ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಿವಾಳಿಯಾಗಿರುವ ಗ್ರೀಸ್ ದೇಶದ ಗತಕಾಲದ ಇತಿಹಾಸ

By ರಂಗಸ್ವಾಮಿ ಮೂಕನಹಳ್ಳಿ
|
Google Oneindia Kannada News

ಗ್ರೀಸ್ ಎಂದ ತಕ್ಷಣ ಮನಸ್ಸಿಗೆ ಬರುವುದು ಅದೊಂದು ದಿವಾಳಿ ದೇಶ , ಬ್ಯಾಂಕಿಂಗ್ ವ್ಯವಸ್ಥೆ ಕುಸಿತ , ಶೇಕಡಾ 50ರಷ್ಟು ನಿರುದ್ಯೋಗ ಹೀಗೆ ಪಟ್ಟಿ ಬೆಳೆಯುತ್ತಾ ಹೋಗುತ್ತೆ.

ಅದು ಇಂದಿಗೆ ನಿಜ ಕೂಡ , ಹಾಗಾದರೆ ಗ್ರೀಸ್ ಯಾವಾಗಲೂ ಹೀಗೆ ಇತ್ತಾ? ಗತಕಾಲದಲ್ಲಿ ಮೆರೆದ ಗ್ರೀಸ್ ಇತಿಹಾಸದ ಪುಟವನ್ನು ಹಾಗೇ ಒಮ್ಮೆ ತಿರುವಿ ಹಾಕೋಣ ಬನ್ನಿ .

ಗ್ರೀಸ್ ಸ್ವರ್ಣಯುಗ : 800 (ಕ್ರಿ.ಪೂ)- 480 (ಕ್ರಿ.ಪೂ)

ಸ್ವರ್ಣಯುಗ ಎಂದರೆ ಜನ ಶಾಂತಿ , ಸುಖ , ನೆಮ್ಮದಿ ಹಾಗೂ ಸಮೃದ್ದಿಯಿಂದ ಜೀವಿಸುವುದು , ಆಹಾರಕ್ಕಾಗಿ ಜನ ದುಡಿಯುವ ಅವಶ್ಯಕತೆ ಇಲ್ಲದೇ ಇರುವುದು, ಕಲೆ ಸಾಹಿತ್ಯ , ವಿಜ್ಞಾನ ಅಭಿವೃದ್ದಿ ಹೊಂದಿ ನಾಗರೀಕತೆ ನಿಜ ಅರ್ಥದಲ್ಲಿ ಸಮಾಜದಲ್ಲಿ ನೆಲೆಯೂರುವುದು. (ದಯನೀಯ ಸ್ಥಿತಿಗೆ ಬಂದು ನಿಂತ ಗ್ರೀಸ್ ಕಥೆ)

ಕ್ರಿಸ್ತ ಪೂರ್ವ 776ರಲ್ಲಿ ಒಲಿಂಪಿಕ್ಸ್ ಗೇಮ್ಸ್ ಪ್ರಥಮವಾಗಿ ಶುರುವಾಯ್ತು, ಸರಿ ಸುಮಾರು ಕ್ರಿ.ಪೂ. 630ರ ಹೊತ್ತಿಗೆ ಜನಸಂಖ್ಯೆ ನಿಯಂತ್ರಣದ ಬಗ್ಗೆ ಶಿಕ್ಷಣ ನೀಡುವ ಮಟ್ಟಕ್ಕೆ ಗ್ರೀಕ್ ನಾಗರೀಕತೆ ಬೆಳೆದಿತ್ತು .

