ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಜಾಪ್ರಭುತ್ವದ 'ಮಹಾ ಬಂಧ' ಇಂಡೋ- ಯುಎಸ್ ಅನುಬಂಧ

ಎರಡು ದೇಶಗಳು ಬೃಹತ್ ಪ್ರಜಾಪ್ರಭುತ್ವ ಜಾಗತಿಕವಾಗಿ ಮಾನವ ಸಂಪನ್ಮೂಲದ ಶಕ್ತಿಯನ್ನು ಸಾರಿವೆ. ಟ್ರಂಪ್ ಗೆದ್ದರೆ ಉದ್ಯೋಗ, ಆಥಿಕ ನೀತಿ, ವಲಸೆ ನೀತಿ ಮೇಲೆ ಏನು ಪರಿಣಾಮ ಬೀರಲಿದೆ. ಭಾರತದ ಸಾಫ್ಟ್ ವೇರ್ ಉದ್ಯಮಕ್ಕೆ ಏನು ಆಘಾತ ಕಾದಿದೆ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಅಮೆರಿಕ ತನ್ನ 45ನೇ ಅಧ್ಯಕ್ಷರ ಆಯ್ಕೆ ಕಸರತ್ತಿನಲ್ಲಿದೆ. ನೂತನ ಅಧ್ಯಕ್ಷರು ಜನವರಿ 20, 2017 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಇದಕ್ಕೂ ಮುನ್ನ ಚುನಾವಣೆಯ ಟ್ರೆಂಡ್ ಯಾರ ಪರ ಇದೆ ಎಂಬುದು ಸದ್ಯಕ್ಕೆ ತಿಳಿದು ಬರಲಿದೆ. ಡೆಮಾಕ್ರಟಿಕ್‌ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್‌ ಮತ್ತು ರಿಪಬ್ಲಿಕನ್‌ ಪಕ್ಷದ ಡೊನಾಲ್ಡ್‌ ಟ್ರಂಪ್‌ ನಡುವೆ ತೀವ್ರ ಸ್ಪರ್ಧೆ ಇದೆ. ಜತೆಗೆ ಯಾರು ಹಿತವರು ಭಾರತಕ್ಕೆ ಇವರಿಬ್ಬರಲ್ಲಿ ಎಂಬ ಪ್ರಶ್ನೆಯೂ ಮುಖ್ಯವಾಗಿದೆ.

ಎರಡು ದೇಶಗಳು ಬೃಹತ್ ಪ್ರಜಾಪ್ರಭುತ್ವ ಜಾಗತಿಕವಾಗಿ ಮಾನವ ಸಂಪನ್ಮೂಲದ ಶಕ್ತಿಯನ್ನು ಸಾರಿವೆ. ಟ್ರಂಪ್ ಗೆದ್ದರೆ ಉದ್ಯೋಗ, ಆಥಿಕ ನೀತಿ, ವಲಸೆ ನೀತಿ ಮೇಲೆ ಏನು ಪರಿಣಾಮ ಬೀರಲಿದೆ. ಭಾರತದ ಸಾಫ್ಟ್ ವೇರ್ ಉದ್ಯಮಕ್ಕೆ ಏನು ಆಘಾತ ಕಾದಿದೆ ಎಂಬ ಪ್ರಶ್ನೆ ಇದೆ. Live updates on : US Presidential elections 2016
ರಿಪಬ್ಲಿಕನ್ ಗಳಿಗೆ ಹೋಲಿಸಿದರೆ ಡೆಮಾಕ್ರಾಟಿಕ್ ಅಭ್ಯರ್ಥಿಗಳು ಭಾರತದ ವಿದೇಶಾಂಗ ನೀತಿ ಪರವಾಗಿದ್ದರೂ 9/11 ನಂತರ ಹೀಗೆ ಎಂದು ಹೇಳಲು ಬರುವುದಿಲ್ಲ.ರಿಪಬ್ಲಿಕನ್ ಜಾರ್ಜ್ ಡಬ್ಲ್ಯೂ ಬುಷ್ ನಂತರ ಭಾರತವನ್ನು ಅಮೆರಿಕದ ಅಧ್ಯಕ್ಷರು ನೋಡುವ ರೀತಿ ಬದಲಾಗಿದೆ. ಭಾರತ ಹಾಗೂ ಅಮೆರಿಕ ನಡುವಿನ ಸಂಬಂಧ, ಅನುಬಂಧಕ್ಕೆ ನೀರೆರೆದು ಪೋಷಿಸಿದ ಅಮೆರಿಕ ಐವರು ಅಧ್ಯಕ್ಷರ ಬಗ್ಗೆ ಇಲ್ಲಿದೆ
ರೋನಾಲ್ಡ್ ರೇಗನ್, ಜಾರ್ಜ್ ಡಬ್ಲ್ಯೂ ಬುಷ್, ಬಿಲ್ ಕ್ಲಿಂಟನ್, ಬುಷ್ ಜ್ಯೂನಿಯರ್ ಹಾಗೂ ಬರಾಕ್ ಒಬಾಮಾ ಕಾಲದ ಸಂಬಂಧಗಳತ್ತ ಒಂದು ನೋಟ ಮುಂದಿದೆ.

