ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತ ಸೇರಿ 7 ದೇಶಗಳಿಂದ ವಿಮಾನ ಹಾರಾಟ ನಿಷೇಧಿಸಿದ ಹಾಂಗ್ ಕಾಂಗ್

|
Google Oneindia Kannada News

ಹಾಂಗ್ ಕಾಂಗ್, ಜನವರಿ 6: ಓಮಿಕ್ರಾನ್‌ ಹರಡುವ ಭೀತಿಯಿಂದಾಗಿ ಜನವರಿ 21 ರವರೆಗೆ ಭಾರತ ಮತ್ತು ಇತರ 7 ದೇಶಗಳಿಂದ ವಿಮಾನ ಹಾರಾಟವನ್ನು ಹಾಂಗ್ ಕಾಂಗ್ ನಿಷೇಧಿಸಿದೆ. ಹೆಚ್ಚುತ್ತಿರುವ ಓಮಿಕ್ರಾನ್ ಪ್ರಕರಣಗಳನ್ನು ನಿಯಂತ್ರಿಸುವ ಪ್ರಯತ್ನದಲ್ಲಿ ಹಾಂಗ್ ಕಾಂಗ್ ಬುಧವಾರ ತನ್ನ ಕೆಲವು ಕಠಿಣವಾದ COVID-19 ನಿರ್ಬಂಧಗಳನ್ನು ವಿಧಿಸಿದೆ. ಭಾರತ ಸೇರಿದಂತೆ ಒಟ್ಟು ಎಂಟು ದೇಶಗಳಿಂದ ಜನವರಿ 21 ರವರೆಗೆ ವಿಮಾನಗಳನ್ನು ಹಾಂಗ್ ಕಾಂಗ್ ನಿಷೇಧಿಸಿದೆ.

ಪ್ರತಿಕಾಗೋಷ್ಠಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಹಾಂಗ್ ಕಾಂಗ್ ಮುಖ್ಯ ಕಾರ್ಯನಿರ್ವಾಹಕ ಕ್ಯಾರಿ ಲ್ಯಾಮ್ ಚೆಂಗ್ ಯುಯೆಟ್-ಂಗೋರ್ ಅವರು, ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಭಾರತ, ಪಾಕಿಸ್ತಾನ, ಫಿಲಿಪೈನ್ಸ್, ಯುಕೆ ಮತ್ತು ಯುಎಸ್, ಸಾರಿಗೆ ಮೂಲಕ ಸೇರಿದಂತೆ ನಗರಕ್ಕೆ ಹಿಂತಿರುಗುವುದನ್ನು ನಿಷೇಧಿಸಲಾಗಿದೆ ಎಂದು ಘೋಷಿಸಿದ್ದಾರೆ. ಶನಿವಾರದಿಂದ ಎರಡು ವಾರಗಳವರೆಗೆ ಹಾಂಗ್ ಕಾಂಗ್‌ಗೆ ಈ ಎಂಟು ದೇಶದ ಪ್ರಯಾಣಿಕರ ಪ್ರವೇಶವನ್ನು ನಿಷೇಧಿಸಲಾಗಿದೆ.

