• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಂಕಾಂಗ್‌ ಮಾಧ್ಯಮ ದಿಗ್ಗಜ ಜಿಮ್ಮಿ ಬಂಧನ

|

ಹಾಂಕಾಂಗ್‌, ಆ. 10: ಚೀನಾ ಹೊರ ತಂದಿರುವ ರಾಷ್ಟ್ರೀಯ ಭದ್ರತಾ ಕಾಯಿದೆ ಜಾರಿಗೆ ಬಂದ ಮೊದಲ ತಿಂಗಳಿನಲ್ಲೇ ಹಾಂಕಾಂಗ್ ಮಾಧ್ಯಮ ದಿಗ್ಗಜ ಜಿಮ್ಮಿ ಲಾಯಿ ಅವರನ್ನು ಬಂಧಿಸಲಾಗಿದೆ. ಆಪಲ್ ಡೈಲಿ ಪತ್ರಿಕಾ ಕಚೇರಿ ಮೇಲೆ ದಾಳಿ ನಡೆಸಲಾಗಿದೆ. ವಿದೇಶಿ ಶಕ್ತಿಗಳ ಜೊತೆ ಕೈಜೋಡಿಸಿ, ರಾಷ್ಟ್ರೀಯ ಭದ್ರತೆಗೆ ಧಕ್ಕೆ ತಂದ ಆರೋಪವನ್ನು ಜಿಮ್ಮಿ ಮೇಲೆ ಹೊರೆಸಲಾಗಿದೆ.

ಗಡಿಯಲ್ಲಿ ಚೀನಾದ ರಸ್ತೆ: ಭಾರತದ ಆತಂಕಕ್ಕೆ ಕಾರಣವೇನು?

72 ವರ್ಷ ವಯಸ್ಸಿನ ಜಿಮ್ಮಿ ಅವರ ಬಂಧನವನ್ನು ಖಂಡಿಸಿ ಸಾಮಾಜಿಕ ಜಾಲ ತಾಣಗಳಲ್ಲಿ ಆಕ್ರೋಶ ವ್ಯಕ್ತವಾಗಿದೆ. ಹಾಂಕಾಂಗ್‌ನಲ್ಲಿ ಪ್ರತಿಭಟನೆಗಳನ್ನು ಹತ್ತಿಕ್ಕಲು, ಹೋರಾಟಗಾರರ ಬಂಧನಕ್ಕೆ ಹೊಸ ಕಾನೂನು ರೂಪಿಸಲಾಗಿತ್ತು.

ಡ್ರ್ಯಾಗನ್ ರಾಷ್ಟ್ರದ ಶಾಸನದಿಂದ ಹೌ ಹಾರಿದರಾ ಹಾಂಗ್ ಕಾಂಗ್ ಜನ?

ಆಂತರಿಕ ಬಂಡಾಯದ ಭೀತಿಯಿಂದ ಹಾಂಕಾಂಗ್‌ ಸರ್ಕಾರ ಪೊಲೀಸರಿಗೆ ಸರ್ವಾಧಿಕಾರ ನೀಡಿದೆ. ವಾರಂಟ್‌ ಇಲ್ಲದೆ ಶೋಧ ನಡೆಸಲು, ಶಂಕಿತರನ್ನು ದೇಶ ಬಿಡದಂತೆ ತಡೆಯಲು ಹಾಗೂ ಫೋನ್‌ ಕಾಲ್ ಕದ್ದಾಲಿಸಲು ಹಾಂಕಾಂಗ್ ಪೊಲೀಸರಿಗೆ ಅಧಿಕಾರ ನೀಡಲಾಗಿದೆ. ಬಂಡಾಯದ ಬಗ್ಗೆ ದಾಖಲೆ ಸಿಕ್ಕರೆ ಅವರ ಆಸ್ತಿಯನ್ನೂ ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರ ಹೊಸ ಕಾಯಿದೆಗೆ ಇದೆ. ರಾಷ್ಟ್ರೀಯ ಭದ್ರತೆಗೆ ಧಕ್ಕೆ ತರುವ ಸಂದೇಶ, ಸೋಷಿಯಲ್ ಮೀಡಿಯಾ ಪೋಸ್ಟ್‌ಗಳನ್ನು ತೆಗೆದು ಹಾಕುವಂತೆ ಟೆಲಿಕಾಂ ಸಂಸ್ಥೆಗಳಿಗೆ ಆದೇಶ ನೀಡಲಾಗಿದೆ. ಈಗ ಬಂಧನಕ್ಕೆ ಒಳಗಾಗಿರುವ ಜಿಮ್ಮಿ ವಿರುದ್ಧ ಇಂಥದ್ದೇ ಆರೋಪ ಹೊರೆಸಲಾಗಿದೆ.

ಚೀನಾ ಅಯೋಮಯ: ಹಾಂಗ್ ಕಾಂಗ್ ತೊರೆದವರಿಗೆ ತೈವಾನ್ ನಲ್ಲಿ ಆಶ್ರಯ!

ಆಂಗ್ಲರಿಂದ ಪಡೆದ ಸ್ವಾತಂತ್ರ್ಯ ಚೀನಿಯರಿಂದ ನಾಶವಾಗುತ್ತಿದೆ. ದಿನದಿಂದ ದಿನಕ್ಕೆ ಹಾಂಕಾಂಗ್ ಮೇಲೆ ಚೀನಾ ತನ್ನ ಹಿಡಿತವನ್ನು ಬಿಗಿಗೊಳಿಸುತ್ತಿದೆ. ಈ ಮೊದಲು ಬ್ರಿಟನ್ ಅಧೀನದಲ್ಲಿದ್ದ ಹಾಂಕಾಂಗ್, ಸ್ವತಂತ್ರಗೊಂಡ ನಂತರ ಚೀನಾ ದೌರ್ಜನ್ಯಕ್ಕೆ ಒಳಗಾಗುತ್ತಿದೆ. ಇದು ನಮ್ಮ ನೆಲ ಅಂತಾ ಚೀನಿಯರು ಹಾಂಕಾಂಗ್‌ನಲ್ಲಿ ತಮ್ಮ ದಬ್ಬಾಳಿಕೆ ಮುಂದುವರಿಸಿದ್ದಾರೆ. ಹಾಂಕಾಂಗ್ ಸರ್ಕಾರವೂ ಅಷ್ಟೇ ಚೀನಾ ನಾಯಕರ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. ಆದರೆ ಇದು ಹಾಂಕಾಂಗ್ ಜನರಿಗೆ ಬಿಲ್‌ಕುಲ್ ಇಷ್ಟವಿಲ್ಲ. ಹೀಗಾಗಿ ಅಲ್ಲಿ ಮತ್ತೊಮ್ಮೆ ಸ್ವಾತಂತ್ರ್ಯದ ಕಿಚ್ಚು ಹೊತ್ತಿದೆ. ಹಾಂಕಾಂಗ್ ಜನ ಬರೋಬ್ಬರಿ 1 ವರ್ಷದಿಂದ ಬೀದಿಗಿಳಿದಿದ್ದಾರೆ. ಈ ಹೋರಾಟ ಹತ್ತಿಕ್ಕುವ ಉದ್ದೇಶದಿಂದಲೇ ನೂತನ ರಾಷ್ಟ್ರೀಯ ಭದ್ರತಾ ಕಾಯಿದೆ ಜಾರಿಗೆ ತರಲಾಗಿದೆ.

English summary
Jimmy Lai accused of 'colluding with foreign powers' in most high-profile arrest yet under new security law.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X