ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟ್ರಂಪ್–ಮೋದಿ ಭೇಟಿ ಎಫೆಕ್ಟ್, ಮತ್ತೋರ್ವ ಜಾಗತಿಕ ಉಗ್ರನ ಘೋಷಣೆ

|
Google Oneindia Kannada News

ವಾಷಿಂಗ್ಟನ್‌, ಜೂನ್ 27 : ಐಎಸ್ ಸೇರಿದ್ದ ಉಗ್ರ ಭಟ್ಕಳದ ಮೊಹಮ್ಮದ್ ಶಫಿ ಅರ್ಮಾರ್ ನನ್ನು ಅಮೆರಿಕ ಇತ್ತೀಚೆಗಷ್ಟೇ 'ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಿದ್ದ ಬೆನ್ನಲ್ಲಿಯೇ ಮತ್ತೋರ್ವ ಜಾಗತಿಕ ಭಯೋತ್ಪಾದಕನನ್ನು ಘೋಷಿಸಿದೆ.

ಕಾಶ್ಮೀರದ ಉಗ್ರ ಸಂಘಟನೆ ಹಿಜ್ಬುಲ್ ಮುಜಾಹಿದೀನ್ ಮುಖ್ಯಸ್ಥ ಸೈಯ್ಯದ್ ಸಲಾವುದೀನ್ ನನ್ನು ಅಮೆರಿಕವು 'ಜಾಗತಿಕ ಭಯೋತ್ಪಾದಕ' ಎಂದು ಘೋಷಿಸಿದೆ.

ಭಟ್ಕಳದ ಶಫಿ ಆರ್ಮರ್ ಜಾಗತಿಕ ಉಗ್ರನೆಂದು ಘೋಷಿಸಿದ ಅಮೆರಿಕಭಟ್ಕಳದ ಶಫಿ ಆರ್ಮರ್ ಜಾಗತಿಕ ಉಗ್ರನೆಂದು ಘೋಷಿಸಿದ ಅಮೆರಿಕ

ಪ್ರಧಾನಿ ನರೇಂದ್ರ ಮೋದಿ ಮತ್ತು ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಶ್ವೇತಭವನದಲ್ಲಿ ಭೇಟಿಯಾಗುವ ಕೆಲವೇ ಗಂಟೆಗಳ ಮೊದಲು ಈ ಮಹತ್ವದ ಘೋಷಣೆ ಹೊರಬಿದ್ದಿದೆ.

Hizbul Mujahideen Chief Syed Salahuddin Named Global Terrorist By US

71 ವರ್ಷದ ಸಲಾವುದೀನ್ ಮೂಲ ಹೆಸರು ಸೈಯ್ಯದ್ ಮೊಹಮ್ಮದ್ ಯುಸೂಫ್ ಷಾ. ಹಿಜ್ಬುಲ್ ಮುಜಾಹಿದೀನ್ ಉಗ್ರ ಸಂಘಟನೆ ನೇತೃತ್ವ ವಹಿಸಿಕೊಂಡ ಬಳಿಕ ಸಲಾವುದೀನ್ ಎಂಬ ಹೆಸರಿನಿಂದ ಕುಖ್ಯಾತನಾಗಿದ್ದಾನೆ.

ಮೂಲತಃ ಕಾಶ್ಮೀರದವನಾದ ಈತ ಪಾಕಿಸ್ತಾನದಲ್ಲಿ ಇದ್ದುಕೊಂಡೇ ಕಣಿವೆ ರಾಜ್ಯದಲ್ಲಿ ವಿಧ್ವಂಸಕ ಮತ್ತು ಭಯೋತ್ಪಾದನಾ ಕೃತ್ಯಗಳಲ್ಲಿ ತೊಡಗಿದ್ದಾನೆ. ಕಾಶ್ಮೀರ ಸಮಸ್ಯೆಗೆ ಶಾಂತಿಯುತ ಪರಿಹಾರಕ್ಕೆ ಅಡ್ಡಿ ಪಡಿಸುತ್ತಿರುವ ಈತನ ಹೆಸರು ರಾಷ್ಟ್ರೀಯ ತನಿಖಾ ದಳ (ಎನ್‌ಐಎ) 'ಮೋಸ್ಟ್ ವಾಂಟೆಡ್‌'ಪಟ್ಟಿಯಲ್ಲೂ ಇದೆ.

ಇದೀಗ ಸಲಾವುದೀನ್ ಹೆಸರು ಅಮೆರಿಕದ ಸರ್ಕಾರದಲ್ಲಿ ಸೇರ್ಪಡೆಯಾಗಿದ್ದು, ಅಮೆರಿಕ ಆತನ ವಿರುದ್ಧ ಆರ್ಥಿಕ ದಿಗ್ಭಂದನೆ ಸೇರಿದಂತೆ ಎಲ್ಲ ರೀತಿಯ ನಿರ್ಬಂಧ ಹೇರಿದೆ.

'ಕಾಶ್ಮೀರದ ಯುವಕರನ್ನು ಆತ್ಮಾಹುತಿ ದಾಳಿಯ ದಾಳಗಳನ್ನಾಗಿ ಬಳಸಿಕೊಂಡು ಕಣಿವೆ ರಾಜ್ಯವನ್ನು ಸ್ಮಶಾನ ಮಾಡುವುದಾಗಿ' ಸಲಾವುದೀನ್ ಕಳೆದ ವರ್ಷ ಭಾರತಕ್ಕೆ ಬೆದರಿಕೆ ಒಡ್ಡಿದ್ದ.

ಸಲಾವುದೀನ್ ನನ್ನು ಜಾಗತಿಕ ಉಗ್ರ ಎಂದು ಘೋಷಣೆ ಮಾಡುವ ಮೂಲಕ ಡೊನಾಲ್ಡ್‌ ಟ್ರಂಪ್ ಆಡಳಿತ ಭಯೋತ್ಪಾದನೆ ವಿರುದ್ಧ ಕಠಿಣ ನಿಲುವು ತಾಳಿರುವ ಸಂದೇಶ ರವಾನಿಸಿದೆ.

English summary
A few hours before Prime Minister Narendra Modi meet President Donald Trump at the White House, the US Department of State declared Syed Salahuddin, chief of the terrorist group Hizb-ul-Mujahideen, a Specially Designated Global Terrorist. Syed Salahuddin,71,has been operating out of Pakistan-occupied Kashmir.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X