ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾದಿಂದ ವಿಮಾನ ಸಂಸ್ಥೆಗಳಿಗಾದ ನಷ್ಟ ಎಷ್ಟು?

|
Google Oneindia Kannada News

ಬೆಂಗಳೂರು ಮಾರ್ಚ್ 7: ಕೊರೊನಾದಿಂದ ವಿಮಾನ ಸಂಸ್ಥೆಗಳು ಬರೋಬ್ಬರಿ 8 ಲಕ್ಷ ಕೋಟಿಯಷ್ಟು ನಷ್ಟ ಅನುಭವಿಸಿವೆ.

ವಿಶ್ವಾದ್ಯಂತ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ಬಲಿ ಪಡೆದು ಭಾರಿ ಆತಂಕ ಸೃಷ್ಟಿಸಿರುವ ಕೊರೊನಾ ವೈರಸ್ ಜಗತ್ತಿನ ಆರ್ಥಿಕತೆ ಮೇಲೂ ಪರಿಣಾಮ ಬೀರಿದೆ.ಕೊರೊನಾದಿಂದ ಜಾಗತಿಕ ಆರ್ಥಿಕತೆಗೆ ಸುಮಾರು 25 ಲಕ್ಷ ಕೋಟಿ ರೂ.ನಷ್ಟವಾಗಬಹುದು ಎಂದು ಭವಿಷ್ಯ ನುಡಿದಿದೆ.

ಕೊರೊನಾ ಜೊತೆ ಎಚ್‌1ಎನ್‌1 ಸೋಂಕು: ಟೆಕ್ಕಿಗಳಿಗೆ ಆತಂಕ ಕೊರೊನಾ ಜೊತೆ ಎಚ್‌1ಎನ್‌1 ಸೋಂಕು: ಟೆಕ್ಕಿಗಳಿಗೆ ಆತಂಕ

ಜಾಗತಿಕ ಆರ್ಥಿಕತೆ ಮೇಲೆ ಈ ವೈರಸ್‌ನಿಂದ ಪರಿಣಾಮ ಉಂಟಾಗಲಿದ್ದು, 5 ರಿಂದ 25 ಲಕ್ಷ ಕೋಟಿ ರವರೆಗೆ ನಷ್ಟವಾಗಲಿದೆ. ಅದರಲ್ಲೂ ಏಷ್ಯಾ ಆರ್ಥಿಕತೆ ಮೇಲೆ ಈ ವೈರಸ್ ನ ವ್ಯಾಪಿಸುವಿಕೆ ಪರಿಣಾಮ ಉಂಟುಮಾಡಲಿದೆ.

ವಿಮಾನ ಸಂಸ್ಥೆಗಳಿಗೆ ಉಂಟಾಗಿರುವ ನಷ್ಟ

ವಿಮಾನ ಸಂಸ್ಥೆಗಳಿಗೆ ಉಂಟಾಗಿರುವ ನಷ್ಟ

ಇನ್ನೊಂದೆಡೆ, ಕೊರೊನಾ ವ್ಯಾಧಿ ಹಿನ್ನೆಲೆಯಲ್ಲಿ ವಿಶ್ವದ ನಾನಾ ರಾಷ್ಟ್ರಗಳು ವಿಮಾನ ಸೇವೆ ಮೇಲೆ ನಿರ್ಬಂಧ ವಿಧಿಸುತ್ತಿರುವುದರಿಂದಾಗಿ ಜಾಗತಿಕವಾಗಿ ವಿಮಾನಯಾನ ಸಂಸ್ಥೆಗಳಿಗೆ 63 ಬಿಲಿಯನ್ ಡಾಲರ್ ನಿಂದ 113 ಬಿಲಿಯನ್ ಡಾಲರ್ ವರೆಗೆ ವರಮಾನ ಖೋತಾ ಆಗಲಿದೆ ಅಂದರೆ ಸುಮಾರು 8.36 ಲಕ್ಷ ಕೋಟಿ ರೂ. ನಷ್ಟು ನಷ್ಟ ಉಂಟಾಗಲಿದೆ.

ಎಲ್ಲೆಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಎಲ್ಲೆಲ್ಲಿ ಶಾಲೆಗಳಿಗೆ ರಜೆ ಘೋಷಣೆ

ಕೊರೊನಾ ವ್ಯಾಪಿಸುವುದನ್ನು ತಡೆಯುವ ಸಲುವಾಗಿ 13 ದೇಶಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಇದರಿಂದಾಗಿ 29 ಕೋಟಿ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ತೊಂದರೆಯಾಗಿದೆ ಎಂದು ಯುನೆಸ್ಕೋ ತಿಳಿಸಿದೆ.

ಎಡಿಬಿ ವರದಿಯಲ್ಲೇನಿದೆ?

ಎಡಿಬಿ ವರದಿಯಲ್ಲೇನಿದೆ?

ದೇಶೀಯ ಬೇಡಿಕೆ ಕುಸಿತ, ಪ್ರವಾಸಿಗರ ಇಳಿಮುಖ, ವ್ಯವಹಾರ ಸಂಬಂಧಿ ಪ್ರಯಾಣ, ವ್ಯಾಪಾರ, ಉತ್ಪಾದನೆ, ಆರೋಗ್ಯ, ಸರಬರಾಜು ಪರಿಣಾಮ ಮುಂತಾದ ಕ್ರಮಗಳಿಂದಾಗಿ ಏಷ್ಯಾದ ಆರ್ಥಿಕೆಗಳ ಮೇಲೆ ಕೊರೊನಾ ಪರಿಣಾಮ ಬೀರಬಹುದು. ಈ ವೈರಸ್ ಮುಂದಿನ ದಿನಗಳಲ್ಲಿ ಯಾವ ಸ್ವರೂಪ ಪಡೆದುಕೊಳ್ಳುತ್ತದೆ ಎಂಬುದರ ಮೇಲೆ ಆರ್ಥಿಕ ನಷ್ಟದ ತೀವ್ರತೆ ಗೊತ್ತಾಗುತ್ತದೆ.ಆದರೆ ವೈರಸ್‌ನ ವ್ಯಾಪಿಸುವಿಕೆ ಕುರಿತು ಇನ್ನೂ ಅನಿಶ್ಚಿತತೆ ಇದೆ.

ಕೊರೊನಾದಿಂದ ಇದುವರೆಗೆ 3070 ಮಂದಿ ಸಾವು

ಕೊರೊನಾದಿಂದ ಇದುವರೆಗೆ 3070 ಮಂದಿ ಸಾವು

ಕೊರೊನಾದಿಂದ ಇದುವರೆಗೆ ಚೀನಾದಲ್ಲಿ 3070 ಮಂದಿ ಮೃತಪಟ್ಟಿದ್ದಾರೆ. ಸಾಕಷ್ಟು ದೇಶಗಳಿಗೆ ಈ ಕೊರೊನಾ ವೈರಸ್ ಹರಡಿದೆ. ಈಗೀಗ ಭಾರತದ ಜನತೆ ಕೂಡ ಈ ಕೊರೊನಾ ಆತಂಕದಿಂದ ಹೊರತಾಗಿಲ್ಲ.

English summary
Airlines from Coronavirus suffered a loss of Rs 8 lakh crore.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X