ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶತಮಾನಗಳಷ್ಟು ಹಳೆಯ ಗುರುನಾನಕ್ ಅರಮನೆಯ ಅಮೂಲ್ಯ ಕಿಟಕಿ, ಬಾಗಿಲು ಮಾರಿಕೊಂಡ ಪಾಕಿಸ್ತಾನಿಗಳು

|
Google Oneindia Kannada News

ಶತಮಾನಗಳಷ್ಟು ಹಳೆಯ 'ಗುರುನಾನಕ್ ಅರಮನೆ'ಯನ್ನು ದುಷ್ಕರ್ಮಿಗಳ ಗುಂಪು ಭಾಗಶಃ ನಾಶಪಡಿಸಿ, ಪಂಜಾಬ್ ಪ್ರಾಂತ್ಯದಲ್ಲಿ ಇರುವ ಅರಮನೆಯ ಆಮೂಲ್ಯವಾದ ಕಿಟಕಿ- ಬಾಗಿಲುಗಳನ್ನು ಮಾರಾಟ ಮಾಡಲಾಗಿದೆ ಎಂದು ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ನಾಲ್ಕು ಅಂತಸ್ತಿನ ಕಟ್ಟಡದಲ್ಲಿ ಸಿಖ್ ಧರ್ಮ ಸ್ಥಾಪಕ ಗುರು ನಾನಕ್ ರ ಚಿತ್ರಗಳಿದ್ದವು. ಜತೆಗೆ ಹಿಂದೂ ಆಡಳಿತಗಾರರು ಹಾಗೂ ಯುವರಾಜರ ಚಿತ್ರಗಳಿದ್ದವು.

ಲಾಹೋರ್ ನಿಂದ ನೂರು ಕಿ.ಮೀ. ದೂರದಲ್ಲಿ ಇರುವ ನರೋವಲ್ ನಲ್ಲಿ ಈ ಕಟ್ಟಡ ಇದ್ದು, ಒಟ್ಟು ಹದಿನಾರು ಕೋಣೆಗಳಿದ್ದವು. ಅದರಲ್ಲಿ ಪ್ರತಿಯೊಂದಕ್ಕೂ ಸೂಕ್ಷ್ಮವಾದ ಮೂರು ಬಾಗಿಲು ಹಾಗೂ ಕನಿಷ್ಠ ನಾಲ್ಕು ಬೆಳಕಿಂಡಿಗಳಿದ್ದವು ಎಂದು ತಿಳಿಸಲಾಗಿದೆ. ಸ್ಥಳೀಯರ ಗುಂಪು ಕಟ್ಟಡವನ್ನು ಭಾಗಶಃ ನಾಶ ಮಾಡಿದ್ದಷ್ಟೇ ಅಲ್ಲದೆ ಅದರ ಅಮೂಲ್ಯವಾದ ಕಿಟಕಿ, ಬಾಗಿಲು, ಬೆಳಕಿಂಡಿಗಳನ್ನು ಮಾರಿಕೊಂಡಿದ್ದಾರೆ.

ವಿಡಿಯೋ: ಮೋದಿ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಹೆದರಿದ ಪಾಕಿಸ್ತಾನವಿಡಿಯೋ: ಮೋದಿ ಮಾತನ್ನು ತಪ್ಪಾಗಿ ಅರ್ಥೈಸಿಕೊಂಡು ಹೆದರಿದ ಪಾಕಿಸ್ತಾನ

