ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿರೋಶಿಮಾ ದಿನ ಆಚರಣೆ: 75 ವರ್ಷಗಳ ಹಿಂದಿನ ಕರಾಳ ಅಧ್ಯಾಯ

|
Google Oneindia Kannada News

ಟೋಕಿಯೋ, ಆಗಸ್ಟ್‌ 06: 75 ವರ್ಷಗಳ ಹಿಂದೆ ಜಪಾನ್ 1945 ರಲ್ಲಿ ವಿಶ್ವದಲ್ಲೇ ಅತ್ಯಂತ ಕರಾಳ ಘಟನೆಗೆ ಸಾಕ್ಷಿಯಾಗಿತ್ತು. ಈ ದಿನ, ಜಪಾನಿನ ನಗರಗಳಾದ ಹಿರೋಷಿಮಾ ಮತ್ತು ನಾಗಾಸಾಕಿಯ ಮೇಲೆ ಅಮೆರಿಕಾ ಪರಮಾಣು ಬಾಂಬ್‌ಗಳನ್ನು ಬೀಳಿಸಿತು. ಈ ವಿನಾಶದ ಬಳಿಕ ಜಪಾನ್‌ ಬೇಷರತ್ತಾದ ಶರಣಾಗತಿಗೆ ಕಾರಣವಾಯಿತು.

ಜಪಾನ್‌ ಮೇಲೆ ಹಾಕಿದ ಎರಡು ಪರಮಾಣು ಬಾಂಬ್‌ಗಳ ವಿನಾಶದಿಂದಾಗಿ ಲಕ್ಷಾಂತರ ಸಂಖ್ಯೆಯಲ್ಲಿ ಜನರು ಪ್ರಾಣ ಕಳೆದುಕೊಂಡರು. ಹೀಗೆ ಆ ದಿನದಂದು ಪ್ರಾಣ ಕಳೆದುಕೊಂಡವರ ನೆನಪಿಗಾಗಿ ಆಗಸ್ಟ್ 6ರಂದು ವಾರ್ಷಿಕವಾಗಿ ಹಿರೋಷಿಮಾ ದಿನವೆಂದು ಗುರುತಿಸಲಾಗುತ್ತದೆ.

ಹಿರೋಶಿಮಾವನ್ನು ಚಿದ್ರಗೊಳಿಸಿದ ಲಿಟಲ್ ಬಾಯ್

ಹಿರೋಶಿಮಾವನ್ನು ಚಿದ್ರಗೊಳಿಸಿದ ಲಿಟಲ್ ಬಾಯ್

1945ರ ಆಗಸ್ಟ್​ 6ರಂದು ಹಿರೋಶಿಮಾ ಮೇಲೆ ಅಮೆರಿಕ ಅಣುಬಾಂಬ್ ದಾಳಿ ನಡೆಸಿತ್ತು. ಮಾರ್ಪಡಿಸಿದ ಬಿ -29 ಯುರೋನಿಯಂ ಗನ್ ಮಾದರಿಯ ಬಾಂಬ್ ಅನ್ನು "ಲಿಟಲ್ ಬಾಯ್" ಎಂಬ ಹೆಸರಿನಿಂದ ಹಿರೋಷಿಮಾದಲ್ಲಿ ಬ್ರಿಟಿಷರ ಒಪ್ಪಿಗೆಯೊಂದಿಗೆ ಬೀಳಿಸಿತು. ಇದರಿಂದಾಗಿ ಹಿರೋಶಿಮಾದಲ್ಲಿ 1.40 ಲಕ್ಷ ಜನರು ಸಾವನ್ನಪ್ಪಿದ್ದರು. ಅಂದರೆ ಹಿರೋಶಿಮಾದ ಜನಸಂಖ್ಯೆಯ ಶೇ. 40ರಷ್ಟು ಜನರು ಈ ದಾಳಿಯನ್ನು ಪ್ರಾಣ ಕಳೆದುಕೊಂಡರು.

ಬೈರುತ್ ಸ್ಫೋಟ: 113 ಮಂದಿ ಸಾವು, ಅದೆಷ್ಟೋ ಮಂದಿ ಪತ್ತೆಯಿಲ್ಲ!ಬೈರುತ್ ಸ್ಫೋಟ: 113 ಮಂದಿ ಸಾವು, ಅದೆಷ್ಟೋ ಮಂದಿ ಪತ್ತೆಯಿಲ್ಲ!

ಈ ಬಾಂಬ್ ದಾಳಿ ಬಳಿಕವೂ ಜಪಾನ್‌ನಿಂದ ತಕ್ಷಣದ ಶರಣಾಗತಿ ಬರದಿದ್ದಾಗ, "ಫ್ಯಾಟ್ ಮ್ಯಾನ್" ಎಂದು ಕರೆಯಲ್ಪಡುವ ಮತ್ತೊಂದು ಬಾಂಬ್ ಅನ್ನು ಮೂರು ದಿನಗಳ ನಂತರ ನಾಗಸಾಕಿಯ ಮೇಲೆ ಹಾಕಲಾಯಿತು. ಈ ವಿನಾನಕಾರಿ ದಾಳಿಯಲ್ಲಿ 2,26,000 ಜನರು ಸಾವನ್ನಪ್ಪಿದರು ಮತ್ತು ಇಡೀ ನಗರವೇ ನೆಲಸಮಗೊಂಡಿತು.