621ರಲ್ಲಿ ತಪ್ಪಿಗೆ ಶಿಕ್ಷೆ ವಿಧಿಸುವ , ಯಾವ ತಪ್ಪಿಗೆ ಯಾವ ಶಿಕ್ಷೆ ಎನ್ನುವ ಕಾನೂನು ಜಾರಿಗೆ ಬಂದಿತ್ತು . ಹೀಗೆ ಇಂದು ನಾವು ಸೈಂಟಿಫಿಕ್ ಎನ್ನುವ ಎಲ್ಲಾ ಮಜಲುಗಳನ್ನು ಗ್ರೀಕರು ಕ್ರಿಸ್ತ ಪೂರ್ವವೇ ಅಳವಡಿಸಿಕೊಂಡಿದ್ದರು ಎನ್ನುವುದಕ್ಕೆ ಪುರಾವೆಗಳಿವೆ.

ಸಾಕ್ರಟೀಸ್ , ಪ್ಲೇಟೋ , ಅರಿಸ್ಟಾಟಲ್ ರಂತಹ ದಾರ್ಶನಿಕರು , Aeschylus, Sophocles, Euripides, Aristophanes ರಂತಹ ಶ್ರೇಷ್ಠ ನಾಟಕರರು , ಪಿಂದರ್ , ಹೋಮರ್ , ಸಪ್ಫೊರಂತ ಕವಿಗಳು , Thucydides ರಂತಹ ಇತಿಹಾಸಕಾರರು , ಅರ್ಕಿಮಿಡಿಸ್, Pythagoras ರಂತಹ ಮಹಾನ್ ವಿಜ್ಞಾನಿ ಗಳನ್ನೂ ಹಾಗೂ ಅಲೆಕ್ಸಾಂಡರ್ , Demosthenes, Draco, Solon ರಂತಹ ಮಹಾನ್ ನೇತಾರರನ್ನು ಗ್ರೀಸ್ ಜಗತ್ತಿಗೆ ನೀಡಿದೆ

ಗ್ರೀಕರು ಇಂದಿನ ಜಗತ್ತಿಗೆ ನೀಡಿದ ಐದು ಮಹಾನ್ ಕೊಡುಗೆಗಳ ಏನು? ಇಸವಿ 1800ರಿಂದ 2000ರವರೆಗೆ ಗ್ರೀಸ್ ಹೇಗಿತ್ತು? ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಒಲಿಂಪಿಕ್ಸ್

ಒಲಿಂಪಿಕ್ಸ್

ಪ್ರತಿ ನಾಲ್ಕು ವರ್ಷಕ್ಕೆ ಒಮ್ಮೆ ಎದುರಾಳಿ ನಗರಗಳು , ರಾಜ್ಯಗಳು ಆಟಗಳಲ್ಲಿ ಪಾಲ್ಗೊಳ್ಳ ತೊಡಗಿದವು , ಉದ್ದೇಶ ಕಾದಾಡುವ ಬದಲು ಆಟದಲ್ಲಿ ಹೊರಡುವುದು , ಗೆದ್ದವರ ಪ್ರತಿಷ್ಟೆ , ಗೌರವಗಳು ಹೆಚ್ಚುತಿದ್ದವು ,ಹೀಗಾಗಿ ಎಲ್ಲರೂ ತಮ್ಮ ಅತ್ಯುತ್ತಮ ಕ್ರೀಡಾಳುಗಳನ್ನು ಕಳುಹಿಸತೊಡಗಿದರು , ಗ್ರೀಸ್ ನ ಅಕ್ಕ ಪಕ್ಕಕ್ಕೆ ಸೀಮಿತವಾಗಿದ್ದ ಈ ಕಾರ್ಯಕ್ರಮವನ್ನು ವಿಶ್ವಕ್ಕೆ ತೆರೆದಿಟ್ಟದ್ದು 1896ರಲ್ಲಿ , ಅಂದಿನಿಂದ ಇಂದಿನವರೆಗೂ ಅನೂಚಾನವಾಗಿ ನೆಡೆದು ಬಂದಿದೆ , ಓಲಂಪಿಕ್ಸ್ ನಡೆಸಲು ಜಗತ್ತಿನ ಎಲ್ಲಾ ದೇಶಗಳು ಮುಗಿಬೀಳುತ್ತವೆ , ಹಾಗೂ ಒಲಿಂಪಿಕ್ಸ್ ನಮ್ಮ ದೇಶದಲ್ಲಿ ನಡೆದಿತ್ತು ಅಥವಾ ನಡೆಯುತ್ತೆ ಎನ್ನುವುದು ಪ್ರತಿಷ್ಟೆ , ಗೌರವದ ವಿಷಯವಾಗಿದೆ .

