ಪಾಕ್ ನೌಕಾಪಡೆ ಅಧಿಕಾರಿಗಳ ಮೇಲೆ ಉಗ್ರರ ದಾಳಿ: 2 ಸಾವು

Posted By:
Subscribe to Oneindia Kannada

ಇಸ್ಲಾಮಾಬಾದ್, ಜೂನ್ 19: ಪಾಕಿಸ್ತಾನದ ಗ್ವದಾರ್ ಬಂದರಿನಲ್ಲಿ ಗಸ್ತು ತಿರುಗುತ್ತಿದ್ದ ಪಾಕಿಸ್ತಾನದ ನೌಕಾಪಡೆಯ ಅಧಿಕಾರಿಗಳಿದ್ದ ವಾಹನದ ಮೇಲೆ ಸೋಮವಾರ ರಾತ್ರಿ ಉಗ್ರರ ದಾಳಿ ನಡೆದಿದೆ.

ಈ ದಾಳಿಯಲ್ಲಿ, ಇಬ್ಬರು ಅಧಿಕಾರಿಗಳು ಮೃತಪಟ್ಟಿದ್ದು, ಐವರು ನೌಕಾ ಸಿಬ್ಬಂದಿ ಗಾಯಗೊಂಡಿದ್ದಾರೆಂದು ಹೇಳಲಾಗಿದೆ. ಗಾಯಗೊಂಡ ಸಿಬ್ಬಂದಿಯನ್ನು ಕರಾಚಿ ಆಸ್ಪತ್ರೆಗೆ ದಾಖಲಿಸಲಾಗಿದೆ.

HomeWorld news Attack on Pakistan Navy at Jiwani, two officials killed

ಬೈಕಿನಲ್ಲಿ ಆಗಮಿಸಿದ್ದ ಮೂವರು ಉಗ್ರರು ಗಸ್ತು ವಾಹನವನ್ನು ಇದ್ದಕ್ಕಿದ್ದಂತೆ ಅಡ್ಡಗಟ್ಟಿ ಗುಂಡಿನ ಮಳೆಗರೆದರು ಎಂದು ಹೇಳಲಾಗಿದೆ.

ಗುಂಡಿನ ದಾಳಿ ಕೇಳಿದ ತಕ್ಷಣ ಗ್ವದಾರ್ ಬಂದರಿನ ಬೇರೊಂದು ಭಾಗದಲ್ಲಿದ್ದ ಗಸ್ತು ವಾಹನಗಳು ಸ್ಥಳಕ್ಕಾಗಮಿಸಿವೆ. ಇದನ್ನು ನೋಡಿದ ಬಂದೂಕುಧಾರಿಗಳು ಪರಾರಿಯಾಗಿದ್ದಾರೆ.

ಪಾಕಿಸ್ತಾನಕ್ಕೆ ಸೇರಿದ ಬಲೂಚಿಸ್ತಾನದಲ್ಲಿ ಚೀನಾವು ತನ್ನ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂದಾಗಿರುವ ಹಿನ್ನೆಲೆಯಲ್ಲಿ ಇಸ್ಲಾಮಿಕ್ ಸ್ಟೇಟ್ ಸಂಘಟನೆಯು ಬಲೂಚಿಸ್ತಾನದಿಂದ ಇಬ್ಬರು ಚೀನೀಯರನ್ನು ಕಳೆದೆರಡು ವಾರಗಳ ಹಿಂದೆ ಅಪಹರಿಸಿ ಹತ್ಯೆಗೈದಿತ್ತು.

ಅದರ ಬೆನ್ನಲ್ಲೇ, ಬಲೂಚಿಸ್ತಾನಕ್ಕೆ ಬಂದಿರುವ ಚೀನಾದ ಪ್ರಜೆಗಳನ್ನು ರಕ್ಷಿಸಲು ಪಾಕಿಸ್ತಾನ ಸರ್ಕಾರ ಕ್ರಮಗಳನ್ನು ಕೈಗೊಂಡಿರುವುದನ್ನು ಪ್ರತಿಭಟಿಸುವ ನಿಟ್ಟಿನಲ್ಲಿ ಇದೀಗ ನೌಕಾಧಿಕಾರಿಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಕೆಲ ಮೂಲಗಳು ಹೇಳಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
In a major attack on Pakistan Navy at Jiwani in Gwadar as many as 2 officials have been reported killed and 3 injured. The publication reported that four gunmen on 2 bikes attacked the Navy officers vehicle in Jiwani, Gwadar on Monday (June 19).
Please Wait while comments are loading...