ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಖಾಸಗಿ ಇ-ಮೇಲ್ ಬಳಕೆ: ಎಫ್ ಬಿಐ ತನಿಖೆಗೆ ಹಿಲರಿ ಆಕ್ಷೇಪ

By Prithviraj
|
Google Oneindia Kannada News

ವಾಷಿಂಗ್ಟನ್, ಅಕ್ಟೋಬರ್, 31: ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಸಂದರ್ಭದಲ್ಲಿ ಆಡಳಿತಕ್ಕೆ ಸಂಬಂಧಪಟ್ಟ ಸಂವಹನಕ್ಕಾಗಿ ಖಾಸಗಿ ಸರ್ವರ್ ಬಳಿಸಿದ್ದಾರೆ ಎಂಬ ಆರೋಪದ ಮೇಲೆ ಮತ್ತೆ ತನಿಖೆ ಆರಂಭಿಸಿರುವ ಎಫ್ ಬಿಐ ಕ್ರಮಕ್ಕೆ ಡೆಮಾಕ್ರಟಿಕ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಹಿಲರಿ ಕ್ಲಿಂಟನ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯೆ ನೀಡಿರು ಅವರು "ಚುನಾವಣೆ ಪ್ರಚಾರ ಹಂತದ ಕೊನೆಯ ಸಂದರ್ಭದಲ್ಲಿ ಎಫ್ ಬಿಐ ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ. ಇದು ತೀವ್ರ ಸಮಸ್ಯೆ ಉಂಟುಮಾಡುವ ರೀತಿಯಲ್ಲಿದೆ ಎಂದು ಹಿಲರಿ ಹೇಳಿದ್ದಾರೆ.[ಟ್ರಂಪ್ ಲೈಂಗಿಕ ಪುರಾಣವನ್ನು ಬಿಚ್ಚಿಟ್ಟ ಮಹಿಳಾಮಣಿಗಳು!]

Hillary Clinton campaign downplays significance of FBI's email review

ಫ್ಲಾರಿಡಾದಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು "ಕೇಲವು ಮಾಹಿತಿಯನ್ನು ಇಟ್ಟುಕೊಂಡು ಚುನಾವಣೆ ವೇಳೆಯಲ್ಲೇ ಎಫ್ ಬಿ ಐ ಈ ರೀತಿಯ ಕ್ರಮಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

ತನಿಖೆಯನ್ನು ಪುನರರಾಂಭಿಸಲು ಕ್ರಮ ಕೈಗೊಂಡಿರುವ ಅಮೆರಿಕ ಫೆಡರಲ್ ಬ್ಯೂರೋ ಆಫ್ (ಎಫ್ ಬಿಐ) ನಿರ್ದೇಶಕ ಜೇಮ್ಸ್ ಕಮಿ ಅವರ ಈ ನಡೆ ಅಮೆರಿಕ ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಹಿಲರಿ ಜನಪ್ರಿಯತೆ ಕುಸಿತಗೊಳ್ಳುವ ಸಾಧ್ಯತೆಗಳಿವೆ.[ಹಿಲರಿ ಅಧ್ಯಕ್ಷರಾದರೆ ಮೂರನೇ ವಿಶ್ವಯುದ್ಧ ಗ್ಯಾರಂಟಿ!]

ಡೊನಾಲ್ಡ್ ಟ್ರಂಪ್ ಆರೋಪ....

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ರಿಪಬಕ್ಲಿನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಅವರು " ಹಿಲರಿ ಮೇಲಿರುವ ಇಮೇಳ್ ಹಗರಣಗಳನ್ನು ಮುಚ್ಚಿಹಾಕಲು ಅಮೆರಿಕ ಕಾನೂನು ಇಲಾಖೆ ಪ್ರಯತ್ನಿಸುತ್ತಿದೆ" ಎಂದು ಆರೋಪಿಸಿದ್ದಾರೆ.

Hillary Clinton campaign downplays significance of FBI's email review

ಕೊಲೆರೊಡೊದಲ್ಲಿ ನಡೆದ ಚುನಾವಾಣಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂತಹ ಕೃತ್ಯಗಳು ಹಿಂದೆಂದೂ ನಡೆದಿರಲಿಲ್ಲ. ಈ ಚುನಾವಣೆಯಲ್ಲಿ ನಾವು ಬದಲಾವಣೆ ತರುತ್ತೇವೆ ಎಂದು ಅವರು ಹೇಳಿದ್ದಾರೆ.

ಟ್ರಂಪ್ ಗಿಂತ ಶೇ.2ರಷ್ಟು ಮುಂಚೂಣಿಯಲ್ಲಿರುವ ಹಿಲರಿ...

ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೋನಾಲ್ಡ್ ಟ್ರಂಪ್ ಗಿಂತ ಡೆಮಾಕ್ರಟಿಕ್ ಪಕ್ಷದ ಅಭ್ಯರ್ಥಿ ಹಿಲರಿ ಕ್ಲಿಂಟನ್ ಅವರು ಶೆ.ರಷ್ಟು ಮುನ್ನಡೆ ಹೊಂದಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.

ಹಿಲರಿ ಅವರ ಪರವಾಗಿ ಶೆ.47ರಷ್ಟು ಮತದಾರರು ಬೆಂಬಲ ಸೂಚಿಸಿದ್ದು, ಟ್ರಂಪ್ ಅವರ ಪರ ಶೆ.45ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ ಎಂದು ಎಬಿಸಿ ನ್ಯೂಸ್ ಮತ್ತು ವಾಷಿಂಗ್ಟನ್ ಪೋಸ್ಟ್ ಸಮೀಕ್ಷೆಯಲ್ಲಿ ತಿಳಿಸಿದೆ.

Hillary Clinton campaign downplays significance of FBI's email review

ಹಿಂದಿನ ವಾರ ಟ್ರಂಪ್ ಗಿಂತ ಹಿಲರಿ ಅವರು ಶೆ. 12ರಷ್ಟು ಮುನ್ನಡೆ ಹೊಂದಿದ್ದರು. ಈ ವಾರ ಗಣನೀಯವಾಗಿ ಹಿಲರಿ ಅವರು ಬೆಂಬಲ ಕಡಿಮೆಯಾಗಿರುವುದು ಕಂಡುಬಂದಿದೆ.

English summary
Democratic presidential nominee Hillary Clinton's campaign on Sunday played down the significance of Federal Bureau of Investigation's (FBI) decision to review new emails related to her email probe less than two weeks before the Election Day.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X