ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚೀನಾದ ವುಹಾನ್‌ನಲ್ಲಿ ಕೊರೊನಾ ರೋಗಕ್ಕೆ ಮತ್ತೊಬ್ಬ ವೈದ್ಯ ಬಲಿ

|
Google Oneindia Kannada News

ವುಹಾನ್, ಫೆಬ್ರವರಿ 18: ಕೊರೊನಾ ಕೇಂದ್ರ ಬಿಂದುವಾಗಿರುವ ವುಹಾನ್‌ನಲ್ಲಿರುವ ಆಸ್ಪತ್ರೆಯ ನಿರ್ದೇಶಕರೊಬ್ಬರು ಮೃತಪಟ್ಟಿದ್ದಾರೆ.

ಚೀನಾದ ಪ್ರಮುಖ ನಗರ ವುಹಾನ್ ನಲ್ಲಿ ಆಸ್ಪತ್ರೆಯ ನಿರ್ದೇಶಕರು ಮಂಗಳವಾರ ಸಾವನ್ನಪ್ಪಿದ್ದಾರೆ. ವುಚಾಂಗ್ ಆಸ್ಪತ್ರೆಯ ನಿರ್ದೇಶಕ ಲಿಯೂ ಜಿಮಿಂಗ್ ಬೆಳಗ್ಗೆ 10.30ರ ಸುಮಾರಿಗೆ ಮೃತರಾಗಿದ್ದಾರೆ.

ಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ದಂತ ವೈದ್ಯನ ಹರಸಾಹಸಕೊರೊನಾವಲ್ಲದಿದ್ರೂ ತಾಯಿಯ ಶವ ತರಲು ದಂತ ವೈದ್ಯನ ಹರಸಾಹಸ

ಕೊರೊನಾ ವೈರಸ್ ಕುರಿತು ಮೊದಲ ಬಾರಿಗೆ ಮಾಹಿತಿ ನೀಡಿದ್ದ ಲಿ ವೆನ್‌ಲಿಯಾಂಗ್ ಫೆಬ್ರವರಿ ಮೊದಲ ವಾರದಲ್ಲಿ ಮರಣಹೊಂದಿದ್ದರು.ಸಾವಿರಾರು ಮಂದಿ ವೈದ್ಯರಿಗೆ ವೈರಸ್ ತಗುಲಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದುವರೆಗೂ ಚೀನಾದಲ್ಲಿ ಇದುವರೆಗೆ 1800ಕ್ಕೂ ಹೆಚ್ಚು ಮಂದಿ ಕೊರೊನಾ ರೋಗದಿಂದ ಮೃತಪಟ್ಟಿದ್ದು, 80 ಸಾವಿರಕ್ಕೂ ಹೆಚ್ಚು ಮಂದಿಗೆ ರೋಗ ತಗುಲಿದೆ.

Hospital Director Dies In Chinas Wuhan

ಹ್ಯೂಬೆ ಆರೋಗ್ಯ ಇಲಾಖೆಯು ಲಿಯೂ ಮೃತಪಟ್ಟಿರುವುದಾಗಿ ತಿಳಿಸಿದ್ದರು. ಆದರೆ ಕೆಲವೇ ನಿಮಿಷಗಳಲ್ಲಿ ಇಲ್ಲ ಅವರ ಜೀವಂತವಾಗಿದ್ದಾರೆ ಎನ್ನಲಾದ ಸುದ್ದಿ ಹರಿದಾಡಿತ್ತು. ಆದರೆ ಎರಡನೇ ಪೋಸ್ಟ್ ಲಿಯೂವಿನ ಸ್ನೇಹಿತರೊಬ್ಬರು ಮಾಡಿದ್ದು, ಅವರಿಗೆ ಪ್ರಸ್ತುತ ಸ್ಥಿತಿ ಬಗ್ಗೆ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಚೀನಾದ ಹಿರಿಯ ಆರೋಗ್ಯಾಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಶುಕ್ರವಾರ 1716 ಮಂದಿ ಆರೋಗ್ಯ ನೌಕರರಿಗೆ ಕೊರೊನಾ ತಗುಲಿರುವುದು ತಿಳಿದುಬಂದಿದ್ದು, ಅದರಲ್ಲಿ ಆರು ಮಂದಿ ಮೃತಪಟ್ಟಿದ್ದಾರೆ.

English summary
The head of a leading hospital in China's central city of Wuhan, the epicentre of a coronavirus outbreak, died of the disease on Tuesday,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X