ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಂಗ್ ಕಾಂಗ್‌ನಲ್ಲಿ 1 ಮಿಲಿಯನ್ ಮೀರಿದ ಕೊರೊನಾ ಪ್ರಕರಣಗಳ ಸಂಖ್ಯೆ

|
Google Oneindia Kannada News

ಕೊರೊನಾ ಹುಟ್ಟೂರು ಚೀನಾದಲ್ಲಿ ಕೊರೊನಾ ಹಾಗೂ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಮತ್ತೆ ಹಾಂಗ್ ಕಾಂಗ್‌ನಲ್ಲಿ ಕೊರೊನಾ ಪ್ರಕರಣಗಳು ಏಕಾಏಕಿ ಉಲ್ಬಣಗೊಂಡಿವೆ. ನಗರದಲ್ಲಿ ಪ್ರಕರಣಗಳ ಸಂಖ್ಯೆ ಏಕಾಏಕಿ 1 ಮಿಲಿಯನ್ ಏರಿಕೆಯಾಗಿದೆ. ಆರೋಗ್ಯ ಅಧಿಕಾರಿಗಳ ಪ್ರಕಾರ ಶುಕ್ರವಾರ 20,079 ಜನರಿಗೆ ಸೋಂಕು ದೃಢಪಟ್ಟಿದೆ. ಈವರೆಗೆ ಹಾಂಗ್ ಕಾಂಗ್‌ನಲ್ಲಿ ಒಟ್ಟು 1,016,944 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ ಸುಮಾರು 97% ರಷ್ಟು ಪ್ರಕರಣಗಳು ಕಳೆದ ಡಿಸೆಂಬರ್‌ ವರೆಗೆ ದಾಖಲಾಗಿವೆ. ಫೆಬ್ರವರಿ 9 ರಿಂದ ಸುಮಾರು 5,200 ಜನರು ವೈರಸ್‌ನಿಂದ ಸಾವನ್ನಪ್ಪಿದ್ದಾರೆ. ಹಾಂಗ್ ಕಾಂಗ್‌ನಲ್ಲಿ ಒಟ್ಟು 5,401 ಜನ ಈವರೆಗೆ ಕೊರೊನಾ ವೈರಸ್ ಸೋಂಕಿಗೆ ಬಲಿಯಾಗಿದ್ದಾರೆ.

ಚೀನಾದಲ್ಲಿ ದೃಢಪಟ್ಟ ಹೆಚ್ಚಿನ ಸೋಂಕಿತರಲ್ಲಿ ರೋಗಲಕ್ಷಣಗಳು ಕಂಡುಬಂದಿದೆ. ಲಕ್ಷಣರಹಿತ ಪ್ರಕರಣಗಳನ್ನು ಕಡಿಮೆ ಪ್ರಮಾಣದಲ್ಲಿ ದಾಖಲಾಗಿವೆ. ಮೇನ್‌ಲ್ಯಾಂಡ್ ಅಧಿಕಾರಿಗಳು ದೃಢಪಡಿಸಿದ 126,234 ಪ್ರಕರಣಗಳಲ್ಲಿ ಬಹುತೇಕ ಪ್ರಕರಣಗಳಲ್ಲಿ ಲಕ್ಷಣ ರಹಿತ ಪ್ರಕರಣಗಳು ಕಂಡುಬಿಂದಿವೆ. ಚೀನಾದಲ್ಲೇ ಲಕ್ಷಣ ರಹಿತ ಹಾಗೂ ರೋಗಲಕ್ಷಣಗಳಿರದ ಪ್ರಕರಣಗಳು ಹೆಚ್ಚಾಗಿ ಕಂಡು ಬರುತ್ತಿವೆ.

ಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ: ವೈದ್ಯಕೀಯ ಸಾಮಗ್ರಿಗಳ ಕೊರತೆಚೀನಾದಲ್ಲಿ ಮತ್ತೆ ಕೊರೊನಾ ಹಾವಳಿ: ವೈದ್ಯಕೀಯ ಸಾಮಗ್ರಿಗಳ ಕೊರತೆ

ಸದ್ಯ ಚೀನಾದಲ್ಲಿ ಓಮಿಕ್ರಾನ್ ಉಲ್ಬಣದ ಹಿಡಿತದಲ್ಲಿದೆ. ಆಸ್ಪತ್ರೆಗಳಲ್ಲಿ ಹಾಸಿಗಳು ಭರ್ತಿಯಾಗುತ್ತಿವೆ. ಹೀಗಾಗಿ ಆರೋಗ್ಯ ವ್ಯವಸ್ಥೆ ತಗ್ಗುತ್ತಿದೆ. ಶವಾಗಾರಗಳು ತುಂಬಿರುವುದರಿಂದ ಶವಗಳನ್ನು ತಾತ್ಕಾಲಿಕ ಕಂಟೈನರ್‌ಗಳಲ್ಲಿ ಸಂಗ್ರಹಿಸಬೇಕಾಗುತ್ತಿದೆ. ಸತ್ತವರಲ್ಲಿ ಹೆಚ್ಚಿನವರು ವಯಸ್ಸಾದ ರೋಗಿಗಳು, ಅವರಲ್ಲಿ ಹೆಚ್ಚಿನವರು ಸಂಪೂರ್ಣವಾಗಿ ಲಸಿಕೆಯನ್ನು ಹೊಂದಿಲ್ಲ.

Hong Kongs Covid infections exceed 1 million amid outbreak

ಕೊರೊನಾ ರೋಗಗಳು ಹೆಚ್ಚಾಗುತ್ತಿರುವ ಬೆನ್ನಲ್ಲೇ ಹಾಂಗ್ ಕಾಂಗ್ ಕಠಿಣ ಶೂನ್ಯ ಕೋವಿಡ್ ನಿರ್ಬಂಧಗಳನ್ನು ವಿಧಿಸಿದೆ. ತಾತ್ಕಾಲಿಕವಾಗಿ ವ್ಯವಹಾರಗಳನ್ನು ಸ್ಥಗಿತಗೊಳಿಸಿದೆ. ಸಾರ್ವಜನಿಕ ಸಭೆಗಳಿಗೆ ಬ್ರೇಕ್ ಹಾಕಲಾಗಿದೆ. ಹೆಚ್ಚಿನ ಅಪಾಯವೆಂದು ಪರಿಗಣಿಸಲಾದ ದೇಶಗಳಿಂದ ವಿಮಾನ ನಿಷೇಧಗಳಂತಹ ಪ್ರವೇಶ ನಿರ್ಬಂಧಗಳನ್ನು ವಿಧಿಸಲಾಗಿದೆ. ಸಾಂಕ್ರಾಮಿಕ ರೋಗವನ್ನು ಎದುರಿಸಲು ಹಾಂಗ್ ಕಾಂಗ್‌ಗೆ ಸಹಾಯ ಮಾಡಲು ತಜ್ಞರು ಮತ್ತು ವೈದ್ಯಕೀಯ ಸಂಪನ್ಮೂಲಗಳನ್ನು ಕಳುಹಿಸುವಂತೆ ಸಹಾಯವನ್ನು ಕೋರಲಾಗಿದೆ.

ಪ್ರಸ್ತುತ ಕೋವಿಡ್‌ ಪ್ರಕರಣಗಳು ಏರಿಕೆ ಆಗುವ ಮೊದಲು ಡಿಸೆಂಬರ್ ಅಂತ್ಯದಲ್ಲಿ ಹಾಂಗ್ ಕಾಂಗ್‌ನಲ್ಲಿ ಕೇವಲ 12,000 ಕೋವಿಡ್‌ ಪ್ರರಕಣಗಳು ಮತ್ತು ಸುಮಾರು 200 ಸಾವುಗಳು ದಾಖಲಾಗಿದ್ದವು. ಜನವರಿ ನಂತರ ಏಕಾಏಕಿ 54,000 ಪ್ರಕರಣಗಳು ಮತ್ತು 145 ಸಾವುಗಳನ್ನು ಕಾಣಿಸಿಕೊಂಡವು. ಹಾಂಗ್ ಕಾಂಗ್ ವಿಶ್ವವಿದ್ಯಾಲಯವು ಮಾರ್ಚ್‌ನಲ್ಲಿ ಸುಮಾರು 180,000 ದೈನಂದಿನ ಸೋಂಕುಗಳು ಮತ್ತು ದಿನಕ್ಕೆ ಸುಮಾರು 100 ಸಾವುಗಳು ದಾಖಲಾಗುವ ಮೂಲಕ ಹಾಂಗ್‌ ಕಾಂಗ್‌ನಲ್ಲಿ ಕೋವಿಡ್‌ ಉತ್ತುಂಗಕ್ಕೇರಲಿದೆ ಎಂದು ಅಂದಾಜಿಸಿತ್ತು.