ಕೊರೊನಾವೈರಸ್ ಹೊಡೆತಕ್ಕೆ ನಲುಗಿ ಹೋಗಿದೆ

ಹಾಂಗ್ ಕಾಂಗ್, ಪ್ರಮುಖ ವಾಯುಯಾನ ಕೇಂದ್ರ ಮತ್ತು ಹಣಕಾಸು ಕೇಂದ್ರವಾಗಿದ್ದು ಚೀನಾದ ವಿಶೇಷ ಆಡಳಿತ ಪ್ರದೇಶವಾಗಿದೆ. ಹಾಂಗ್ ಕಾಂಗ್ ಈಗಾಗಲೇ ಕೊರೊನಾವೈರಸ್ ಹೊಡೆತಕ್ಕೆ ನಲುಗಿ ಹೋಗಿದೆ. ಹೀಗಾಗಿ ಓಮಿಕ್ರಾನ್ ಪ್ರಕರಣಗಳು ಹೆಚ್ಚಾಗಿರುವ ದೇಶಗಳೊಂದಿಗೆ ಕಠಿಣ ನಿಯಮಗಳು ಅಗತ್ಯವೆಂದು ಲ್ಯಾಮ್ ಹೇಳಿದ್ದಾರೆ. ಸಾಂಕ್ರಾಮಿಕ ಹರಡುವಿಕೆಯಲ್ಲಿ ಕ್ಷಿಪ್ರ ಬದಲಾವಣೆ ಕಂಡುಬಂದಿದೆ, ಇದು ನಮಗೆ ಆತಂಕವನ್ನು ಉಂಟುಮಾಡಿದೆ. ಪ್ರಸರಣ ಸರಪಳಿಗಳನ್ನು ಕಡಿತಗೊಳಿಸಲು ನಾವು ಇಂದು ವೇಗದ, ನಿರ್ಣಾಯಕ ಮತ್ತು ನಿಖರವಾದ ಕ್ರಮಗಳನ್ನು ಘೋಷಿಸುತ್ತೇವೆ ಎಂದು ಲ್ಯಾಮ್ ಪತ್ರಿಕಾಗೋಷ್ಠಿಯಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಪ್ರಯಾಣಿಕರ ವಿಮಾನಗಳ ಮೇಲಿನ ಎರಡು ವಾರಗಳ ನಿಷೇಧವು ಜನವರಿ 21 ರವರೆಗೆ ಜಾರಿಯಲ್ಲಿರುತ್ತದೆ. ಇತ್ತೀಚೆಗೆ ನಿಷೇಧಿತ ದೇಶಗಳಲ್ಲಿದ್ದ ಅಥವಾ ಅವುಗಳ ಮೂಲಕ ಸಾಗಿದ ಪ್ರಯಾಣಿಕರು ಎರಡು ವಾರಗಳವರೆಗೆ ನಗರಕ್ಕೆ ಹಿಂತಿರುಗುವುದನ್ನು ನಿರ್ಬಂಧಿಸಲಾಗುತ್ತದೆ.

Hong Kong bans flights from India, 7 other countries until Jan 21 due to omicron

ವಿಶೇಷವಾಗಿ ಸಮುದಾಯದಲ್ಲಿ ಹೆಚ್ಚು ಹರಡುವ ಓಮಿಕ್ರಾನ್‌ನಂಥ ಸೋಂಕುಗಳನ್ನು ತಡೆಗಟ್ಟಲು ಮತ್ತು ಸಾರ್ವಜನಿಕ ಆಸ್ಪತ್ರೆಗಳು COVID-19 ರೋಗಿಗಳಿಂದ ಓವರ್‌ಲೋಡ್ ಆಗುವುದನ್ನು ತಡೆಯಲು ಇಂಥ ಕ್ರಮಗಳು ಅತ್ಯಗತ್ಯ ಎಂದು ಅವರು ಹೇಳಿದ್ದಾರೆ. ವೈರಸ್ ಹರಡುವುದನ್ನು ತಡೆಗಟ್ಟಲು ತೆಗೆದುಕೊಂಡ ನಿರ್ಣಾಯಕ, ತ್ವರಿತ ಮತ್ತು ತೀಕ್ಷ್ಣವಾದ ಕ್ರಮವನ್ನು ಪೀಡಿತ ದೇಶಗಳು ಅರ್ಥಮಾಡಿಕೊಳ್ಳುತ್ತವೆ ಎಂದು ನಾನು ಆಶಿಸಿದ್ದೇನೆ ಎಂದು ಲ್ಯಾಮ್ ಹೇಳಿದ್ದಾರೆ. ನಾವು ದಿಟ್ಟ ಮತ್ತು ಕಟ್ಟುನಿಟ್ಟಿನ ಕ್ರಮಗಳನ್ನು ತೆಗೆದುಕೊಳ್ಳುತ್ತೇವೆ ಇದರಿಂದ ಕಡಿಮೆ ಅವಧಿಯಲ್ಲಿ ನಾವು ಓಮಿಕ್ರಾನ್ ರೂಪಾಂತರವನ್ನು ತಡೆಗಟ್ಟಬಹುದು ಎಂದು ಅವರು ಹೇಳಿದರು.

ಸಮುದಾಯದಲ್ಲಿ ಹಲವಾರು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ ಎಂದು ಆರೋಗ್ಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಇನ್ನೂ ಅವುಗಳ ಮೂಲವನ್ನು ಪತ್ತೆಹಚ್ಚಲು ಪರದಾಡುತ್ತಿದ್ದಾರೆ. ಹೀಗಾಗಿ ಈ ಸೋಂಕುಗಳನ್ನು ತಾಂತ್ರಿಕವಾಗಿ ಹರಡುವ ಪ್ರಯತ್ನಿಗಳು ನಡೆಯುತ್ತಿರಬಹುದು ಎಂದು ಸೂಕ್ಷ್ಮ ಜೀವಶಾಸ್ತ್ರಜ್ಞ ಪ್ರೊಫೆಸರ್ ಯುಯೆನ್ ಕ್ವಾಕ್-ಯುಂಗ್ ಹೇಳಿದ್ದಾರೆ.

