ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲಿಬಿಯಾ ವಿಮಾನ ಅಪಹರಣ, 109 ಪ್ರಯಾಣಿಕರ ಬಿಡುಗಡೆ

|
Google Oneindia Kannada News

ಮಾಲ್ಟಾ, ಡಿಸೆಂಬರ್ 23: ಇಬ್ಬರು ಅಪಹರಣಕಾರರು ಲಿಬಿಯಾ ವಿಮಾನವನ್ನು ಮಾಲ್ಟಾದಲ್ಲಿ ಇಳಿಯುವಂತೆ ಮಾಡಿದ್ದಾರೆ. ಅವರ ಬಳಿ ಗ್ರೆನೇಡ್ ಗಳಿದ್ದು, ವಿಮಾನವನ್ನು ಸ್ಫೋಟಿಸುವುದಾಗಿ ಬೆದರಿಸಿದ್ದಾರೆ ಎನ್ನಲಾಗಿದ್ದು. ವಿಮಾನದಲ್ಲಿದ್ದ 109 ಪ್ರಯಾಣಿಕರನ್ನು ನಂತರ ಬಿಡುಗಡೆಗೊಳಿಸಿದ್ದಾರೆ.

ಲಿಬಿಯಾ ಹಾಗೂ ಸಾಬಾ, ಟ್ರಿಪೋಲಿ ಮಧ್ಯೆ ಸಂಚರಿಸುತ್ತಿದ್ದ ಆಫಿಕಿಯಾ ಏರ್ ವೇಸ್ ನ ವಿಮಾನ A320ಯನ್ನು ಅಪಹರಿಸಿದ್ದು, ಅದರಲ್ಲಿ 118 ಮಂದಿ ಪ್ರಯಾಣಿಕರಿದ್ದು ಅವರಲ್ಲಿ 109 ಪ್ರಯಾಣಿಕರನ್ನು ಬಿಡುಗಡೆಗೊಳಿಸಿದ್ದಾರೆ.

ಮಾಲ್ಟಾದ ಸ್ಥಳೀಯ ಕಾಲಮಾನ ಬೆಳಗ್ಗೆ 11.32ರ ವೇಳೆಗೆ ಇಳಿಸಿದ್ದಾರೆ. ಮಾಲ್ಟಾದ ಪ್ರಧಾನಿ ಜೋಸೆಫ್ ಮಸ್ಕಟ್ ಟ್ವೀಟ್ ಮಾಡಿದ್ದು, ಹೈಜಾಕ್ ಪರಿಸ್ಥಿತಿಯನ್ನು ನಿಭಾಯಿಸಲು ಭದ್ರತೆ, ತುರ್ತು ಕಾರ್ಯಾಚರಣೆ ವ್ಯವಸ್ಥೆಗೆ ಸಿದ್ಧವಾಗಿದ್ದೇವೆ ಎಂದು ತಿಳಿಸಿದ್ದಾರೆ.

‘Hijacked’ Libyan Plane Lands In Malta

ವಿಮಾನದಲ್ಲಿ 111 ಪ್ರಯಾಣಿಕರಿದ್ದಾರೆ. ಆ ಪೈಕಿ 82 ಪುರುಷರು, 28 ಮಹಿಳೆಯರು ಹಾಗೂ ಒಂದು ಮಗುವಿದೆ ಎಂದಿದ್ದಾರೆ. ಸ್ಥಳದಲ್ಲಿ ಎಲ್ಲ ತುರ್ತು ಕಾರ್ಯಪಡೆ ಮೊಕ್ಕಾಂ ಹೂಡಿದೆ. ಕಾನೂನುಬಾಹಿರವಾಗಿ ವಿಮಾನ ನಿಲ್ದಾಣದೊಳಗೆ ಬಂದಿದ್ದಾರೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಹೇಳಿದ್ದಾರೆ.

ಸದ್ಯಕ್ಕೆ ಮಾಲ್ಟಾ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳಬೇಕಿದ್ದ ಎಲ್ಲ ವಿಮಾನಗಳ ಮಾರ್ಗವನ್ನು ಬದಲಾಯಿಸಲಾಗಿದೆ. ಅಪಹರಣಕಾರರು ತಾವು ಅಫ್-ಫತಾ-ಅಲ್-ಗಡಿದ ಗುಂಪಿಗೆ ಸೇರಿದ ಗಡಾಫಿ ಪರ ಬಣದವರು ಎಂದು ಹೇಳಿಕೊಂಡಿದ್ದಾರೆ. ಸದ್ಯಕ್ಕೆ ಅಪಹರಣಕಾರರ ಬೇಡಿಕೆಗಳೆನು ಎಂಬುದು ತಿಳಿದುಬಂದಿಲ್ಲ.

English summary
Two hijackers on a diverted Libyan plane which landed in Malta have hand grenades and are threatening to blow up the aircraft, Malta state TV said. Airbus A320 on an internal flight within Libya from Sabha, to Tripoli with 118 people on board, landed in Malta at 11.32am local time.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X