್ರಮಿಸುತ್ತಿದೆ.

Recommended Video

ಬಡವರಿಗೆ ಸೇರಬೇಕಾದ ಆಹಾರದ ಕಿಟ್ ನಂಜನಗೂಡಿನ ಅಂಗನವಾಡಿಯಲ್ಲಿ ಕೊಳಿಯುತ್ತಿರೋದೇಕೆ? | Nanjungud

ವಿಶ್ವದಾದ್ಯಂತ 39,34,813ಕ್ಕೂ ಹೆಚ್ಚು ಜನರಿಗೆ ಅಂಟಿಕೊಂಡಿರುವ ಹಾಗೂ 2,71,095 ಜೀವಗಳನ್ನು ಬಲಿ ತೆಗೆದುಕೊಂಡಿರುವ ಕೊರೊನಾ ವೈರಸ್ ಜನರನ್ನು ಭಯದಲ್ಲೇ ಬದುಕುವಂತೆ ಮಾಡಿದೆ. ಭಾರತದಲ್ಲೂ ಸೋಂಕಿತರ ಸಂಖ್ಯೆ 53 ಸಾವಿರದ ಗಡಿ ದಾಟಿದೆ.

ಕೊರೊನಾ ವೈರಸ್ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿ ಮತ್ತೊಂದು ಆಘಾತಕಾರಿ ಅಂಶ ಹೊರ ಬಿದ್ದಿದೆ. ಸೋಂಕಿತರಲ್ಲಿ ಸೈಲೆಂಟ್ ಹೈಪೋಕ್ಸಿಯಾ ಲಕ್ಷಣಗಳು ಕಾಣಿಸಿಕೊಂಡರೆ ಬದುಕುವುದೇ ಕಷ್ಷಸಾಧ್ಯ ಎಂದು ವೈದ್ಯಕೀಯ ಲೋಕ ಹೇಳುತ್ತಿದೆ. ಅಸಲಿಗೆ ಸೈಲೆಂಟ್ ಹೈಪೋಕ್ಸಿಯಾ ಎಂದರೇನು, ಕೊರೊನಾ ವೈರಸ್ ಹಾಗೂ ಸೈಲೆಂಟ್ ಹೈಪೋಕ್ಸಿಯಾಗೂ ಎಲ್ಲಿದೆಲ್ಲಿಯ ನಂಟು. ಹೀಗೆ ಸಾಕಷ್ಟು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ ನೋಡಿ.

ಕೊರೊನಾ ವೈರಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಸಲಿ ಸತ್ಯ!ಕೊರೊನಾ ವೈರಸ್ ಬಗ್ಗೆ ಯಾರಿಗೂ ಗೊತ್ತಿಲ್ಲದ ಅಸಲಿ ಸತ್ಯ!

ಸೈಲೆಂಟ್ ಹೈಪೋಕ್ಸಿಯಾದಿಂದ ಸೋಂಕಿತರಿಗೆ ಅಪಾಯ

ಸೈಲೆಂಟ್ ಹೈಪೋಕ್ಸಿಯಾದಿಂದ ಸೋಂಕಿತರಿಗೆ ಅಪಾಯ

ಕೊರೊನಾ ವೈರಸ್ ಸೋಂಕಿತರಲ್ಲಿ ಕೆಮ್ಮು, ಜ್ವರ, ಶೀತಜ್ವರ, ಉಸಿರಾಟ ತೊಂದರೆಯಂತಾ ಲಕ್ಷಣಗಳು ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರ ಜೊತೆಗೆ ಸೈಲೆಂಟ್ ಹೈಪೋಕ್ಸಿಯಾ ಲಕ್ಷಣ ಕಾಣಿಸಿಕೊಂಡರೆ ಹೆಚ್ಚಿನ ಅಪಾಯ ಎದುರಿಸಬೇಕಾಗುತ್ತದೆ. ಸೋಂಕಿತರು ಬದುಕುವ ಸಾಧ್ಯತೆಗಳೇ ವಿರಳ ಎಂಬ ಅಂಶವನ್ನು ವೈದ್ಯರು ಹೇಳುತ್ತಿದ್ದಾರೆ.