ಪುರಾಣಗಳು

ಪುರಾಣಗಳು

ಗ್ರೀಕ್ ದೇವತೆಗಳು , ಗ್ರೀಕ್ ಸೂಪರ್ ಹೀರೋ ಪರಿಕಲ್ಪನೆ ಇಂದಿಗೂ ಅನೇಕ ಕಾಮಿಕ್ ರಚನೆಗೆ ಕಾರಣವಾಗಿದೆ , ಗ್ರೀಕರು , ಹಿಂದೂ ಗಳಂತೆ ಅನೇಕ ದೇವರಲ್ಲಿ ವಿಶ್ವಾಸ ಇಟ್ಟವರು. ಅನೇಕ ಗ್ರೀಕ್ ಪುರಾಣ ಕತೆಗಳು ಕಪೋಕಲ್ಪಿತ ಎನ್ನಿಸುವ ಹಾಗಿದೆ , ಅದರೂ ಅಂದಿನ ಜನರ ಕಲ್ಪನಾಶಕ್ತಿ ಎಷ್ಟಿತ್ತು ಎನ್ನುವುದರ ಉದಾಹರೆಣೆಯಂತೆ ಇಂದಿಗೂ ಜನರ ಸೆಳೆಯುವಲ್ಲಿ ಯಶಸ್ವಿಯಾಗಿವೆ .

ನಾಟಕ , ಕಲೆ

ನಾಟಕ , ಕಲೆ

ಮನರಂಜನೆಗಾಗಿ ನಾಟಕ ಬರೆದು , ಪಾತ್ರಧಾರಿಗಳಿಗೆ ಕಲಿಸಿ , ನಾಟಕ ಆಡಿಸುವುದು ಗ್ರೀಕರಿಗೆ ಕ್ರಿಸ್ತಪೂರ್ವ ನಾಲ್ಕನೇ ಶತಮಾನದ ಹೊತ್ತಿಗೆ ಸಿದ್ದಿಸಿತ್ತು , ಅವುಗಳಲ್ಲೂ ಹಾಸ್ಯ , ದುಖಾಂತ್ಯ , ಸುಖಾಂತ್ಯ ಹೀಗೆ ಹಲವು ಪ್ರಾಕಾರಗಳು ಇದ್ದವು.

ಹೊಸ ನಮೂನೆ , ಶೈಲಿ

ಹೊಸ ನಮೂನೆ , ಶೈಲಿ

ಹೊಸ ನಮೂನೆ , ಶೈಲಿ, ಬಟ್ಟೆ ಇರಬಹುದು , ಚಿತ್ರ ರಚನೆ ಇರಬಹುದು , ಕಟ್ಟಡಗಳಿರಬಹುದು , ಗ್ರೀಕರು ಸದಾ ಹೊಸತು ಕೊಡುವುದರಲ್ಲಿ ಸಿದ್ದ ಹಸ್ತರು, ಯೂರೋಪಿನ ಬಹುತೇಕ ಗೊತಿಕ್ ಶೈಲಿಯ ಕಟ್ಟಡಗಳು ಇವರಿಂದ ಪ್ರೇರಿತ , ರೋಮನ್ನರು ಗ್ರೀಕ್ ಮೇಲೆ ಆಕ್ರಮಣ ಮಾಡಿದ ನಂತರ ಇವು ಇನ್ನೂ ಹೆಚ್ಚು ಅಭಿವೃದ್ದಿ ಹೊಂದಿದವು.

