• search
 • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಹಾಂಗ್ ಕಾಂಗ್; ವಂದೇ ಭಾರತ್ ಮಿಷನ್ ವಿಮಾನಗಳಿಗೆ ನಿರ್ಬಂಧ

|

ಹಾಂಗ್ ಕಾಂಗ್, ಆಗಸ್ಟ್ 18 : ಹಾಂಗ್ ಕಾಂಗ್ ಭಾರತದ 'ವಂದೇ ಭಾರತ್ ಮಿಷನ್' ವಿಮಾನಗಳ ಸಂಚಾರಕ್ಕೆ ನಿಷೇಧ ಹೇರಿದೆ. ಕೋವಿಡ್ 19 ಕಾರಣಕ್ಕೆ ವಿದೇಶದಲ್ಲಿ ಸಿಲುಕಿರುವ ಭಾರತೀಯರನ್ನು ರಕ್ಷಣೆ ಮಾಡಲು ಭಾರತ ಸರ್ಕಾರ ಕೈಗೊಂಡ ಬೃಹತ್ ಕಾರ್ಯಾಚರಣೆ ವಂದೇ ಭಾರತ್ ಮಿಷನ್.

   Facebook ಇಂಡಿಯಾ ನೀತಿ ಮುಖ್ಯಸ್ಥೆ Ankhi Das ಜೀವಕ್ಕೆ ಬೆದರಿಕೆ.. | Oneindia Kannada

   ವಂದೇ ಭಾರತ್ ಮಿಷನ್ ಅಡಿಯಲ್ಲಿ ಏರ್ ಇಂಡಿಯಾದ ವಿಮಾನಗಳು ಹಾರಾಟ ನಡೆಸುತ್ತವೆ. ಹಾಂಗ್ ಕಾಂಗ್ ಏರ್ ಇಂಡಿಯಾ ವಿಮಾನಗಳು ಹಾಂಗ್‌ ಕಾಂಗ್‌ಗೆ ಆಗಮಿಸುವುದು ಮತ್ತು ಅಲ್ಲಿಂದ ನಿರ್ಗಮಿಸುವುದಕ್ಕೆ ನಿರ್ಬಂಧ ಹಾಕಿದೆ.

   'ವಂದೇ ಭಾರತ್ ಮಿಷನ್' ವಿಶ್ವದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆ

   ಕೋವಿಡ್ 19 ಮಾರ್ಗಸೂಚಿಗಳ ಪಾಲನೆಗಾಗಿ ನಿರ್ಬಂಧ ಹೇರಲಾಗಿದೆ ಎಂದು ತಿಳಿದು ಬಂದಿದೆ. ಇದರಿಂದಾಗಿ ಹಾಂಗ್‌ ಕಾಂಗ್‌ನಿಂದ ಭಾರತೀಯರನ್ನು ಕರೆತರುವ ಪ್ರಕ್ರಿಯೆಯನ್ನು ಸದ್ಯಕ್ಕೆ ಏರ್ ಇಂಡಿಯಾ ಸ್ಥಗಿತಗೊಳಿಸುತ್ತಿದೆ.

   ದುರಂತಕ್ಕೆ ಸಂತಾಪ ಆದರೆ..ವಂದೇ ಭಾರತ್ ಮಿಷನ್ ನಿಲ್ಲಲ್ಲ!

   ಕೋವಿಡ್ ಭೀತಿಯ ಸಂದರ್ಭದಲ್ಲಿ ಭಾರತ ಸರ್ಕಾರ ಕೈಗೊಂಡ ವಂದೇ ಭಾರತ್ ಮಿಷನ್ ವಿಶ್ವಮಟ್ಟದಲ್ಲಿ ಕಳೆದ 30 ವರ್ಷಗಳಲ್ಲಿ ನಡೆದ ಅತಿ ದೊಡ್ಡ ರಕ್ಷಣಾ ಕಾರ್ಯಾಚರಣೆಯಾಗಿದೆ. ಕೇಂದ್ರ ವಿದೇಶಾಂಗ ಇಲಾಖೆಯ ಮಾಹಿತಿಯಂತೆ ಇದುವರೆಗೂ ವಿವಿಧ ದೇಶಗಳಲ್ಲಿ ಸಿಲುಕಿದ್ದ 9.5 ಲಕ್ಷ ಭಾರತೀಯರು ಈ ಕಾರ್ಯಚರಣೆ ಮೂಲಕ ವಾಪಸ್ ಆಗಿದ್ದಾರೆ.

   ಕೊನೆಗೂ ಕುವೈಟ್‌ನಿಂದ ಮಂಗಳೂರಿಗೆ ಬಂದ ವಿಮಾನ

   ಭಾರತದಲ್ಲಿ ಕೋವಿಡ್ ಸೋಂಕಿನ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಲಾಕ್ ಡೌನ್ ಘೋಷಣೆ ಮಾಡಲಾಯಿತು. ಆಗ ವಿಮಾನಗಳ ಹಾರಾಟ ಸಂಪೂರ್ಣವಾಗಿ ಸ್ಥಗಿತಗೊಂಡಿತು. ವಿದೇಶದಲ್ಲಿದ್ದ ಭಾರತೀಯರು ದೇಶಕ್ಕೆ ವಾಪಸ್ ಆಗಲು ಕಷ್ಟ ಉಂಟಾಯಿತು.

   ಏರ್ ಇಂಡಿಯಾ ವಿಮಾನಗಳ ಮೂಲಕ ಭಾರತ ವಿದೇಶದಲ್ಲಿ ಸಿಲುಕಿದ್ದ ಭಾರತೀಯರನ್ನು ವಾಪಸ್ ಕರೆತರುವ ಪ್ರಕ್ರಿಯೆ ಆರಂಭಿಸಿತು. ಅಮೆರಿಕ, ಜರ್ಮನಿ, ಫ್ರಾನ್ಸ್‌ನಲ್ಲಿ ಸಿಲುಕಿದ್ದವರನ್ನು ಮೊದಲು ವಾಪಸ್ ಕರೆಸಲಾಯಿತು. ಬಳಿಕ ಕೆನಡಾ, ಯುಕೆ ಮುಂತಾದ ದೇಶಗಳು ವಂದೇ ಭಾರತ್ ಮಿಷನ್‌ಗೆ ಒಪ್ಪಿಗೆ ನೀಡಿದವು.

   English summary
   Hong Kong banned Air India's Vande Bharat Mission flights. Flight for Hong Kong banned due to COVID 19 related issues.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X