ರೋನಾಲ್ಡ್ ರೇಗನ್ (1981-88)

ರೋನಾಲ್ಡ್ ರೇಗನ್ (1981-88)

ಭಾರತದಲ್ಲಿ ಇಂದಿರಾ ಗಾಂಧಿ ಹಾಗೂ ರಾಜೀವ್ ಗಾಂಧಿ ಆಡಳಿತವಿದ್ದ ಕಾಲದಲ್ಲಿ ಯುಎಸ್ ಜತೆ ಉತ್ತಮ ಬಾಂಧವ್ಯ ಹೊಂದಿರಲಿಲ್ಲ. ಅಫ್ಘಾನಿಸ್ತಾನದ ಮೇಲೆ ಸೋವಿಯೆಟ್ ಯೂನಿಯನ್ ಆಕ್ರಮಣ ಮಾಡಿದ ಸಂದರ್ಭದಲ್ಲಿ ಪಾಕಿಸ್ತಾನದ ಜಿಯಾ ಉಲ್ ಹಕ್ ಅವರಿಗೆ ಶಸ್ತ್ರಾಸ್ತ್ರ ಹೆಚ್ಚಳಕ್ಕೆ ಸಹಕರಿಸಿದ ಯುಎಸ್, ಪರೋಕ್ಷವಾಗಿ ಸೋವಿಯೆಟ್ ವಿರುದ್ಧ ತಿರುಗಿ ಬಿದ್ದಿತ್ತು. ಭಾರತ ಹಾಗೂ ಅಮೆರಿಕದ ನಡುವೆ ಈ ಅವಧಿಯಲ್ಲಿ ಒಂದು ರೀತಿ ಶೀತಲ ಸಮರ ನಡೆದಿತ್ತು ಎಂದರೆ ತಪ್ಪಾಗಲಾರದು.

ಜಾರ್ಜ್ ಡಬ್ಲ್ಯೂ ಬುಷ್ (1989-93)

ಜಾರ್ಜ್ ಡಬ್ಲ್ಯೂ ಬುಷ್ (1989-93)

ಸೊವಿಯೆಟ್ ಯೂನಿಯನ್ ಜತೆ ಶಾಂತಿ ಮಾತುಕತೆ, ಇರಾಕ್ ಹಾಗೂ ಕುವೈಟ್ ಆಕ್ರಮಿಸಿದ ಸದ್ದಾಂ ಹುಸೇನ್ ಸದ್ದಡಗಿಸುವುದರಲ್ಲಿ ಬುಷ್ ನಿರತರಾಗಿದ್ದರು. ಇದಲ್ಲದೆ, ಪನಾಮಾ ಹಾಗೂ ಸೊಮಾಲಿಯಾ ಕಡೆ ಕೂಡಾ ಬುಷ್ ಕಣ್ಣು ಹಾಯಿಸಬೇಕಾಯಿತು.

ಅಮೆರಿಕದ ಫೈಟರ್ ಜೆಟ್ ಗಳಿಗೆ ಇಂಧನ ತುಂಬಿಸಿಕೊಳ್ಳಲು ನೆಲೆ ನೀಡಿದ್ದು ಬಿಟ್ಟರೆ ಅಂದಿನ ಚಂದ್ರಶೇಖರ್ ಸರ್ಕಾರ ಹೆಚ್ಚಿನ ಬಾಂಧವ್ಯ ಬೆಳೆಸಿಕೊಳ್ಳಲಿಲ್ಲ.ಭಾರತದ ಅಲಿಪ್ತ ನೀತಿ, ವಿದೇಶಾಂಗ ನೀತಿಯಲ್ಲಿ ಹೆಚ್ಚಿನ ಬದಲಾವಣೆ, ಮುಕ್ತ ಚರ್ಚೆ ಸಾಧ್ಯವಾಗಲೇ ಇಲ್ಲ.

ಬಿಲ್ ಕ್ಲಿಂಟನ್ (1993- 2000)

ಬಿಲ್ ಕ್ಲಿಂಟನ್ (1993- 2000)

ಜಿಮ್ಮಿ ಕಾರ್ಟರ್ ನಂತರ ಡೆಮಾಕ್ರಾಟಿಕ್ ಅಭ್ಯರ್ಥಿಯೊಬ್ಬರು ಅಧ್ಯಕ್ಷರಾಗಿ ಹೊಸ ಸಂಬಂಧ ಬೆಸೆಯುವ ಭರವಸೆ ಮೂಡಿಸಿದವರು ಬಿಲ್ ಕ್ಲಿಂಟನ್.