ಪ್ರಜಾಪ್ರಭುತ್ವ

ಪ್ರಜಾಪ್ರಭುತ್ವ

ಮೇಲೆ ಹೇಳಿದ ಎಲ್ಲಾ ಕೊಡುಗೆಗಳಿಗಿಂತ ಹೆಚ್ಚು ಪ್ರಸ್ತುತ ಇದು , ನಾವು ಇಂದು ಪ್ರಜಾಪ್ರಭುತ್ವ ಅನುಭವಿಸಲು ಗ್ರೀಕರು ಅಪರೋಕ್ಷವಾಗಿ ಕಾರಣ, ಡೆಮಾಕ್ರಸಿ ಎನ್ನುವುದು ಗ್ರೀಕ್ ಪದ , ಪೀಪಲ್ ಪವರ್ , ಜನತೆಗೆ ಅಧಿಕಾರ ಎನ್ನುವ ಪರಿಕಲ್ಪನೆ ಕ್ರಿಸ್ತಪೂರ್ವ ಐದನೇ ಶತಮಾನದಲ್ಲಿ ಇತ್ತು , ಅಥೆನ್ಸ್ ಜಗತ್ತಿನ ಮೊಟ್ಟ ಮೊದಲ ಡೆಮಾಕ್ರೆಟಿಕ್ ನೇಶನ್ ಎನ್ನುವ ಹೆಗ್ಗಳಿಕೆ ಪಡೆದಿದೆ.

1800ರಿಂದ 2000ರವರೆಗೆ ಗ್ರೀಸ್ ಹೇಗಿತ್ತು

1800ರಿಂದ 2000ರವರೆಗೆ ಗ್ರೀಸ್ ಹೇಗಿತ್ತು

ಗ್ರೀಸ್ ಇತಿಹಾಸದ ಪುಟಗಳು ಯುದ್ದಗಳಿಂದ ತುಂಬಿದೆ. ಬ್ರಿಟಿಷರು , ಫ್ರೆಂಚರು , ಹೀಗೆ ಇತರೆ ಯೂರೋಪಿನ ದೇಶಗಳೊಂದಿಗೆ ಅನೇಕ ಯುದ್ದಗಳಾಗಿವೆ 1800ರಿಂದ 1950ರವರೆಗೆ ಹೇಳಿಕೊಳ್ಳುವ ಕೊಡುಗೆ ಏನೂ ಇಲ್ಲ. ಒಮ್ಮೆ ಉಚ್ಚ್ರಾಯ ಸ್ಥಿತಿಗೆ ತಲುಪಿದ ಯಾವುದೇ ನಾಗರೀಕತೆ ಮತ್ತೆ ಉಚ್ಚ್ರಾಯ ಸ್ಥಿತಿ ತಲುಪಲು ಇನ್ನೆಷ್ಟು ಶತಮಾನಗಳು ಬೇಕೋ ? ಕ್ರಿ.ಪೂ. ಹನ್ನೊಂದನೇ ಶತಮಾನದಲ್ಲಿ ದ್ರಾಚ್ಮಎನ್ನುವ ಲೋಹದ ವಿನಿಮಯ ಮಾಧ್ಯಮ ಬಳೆಕೆಗೆ ಬಂತು , ತೂಕದ ಆಧಾರದ ಮೇಲೆ ಮೌಲ್ಯ ಕಟ್ಟಲಾಗುತ್ತಿತ್ತು , ದಿನ ಕಳೆದಂತೆ ರೂಪ , ಮೌಲ್ಯ ಬದಲಾಯಿಸಿಕೊಂಡು ನೋಟಿನ ರೂಪ ಪಡೆಯಿತು .

