ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಸೇರಿ 3 ದೇಶಗಳಿಂದ ಬರುವ ವಿಮಾನಗಳಿಗೆ ಹಾಂಗ್‌ಕಾಂಗ್ ನಿರ್ಬಂಧ

|
Google Oneindia Kannada News

ಭಾರತ ಸೇರಿದಂತೆ ಮೂರು ದೇಶಗಳಿಂದ ಬರುವ ವಿಮಾನಗಳಿಗೆ ಹಾಂಗ್‌ಕಾಂಗ್ ನಿರ್ಬಂಧವಿಧಿಸಿದೆ. ಭಾರತ, ಪಾಕಿಸ್ತಾನ, ಫಿಲಿಪೈನ್ಸ್‌ನಿಂದ ಹೋಗುವ ವಿಮಾನಗಳಿಗೆ ನಿಷೇಧ ಹೇರಲಾಗಿದೆ.

ಫಿಲಿಪೈನ್ಸ್ ಹಾಗೂ ಭಾರತದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದೆ. ಹಾಂಗ್‌ಕಾಂಗ್‌ನಲ್ಲಿ ಭಾನುವಾರ 30 ಹೊಸ ಪ್ರಕರಣಗಳು ಪತ್ತೆಯಾಗಿವೆ. ಮಾರ್ಚ್‌ 15ರಿಂದ ಇತ್ತೀಚೆಗೆ ಮೊದಲ ಬಾರಿಗೆ ಇಷ್ಟೊಂದು ಪ್ರಕರಣಗಳು ಪತ್ತೆಯಾಗಿದೆ.

2 ಗಂಟೆಗಿಂತ ಕಡಿಮೆ ಅವಧಿಯ ದೇಶಿ ವಿಮಾನ ಪ್ರಯಾಣದಲ್ಲಿ ಆಹಾರ ಪೂರೈಕೆ ಇಲ್ಲ2 ಗಂಟೆಗಿಂತ ಕಡಿಮೆ ಅವಧಿಯ ದೇಶಿ ವಿಮಾನ ಪ್ರಯಾಣದಲ್ಲಿ ಆಹಾರ ಪೂರೈಕೆ ಇಲ್ಲ

ಎರಡು ವಾರಗಳ ಕಾಲ ನಿಷೇಧ ವಿಧಿಸಲಾಗಿದೆ. 30ರಲ್ಲಿ 29 ಪ್ರಕರಣಗಳು ಬೇರೆ ದೇಶದಿಂದ ಬಂದವರಲ್ಲಿ ಕಾಣಿಸಿಕೊಂಡಿದೆ. ಹಾಂಗ್‌ಕಾಂಗ್‌ನಲ್ಲಿ 11,600 ಕೊರೊನಾ ಸೋಂಕಿತರಿದ್ದು ಇಲ್ಲಿಯವರೆಗೆ 209 ಮಂದಿ ಮೃತಪಟ್ಟಿದ್ದಾರೆ.

 Hong Kong Bans Flights From India, Pakistan And Philippines For Two Weeks

ಹಾಂಗ್‌ಕಾಂಗ್‌ನಲ್ಲಿ ಇಲ್ಲಿಯವರೆಗೆ 7.5 ಮಿಲಿಯನ್ ಮಂದಿ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ, ಶೇ.9ರಷ್ಟು ಮಂದಿ ಮಾತ್ರ ಲಸಿಕೆ ಹಾಕಿಸಿಕೊಳ್ಳಬೇಕಿದೆ, ಶೀಘ್ರ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.

16-29ವರ್ಷದವರಿಗ ಕೊರೊನಾ ಲಸಿಕೆ ಹಾಕಲಾಗುತ್ತಿದೆ. ಭಾರತ ಹಾಗೂ ಫಿಲಿಪೈನ್ಸ್ ಮಾತ್ರವಲ್ಲದೆ ಪಾಕಿಸ್ತಾನದಿಂದ ಬರುವ ವಿಮಾನಗಳಿಗೂ ನಿಷೇಧ ಹೇರಿದೆ.

ಹಾಂಗ್‌ಕಾಂಗ್ ಏರ್‌ಲೈನ್ಸ್, ವಿಸ್ತಾರಾ ಹಾಗೂ ಸೆಬು ಪ್ಯಾಸಿಫಿಕ್ ವಿಮಾನಗಳಿಗೆ ನಿಷೇಧ ಹೇರಲಾಗದೆ. ನ್ಯೂಜಿಲೆಂಡ್ ಏಪ್ರಿಲ್ 11ರಿಂದಲೇ ಭಾರತೀಯ ವಿಮಾನಗಳಿಗೆ ನಿಷೇಧ ಹೇರಿತ್ತು, ಈ ನಿರ್ಬಂಧ ಏಪ್ರಿಲ್ 28ರವರೆಗೆ ಮುಂದುವರೆಯಲಿದೆ.

English summary
The three countries would be classified as "extremely high risk" after there had been multiple imported cases carrying the strain into Hong Kong in the past 14 days, the government said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X