ಹಾಂಗ್ ಕಾಂಗ್ ವಿಶ್ವವಿದ್ಯಾಲಯದ ವೈದ್ಯಕೀಯ ವಿಭಾಗದ ಡೀನ್, ಸಹವರ್ತಿ ಸರ್ಕಾರಿ ಸಲಹೆಗಾರ ಪ್ರೊಫೆಸರ್ ಗೇಬ್ರಿಯಲ್ ಲೆಯುಂಗ್ ಅವರ ಪ್ರಕಾರ, ವೈರಸ್ ಸಮುದಾಯದಲ್ಲಿ ಏಕಾಏಕಿ ಕಾಣಿಸಿಕೊಂಡಲ್ಲಿ ಈ ಸಾಂಕ್ರಾಮಿಕ ರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಕನಿಷ್ಠ ಮೂರರಿಂದ ಆರು ತಿಂಗಳು ತೆಗೆದುಕೊಳ್ಳುತ್ತದೆ ಎಂದು ಅಂದಾಜಿಸಿದ್ದಾರೆ. ಹಾಗಿದ್ದಲ್ಲಿ, ಚೀನಾ ಹೆಚ್ಚು ಪ್ರಕರಣಗಳು ಇರುವ ದೇಶಗಳ ಸಂಪರ್ಕತಡೆ ಮಾಡುವುದರೊಂದಿಗೆ ಬಾಕಿ ಉಳಿದಿರುವ ಪ್ರಯಾಣದ ಮೂಲಕವೂ ಸೋಂಕು ಪ್ರವೇಶವಾಗುವ ಸಾಧ್ಯತೆ ಇದ್ದು ವಿಮಾನ ನಿಷೇಧ ಕ್ರಮ ವಿಫಲಗೊಳ್ಳುತ್ತದೆ ಎಂದು ಅವರು ಹೇಳಿದರು. ಬುಧವಾರ, ಹಾಂಗ್ ಕಾಂಗ್ 38 COVID-19 ಪ್ರಕರಣಗಳನ್ನು ವರದಿ ಮಾಡಿದೆ. 213 ಸಂಬಂಧಿತ ಸಾವುಗಳೊಂದಿಗೆ ಈವರೆಗೆ 12,799 ಸಾವಿನ ಸಂಖ್ಯೆ ಏರಿಕೆಯಾಗಿದೆ.

ಭಾರತದಲ್ಲಿ ಬುಧವಾರ 58,097 ಹೊಸ ಕೊರೋನವೈರಸ್ ಪ್ರಕರಣಗಳು ದಾಖಲಾಗಿವೆ. ದೇಶದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ 3,50,18,358 ಕ್ಕೆ ಏರಿಕೆಯಾಗಿದೆ. ಆರೋಗ್ಯ ಸಚಿವಾಲಯದ ಪ್ರಕಾರ, ಸುಮಾರು 81 ದಿನಗಳ ನಂತರ ಸಕ್ರಿಯ ಪ್ರಕರಣಗಳು 2 ಲಕ್ಷಕ್ಕಿಂತ ಹೆಚ್ಚು ದಾಖಲಾಗಿವೆ. 534 ದೈನಂದಿನ ಸಾವುಗಳೊಂದಿಗೆ ದೇಶದ ಕೊರೊನಾ ಸಂಬಂಧಿತ ಸಾವಿನ ಸಂಖ್ಯೆ 4,82,551 ಕ್ಕೆ ಏರಿಕೆಯಾಗಿದೆ ಎಂದು ಡೇಟಾ ತಿಳಿಸಿದೆ. ಈವರೆಗೆ ದೇಶದಲ್ಲಿ ಓಮಿಕ್ರಾನ್ ಪ್ರಕರಣಗಳ ಸಂಖ್ಯೆ 2,135 ದಾಖಲಾಗಿದೆ. ಇದರಲ್ಲಿ 828 ಮಂದಿ ಚೇತರಿಸಿಕೊಂಡಿದ್ದಾರೆ ಎಂದು ಸಚಿವಾಲಯ ವರದಿ ಮಾಡಿದೆ.

English summary
Hong Kong on Wednesday reimposed some of its toughest COVID-19 restrictions, banning flights from eight countries including India until January 21, in a bid to arrest the rising number of omicron cases.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X