ಯೂರೋ ದರ

ಯೂರೋ ದರ

19.06.2000ರಲ್ಲಿ ದ್ರಾಚ್ಮದ ಯುರೋ ವಿನಿಮಯ ದರ ನಿಗದಿಪಡಿಸಲಾಯಿತು . 1981ರಲ್ಲಿ ಯೂರೋಪಿಯನ್ ಯೂನಿಯನ್ ಸೇರಿದ ಗ್ರೀಸ್ , ತನ್ನ ಕರೆನ್ಸಿ ದ್ರಾಚ್ಮ ಬಿಟ್ಟು ಯುರೋವನ್ನು ದತ್ತು ಪಡೆದದ್ದು 2002ರಲ್ಲಿ , ಅಲ್ಲಿಯ ತನಕ ಗ್ರೀಸ್ ಆರಕ್ಕೆ ಎರದೆ, ಮೂರಕ್ಕೆಇಳಿಯದೆ ನೆಡೆದು ಬಂತು .

ಜನವರಿ 2002ರಿಂದ 2009

ಜನವರಿ 2002ರಿಂದ 2009

ಮೇ 18, 2003 ದಂದು , ಮೊದಲ ಬಾರಿ ಗ್ರೀಸ್ ದೇಶದ ಅಥೆನ್ಸ್ ನಗರವನ್ನು ನೋಡಿದಾಗ ,ಗತಕಾಲಕ್ಕೆ ಮರಳಿದ ಅನುಭವ! , ಹೊಸ ಕಟ್ಟಡಗಳ ಜೊತೆಗೆ ಪುರಾತನ ಕಟ್ಟಡಗಳ ಜತನದಿಂದ ಕಾಪಾಡಿಕೊಂಡು ಬಂದಿದ್ದಾರೆ , ನೀವು ನಡೆಯುತ್ತಿರುವ ರಸ್ತೆಯಲ್ಲಿ ಕಾಲಘಟ್ಟದ ಇನ್ನೊಂದು ಭಾಗದಲ್ಲಿ ಅರ್ಕಿಮಿಡಿಸ್, ಪ್ಲೇಟೋ , ಅರಿಸ್ಟಾಟಲ್ ನೆಡೆದಾಡಿದ್ದರು ಎಂದರೆ ಪುಳುಕವಾಗದೆ ಇದ್ದೀತೆ ? ಸ್ಪೇನ್ , ಫ್ರಾನ್ಸ್ , ಜರ್ಮನಿ , ಪೋರ್ಚುಗಲ್ ಎಲ್ಲಾ ಕಡೆ ಇಂಗ್ಲಿಷ್ ಭಾಷೆಯ ಅಕ್ಷರಗಳೆ , ಉಚ್ಚಾರಣೆ ಬದಲಾವಣೆ ಮಾತ್ರ , ಆದರೆ ಗ್ರೀಸ್ ದೇಶದಲ್ಲಿ ಅಕ್ಷರಗಳು ಇರಲಿ , ಅವರು ಆಡುವ ಮಾತಿನಲ್ಲಿ ಕೆಲವು ಪದಗಳನ್ನಾದರು ಗ್ರಹಿಸಲು ಆಗಲಿಲ್ಲ , ಲ್ಯಾಟಿನ್ ಮೂಲದ ಸ್ಪ್ಯಾನಿಷ್ ಭಾಷೆ ಬಲ್ಲ ನಾನು ಗ್ರೀಸ್ ನಲ್ಲಿ ಪೂರ್ಣ ಪ್ರಮಾಣದ ನಿರಕ್ಷರಕುಕ್ಷಿ !

