ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾವೈರಸ್ ಎದುರಿಸಿದ ಚೀನಾದಲ್ಲಿ ಹೊಸ ಪರೀಕ್ಷೆ!

|
Google Oneindia Kannada News

ಬೀಜಿಂಗ್, ಜುಲೈ.07: ಕೊರೊನಾವೈರಸ್ ಅಗ್ನಿ ಪರೀಕ್ಷೆಯಿಂದ ಹೊರ ಬಂದ ಡ್ರ್ಯಾಗನ್ ರಾಷ್ಟ್ರದಲ್ಲಿ ವಿದ್ಯಾರ್ಥಿಗಳಿಗೆ ಹೊಸ ಪರೀಕ್ಷೆ ಎದುರಾಗಿದೆ. ಚೀನಾದ ಗೋಂಕೊ ವಿಶ್ವವಿದ್ಯಾಲಯದ ವಾರ್ಷಿಕ ಪ್ರವೇಶ ಪರೀಕ್ಷೆಗೆ 11 ಮಿಲಿಯನ್ ವಿದ್ಯಾರ್ಥಿಗಳು ಅಣಿಯಾಗಿದ್ದಾರೆ.

Recommended Video

ಬೆಂಗಳೂರಿನಿಂದ ಬರುವವರಿಗೆ ಇಲ್ಲ ಪ್ರವೇಶ | Oneindia Kannada

ಮಂಗಳವಾರ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಗಳ ಎದುರು ಮುಖಕ್ಕೆ ಮಾಸ್ಕ್ ಧರಿಸಿ ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬಂತು. ಕೊವಿಡ್-19 ಸೋಂಕು ಹರಡುವಿಕೆ ಭೀತಿ ಹಿನ್ನೆಲೆ ಚೀನಾದಲ್ಲೂ ಶೈಕ್ಷಣಿಕ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳಲ್ಲಿ ನಡೆಸುವ ಎಲ್ಲ ಪರೀಕ್ಷೆಗಳಿಗೆ ಬ್ರೇಕ್ ಬಿದ್ದಿತ್ತು. ಸರ್ಕಾರದ ಆದೇಶದವರೆಗೂ ಪರೀಕ್ಷೆ ನಡೆದಂತೆ ಸೂಚನೆ ನೀಡಲಾಗಿತ್ತು.

ಬಳಕೆದಾರರ ಡೇಟಾವನ್ನು ಹಾಂಕಾಂಗ್‌ಗೆ ಸದ್ಯಕ್ಕೆ ನೀಡಲ್ಲ ಎಂದಿರುವ ಫೇಸ್‌ಬುಕ್, ವಾಟ್ಸಾಪ್ಬಳಕೆದಾರರ ಡೇಟಾವನ್ನು ಹಾಂಕಾಂಗ್‌ಗೆ ಸದ್ಯಕ್ಕೆ ನೀಡಲ್ಲ ಎಂದಿರುವ ಫೇಸ್‌ಬುಕ್, ವಾಟ್ಸಾಪ್

ಕೊರೊನಾವೈರಸ್ ಸೋಂಕಿನ ಜನ್ಮಭೂಮಿ ಎನಿಸಿರುವ ಚೀನಾದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 83665 ಆಗಿದೆ. 4634 ಜನರು ಮಹಾಮಾರಿಗೆ ಬಲಿಯಾಗಿದ್ದು, 78528 ಪ್ರಕರಣಗಳಲ್ಲಿ ಕೊರೊನಾವೈರಸ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ದೇಶದಲ್ಲಿ ಕೇವಲ 403 ಸಕ್ರಿಯ ಪ್ರಕರಣಗಳಿವೆ.

ಡ್ರ್ಯಾಗನ್ ರಾಷ್ಟ್ರದಲ್ಲಿ ವಿಚಿತ್ರ ಪದ್ಧತಿ

ಡ್ರ್ಯಾಗನ್ ರಾಷ್ಟ್ರದಲ್ಲಿ ವಿಚಿತ್ರ ಪದ್ಧತಿ

ಚೀನಾದಲ್ಲಿ ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆಗಳನ್ನು ನಡೆಸುವ ಸಂದರ್ಭದಲ್ಲಿ ವಾಹನಗಳ ಚಾಲಕರಿಗೆ ನಿರ್ಬಂಧ ವಿಧಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಚಾಲಕರು ವಾಹನಗಳ ಹಾರ್ನ್ ಗಳನ್ನು ಮಾಡುವಂತಿಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅಡ್ಡಿಯಾಗದಂತೆ ತಡೆಯುವುದಕ್ಕೆ ಪೊಲೀಸರು ಸಹ ಗಸ್ತು ತಿರುಗುತ್ತಾರೆ.

ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸುವ ಕೇಂದ್ರ

ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸುವ ಕೇಂದ್ರ

ಬೀಜಿಂಗ್ ನಲ್ಲಿ ನಡೆಯುವ ಗೋಂಕೊ ವಿಶ್ವವಿದ್ಯಾಲಯದಲ್ಲಿ ಪ್ರವೇಶ ಪರೀಕ್ಷೆ ನಿಗದಿಗೊಳಿಸಿದ ಕೇಂದ್ರಗಳ ಬಳಿ ವಿದ್ಯಾರ್ಥಿಗಳಿಗೆ ವೈದ್ಯಕೀಯ ತಪಾಸಣೆ ನಡೆಸುವ ಕೇಂದ್ರವನ್ನು ಸ್ಥಾಪಿಸಲಾಗಿದೆ. ಪ್ರತಿಯೊಬ್ಬ ವಿದ್ಯಾರ್ಥಿಯ ದೈಹಿಕ ಉಷ್ಣಾಂಶವನ್ನು ತಪಾಸಣೆ ನಡೆಸಿಯೇ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಕ್ಕೆ ಅನುಮತಿ ನೀಡಲಾಗುತ್ತಿದೆ. ಎಲ್ಲ ವಿದ್ಯಾರ್ಥಿಗಳು ಮಾಸ್ಕ್ ಧರಿಸುವುದನ್ನು ಕಡ್ಡಾಯಗೊಳಿಸಲಾಗಿದೆ.

ಕೊರೊನಾವೈರಸ್ ನಿಂದ ಪರೀಕ್ಷೆಗಳು ಮುಂದೂಡಿಕೆ

ಕೊರೊನಾವೈರಸ್ ನಿಂದ ಪರೀಕ್ಷೆಗಳು ಮುಂದೂಡಿಕೆ

ಕಳೆದ ಜೂನ್ ತಿಂಗಳಿನಲ್ಲಿಯೇ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಗಳು ನಡೆಯಬೇಕಿತ್ತು. ಆದರೆ ತಿಂಗಳ ಆರಂಭದಲ್ಲಿಯೇ ಸಗಟು ಮಾರುಕಟ್ಟೆಯೊಂದರಲ್ಲಿ ಕೊರೊನಾವೈರಸ್ ಸೋಂಕು ಹರಡುತ್ತಿರುವ ಭೀತಿ ಎದುರಾಯಿತು. ನೋಡನೋಡುತ್ತಿದ್ದಂತೆ ಸೋಂಕಿತರ ಸಂಖ್ಯೆ ಹೆಚ್ಚಾಗ ತೊಡಗಿತು. ಈ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಪರೀಕ್ಷೆಗಳನ್ನು ಮುಂದೂಡಿಕೆ ಮಾಡಲಾಯಿತು.

ಪ್ರೌಢಶಾಲಾ ವಿದ್ಯಾರ್ಥಿಗಳಲ್ಲೂ ಹೆಚ್ಚಿದ ಒತ್ತಡ

ಪ್ರೌಢಶಾಲಾ ವಿದ್ಯಾರ್ಥಿಗಳಲ್ಲೂ ಹೆಚ್ಚಿದ ಒತ್ತಡ

ಚೀನಾದಲ್ಲೂ ಕೂಡಾ ಪ್ರೌಢಶಿಕ್ಷಣ ವಿದ್ಯಾರ್ಥಿಗಳು ಕಳೆದ ಫೆಬ್ರವರಿ ತಿಂಗಳಿನಿಂದಲೂ ಆನ್ ಲೈನ್ ನಲ್ಲಿ ತರಗತಿಯನ್ನು ಕೇಳುತ್ತಿದ್ದಾರೆ. ಇದರಿಂದ ಕೆಲವು ವಿದ್ಯಾರ್ಥಿಗಳಿಗೆ ಶಿಕ್ಷಕರ ಸಂಪರ್ಕವೇ ಇಲ್ಲದಂತೆ ಆಗಿದೆ. ಇಂಥ ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಮುಂದೂಿಡಿಕೆ ಆಗುತ್ತಿರುವುದು ಮತ್ತಷ್ಟು ಆತಂಕವನ್ನು ಹೆಚ್ಚಿಸುತ್ತಿದೆ. ಜೂನ್ ತಿಂಗಳ ಆರಂಭದಲ್ಲಿಯೇ ಪರೀಕ್ಷೆಗಳು ನಡೆಯುತ್ತವೆ ಎಂದು ಭಾವಿಸಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದೆವು. ಆದರೆ ದಿಢೀರನೇ ಪರೀಕ್ಷೆಗಳನ್ನು ಜುಲೈ ತಿಂಗಳವರೆಗೂ ಮುಂದೂಡಿಕೆ ಮಾಡಿದ್ದರು ಎಂದು 18 ವರ್ಷದ ವಿದ್ಯಾರ್ಥಿಯೊಬ್ಬರು ತಿಳಿಸಿದ್ದಾರೆ.

English summary
How 11 Million Students Ready For University Entrance Exam In China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X