ಸ್ಥಳೀಯರೊಬ್ಬರು ಈ ಬಗ್ಗೆ ಮಾತನಾಡಿ, ಈ ಹಳೇ ಕಟ್ಟಡವನ್ನು ಗುರುನಾನಕ್ ಅರಮನೆ ಎಂದು ಕರೆಯಲಾಗುತ್ತಿತ್ತು. ನಾವು ಅದನ್ನು ಮಹಲನ್ ಎನ್ನುತ್ತಿದ್ದೆವು. ಭಾರತವೂ ಸೇರಿದ ಹಾಗೆ ಜಗತ್ತಿನಾದ್ಯಂತ ಇರುವ ಸಿಖ್ಖರು ಈ ಕಟ್ಟಡಕ್ಕೆ ಭೇಟಿ ನೀಡುತ್ತಿದ್ದರು. ಇಲ್ಲಿ ಮಾತನಾಡಿಕೊಳ್ಳುವ ಪ್ರಕಾರ, ಯಾರೋ ಪ್ರಭಾವಿಗಳೇ ಇದನ್ನು ಕೆಡವಿದ್ದಾರೆ. ಯಾವುದೇ ಅಧಿಕಾರಿ ಏನೂ ಕ್ರಮ ಕೈಗೊಂಡಿಲ್ಲ, ಯಾರೂ ಇಲ್ಲಿಗೆ ಬಂದಿಲ್ಲ ಎಂದಿದ್ದಾರೆ.

Historical Guru Nanak palace in Pakistan partly demolished by vandals

ಕಟ್ಟಡದ ಮೂರು ಅಂತಸ್ತು ಈಗಾಗಲೇ ಕೆಡವಿ, ಹೊಸ ಮನೆಗಳನ್ನು ನಿರ್ಮಿಸಲಾಗಿದೆ. ಪ್ರಭಾವಿಗಳಾದವರು ಕಟ್ಟಡ ಕೆಡವಿ ಅದರ ಕಿಟಕಿ, ಬಾಗಿಲು, ಬೆಳಕಿಂಡಿ ಹಾಗೂ ಮರಗಳನ್ನು ದುಬಾರಿ ಬೆಲೆಗೆ ಮಾರಿಕೊಂಡಿದ್ದಾರೆ ಎಂದು ಮತ್ತೊಬ್ಬ ಸ್ಥಳೀಯರು ತಿಳಿಸಿದ್ದಾರೆ.

ಈ ಕಟ್ಟಡ ನಿರ್ಮಾಣದಲ್ಲಿ ಹಳೆ ಇಟ್ಟಿಗೆ, ಮರಳು, ಸುಣ್ಣದ ಕಲ್ಲು ಬಳಸಲಾಗಿದೆ. ಕೋಣೆಗಳಲ್ಲಿ ದೊಡ್ಡ ಹಾಗೂ ಅಗಲವಾದ ಗೋಡೆಗಳಿವೆ. ಮರದ ಬಾಗಿಲುಗಳ ಮೇಲೆ ಹೂವಿನ ಸುಂದರ ಕೆತ್ತನೆಗಳಿವೆ. ಎಲ್ಲ ಕೋಣೆಗಳಿಗೂ ಧಾರಾಳವಾಗಿ ಗಾಳಿ ಬರುವಂತಿದ್ದು, ಸಣ್ಣ ದೀಪಗಳು ಅದರ ಬಳಿ ಇವೆ. ಛಾವಣಿಗೆ ದುಬಾರಿಯಾದ ಮರಗಳನ್ನು ಬಳಸಲಾಗಿದೆ. ಅಂದಹಾಗೆ ಈ ಕಟ್ಟಡ ಕೆಡವಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಪ್ರಧಾನಿ ಇಮ್ರಾನ್ ಖಾನ್ ಗೆ ಮನವಿ ಮಾಡಿದ್ದಾರೆ.

Historical Guru Nanak palace in Pakistan partly demolished by vandals

ಈ ಅರಮನೆ ಯಾರ ಸುಪರ್ದಿಗೆ ಸೇರುತ್ತದೆ? ಯಾರ ಬಳಿ ಇದರ ಮಾಲೀಕತ್ವ ಇದೆ? ಪಾಕಿಸ್ತಾನದಲ್ಲಿ ಯಾವ ಇಲಾಖೆಯು ಈ ಕಟ್ಟಡದ ಉಸ್ತುವಾರಿ ನೋಡಿಕೊಳ್ಳುತ್ತಿದೆ ಇತ್ಯಾದಿ ಯಾವ ಮಾಹಿತಿಯೂ ಸದ್ಯಕ್ಕೆ ಇಲ್ಲ.

English summary
Historical Guru Nanak palace in Pakistan partly demolished by vandals and sold valuable door, window and ventilation. Here is the details of the story.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X