ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಿಂದೂಗಳನ್ನು ಪಾಕಿಸ್ತಾನಕ್ಕೆ ಕರೆ ತರುವೆ: ಇಮ್ರಾನ್ ಖಾನ್

By Mahesh
|
Google Oneindia Kannada News

ಇಸ್ಲಾಮಾಬಾದ್, ಅ.20: ಪಾಕಿಸ್ತಾನದಲ್ಲಿ ನಿರಂತರವಾಗಿ ನಡೆಯುತ್ತಿರುವ ದೌರ್ಜನ್ಯಗಳಿಂದ ನೊಂದು ದೇಶ ತ್ಯಜಿಸಿದ ಹಿಂದೂಗಳನ್ನು ಮತ್ತೆ ಕರೆ ತರುವೆ ಎಂದು ತೆಹ್ರೀಕ್-ಎ-ಇನ್ಸಾಫ್ ಪಕ್ಷದ ಮುಖ್ಯಸ್ಥ, ಮಾಜಿ ಕ್ರಿಕೆಟರ್ ಇಮ್ರಾನ್ ಖಾನ್ ಘೋಷಿಸಿದ್ದಾರೆ. ಅಲ್ಪ ಸಂಖ್ಯಾತ ಹಿಂದೂಗಳ ಓಲೈಕೆಗೆ ಮುಂದಾಗಿರುವ ಇಮ್ರಾನ್, ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಹಿಂದೂಗಳು ಗೌರವಯುತವಾಗಿ ಬದುಕುವ ವಾತಾವರಣ ನಿರ್ಮಾಣ ಮಾಡುವ ಭರವಸೆ ನೀಡಿದ್ದಾರೆ.

ಹಿಂದೂ ಮತ್ತು ಕಲಾಶ್ ಸಮುದಾಯಗಳ ಜನರನ್ನ ಬಲವಂತವಾಗಿ ಇಸ್ಲಾಂಗೆ ಮತಾಂತರ ಮಾಡುತ್ತಿರುವ ಪ್ರಕರಣಗಳನ್ನ ಇಮ್ರಾನ್ ಖಾನ್ ದುರದೃಷ್ಟಕರ ಎಂದು ಬಣ್ಣಿಸಿದ್ದಾರೆ. ಮುಸ್ಲಿಮರು ಸನ್ನಡತೆಯಿಂದ ಧರ್ಮ ಪ್ರಚಾರ ಮಾಡಬೇಕೇ ಹೊರತು ಬಲವಂತವಾಗಿ ಹೇರಬಾರದು ಎಂದು ಇಮ್ರಾನ್ ತಿಳಿಹೇಳಿದ್ದಾರೆ.

ಪಾಕಿಸ್ತಾನದ ನಿರ್ಮಾತೃ ಮೊಹಮ್ಮದ್ ಅಲಿ ಜಿನ್ನಾ ಅವರ ಆಶಯದಂತೆ ತಮ್ಮ ಪಕ್ಷವು ಅಲ್ಪಸಂಖ್ಯಾತರಿಗೆ ರಕ್ಷಣೆ, ನ್ಯಾಯ ಮತ್ತು ಸಮಾನ ಹಕ್ಕುಗಳನ್ನ ನೀಡಲು ಬದ್ಧವಾಗಿದೆ ಎಂದಿದ್ದಾರೆ.

'Hindus to return to Pak after PTI comes to power

ಇದಕ್ಕೆ ಪೂರಕವಾಗಿ ಇಮ್ರಾನ್ ಅವರ ಪಕ್ಷವು "ಅಲ್ಪಸಂಖ್ಯಾತರ ದಿನ" ಆಚರಿಸಿದೆ. ಹಿಂದೂಗಳ ಜೊತೆ ಸೇರಿ ದೀಪಾವಳಿ ಹಬ್ಬವನ್ನೂ ಆಚರಿಸಿದೆ. ಹಿಂದೂಗಳ ಜೊತೆಗೆ ಕ್ರಿಶ್ಚಿಯನ್, ಸಿಖ್ ಸಮುದಾಯದವರು ಅಲ್ಪ ಸಂಖ್ಯಾತರಾಗಿದ್ದಾರೆ. ಆಗಸ್ಟ್ 14ರಿಂದ ಪ್ರಧಾನಿ ನವಾಜ್ ಷರೀಫ್ ವಿರುದ್ಧ ಪಿಟಿಐ ಪಕ್ಷ ಪ್ರತಿಭಟನೆ ನಡೆಸುತ್ತಿದೆ.

