ಭಾರತ- ನೇಪಾಳ ಗಡಿಭಾಗದಲ್ಲಿ ಶಂಕಿತ ಉಗ್ರನ ಬಂಧನ

Posted By:
Subscribe to Oneindia Kannada

ನವದೆಹಲಿ, ಮೇ 14: ಭಾರತ- ನೇಪಾಳ ಗಡಿಭಾಗದಲ್ಲಿ ಶಂಕಿತ ಉಗ್ರನೊಬ್ಬನನ್ನು ಭಾನುವಾರ ಬಂಧಿಸಲಾಗಿದೆ. ಪಾಕಿಸ್ತಾನದ ಪಾಸ್ ಪೋರ್ಟ್ ಹೊಂದಿರುವ ಈತ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಕಾರ್ಯಕರ್ತ ಎಂದು ತಿಳಿದು ಬಂದಿದೆ.

ಭಾರತ ಹಾಗೂ ನೇಪಾಳ ಗಡಿಭಾಗದ ಮೂಲಕ ಭಾರತದೊಳಗೆ ನುಸುಳಲು ಯತ್ನಿಸುತ್ತಿದ್ದ ಹಿಜ್ಬುಲ್ ಮುಜಾಹಿದ್ದೀನ್ ಗೆ ಸೇರಿದ ಉಗ್ರನೊಬ್ಬನನ್ನು ಸಶಸ್ತ್ರ ಸೀಮಾ ಬಲ ತಂಡ ಬಂಧಿಸಿದೆ. ಬಂಧಿತನನ್ನು ನಸೀರ್ ಅಹ್ಮದ್ ಅಲಿಯಾಸ್ ಸಾದಿಕ್ ಎಂದು ಗುರುತಿಸಲಾಗಿದ್ದು, 2003ರಿಂದ ಪಾಕಿಸ್ತಾನದ ನಿವಾಸಿಯಾಗಿದ್ದಾನೆ ಎಂದು ತಿಳಿದು ಬಂದಿದೆ.

Hizbul Mujahideen terrorist trying to sneak into India from Nepal arrested

2016ರ ಜುಲೈ ತಿಂಗಳಿನಲ್ಲಿ ಬುರ್ಹಾನ್ ವನಿ ಹತ್ಯೆ ಬಳಿಕ ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಯ ಮುಂದಾಳತ್ವ ವಹಿಸಿಕೊಂಡ ಮುಸಾ, ಇತ್ತೀಚೆಗೆ ಘೋಷಣೆ ಹೊರಡಿಸಿ, ಹುರಿಯತ್ ನಾಯಕರ ರುಂಡ ಚೆಂಡಾಡುವುದಾಗಿ ಹೇಳಿದ್ದನು.

ಕಾಶ್ಮೀರಕ್ಕಾಗಿ ನಡೆದಿರುವ ಸಮರವನ್ನು ಇಸ್ಲಾಮಿಕ್ ಯುದ್ಧ ಎನ್ನದೆ ರಾಜಕೀಯ ಉದ್ದೇಶಿತ ಎನ್ನುತ್ತಿರುವ ಹುರಿಯತ್ ನಾಯಕರನ್ನು ಶ್ರೀನಗರದ ಲಾಲ್ ಚೌಕ್ ನಲ್ಲಿ ಗಲ್ಲಿಗೇರಿಸುವುದಾಗಿ ಘೋಷಿಸಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Sashastra Seema Bal on Sunday apprehended a Hizb-ul-Mujahideen terrorist trying to sneak into India from Nepal. According to reports, Naseer Ahmed alias Sadiq was residing in Pakistan since 2003.
Please Wait while comments are loading...