ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

2008ರಲ್ಲೇ ನ್ಯಾಟೋಗೆ ಉಕ್ರೇನ್‌ ಸೇರ್ಪಡೆಯನ್ನು ಜರ್ಮನಿ ನಿರ್ಬಂಧಿಸಿದ್ದು ಏಕೆ?

|
Google Oneindia Kannada News

ಕೀವ್, ಏಪ್ರಿಲ್ 5: ಉಕ್ರೇನ್-ರಷ್ಯಾ ಯುದ್ಧದ ನಡುವೆ ಜರ್ಮನಿ ಮಾಜಿ ಚಾನ್ಸಲರ್ ಏಂಜೆಲಾ ಮಾರ್ಕೆಲ್ ತಮ್ಮ ಹಿಂದಿನ ನಿರ್ಧಾರವನ್ನು ಸೋಮವಾರ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. 2008ರಲ್ಲಿ ತಕ್ಷಣವೇ ನ್ಯಾಟೋ ಒಕ್ಕೂಟಕ್ಕೆ ಉಕ್ರೇನ್ ಸೇರ್ಪಡೆ ಆಗುವುದನ್ನು ನಿರ್ಬಂಧಿಸಿದ ತಮ್ಮ ನಿರ್ಧಾರದ ಬಗ್ಗೆ ಅವರು ಸಮರ್ಥಿಸಿಕೊಂಡರು. ಇದರ ಜೊತೆ ರಷ್ಯಾ ಆಕ್ರಮಣವು ತನ್ನ 16 ವರ್ಷಗಳ ಪರಂಪರೆಯನ್ನು ಮುಚ್ಚಿಹಾಕುತ್ತದೆ ಎಂಬ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಟೀಕೆಗಳನ್ನು ತಿರಸ್ಕರಿಸಿದರು.

ಬುಚಾರೆಸ್ಟ್‌ನಲ್ಲಿ ನಡೆದ ನ್ಯಾಟೋ ಶೃಂಗಸಭೆಯಲ್ಲಿ ಯುನೈಟೆಡ್ ಸ್ಟೇಟ್ಸ್‌ನ ಒತ್ತಾಯದ ಹೊರತಾಗಿಯೂ ತಮ್ಮ ದೇಶವನ್ನು ಮೈತ್ರಿಕೂಟಕ್ಕೆ ಸೇರಿಸಿಕೊಳ್ಳುವುದಕ್ಕೆ ಒಪ್ಪಿಕೊಳ್ಳದಿರುವ ಫ್ರಾಂಕೋ-ಜರ್ಮನ್ ನೇತೃತ್ವದ ನಿರ್ಧಾರವೇ "ತಪ್ಪಾದ ಲೆಕ್ಕಾಚಾರ" ಆಗುತ್ತದೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಹೇಳಿದ್ದರು.

 ಉಕ್ರೇನ್‌ ಬಂದರಿನ ಮೇಲೆ ಬಾಂಬ್‌ ದಾಳಿ: ಕೀವ್‌ ಬಳಿ ಸಾಮೂಹಿಕ ಸಮಾಧಿ ಉಕ್ರೇನ್‌ ಬಂದರಿನ ಮೇಲೆ ಬಾಂಬ್‌ ದಾಳಿ: ಕೀವ್‌ ಬಳಿ ಸಾಮೂಹಿಕ ಸಮಾಧಿ

ಯುದ್ಧಪರಾಧದ ಬಗ್ಗೆ ಉಲ್ಲೇಖಿಸಿದ ಝೆಲೆನ್ಸ್ಕಿ:

ಉಕ್ರೇನಿಯನ್ ನಾಗರಿಕರ ವಿರುದ್ಧ ರಷ್ಯಾ ಪಡೆಗಳು ನಡೆಸುತ್ತಿರುವ ದಾಳಿಯ ಕುರಿತು "ಯುದ್ಧಪರಾಧ"ದ ಕುರಿತು ಉಲ್ಲೇಖಿಸಿದ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ, "ನಾನು ಮಾರ್ಕೆಲ್ ಮತ್ತು ನಿಕೋಲಸ್ ಸರ್ಕೋಜಿ ಅವರನ್ನು ಬುಚಾಗೆ ಭೇಟಿ ನೀಡುವಂತೆ ಆಹ್ವಾನಿಸುತ್ತೇನೆ. ಕಳೆದ 14 ವರ್ಷಗಳಲ್ಲಿ ರಷ್ಯಾಗೆ ನೀಡಿರುವ ವಿನಾಯಿತಿ ನೀತಿಯು ಯಾವ ಪರಿಣಾಮ ಬೀರಿದೆ," ಎಂದು ವಿವರಿಸಿದರು.

How Former German chancellor Angela Merkel defends 2008 decision to block Ukraine from NATO

ಯುರೋಪ್ ರಾಷ್ಟ್ರಗಳ ವಿರುದ್ಧ ವಾಗ್ದಾಳಿ:

ರಷ್ಯಾ ಪಡೆಗಳು ಉಕ್ರೇನ್ ವಿರುದ್ಧ ಮೇಲಿಂದ ಮೇಲೆ ದಾಳಿಯನ್ನು ನಡೆಸುತ್ತಿದೆ. ಇದರ ಮಧ್ಯೆ ಯುರೋಪಿಯನ್ ರಾಷ್ಟ್ರಗಳ ನಾಯಕರು ತಮ್ಮ ನಿಲುವಿನ ಮೂಲಕ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಸಮಾಧಾನಪಡಿಸುವುದಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆನೆನ್ಸ್ಕಿ ಹೇಳಿದರು. ಆದರೆ ಮಾರ್ಕೆಲ್ ತಮ್ಮ ವಕ್ತಾರರು ನೀಡಿದ ಕಿರು ಹೇಳಿಕೆಯಲ್ಲಿ "2008ರ ಬುಕಾರೆಸ್ಟ್‌ನಲ್ಲಿ ನಡೆದ ನ್ಯಾಟೋ ಶೃಂಗಸಭೆಗೆ ಸಂಬಂಧಿಸಿದಂತೆ ತನ್ನ ನಿರ್ಧಾರಕ್ಕೆ ಬದ್ಧವಾಗಿದ್ದೇನೆ," ಎಂದು ಹೇಳಿದರು.

