ಫ್ರಾನ್ಸ್ ನಲ್ಲಿ ಐಸಿಸ್ ಉಗ್ರರ ದಾಳಿ, ಹಲವರು ಒತ್ತೆಯಾಳು

Subscribe to Oneindia Kannada

ಪ್ಯಾರಿಸ್, ಮಾರ್ಚ್ 23: ದಕ್ಷಿಣ ಫ್ರಾನ್ಸ್ ನಲ್ಲಿ ಉಗ್ರರ ದಾಳಿ ನಡೆದಿದೆ. ಇಲ್ಲಿನ ಟ್ರೆಬ್ಸ್ ನಗರಕ್ಕೆ ಸಮೀಪದಲ್ಲಿರುವ ಸೂಪರ್ ಮಾರ್ಕೆಟ್ ಗೆ ನುಗ್ಗಿದ ಉಗ್ರರು ಹಲವರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

ಓರ್ವ ಬಂದೂಕುಧಾರಿಗೆ ಐಸಿಸ್ ಉಗ್ರರ ಸಂಪರ್ಕ ಇದೆ ಎಂದು ಎಎಫ್ ಪಿ ಸುದ್ದಿ ಸಂಸ್ಥೆ ಹೇಳಿದೆ. ಜತೆಗೆ ಜನರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿರುವುದಾಗಿ ಐಸಿಸ್ ಹೇಳಿದೆ.

ಬಂದೂಕುಧಾರಿಗಳನ್ನು ಭದ್ರತಾ ಪಡೆಗಳು ಮುಖಾಮುಖಿಯಾಗಿದ್ದಾರೆ. ಕಾರ್ಯಾಚರಣೆ ನಡೆಯುತ್ತಿದೆ ಎಂದು ಫ್ರಾನ್ಸ್ ನ ಆಂತರಿಕ ಭದ್ರತಾ ವಿಭಾಗ ಹೇಳಿದೆ.

Hostages taken by ISIS terrorists in the south of France after gunmen shoot at police

ಮೊದಲಿಗೆ ಐಸಿಸ್ ಉಗ್ರರು ಪೊಲೀಸರತ್ತ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ಕೆಲವು ಪೊಲೀಸರಿಗೆ ಗಾಯವಾಗಿದೆ. ನಂತರ ಉಗ್ರರು ಹಲವನ್ನು ಸೂಪರ್ ಮಾರ್ಕೆಟ್ ಒಳಗೆ ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದಾರೆ.

'ಸೂಪರ್ ಯು ಶಾಪ್' ಹೆಸರಿನ ಸೂಪರ್ ಮಾರ್ಕೆಟನ್ನು ಪೊಲೀಸರು ಸುತ್ತುವರಿದಿದ್ದಾರೆ. ಸ್ಥಳದಲ್ಲಿ ಅಗ್ನಿಶಾಮಕ ದಳದ ವಾಹನಗಳೂ ಇವೆ ಎಂದು ಪ್ರತ್ಯಕ್ಷದರ್ಶಿಗಳು ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Shooting, hostage-taking at supermarket in south France, policeman hurt. Islamic State group claims French hostage-taking reported AFP.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