ಹಿರೋಶಿಮಾ ಶೇಕಡಾ 69 ರಷ್ಟು ಕಟ್ಟಡಗಳು ನೆಲಸಮ

ಹಿರೋಶಿಮಾ ಶೇಕಡಾ 69 ರಷ್ಟು ಕಟ್ಟಡಗಳು ನೆಲಸಮ

ಹಿರೋಷಿಮಾದಲ್ಲಿ ನಡೆದ ಸ್ಫೋಟದ ನಂತರ ತಕ್ಷಣವೇ ಸುಮಾರು 70,000 ರಿಂದ 80,000 ಜನರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿತ್ತು. ತಿಂಗಳುಗಳು ಮತ್ತು ವರ್ಷಗಳ ನಂತರದ ಬಾಂಬ್ ಸ್ಫೋಟದ ಪರಿಣಾಮದಿಂದ ಎರಡೂ ನಗರಗಳಲ್ಲಿ ಹೆಚ್ಚಿನ ಜನರು ಪ್ರಾಣ ಕಳೆದುಕೊಂಡರು. ಜಪಾನಿನ ಅಧಿಕೃತ ವರದಿಯ ಪ್ರಕಾರ ಹಿರೋಷಿಮಾದಲ್ಲಿನ ಶೇಕಡಾ 69 ರಷ್ಟು ಕಟ್ಟಡಗಳು ಆ ದಿನ ನಾಶವಾಗಿವೆ.

ವಿನಾಶದ ನಂತರ ಮತ್ತಷ್ಟು ಪರಿಣಾಮ

ವಿನಾಶದ ನಂತರ ಮತ್ತಷ್ಟು ಪರಿಣಾಮ

ಜಪಾನಿನ ಪ್ರಜೆಗಳು ಈ ಬಾಂಬ್ ದಾಳಿ ನಡೆದು ಸಾಕಷ್ಟು ವರ್ಷಗಳೇ ಕಳೆದರೂ ಇಂದಿಗೂ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಮಟ್ಟದ ವಿಕಿರಣಕ್ಕೆ ಒಡ್ಡಿಕೊಳ್ಳುವುದರಿಂದ ಆರೋಗ್ಯ ಸಮಸ್ಯೆಗಳನ್ನು ಅನುಭವಿಸಿದರು. ಹಿರೋಶಿಮಾ ತನ್ನನ್ನು ಶಾಂತಿ ನಗರವೆಂದು ಮರುಶೋಧಿಸಲು ಪ್ರಯತ್ನಿಸಿತು ಮತ್ತು ಇಂದಿನವರೆಗೂ ವಿಶ್ವದಾದ್ಯಂತ ಪರಮಾಣು ನಿಶ್ಶಸ್ತ್ರೀಕರಣವನ್ನು ಉತ್ತೇಜಿಸುತ್ತಿದೆ.

ಜಪಾನ್‌ನಲ್ಲಿ ಇಂದು ಹಿರೋಶಿಮಾ ದಿನಾಚರಣೆ

ಜಪಾನ್‌ನಲ್ಲಿ ಇಂದು ಹಿರೋಶಿಮಾ ದಿನಾಚರಣೆ

ಜಪಾನ್ ಪ್ರಧಾನಿ ಶಿಂಜೊ ಅಬೆ ಮತ್ತು ಹಿರೋಶಿಮಾ ಮೇಯರ್ ಗುರುವಾರ ಮುಂಜಾನೆ ನಗರದ ಶಾಂತಿ ಉದ್ಯಾನದಲ್ಲಿ ಬಾಂಬ್ ದಾಳಿಯಲ್ಲಿ ಬದುಕುಳಿದವರು ಮತ್ತು ವಂಶಸ್ಥರೊಂದಿಗೆ ಸೇರಿಕೊಂಡರು. ಉದ್ಯಾನವನವು ಸಾಮಾನ್ಯವಾಗಿ ವಾರ್ಷಿಕೋತ್ಸವಕ್ಕಾಗಿ ಸಾವಿರಾರು ಜನರಿಂದ ತುಂಬಿರುತ್ತದೆ, ಆದರೆ ಕೋವಿಡ್ ಸಾಂಕ್ರಾಮಿಕದಿಂದಾಗಿ ಹಾಜರಾತಿಯಲ್ಲಿ ಈ ವರ್ಷ ಗಮನಾರ್ಹವಾಗಿ ಕಡಿಮೆಯಾಗಿದೆ. ಹೆಚ್ಚಿನ ಪಾಲ್ಗೊಳ್ಳುವವರು ಮಾಸ್ಕ್‌ಗಳನ್ನು ಧರಿಸಿದ್ದರು.

English summary
In Memory Of the atomic destruction Japan marks 75th Year Of The atomic destruction.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X