How Former German chancellor Angela Merkel defends 2008 decision to block Ukraine from NATO

ಉಕ್ರೇನ್-ರಷ್ಯಾ ಯುದ್ಧ ಅಂತ್ಯಕ್ಕೆ ಬೆಂಬಲ:

"ಬುಚಾ ಮತ್ತು ಉಕ್ರೇನ್‌ನ ಇತರ ಸ್ಥಳಗಳಲ್ಲಿ ದೌರ್ಜನ್ಯಗಳು ಬಹಿರಂಗಗೊಂಡ ದೃಷ್ಟಿಯಿಂದಾಗಿ ಉಕ್ರೇನ್‌ನ ಪರವಾಗಿ ನಿಲ್ಲಲಾಗುವುದು. ಅದರ ಜೊತೆಗೆ ರಷ್ಯಾದ ಅನಾಗರಿಕತೆ ಮತ್ತು ಉಕ್ರೇನ್ ವಿರುದ್ಧದ ಯುದ್ಧವನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಅಂತರರಾಷ್ಟ್ರೀಯ ಸಮುದಾಯಗಳ ಎಲ್ಲಾ ಪ್ರಯತ್ನಗಳಿಗೆ ಮಾಜಿ ಚಾನ್ಸೆಲರ್‌ನ ಸಂಪೂರ್ಣ ಬೆಂಬಲವಿದೆ," ಎಂದು ವಕ್ತಾರರು ಸ್ಪಷ್ಟಪಡಿಸಿದರು.

ನ್ಯಾಟೋಗೆ ಉಕ್ರೇನ್ ಸೇರ್ಪಡೆ ಬಗ್ಗೆ ಆಕ್ಷೇಪ:

ಕಳೆದ 2008ರಲ್ಲಿ ನ್ಯಾಟೋಗೆ ಉಕ್ರೇನ್ ಸೇರ್ಪಡೆಯು ತುಂಬಾ ಬೇಗನೇ ಆಗುತ್ತದೆ ಎಂದು ಪರಿಣಿಸಿದ್ದು, ಆ ಸಮಯದಲ್ಲಿ ರಾಜಕೀಯ ಪರಿಸ್ಥಿತಿಗಳನ್ನು ಪೂರೈಸಿಲ್ಲ ಎಂದು ಹೇಳಿತ್ತು. ಸತತ ನಾಲ್ಕು ಅವಧಿಯ ಅಧಿಕಾರದ ನಂತರ ಕಳೆದ ವರ್ಷದ ಕೊನೆಯಲ್ಲಿ ರಾಜಕೀಯದಿಂದ ನಿವೃತ್ತರಾದ ಮಾರ್ಕೆಲ್, ಒಮ್ಮೆ ಮುಕ್ತ ಪ್ರಪಂಚದ ನಾಯಕ ಎಂದು ಪ್ರಶಂಸಿಸಲ್ಪಟ್ಟಿದ್ದರು. ಆದರೆ ಉಕ್ರೇನ್‌ನ ಮೇಲಿನ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಯುದ್ಧದಿಂದ ಅವರ ನ್ಯೂನತೆಗಳು ಗೊತ್ತಾಗಿವೆ. ಜರ್ಮನಿ ಮತ್ತು ಯುರೋಪ್ ಅನ್ನು ದುರ್ಬಲಗೊಳಿಸಿರುವುದು ಬಹಿರಂಗವಾಗಿದೆ ಎಂದು ವಿಮರ್ಶಕರು ದೂಷಿಸುತ್ತಿದ್ದಾರೆ.

ಜರ್ಮನಿಗೆ ರಷ್ಯಾದ ಅನಿಲ ಸರಬರಾಜು ಹೆಚ್ಚಳ:

ಈ ಮೊದಲಿನಿಂದಲೂ ಜರ್ಮನಿ ಕೂಡ ಅನಿಲಕ್ಕಾಗಿ ರಷ್ಯಾದ ಮೇಲೆ ಅವಲಂಬನೆ ಆಗಿದೆ. 2014ರಲ್ಲಿ ಜರ್ಮನಿ ಆಮದು ಮಾಡಿಕೊಳ್ಳುತ್ತಿದ್ದ ಒಟ್ಟು ಅನಿಲದಲ್ಲಿ ಶೇ.34ರಷ್ಟು ಅನಿಲವು ರಷ್ಯಾದಿಂದಲೇ ಆಮದು ಆಗುತ್ತಿತ್ತು. ಆದರೆ ಕಳೆದ ಫೆಬ್ರವರಿ 24ರ ನಂತರದಲ್ಲಿ ಅದರ ಪ್ರಮಾಣವು ಶೇ.55ರಷ್ಟು ಏರಿಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

English summary
amid Ukraine-Russia War How Former German chancellor Angela Merkel defends 2008 decision to block Ukraine from NATO.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X