ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಬು ಬಕರ್ ಅಲ್- ಬಗ್ದಾದಿ ಕಾರ್ಯಾಚರಣೆ ನಡೆದಿದ್ದು ಹೇಗೆ?

|
Google Oneindia Kannada News

ಅಮೆರಿಕ ವಿಶೇಷ ಸೇನಾ ಪಡೆ ಕಾರ್ಯಾಚರಣೆ ವೇಳೆ ಐಎಸ್ ಐಎಲ್ ಉಗ್ರ ಸಂಘಟನೆ ನಾಯಕ ಅಬು ಬಕರ್ ಅಲ್- ಬಗ್ದಾದಿ ತನ್ನನ್ನು ತಾನು ಸ್ಫೋಟಿಸಿಕೊಂಡು ಸಾವನ್ನಪ್ಪಿದ್ದಾನೆ. ಈ ವೇಳೆ ಆತನ ಮೂವರು ಮಕ್ಕಳು ಸಹ ಸಾವನ್ನಪ್ಪಿದ್ದಾರೆ. ಈ ಕಾರ್ಯಾಚರಣೆ ನಡೆದಿರುವ ಇದ್ಲಿಬ್ ಪ್ರಾಂತ್ಯವು ಸಿರಿಯಾ- ಇರಾಕ್ ನ ಗಡಿಯಲ್ಲಿದೆ. ಆದರೆ ಬಗ್ದಾದಿ ಎಲ್ಲಿ ಅವಿತಿರಬಹುದು ಎಂದುಕೊಳ್ಳಲಾಗಿತ್ತೋ ಅಲ್ಲಿಂದ ಈ ಸ್ಥಳ ಬಹಳ ದೂರದಲ್ಲಿದೆ.

ಇದ್ಲಿಬ್ ಪ್ರಾಂತ್ಯದ ಹಲವು ಸ್ಥಳವು ಇಸ್ಲಾಮಿಕ್ ಸ್ಟೇಟ್ ಅನ್ನು ವಿರೋಧಿಸುತ್ತಾ ಬಂದಿರುವ ಜಿಹಾದಿಗಳ ಹತೋಟಿಯಲ್ಲಿದೆ. ಆದರೆ ಅಲ್ಲೇ ಐಎಸ್ ಉಗ್ರರಿಗೆ ಶೆಲ್ಟರ್ ಒದಗಿಸಿದ್ದ ಬಗ್ಗೆ ಗುಮಾನಿ ಇದೆ. ಕಳೆದ ಕೆಲವು ವಾರಗಳಿಂದ ಬಗ್ದಾದಿ ಮೇಲೆ ಕಣ್ಗಾವಲು ಇರಿಸಲಾಗಿತ್ತು. ಆತನ ಚಲನವಲನದ ಮೇಲೆ ಕಣ್ಣಿಡಬೇಕು ಎಂಬ ಕಾರಣಕ್ಕೆ ಇತರ ದಾಳಿಗಳನ್ನು ನಿಲ್ಲಿಸಲಾಗಿತ್ತು.

ಅಮೆರಿಕ ದಾಳಿ ವೇಳೆ ಐಎಸ್ ಐಎಲ್ ನಾಯಕ ಅಬು ಬಕರ್ ಅಲ್- ಬಗ್ದಾದಿ ಆತ್ಮಹತ್ಯೆಅಮೆರಿಕ ದಾಳಿ ವೇಳೆ ಐಎಸ್ ಐಎಲ್ ನಾಯಕ ಅಬು ಬಕರ್ ಅಲ್- ಬಗ್ದಾದಿ ಆತ್ಮಹತ್ಯೆ

ಅಂದಹಾಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳುವ ಪ್ರಕಾರ: ಬಗ್ದಾದಿ ಇದ್ದ ಸ್ಥಳವನ್ನು 'ಕಾಂಪೌಂಡ್' ಎನ್ನಲಾಗಿದೆ. ಅಮೆರಿಕದ ಕಾರ್ಯಾಚರಣೆಯಲ್ಲಿ ಯಾವುದೇ ಯು. ಎಸ್. ಯೋಧನಿಗೆ ಗಾಯ ಸಹ ಆಗಿಲ್ಲ. ಆದರೆ ಬಗ್ದಾದಿಯ ಅನುಚರರು ಬಹಳ ದೊಡ್ಡ ಸಂಖ್ಯೆಯಲ್ಲಿ ಸಾವನ್ನಪ್ಪಿದ್ದಾರೆ ಮತ್ತು ಆ ಕಾಂಪೌಂಡ್ ನಿಂದ ಸೂಕ್ಷ್ಮ ಮಾಹಿತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

Barisha

ದಾಳಿ ನಡೆದ ಬರಿಶಾದ ನಿವಾಸಿಯೊಬ್ಬರು ಘಟನೆ ಬಗ್ಗೆ ಮಾತನಾಡಿ, ಶನಿವಾರ ರಾತ್ರಿ ಸೇನಾಪಡೆಗಳು ನೆಲಕ್ಕೆ ಇಳಿಯುವ ಮುನ್ನ ಮೂವತ್ತು ನಿಮಿಷಗಳ ಕಾಲ ಗುಂಡಿನ ಮಳೆಗರೆಯಿತು. ಎರಡು ಮನೆಗಳ ಮೇಲೆ ಗುಂಡು ಹಾರಿಸಿ, ಒಂದು ಮನೆಯನ್ನು ನೆಲಸಮ ಮಾಡಿತು ಎಂದಿದ್ದಾರೆ.

ಈ ತಿಂಗಳು ಸಿರಿಯಾದಿಂದ ಸೇನೆಯನ್ನು ಹಿಂಪಡೆಯುವ ತನಕ ಉತ್ತರ ಸಿರಿಯಾದಲ್ಲಿ ಅಮೆರಿಕ ಸೇನೆ ಜತೆಗೆ ಇದ್ದದ್ದು ಸಿರಿಯನ್ ಕುರ್ದಿಷ್ ನೇತೃತ್ವದ ಸೇನಾಪಡೆಗಳು. 'ಐತಿಹಾಸಿಕ ಜಂಟಿ ಕಾರ್ಯಾಚರಣೆ ನಡೆಸಿದ್ದೇವೆ' ಎಂದು ಕುರ್ದಿಷ್ ಪಡೆ ಹೇಳಿಕೊಂಡಿದೆ.

ಇನ್ನು ರಷ್ಯಾ, ಇರಾಕ್, ಟರ್ಕಿ, ಸಿರಿಯಾವನ್ನು ಕಾರ್ಯಾಚರಣೆಗೆ ಬೆಂಬಲ ನೀಡಿದ್ದಕ್ಕೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊಗಳಿದ್ದಾರೆ.

English summary
ISIL leader Abu Bakr Al- Bagdadi died in U. S. force special operation. Here is the details of the operation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X