ಪಿವಿ ನರಸಿಂಹ ರಾವ್ ಅವರ ಆರ್ಥಿಕ ಹಾಗೂ ಭದ್ರತಾ ನೀತಿ ಸುಧಾರಣಾ ಕ್ರಮಗಳು ತಕ್ಕಮಟ್ಟಿಗೆ ವಾಷಿಂಗ್ಟನ್ ಹಾಗೂ ದೆಹಲಿ ನಡುವಿನ ಅಂತರವನ್ನು ಕಡಿಮೆ ಮಾಡಿತು. ಪಾಕಿಸ್ತಾನ ಪರ ಯುಎಸ್ ರಾಯಭಾರಿ ರಾಬಿನ್ ರಫೆಲ್ ರನ್ನು ಪದಚ್ಯುತಿಗೊಳಿಸುವ ಮೂಲಕ ಭಾರತದತ್ತ ಯುಎಸ್ ವಾಲುತ್ತಿರುವ ಸಂಕೇತ ನೀಡಲಾಯಿತು. ಹರ್ಕತ್ ಅಲ್ ಅನ್ಸಾರ್ ಭಯೋತ್ಪಾದಕ ಸಂಘಟನೆ ಎಂದು ಘೋಷಿಸಿದ್ದು, ಪಾಕಿಸ್ತಾನಕ್ಕೆ ಹಿನ್ನಡೆ.

ಆದರೆ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಅಣ್ವಸ್ತ್ರ ಪರೀಕ್ಷೆ ಯಶಸ್ವಿಯಾಗಿ ನೆರವೇರಿಸಿದ ಬೆನ್ನಲ್ಲೇ ಭಾರತದ ಮೇಲೆ ಯುಎಸ್ ದಿಗ್ಬಂಧನ ಹೇರಿತು.

ಜಾರ್ಜ್ ಬುಷ್ ಜ್ಯೂನಿಯರ್(2001-2008)

ಜಾರ್ಜ್ ಬುಷ್ ಜ್ಯೂನಿಯರ್(2001-2008)

ಉಭಯ ದೇಶಗಳ ಬಾಂಧವ್ಯ ಗಟ್ಟಿಯಾದ ಕಾಲ ಇದು ಎನ್ನಬಹುದು. ತಾಲಿಬಾನಿಗಳ ಪರ ನಿಂತ ಪಾಕಿಸ್ತಾನವನ್ನು ಕಡೆಗಣಿಸಿ, 9/11 ದಾಳಿಯ ಪ್ರತಿಕಾರವನ್ನು ಯುಎಸ್ ತೀರಿಸಿಕೊಂಡಿತು. ಭಾರತದ ಗಡಿಯಲ್ಲಿ ಪಾಕ್ ಬೆಂಬಲಿತ ಉಗ್ರರ ಪುಂಡಾಟದ ಬಗ್ಗೆ ಕೂಡಾ ಯುಎಸ್ ಎಚ್ಚರಿಕೆ ನೀಡಿತು. ಅಣ್ವಸ್ತ್ರ ಒಪ್ಪಂದ, ಇಂಧನ ಸುರಕ್ಷತೆ, ಭಯೋತ್ಪಾದನೆ ನಿಗ್ರಹ, ಹವಾಮಾನ ವೈಪರೀತ್ಯ ಹೀಗೆ ಅನೇಕ ಮಹತ್ವದ ಕ್ಷೇತ್ರಗಳಲ್ಲಿ ಉಭಯ ದೇಶಗಳು ಚರ್ಚೆ ಆರಂಭಿಸಿದವು.

ಬರಾಕ್ ಒಬಾಮಾ (2009-2016)

ಬರಾಕ್ ಒಬಾಮಾ (2009-2016)

ಪ್ರಧಾನಿ ನರೇಂದ್ರ ಮೋದಿ ಹಾಗೂ ಬರಾಕ್ ಒಬಾಮಾ ಇಬ್ಬರ ಮುಂದಾಳತ್ವದಲ್ಲಿ ಉಭಯ ದೇಶಗಳ ಸಂಬಂಧ ಗಟ್ಟಿಯಾಯಿತು. ವೀಸಾ ನೀತಿ ಬದಲಾವಣೆ, ಚೀನಾದಿಂದ ಗಡಿ ತಂಟೆ, ನೆರೆ ರಾಷ್ಟ್ರಗಳೊಂದಿಗೆ ಭಾರತದ ಸಂಬಂಧ,ಮಾನವ ಸಂಪನ್ಮೂಲ ಬಳಕೆ ಮುಂತಾದ ವಿಷಯಗಳ ಬಗ್ಗೆ ಮಹತ್ವದ ಒಪ್ಪಂದ ಹಾಗೂ ಚರ್ಚೆಗಳನ್ನು ಈ ಇಬ್ಬರು ನಾಯಕರು ಕೈಗೊಂಡರು.

English summary
How India-US relations have progressed under the last 5 American presidents. Unlike what it was said, the ‘rule' that Republican presidents are less favourable to India does not hold true any more
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X