ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಗ್ಲೆಂಡ್‌; ಕೆಲವು ಭಾಗದಲ್ಲಿ ಅತೀ ತಾಪಮಾನ, ಬರಗಾಲದ ಎಚ್ಚರಿಕೆ

|
Google Oneindia Kannada News

ಲಂಡನ್ ಆಗಸ್ಟ್ 12: ನಿರಂತರವಾಗಿ ಬಿಸಿ ಮತ್ತು ಒಣ ಹವಾಮಾನದ ಬಳಿಕ ಇದೀಗ ದಕ್ಷಿಣ, ಮಧ್ಯ ಹಾಗೂ ಪೂರ್ವ ಇಂಗ್ಲೆಂಡ್‌ನ ಪ್ರದೇಶಗಳು ಅಧಿಕೃತವಾಗಿ ಬರಗಾಲ ಸ್ಥಿತಿಗೆ ತಲುಪಿವೆ ಎಂದು ಇಂಗ್ಲೆಂಡ್ ಸರ್ಕಾರ ಮಾಹಿತಿ ನೀಡಿದೆ.

ಇಂಗ್ಲೆಂಡ್‌ ದೇಶವು 1935ರಿಂದಲೂ ಗರಿಷ್ಠ ತಾಪಮಾನ ದಾಖಲಾತಿ ಕಂಡಿದೆ. ಪ್ರತಿ ತಿಂಗಳು ಸರಾಸರಿ ಕೇವಲ ಶೇ.35ರಷ್ಟು ಮಾತ್ರ ಮಳೆ ಆಗಿದ್ದು, ಉಳಿದಂತೆ ನಿತ್ಯವು ಬಿಸಲಿನ ಪ್ರಮಾಣವೇ ಹೆಚ್ಚಿರುತ್ತದೆ. ಇದೀಗ ಇಂಗ್ಲೆಂಡ್ ಮತ್ತು ವೇಲ್ಸ್‌ನ ಕೆಲವು ಭಾಗಗಳಲ್ಲಿ ಮುಂದಿನ ನಾಲ್ಕು ದಿನಗಳಲ್ಲಿ ಅತ್ಯಧಿಕ ಉಷ್ಣಾಂಶ ದಾಖಲಾಗಬಹುದು ಎಂದು ಅಲ್ಲಿನ ಸರ್ಕಾರ ಎಚ್ಚರಿಸಿದೆ. ಈ ಮೂಲಕ ಇಂಗ್ಲೆಂಡ್ ಬಹುಪಾಲು ಪ್ರದೇಶ ಬರಗಾಲ ಆವರಿಸಿದಂತಾಗಿದೆ ಎಂದು ತಿಳಿದು ಬಂದಿದೆ.

UK ತಾಪಮಾನ: ಲಂಡನ್ ರೈಲು ಹಳಿಗೆ ಬೆಂಕಿ UK ತಾಪಮಾನ: ಲಂಡನ್ ರೈಲು ಹಳಿಗೆ ಬೆಂಕಿ

ಸರ್ಕಾರದ ಎಚ್ಚರಿಕೆ ಮೇರೆಗೆ ಮುಂದಿನ ನಾಲ್ಕೈದು ದಿನ ಎದುರಾಗಲಿರುವ ಶುಷ್ಕ (ಒಣಹವೆ) ಹವಾಮಾನವನ್ನು ಎದುರಿಸಲು ಸಜ್ಜಾಗಿದ್ದೇವೆ. ಎಲ್ಲೆಡೆ ಅಗತ್ಯ ನೀರಿನ ಸರಬರಾಜು ಮಾಡಲು, ನೀರಿನ ಸಂರಕ್ಷಣೆಗೆ ಆದ್ಯತೆ ನೀಡಿದ್ದೇವೆ ಎಂದು ಜಲ ಸಚಿವ ಸ್ಟೀವ್ ಡಬಲ್ ತಿಳಿಸಿದ್ದಾರೆ.

Hot and Dry weather alert for few parts of England

ಉತ್ತಮ ಸಿದ್ಧತೆ ಮಾಡಿಕೊಂಡ ಇಂಗ್ಲೆಂಡ್; ಕಳೆದು ಹೋದ ಶುಷ್ಕ ಹವಾಮಾನಗಳ ವರ್ಷಗಳಿಗಿಂತಲೂ ಭವಿಷ್ಯದ ದಿನಗಳಿಗೆ ಉತ್ತಮ ಸಿದ್ಧತೆ ಮಾಡಿಕೊಂಡಿದ್ದೇವೆ. ಆದರೆ ರೈತರು ಮತ್ತು ಪರಿಸರದ ಮೇಲಾಗುವ ಅತ್ಯಧಿಕ ಬಿಸಿಲಿನ ದುಷ್ಪಪರಿಣಾಮಗಳನ್ನು ಸೇರಿದಂತೆ ಒಟ್ಟಾರೆ ಬರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಮೇಲ್ವಿಚಾರಣೆ ಮಾಡಬೇಕಿದೆ. ಅಗತ್ಯವಿರುವ ಕಡೆಗಳಲ್ಲಿ ಈಗಾಗಲೇ ಪರಿಹಾರ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಸ್ಟೀವ್ ಡಬಲ್ ವಿವರಿಸಿದ್ದಾರೆ.

Hot and Dry weather alert for few parts of England

ದೇಶದಾದ್ಯಂತ ಕುಡಿಯಲು ನೀರು ಒದಗಿಸುವ ಕಂಪನಿಗಳು ಸೂಕ್ತ ಪೂರೈಕೆ, ನೀರಿನ ಸಂರಕ್ಷಣೆಗೆ ಪೂರಕವಾಗಿ ಸರ್ಕಾರಗಳೊಂದಿಗೆ ಬರ ಯೋಜನೆಗಳನ್ನು ಜಾರಿಗೆ ತರುವ ಚಿಂತನೆ ಯಲ್ಲಿವೆ. ಅಲ್ಲದೇ ಬರ ಪೀಡಿತ ಪ್ರದೇಶಗಳಲ್ಲಿ ಸಾರ್ವಜನಿಕರು, ಸಂಸ್ಥೆಗಳು, ಸಿಬ್ಬಂದಿ, ವ್ಯವಹಾರಗಳ ಸದಸ್ಯರು ಸೇರಿದಂತೆ ಸಾರ್ವಜನಿರಕು ಹಿತಮಿತವಾಗಿ ನೀರನ್ನು ಬಳಸುವಂತೆ ಕಂಪನಿಗಳು ಜಾಗೃತಿ ಮೂಡಿಸುತ್ತಿವೆ ಎಂದು ಸರ್ಕಾರ ತಿಳಿಸಿದೆ.

English summary
Hot and Dry weather alert for few parts of England, British government said on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X