• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪೌರುಷಕ್ಕಾಗಿ ಎತ್ತಿನ ವೃಷಣದ ಸಾರ ಸೇವಿಸುತ್ತಿದ್ದ ಹಿಟ್ಲರ್

|

ಬರ್ಲಿನ್, ಅ. 16: ಯಹೂದಿಗಳಿಗೆ ಮೃತ್ಯೂರೂಪಿಯಾಗಿ ವಿಶ್ವವನ್ನೇ ನಡುಗಿಸಿದ್ದ ಸರ್ವಾಧಿಕಾರಿ ಹಿಟ್ಲರ್ ಮುಂಗೋಪಿ, ಕ್ರೂರಿ, ಮತಾಂಧ, ಸ್ವಾರ್ಥಿಯಾಗಿದ್ದ ಎಂಬ ಸಂಗತಿಗಳ ಜತೆಗೆ ಈಗ ಹೊಸದೊಂದಿಷ್ಟು ರಹಸ್ಯ ಸಂಗತಿಗಳು ಸೇರಿಕೊಂಡಿದೆ. ಅಡಾಲ್ಫ್ ಹಿಟ್ಲರ್ ಒಬ್ಬ ಮಾದಕ ವ್ಯಸನಿಯಾಗಿದ್ದ ಜತೆಗೆ ಪೌರುಷ ಹೆಚ್ಚಿಸಿಕೊಳ್ಳಲು ಕೃತಕ ಕ್ರಮ ಅನುಸರಿಸುತ್ತಿದ್ದನಂತೆ.

ಹೌದು ಇಂಥದ್ದೊಂದು ಸಂಗತಿಯನ್ನು ಡಾಕ್ಯುಮೆಂಟರಿಯೊಂದು ಬಹಿರಂಗ ಮಾಡಿದೆ. ನಾಜಿ ನಾಯಕ ಮಾದಕ ದ್ರವ್ಯಗಳಿಗೆ ದಾಸನಾಗಿದ್ದ ಎಂದು ಹೇಳಿದೆ.[ಮೊದಲನೇ ಮಹಾಯುದ್ಧದ ಜನ್ಮ ಶತಮಾನೋತ್ಸವ !]

ಹಿಟ್ಲರ್ ತನ್ನ ಕಾಮ ಶಕ್ತಿ ಹೆಚ್ಚಿಸಿಕೊಳ್ಳಲು ಎತ್ತಿನ ವೃಷಣದ ಸಾರವನ್ನು ಸೇವಿಸುತ್ತಿದ್ದ. ಹೊಟ್ಟೆ ನೋವು, ನಿದ್ರಾಹೀನತೆಯಿಂದ ಸದಾ ಬಳಲುತ್ತಿದ್ದ ನಾಜಿ ನಾಯಕ ಮಾನಸಿಕ ಗೊಂದಲಗಳಿಂದ ತೊಳಲಾಡುತ್ತಿದ್ದ ಎಂಬ ಸಂಗತಿ ಬಹಿರಂಗವಾಗಿದೆ.

ಬ್ರಿಟಿಷ್ ವಾಹಿನಿಯೊಂದರಲ್ಲಿ ಪ್ರಸಾರವಾದ ಕಾರ್ಯಕ್ರಮ ಹಿಟ್ಲರ್ ಜೀವನವನ್ನು ವಿಭಿನ್ನವಾಗಿ ಚಿತ್ರಿಸಿದೆ. ರಹಸ್ಯವಾಗಿದ್ದ ಆತನ ಮಾದಕ ದೃವ್ಯ ಸೇವನೆ ಚಟವೂ ಬಹಿರಂಗವಾಗಿದೆ. ಅಮೆರಿಕದ ಸೇನಾ ಕಡತವೊಂದರ ದಾಖಲೆ ಆಧರಿಸಿ ಡಾಕ್ಯುಮೆಂಟರಿ ಸಿದ್ಧಮಾಡಲಾಗಿದೆ. 74 ಬಗೆಯ ಮಾದಕ ದ್ರವ್ಯಗಳನ್ನು ಸೇರಿಸಿದ್ದ ಪಾನೀಯವೊಂದನ್ನು ನಾಜಿ ನಾಯಕ ಸೇವಿಸುತ್ತಿದ್ದ ಎಂದು ಹೇಳಿದೆ.[ಬೆಂಗಳೂರಿನಲ್ಲಿ ಭಾರೀ ಪ್ರಮಾಣದ ಓಪಿಯಂ ವಶ]

