ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಿಧು ಪ್ರಧಾನಿ ಆಗೋ ತನಕ ಕಾಯಬೇಕಾದ ಅಗತ್ಯ ಇರಲ್ಲ ಅಂದುಕೊಳ್ತೀನಿ ಎಂದ ಇಮ್ರಾನ್ ಖಾನ್

By ಅನಿಲ್ ಆಚಾರ್
|
Google Oneindia Kannada News

"ಎರಡೂ ದೇಶಗಳು (ಪಾಕಿಸ್ತಾನ-ಭಾರತ) ಮಿತ್ರತ್ವ ಸಾಧಿಸಬೇಕು ಅಂದರೆ ಸಿಧು ಭಾರತದ ಪ್ರಧಾನಿ ಆಗುವ ತನಕ ಕಾಯಬೇಕು ಅನ್ನೋ ಹಾಗೆ ಆಗುವುದಿಲ್ಲ ಎಂಬ ಭರವಸೆ ಇದೆ" ಎಂದು ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಬುಧವಾರ ಹೇಳಿದ್ದಾರೆ. ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ಚಾಲನೆ ನೀಡಿ, ಅವರು ಮಾತನಾಡಿದ್ದಾರೆ.

ಕ್ರಿಕೆಟರ್ ಆಗಿ ನವಜೋತ್ ಸಿಧು ರಿಸ್ಕ್ ಗಳನ್ನು ತೆಗೆದುಕೊಳ್ಳುತ್ತಿದ್ದರು. ಅದರಲ್ಲಿ ವಿಫಲರಾಗುವ ಭಯ ಇರುತ್ತಿರಲಿಲ್ಲ. ಅವರು ಕೆಲವು ಸ್ವಾರ್ಥ ರಾಜಕಾರಣಿಗಳಂತೆ ಅಲ್ಲ ಎಂದು ಹೇಳಿದ್ದಾರೆ. ಕಳೆದ ಆಗಸ್ಟ್ ನಲ್ಲಿ ಇಮ್ರಾನ್ ಖಾನ್ ಪದವಿ ಪ್ರಮಾಣ ಸಮಾರಂಭಕ್ಕೆ ತೆರಳಿದ್ದರು. ಅಲ್ಲಿಂದ ಮರಳಿದ ಮೇಲೆ ಹಲವು ಟೀಕೆಗಳು ವ್ಯಕ್ತವಾಗಿತ್ತು. ಆ ಬಗ್ಗೆ ಕೂಡ ಇಮ್ರಾನ್ ಮಾತನಾಡಿದ್ದಾರೆ.

ಒಂದು ಸೆಕೆಂಡ್ ಅಪ್ಪಿದ್ದೇನೆ ಅಷ್ಟೇ, ಅದು ರಫೇಲ್ ಡೀಲ್ ಅಲ್ಲ: ಸಿಧುಒಂದು ಸೆಕೆಂಡ್ ಅಪ್ಪಿದ್ದೇನೆ ಅಷ್ಟೇ, ಅದು ರಫೇಲ್ ಡೀಲ್ ಅಲ್ಲ: ಸಿಧು

ಸಿಧುಗೆ ಏಕೆ ಅಷ್ಟೊಂದು ಸಮಸ್ಯೆ? ಎರಡು ದೇಶಗಳ ಬಳಿ ಅಣ್ವಸ್ತ್ರ ಇದೆ. ಆ ಹುಚ್ಚುತನಕ್ಕಾಗಿ ನಾವು ಯುದ್ಧ ಮಾಡಲು ಸಾಧ್ಯವಿಲ್ಲ. ಅವರನ್ನು ಏಕೆ ಟೀಕೆ ಮಾಡ್ತಾರೆ? ಎಂದು ಇಮ್ರಾನ್ ಪ್ರಶ್ನಿಸಿದ್ದಾರೆ. "ಸಿಧು ನೀವು ಇಲ್ಲಿ ಕೂಡ ಚುನಾವಣೆಯಲ್ಲಿ ಆಯ್ಕೆಯಾಗುತ್ತೀರಿ. ಎರಡು ದೇಶಗಳ ಮಧ್ಯೆ ಶಾಂತಿ ಮಾತುಕತೆ ಆಗಲು ಸಿಧು ಪ್ರಧಾನಿ ಆಗುವ ತನಕ ಕಾಯುವ ಅಗತ್ಯವಿಲ್ಲ ಎಂಬ ಭರವಸೆ ಇದೆ" ಎಂದಿದ್ದಾರೆ ಇಮ್ರಾನ್.

ಪಾಕಿಸ್ತಾನದಲ್ಲಿ ಭಾರತದ ಜತೆಗೆ ಉತ್ತಮ ಸಂಬಂಧ ಬೆಳೆಸುವ ಉದ್ದೇಶವಿದೆ

ಪಾಕಿಸ್ತಾನದಲ್ಲಿ ಭಾರತದ ಜತೆಗೆ ಉತ್ತಮ ಸಂಬಂಧ ಬೆಳೆಸುವ ಉದ್ದೇಶವಿದೆ

ನಾನು ಭಾರತಕ್ಕೆ ಬಂದಾಗ ಅಲ್ಲಿನ ಜನರು ನನಗೆ ಕೇಳುತ್ತಿದ್ದರು: ಪಾಕ್ ಸೇನೆಗೆ ಶಾಂತಿಯಲ್ಲಿ ಆಸಕ್ತಿಯಿಲ್ಲ ಎನ್ನುತ್ತಿದ್ದರು. ಆಗ ನಾನು ಹೇಳುತ್ತಿದ್ದೆ, ನಾನು- ಪ್ರಧಾನಿಗಳು, ನಮ್ಮ ಪಕ್ಷ, ನಮ್ಮ ಸೈನ್ಯ- ನಾವೆಲ್ಲರೂ ಭಾರತದ ಜೊತೆಗೆ ಉತ್ತಮ ನಾಗರಿಕ ಸಂಬಂಧವನ್ನು ಬೆಳೆಸಲು ಬಯಸುತ್ತೇವೆ ಎಂದು ಹೇಳುತ್ತಿದ್ದೆ. ಈಗಲೂ ಅದೇ ಮಾತನ್ನು ಮತ್ತೊಮ್ಮೆ ತಿಳಿಸುತ್ತಿದ್ದೇನೆ ಎಂದಿದ್ದಾರೆ.