'ಹೈಪೋಕ್ಸಿಯಾ' ಎಂಬುದರ ಅರ್ಥವೇನು?

'ಹೈಪೋಕ್ಸಿಯಾ' ಎಂಬುದರ ಅರ್ಥವೇನು?

ಹೈಪೋಕ್ಸಿಯಾ ಎಂದರೆ ಮನುಷ್ಯನ ರಕ್ತ ಹಾಗೂ ಅಂಗಾಂಶದಲ್ಲಿ ಆಮ್ಲಜನಕದ ಪ್ರಮಾಣ ಕಡಿಮೆಯಾಗುವುದು ಎಂದರ್ಥ. ಹೈಪೋಕ್ಸಿಯಾದಿಂದ ಮನುಷ್ಯದ ಸಂಪೂರ್ಣ ದೇಹ ಅಥವಾ ದೇಹದ ನಿರ್ದಿಷ್ಟ ಪ್ರದೇಶದ ಮೇಲೆ ಪರಿಣಾಮ ಬೀರಲಿದೆ. ಅಮೆರಿಕಾ ಮೂಲದ ಮಾಯೋ ಕ್ಲಿನಿಕ್ ಪ್ರಕಾರ, ಸಾಮಾನ್ಯ ಅಪಧಮನಿಯ ಆಮ್ಲಜನಕ(Normal Arterial Oxygen)ದಲ್ಲಿ ಸರಿಸುಮಾರು 75 ರಿಂದ 100 ಮಿಲಿಮೀಟರ್ ಪಾದರಸವು ಇರುತ್ತದೆ. ಸಾಮಾನ್ಯ ವ್ಯಕ್ತಿಯಲ್ಲಿ ನಾಡಿ ಮಿಡಿತವು ಕನಿಷ್ಠ 95-100ರಷ್ಟು ಇರುತ್ತದೆ. ರಕ್ತದಲ್ಲಿನ ಆಮ್ಲಜನಕ ಪ್ರಮಾಣವು ಶೇ.90ಕ್ಕಿಂತ ಕೆಳಗಿದ್ದಲ್ಲಿ ಕಡಿಮೆ ಎಂದು ಪರಿಗಣಿಸಲಾಗುತ್ತದೆ.

ಸೈಲೆಂಟ್ ಹೈಪೋಕ್ಸಿಯಾ ಅರ್ಥವೇನು?

ಸೈಲೆಂಟ್ ಹೈಪೋಕ್ಸಿಯಾ ಅರ್ಥವೇನು?