ಆಶ್ಚರ್ಯ ಹುಟ್ಟಿಸಿದ ವಿಷಯ

ಆಶ್ಚರ್ಯ ಹುಟ್ಟಿಸಿದ ವಿಷಯ

ಎಲ್ಲಕ್ಕೂ ಹೆಚ್ಚು ಆಶ್ಚರ್ಯ ಹುಟ್ಟಿಸಿದ ವಿಷಯ ಈ ದೇಶ ಹೇಗೆ ಇಷ್ಟು ಸಮೃದ್ದವಾಗಿದೆ ಎನ್ನುವುದು , ಸಾಮಾನ್ಯವಾಗಿ ಜನ ಬೆಳಿಗ್ಗೆ ಎದ್ದು ಬಿಯರ್ ಹಿಡಿದು ಕುಳಿತರೆ ಒಂದು ತಾಸು ಸುಮ್ಮನೆ ಹೋಗುತ್ತೆ , ವಾಣಿಜ್ಯ , ವ್ಯವಹಾರ ಬೆಳಿಗ್ಗೆ ಹತ್ತರ ನಂತರವೇ , ಬಾರ್ ಒಂದು ಬಿಟ್ಟು ! , ಮಧ್ಯಾಹ್ನ ನಾಲ್ಕು ಅಥವಾ ಐದರ ಹೊತ್ತಿಗೆ ಮತ್ತೆ ಬಾಗಿಲು ಮುಚ್ಚಿ , ಬಾರ್ ನಲ್ಲಿ ಬಿಯರ್ ಸೇವಿಸುತ್ತಾ ಫುಟ್ಬಾಲ್ ನೋಡುತ್ತ ಅಥವಾ ಅದರ ಬಗ್ಗೆ ಮಾತನಾಡುತ್ತಾ ಕಾಲಹರಣ ಮಾಡುತ್ತಾರೆ .

ಮೋಜಿನಲ್ಲಿ ಗ್ರೀಕರ ಸಮ ಯಾರೂ ಇಲ್ಲ

ಮೋಜಿನಲ್ಲಿ ಗ್ರೀಕರ ಸಮ ಯಾರೂ ಇಲ್ಲ

ದಿನ ಕಳೆದಂತೆ ಅಲ್ಲಿನ ಬಗ್ಗೆ ಹೆಚ್ಚಿನ ವಿಷಯ ಗ್ರಹಿಸ ತೊಡಗಿದೆ , 55 ಅಥವಾ 57 ವರ್ಷಕ್ಕೆ ನಿವೃತ್ತಿ ಪಡೆಯಬಹುದು, ಸಾಮಾನ್ಯ ಜನ 80ರ ಆಸುಪಾಸು ಬದುಕುತ್ತಾರೆ , ದುಡಿಯುವಾಗ ಸರಕಾರದ ಪಿಂಚಣಿ ಯೋಜನೆಗೆ (ಸೋಶಿಯಲ್ ಸೆಕ್ಯೂರಿಟಿ ) ಒಂದಷ್ಟು ಹಣ ಕಟ್ಟಿದರೆ ಮುಗಿಯಿತು , ಉಳಿಸಬೇಕೆಂಬ ದರ್ದು ಯಾರಿಗೂ ಇಲ್ಲ , ಸರಕಾರಿ ಆಸ್ಪತ್ರೆಗಳು ನಮ್ಮ ಖಾಸಗಿ ಆಸ್ಪತ್ರೆಗಳ ಮೀರಿಸುವಂತೆ ಇವೆ . ಒಟ್ಟಿನಲ್ಲಿ ಯೂರೋಪಿನ ಇತರೆ ದೇಶದ ಜನಕ್ಕೆ ಹೋಲಿಸಿದರೆ ಗ್ರೀಕರು ಹೆಚ್ಚು ಐಷಾರಾಮಿ ಜೀವನ ನಡೆಸಿದ್ದಾರೆ , ಜರ್ಮನ್ ಅಥವಾ ಫ್ರೆಂಚರ ಬಳಿ ಗ್ರೀಕರಿಗಿಂತ ಹೆಚ್ಚಿನ ಹಣ ಇದ್ದಿರಬಹುದು ಆದರೆ ಮೋಜಿನಲ್ಲಿ ಗ್ರೀಕರ ಸಮ ಯಾರೂ ಇಲ್ಲ.

English summary
History and Five gift given to world by Debt crisis Greece.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X