ಅಷ್ಟಕ್ಕೂ ಹಿಟ್ಲರ್‌ ಸೇವಿಸುತ್ತಿದ್ದುದು ಏನು?

ಹಿಟ್ಲರ್‌ ಸೇವಿಸುತ್ತಿದ್ದ ಮಾದಕ ದೃವ್ಯ ಇವತ್ತಿನ 'ಕ್ರಸ್ಟಲ್ ಮೆಂಥ್'ಗೆ ಹೋಲಿಕೆಯಾಗುತ್ತಿತ್ತು. ಯುದ್ದ ಕಾಲದಲ್ಲಿ ಸೈನಿಕರಿಗೆ ಆರೈಕೆ ಮಾಡಲು ಬಳಸುತ್ತಿದ್ದ ಔಷಧಗಳ ಬೇರೆ ರೂಪವೇ ಹಿಟ್ಲರ್ ಗೆ ಅಮಲು ಪದಾರ್ಥವಾಗಿತ್ತು. ಜರ್ಮನಿಯಲ್ಲಿಯೇ ಸಂಗ್ರಹಣೆ ಮಾಡಿರುತ್ತಿದ್ದ ಔಷಧಗಳನ್ನು ಹಿಟ್ಲರ್ ತನ್ನ ವ್ಯಸನಕ್ಕೂ ಬಳಸಿಕೊಳ್ಳುತ್ತಿದ್ದ. ಹಿಟ್ಲರ್ ನ ಅನಧಿಕೃತ ವೈದ್ಯ ಥಿಯೋಡರ್ ಮಾರ್ ವೆಲ್ ಮಾದಕ ದ್ರವ್ಯ ತೆಗೆದುಕೊಳ್ಳುವಂತೆ ಸಲಹೆ ನೀಡಿದ್ದ ಎಂದು ಸೇನಾ ಇಲಾಖೆಯ ಕಡತಗಳು ಹೇಳಿವೆ.

ಹಿಟ್ಲರ್ ಯುದ್ಧ ನಡೆಯುತ್ತಿದ್ದ ಜಾಗಕ್ಕೆ ಪತ್ರ ಬರೆದು ತನಗೆ ಬೇಕಾದ ಔಷಧ(ಮಾದಕ ವಸ್ತು) ಕಳಿಸಿಕೊಡುವಂತೆ ಕೇಳುತ್ತಿದ್ದ. ಕಳಿಸದಿದ್ದರೆ ನಾನು ಸಂಗ್ರಹಿಸಿ ಇಟ್ಟುಕೊಳ್ಳಬೇಕಾಗುತ್ತದೆ. ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿ ಎನ್ನುತ್ತಿದ್ದ ಎಂದು ಜರ್ಮನಿಯ ಪತ್ರಿಕೆಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಹಿತ್ಯಕ್ಕೆ ನೊಬೆಲ್ ಪಡೆದ ಮಾಜಿ ಸೈನಿಕ ಹೇನ್ರಿಚ್ ಬೌಲ್ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
A new documentary on the life of German Nazi leader Adolf Hitler reveals that Führer was a "drug addict". The documentary, to be aired this weekend by Britain's Channel 4, finds that autocrat, who engineered the infamous genocide, had a "hidden drug habit."

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more