ಮನುಷ್ಯನ ರಕ್ತದಲ್ಲಿ ಆಮ್ಲಜನಕ ಪ್ರಮಾಣವು ಶೇ.90ಕ್ಕಿಂತ ಕಡಿಮೆಯಿದ್ದಲ್ಲಿ ಅದನ್ನು ಸೈಲೆಂಟ್ ಹೈಪೋಕ್ಸಿಯಾ ಅಥವಾ ಹ್ಯಾಪಿ ಹೈಪೋಕ್ಸಿಯಾ ಎಂದು ಕರೆಯಲಾಗುತ್ತದೆ. ಹೈಪೋಕ್ಸಿಯಾ ಸೋಂಕಿತರಿಗಿಂತಲೂ ಸೈಲೆಂಟ್ ಹೈಪೋಕ್ಸಿಯಾ ಸೋಂಕಿತರ ರಕ್ತ ಮತ್ತು ಅಂಗಾಂಶಗಳಲ್ಲಿ ಆಮ್ಲಜನಕ ಪ್ರಮಾಣ ಕಡಿಮೆಯಾಗಿರುತ್ತದೆ. ಇತ್ತೀಚಿಗೆ ಬಹುತೇಕ ಕೊರೊನಾ ವೈರಸ್ ಸೋಂಕಿತರಲ್ಲಿ ಈ ಸೈಲೆಂಟ್ ಹೈಪೋಕ್ಸಿಯಾ ಲಕ್ಷಣಗಳು ಕಾಣಿಸಿಕೊಳ್ಳುತ್ತಿರುವುದು ಆತಂಕ ಸೃಷ್ಟಿಸಿದೆ. ಕೊರೊನಾ ವೈರಸ್ ಸೋಂಕಿತರ ರಕ್ತದಲ್ಲಿನ ಆಮ್ಲಜನಕ ಪ್ರಮಾಣವು ಶೇ.80ಕ್ಕಿಂತ ಕಡಿಮೆ ಅಂದರೆ ಶೇ.70ರಷ್ಟಿದ್ದು ತೀವ್ರ ನಿಗಾ ಘಟಕದಲ್ಲಿ ಅಂಥವರಿಗೆ ಚಿಕಿತ್ಸೆ ನೀಡಲಾಗಿದೆ. ಇನ್ನು, ಕೆಲವು ಸೋಂಕಿತ ಪ್ರಕರಣಗಳಲ್ಲಿ ರಕ್ತದಲ್ಲಿನ ಆಮ್ಲಜನಕ ಪ್ರಮಾಣ ಶೇ.50ರಷ್ಟಿದ್ದು ತೀವ್ರ ಆಘಾತವನ್ನುಂಟು ಮಾಡಿದೆ.

ಕೊವಿಡ್-19 ಸೋಂಕಿತರಿಗೆ ಸೈಲೆಂಟ್ ಹೈಪೋಕ್ಸಿಯಾ ಪರಿಣಾಮ?

ಕೊವಿಡ್-19 ಸೋಂಕಿತರಿಗೆ ಸೈಲೆಂಟ್ ಹೈಪೋಕ್ಸಿಯಾ ಪರಿಣಾಮ?

ಇನ್ನು, ಕೊರೊನಾ ವೈರಸ್ ಸೋಂಕಿತರಲ್ಲಿ ಸೈಲೆಂಟ್ ಹೈಪೋಕ್ಸಿಯಾ ಹೇಗೆ ಪರಿಣಾಮ ಬೀರುತ್ತದೆ. ಸೈಲೆಂಟ್ ಹೈಪೋಕ್ಸಿಯಾ ಕಾಣಿಸಿಕೊಂಡ ಕೊರೊನಾ ವೈರಸ್ ಸೋಂಕಿತರಲ್ಲಿ ಯಾವೆಲ್ಲ ಬದಲಾವಣೆಗಳು ಆಗುತ್ತವೆ ಎಂಬುದರ ಪಟ್ಟಿ ಇಲ್ಲಿದೆ ನೋಡಿ.

ಕೊರೊನಾ ಸೋಂಕಿತರಿಗೆ ಸೈಲೆಂಟ್ ಹೈಪೋಕ್ಸಿಯಾದಿಂದ ಪ್ರಭಾವ:

- ದೇಹದ ಚರ್ಮದ ಬಣ್ಣದಲ್ಲಿ ಬದಲಾವಣೆ, ನೀಲಿ ಮತ್ತು ಕೆಂಪು ಬಣ್ಣಕ್ಕೆ ಚರ್ಮವು ಬದಲಾಗುತ್ತದೆ

- ಕೆಮ್ಮು

- ವೇಗದ ಹೃದಯ ಬಡಿತ

- ಉಸಿರಾಡುವಾಗ ನೋವು

- ಕಡಿಮೆ ಆಮ್ಲಜನಕ ಪ್ರಮಾಣ

- ಎದೆ ಬಿಗಿಯುವುದು

- ತ್ವರಿತ ಉಸಿರಾಟ

- ಉಸಿರಾಟದ ತೊಂದರೆ

- ಹೃದಯ ಬಡಿತದಲ್ಲಿ ನಿಧಾನ

- ಬೆವರುವುದು

- ಉಬ್ಬಸ

- ಗೊಂದಲ

ಚಿಕಿತ್ಸೆ ಇಲ್ಲದ ದೀರ್ಘಕಾಲಿಕ ಸಿಒಪಿಡಿ ಹೈಪೋಕ್ಸಿಯಾ ಕಾರಣ:

ಚಿಕಿತ್ಸೆ ಇಲ್ಲದ ದೀರ್ಘಕಾಲಿಕ ಸಿಒಪಿಡಿ ಹೈಪೋಕ್ಸಿಯಾ ಕಾರಣ:

- ಖಿನ್ನತೆ ಮತ್ತು ಮಾನಸಿಕ ತೊಳಲಾಟ

- ಆಯಾಸ

- ತಲೆನೋವು

- ಗೊಂದಲ

- ಅಧಿಕ ರಕ್ತದೊತ್ತಡ (ಅಧಿಕ ರಕ್ತದೊತ್ತಡ)

- ಶ್ವಾಸಕೋಶದ ಅಧಿಕ ರಕ್ತದೊತ್ತಡ

- ಹೆಚ್ಚಿದ ಹೃದಯ ಬಡಿತ

- ಹೃದಯಾಘಾತ

- ತೀವ್ರ ಉಸಿರಾಟದ ವೈಫಲ್ಯ

- ದ್ವಿತೀಯ ಪಾಲಿಸಿಥೆಮಿಯಾ,

- ಕೆಂಪು ರಕ್ತ ಕಣಗಳ (ಆರ್‌ಬಿಸಿ) ಸಂಖ್ಯೆಯಲ್ಲಿ ಅಸಹಜ ಹೆಚ್ಚಳ

9 ಲಕ್ಷಣಗಳಿದ್ದಲ್ಲಿ ಕೊರೊನಾ ವೈರಸ್ ಫಿಕ್ಸ್!

9 ಲಕ್ಷಣಗಳಿದ್ದಲ್ಲಿ ಕೊರೊನಾ ವೈರಸ್ ಫಿಕ್ಸ್!

ಸೈಲೆಂಟ್ ಹೈಪೋಕ್ಸಿಯಾ ಸೋಂಕಿತರಲ್ಲಿ ಕಾಣಿಸಿಕೊಳ್ಳುವುದರ ಜೊತೆಗೆ ಕೊರೊನಾ ವೈರಸ್ ಸೋಂಕಿತರಲ್ಲಿ ಆರಂಭದಲ್ಲಿ ಮೂರು ಲಕ್ಷಣಗಳನ್ನಷ್ಟೇ ಗುರುತಿಸಲಾಗಿತ್ತು. ಆದರೆ ಇತ್ತೀಚಿಗೆ ಸೋಂಕಿತರಲ್ಲಿ 9 ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಅಮೆರಿಕಾದ ಸಂಸ್ಥೆಯೊಂದು ಖಾತ್ರಿಪಡಿಸಿದೆ. ಕೊವಿಡ್-19 ಸೋಂಕಿತರಲ್ಲಿ ಕಾಣಿಸಿಕೊಳ್ಳುವ ಲಕ್ಷಣಗಳ ಪಟ್ಟಿ ಇಲ್ಲಿದೆ ನೋಡಿ.

ಕೊರೊನಾ ವೈರಸ್ ಸೋಂಕಿತರಲ್ಲಿನ ಲಕ್ಷಣಗಳು:

- ಜ್ವರ

- ಕೆಮ್ಮು

- ಉಸಿರಾಟ ತೊಂದರೆ

- ಶೀತ

- ಶೀತದ ಪುನರಾವರ್ತನೆ

- ಮೂಳೆಗಳಲ್ಲಿ ನೋವು

- ತಲೆನೋವು

- ಗಂಟಲು ಕೆರೆತ

- ರುಚಿ ಮತ್ತು ವಾಸನೆ ಗುರುತಿಸಲು ಆಗುವುದಿಲ್ಲ

English summary
How Silent Hypoxia Is More Dangerous For Coronavirus Patients.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X