Hong Kongs Covid infections exceed 1 million amid outbreak

ಚೀನಾದ ಮಾಧ್ಯಮಗಳ ಪ್ರಕಾರ, ಚೀನಾ 2020 ರಿಂದ ಅತ್ಯಂತ ಕೆಟ್ಟ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಈಗ ಅಲ್ಲಿ ಕೊರೊನಾ ಸೋಂಕು ವೇಗವಾಗಿ ಹೆಚ್ಚುತ್ತಿದ್ದು, ಈ ಕಾರಣದಿಂದಾಗಿ ಆರೋಗ್ಯ ಸೌಲಭ್ಯಗಳ ಕೊರತೆ ಉಂಟಾಗಿದೆ. ಆರೋಗ್ಯ ತಜ್ಞರ ಪ್ರಕಾರ, ಚೀನಾ ಸರ್ಕಾರವು ಸೋಂಕನ್ನು ಶೀಘ್ರದಲ್ಲೇ ನಿಲ್ಲಿಸದಿದ್ದರೆ, ಅಲ್ಲಿ ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು.

ಕೋವಿಡ್‌ ಸಾಂಕ್ರಾಮಿಕ ರೋಗದ ಆರಂಭಿಕ ಹಂತಗಳಲ್ಲಿ, ಬೀಜಿಂಗ್ ನಗರದಾದ್ಯಂತ ಲಾಕ್‌ಡೌನ್‌ಗಳು ಹಾಗೂ ಸಾಮೂಹಿಕ ಕೋವಿಡ್‌ ಪರೀಕ್ಷೆಯನ್ನು ಆರಂಭ ಮಾಡಲಾಗಿತ್ತು. ಆದರೀಗ ಹಾಂಗ್ ಕಾಂಗ್ ದೈನಂದಿನ ಪರೀಕ್ಷಾ ಸಾಮರ್ಥ್ಯವನ್ನು ದಿನಕ್ಕೆ ಒಂದು ಮಿಲಿಯನ್‌ಗೆ ಹೆಚ್ಚಿಸುವ ನಿರೀಕ್ಷೆಯಿದೆ ಎಂದು ಲ್ಯಾಮ್ ಹೇಳಿದರು. ಮುಂಬರುವ ವಾರಗಳಲ್ಲಿ ಹತ್ತಾರು ಪ್ರತ್ಯೇಕ ಘಟಕಗಳು ಮತ್ತು ಚಿಕಿತ್ಸಾ ಹಾಸಿಗೆಗಳನ್ನು ನಿರ್ಮಿಸಲಾಗುವುದು ಎಂದು ಅವರು ಹೇಳಿದರು. ಆದರೆ ಹಾಂಗ್ ಕಾಂಗ್‌ನಲ್ಲಿ ಪ್ರಕರಣಗಳು ಮಾತ್ರ ನಿರಂತರವಾಗಿ ಏರಿಕೆ ಕಾಣುತ್ತಿದೆ. ಸಾಮೂಹಿಕ ಪರೀಕ್ಷೆಯ ಸಮಯದಲ್ಲಿ ಹೆಚ್ಚಿನ ಪ್ರಕರಣಗಳು ಪತ್ತೆಯಾದಾಗ ಸಾಕಷ್ಟು ಘಟಕಗಳು ಲಭ್ಯವಿರುತ್ತವೆಯೇ ಎಂಬುದು ಸ್ಪಷ್ಟವಾಗಿಲ್ಲ.

English summary
Hong Kong's cumulative coronavirus infections have exceeded 1 million as the city grapples with a widespread outbreak that has killed more people than the reported Covid-19 deaths in all of mainland China.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X