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆಕ್ಷೇಪ

ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆಕ್ಷೇಪ

ಕರ್ತರ್ ಪುರ್ ಕಾರಿಡಾರ್ ಯೋಜನೆ ಶಂಕುಸ್ಥಾಪನೆಗೆ ಪಂಜಾಬ್ ನ ಕಾಂಗ್ರೆಸ್ ಸಚಿವರೂ ಆಗಿರುವ ಮಾಜಿ ಕ್ರಿಕೆಟಿಗ ಸಿಧು ತೆರಳುವ ನಿರ್ಧಾರ ಮಾಡಿದಾಗ ಅಲ್ಲಿನ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದರು. ಪಂಜಾಬ್ ನಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ, ಅಮರಿಂದರ್ ಪಾಕಿಸ್ತಾನಕ್ಕೆ ತೆರಳುವುದಿಲ್ಲ ಎಂದಿದ್ದರು. ಮತ್ತೊಮ್ಮೆ ನಿಮ್ಮ ತೀರ್ಮಾನದ ಬಗ್ಗೆ ಯೋಚನೆ ಮಾಡಿ ಎಂದು ಸಿಧುಗೆ ಹೇಳಿದ್ದರು.

ಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆಕರ್ತರ್ ಪುರ್ ಕಾರಿಡಾರ್ ಯೋಜನೆಗೆ ತಕರಾರು ಏಕೆ ಗೊತ್ತೆ? ಇಲ್ಲಿದೆ ವಿಶ್ಲೇಷಣೆ

ಕಾರ್ಯಕ್ರಮಕ್ಕೆ ಬರುವುದಾಗಿ ಮಾತು ನೀಡಿದ್ದೇನೆ

ಕಾರ್ಯಕ್ರಮಕ್ಕೆ ಬರುವುದಾಗಿ ಮಾತು ನೀಡಿದ್ದೇನೆ

"ತಾನು ಬರುವುದಾಗಿ ಈಗಾಗಲೇ ಮಾತು ನೀಡಿದ್ದೇನೆ ಎಂದು ಸಿಧು ಹೇಳಿದರು. ಈ ವಿಚಾರದ ಬಗ್ಗೆ ನನ್ನ ನಿಲವು ಏನು ಅಂತ ಕೂಡ ಅವರಿಗೆ ಹೇಳಿದೆ. ಇದು ತನ್ನ ವೈಯಕ್ತಿಕ ಭೇಟಿ ಎಂದು ಸಿಧು ಹೇಳಿದರು. ನಂತರ ತನ್ನ ನಿರ್ಧಾರ ತಿಳಿಸಿವುದಾಗಿ ಹೇಳಿದ್ದವರು ಮತ್ತೆ ಯಾವುದೇ ಮಾಹಿತಿ ನನಗೆ ನೀಡಿಲ್ಲ" ಎಂದು ಅಮರಿಂದರ್ ಸಿಂಗ್ ಹೇಳಿದ್ದಾರೆ.

Array

ಇಮ್ರಾನ್ ಖಾನ್ ರನ್ನು ಹಾಡಿ ಹೊಗಳಿದ ಸಿಧು

ಕರ್ತರ್ ಪುರ್ ಕಾರಿಡಾರ್ ಉದ್ಘಾಟನೆಯಲ್ಲಿ ಬುಧವಾರ ಸಿಧು ಭಾಗಿಯಾಗಿದ್ದು, ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ರನ್ನು ಹೊಗಳಿದ್ದಾರೆ. ಎಪ್ಪತ್ತು ವರ್ಷಗಳಿಂದ ಆಗದ ಅಚ್ಚರಿಯೊಂದು ಈಗ ಆಗಿದೆ. ನನ್ನ ಸ್ನೇಹಿತ ಇಮ್ರಾನ್ ಖಾನ್ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದ್ದು, ಆತ ನನ್ನ ಉತ್ತಮ ಸ್ನೇಹಿತರು. ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ ಎಂದಿದ್ದಾರೆ ಸಿಧು.

ಭಾರತ-ಪಾಕ್ ನಿಂದ ಮಹತ್ವದ ಹೆಜ್ಜೆ; ಕರ್ತರ್ ಪುರ್ ಕಾರಿಡಾರ್ ಯೋಜನೆ ಘೋಷಣೆಭಾರತ-ಪಾಕ್ ನಿಂದ ಮಹತ್ವದ ಹೆಜ್ಜೆ; ಕರ್ತರ್ ಪುರ್ ಕಾರಿಡಾರ್ ಯೋಜನೆ ಘೋಷಣೆ

English summary
"I hope we don't have to wait for Sidhu to become India's Prime Minister for the two countries to become friends,", said Pakistan PM Imran Khan in Kartarpur corridor ground breaking ceremony on Wednesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X