ನವಾಜ್ ಷರೀಫ್ ಪದಚ್ಯುತಿಗೆ ಆಗ್ರಹಿಸಿ ಇಮ್ರಾನ್ ಖಾನ್ ಅವರ ಪಿಟಿಐ ಹಾಗೂ ತಾಹಿರ್ ಉಲ್ ಖಾದ್ರಿ ಪಕ್ಷಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಚುನಾವಣೆ ಸಂದರ್ಭದಲ್ಲಿ ನಡೆದಿರುವ ಅಕ್ರಮದ ಬಗ್ಗೆ ಸಂಪೂರ್ಣ ತನಿಖೆ ನಡೆಯಬೇಕು ಅಲ್ಲಿ ತನಕ ನವಾಜ್ ಷರೀಫ್ ರಾಜೀನಾಮೆ ನೀಡಿ ತನಿಖೆ ಎದುರಿಸಬೇಕು ಎಂದು ಇಮ್ರಾನ್ ಖಾನ್ ಆಗ್ರಹಿಸಿದ್ದಾರೆ.[ತೀವ್ರಗೊಂಡ ಹಿಂಸಾಚಾರ, ಟಿವಿಗಳು ಬಂದ್]

ದೀಪಾವಳಿಗೆ ರಜೆ ನೀಡಿ: ಪಾಕಿಸ್ತಾನದಲ್ಲಿ ಅಲ್ಪ ಸಂಖ್ಯಾತರಾಗಿರುವ ಹಿಂದೂಗಳು ದೀಪಾವಳಿ ಆಚರಿಸಲು ಸಾರ್ವತ್ರಿಕ ರಜೆ ನೀಡಬೇಕೆಂದು ಪ್ರಧಾನಿ ನವಾಜ್ ಷರೀಫ್ ಅವರಿಗೆ ಮನವಿ ಸಲ್ಲಿಸಲಾಗಿದೆ. ರಪಾಕಿಸ್ತಾನ ಹಿಂದೂ ಪರಿಷತ್ ನ ಮಹಾಪೋಷಕ ಡಾ.ರಮೇಶ್ ಕುಮಾರ್ ವಾಂಕ್ವಾನಿ ಅವರು, ಪ್ರಧಾನಿಯನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದಾರೆ. ದೀಪಾವಳಿಗೆ ಮಲೇಷ್ಯಾ, ನೇಪಾಳ, ಶ್ರೀಲಂಕಾ, ನಯನ್ಮಾರ್, ಗುಯಾನ, ಟ್ರೆನಿಡಾ, ತೊಬಾಗೊ, ಸಿಂಗಾಪುರ, ಬಾಂಗ್ಲಾದೇಶ ಸೇರಿದಂತೆ ವಿಶ್ವದ 10 ದೇಶಗಳಲ್ಲಿ ಸಾರ್ವತ್ರಿಕ ರಜೆ ನೀಡಲಾಗುತ್ತಿದೆ. ಅದರೆ, ಪಾಕಿಸ್ತಾನದಲ್ಲಿ ರಜೆ ನೀಡಲಾಗಿಲ್ಲ.

English summary
Pakistan's Opposition leader Imran Khan has said that the Hindus who fled the country after being persecuted will return home if his party comes to power.The party also celebrated "minorities' day" at the Constitution Avenue where representatives from Christian, Hindu and Sikh communities were present.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X