ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಚೀನಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೆ ಸಹಾಯವಾಣಿ

|
Google Oneindia Kannada News

ಬೀಜಿಂಗ್, ಜನವರಿ 24: ಚೀನಾದಲ್ಲಿರುವ ಭಾರತೀಯ ವಿದ್ಯಾರ್ಥಿಗಳಿಗೋಸ್ಕರ ಭಾರತೀಯ ರಾಯಭಾರಿ ಕಚೇರಿಯು ಸಹಾಯವಾಣಿಯನ್ನು ತೆರೆದಿದೆ.

ಚೀನಾದಲ್ಲಿ ಕೊರೊನಾ ಎನ್ನುವ ಮಾರಣಾಂತಿಕ ಸೋಂಕು ಈಗಾಗಲೇ 17 ಮಂದಿಯನ್ನು ಬಲಿ ಪಡೆದಿದೆ. ಅಷ್ಟೇ ಅಲ್ಲದೆ ಸೌದಿ ಅರೇಬಿಯಾದಲ್ಲಿ ಕೆಲಸ ನಿರ್ವಹಿಸುತ್ತಿರುವ ಕೇರಳ ಮೂಲದ ನರ್ಸ್ ಒಬ್ಬರಿಗೂ ಈ ಸೋಂಕು ಹರಡಿದೆ.

ಸೌದಿಯಲ್ಲಿ ಕೇರಳದ ನರ್ಸ್‌ಗೆ ಭಯಾನಕ 'ಕೊರೊನಾ' ಸೋಂಕುಸೌದಿಯಲ್ಲಿ ಕೇರಳದ ನರ್ಸ್‌ಗೆ ಭಯಾನಕ 'ಕೊರೊನಾ' ಸೋಂಕು

ಸಾಕಷ್ಟು ಮಂದಿ ಭಾರತೀಯರು ಚೀನಾದಲ್ಲಿರುವುದರಿಂದ ಅವರ ಆರೋಗ್ಯವನ್ನು ಕಾಪಾಡಲು ಮುಂಜಾಗ್ರತಾ ಕ್ರಮಗಳನ್ನು ಕೂಡ ಅನುಸರಿಸಲಾಗಿದೆ.

Hotlines Set Up For Assistance To Indians In China

ಚೀನಾದಲ್ಲಿರುವ ಒಟ್ಟು 600 ಮಂದಿಗೆ ಈ ಸೋಂಕುತಗುಲಿದ್ದುಅದರಲ್ಲಿ 17 ಮಂದಿ ಮೃತಪಟ್ಟಿದ್ದಾರೆ. ವ್ಯೂಹನ್, ಹ್ಯೂಂಗ್ಯಾಂಗ್ ನಗರಗಳಿಗೆ ರೈಲು ಹಾಗೂ ವಿಮಾನಗಳ ಸೌಲಭ್ಯವನ್ನು ಕಡಿತಗೊಳಿಸಲಾಗಿದೆ. ಭಾರತದ ಸುಮಾರು 700ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಚೀನಾದಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.

ಹ್ಯೂಬೆ ಪ್ರದೇಶದಲ್ಲಿ ಅತಿ ಹೆಚ್ಚು ಭಾರತೀಯ ನೆಲೆಸಿದ್ದಾರೆ. ವೈರಸ್ ಇರುವ ಪ್ರದೇಶದಲ್ಲಿರುವ ಭಾರತೀಯರಿಗೆ ಆಹಾರ ಸೇರಿದಂತೆ ಇತರೆ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ.+8618612083629 ಮತ್ತು +8618612083617 ಕರೆ ಮಾಡಬಹುದು. ಹಾಗೆಯೇ ಟ್ವಿಟ್ಟರ್‌ ಅಕೌಂಟ್‌ನ್ನು ಫಾಲೋ ಮಾಡುವಂತೆ ತಿಳಿಸಲಾಗಿದೆ. (Twitter:@EoIBeijing; Facebook: India in China)

English summary
As China stepped up measures to control the spread of coronavirus, locking down Wuhan and Huanggang cities in the Hubei province where several Indians live, the Indian Embassy here has set up hotlines for their assistance.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X