ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಭಾಷಣದ ಹೈಲೈಟ್ಸ್

|
Google Oneindia Kannada News

ಪ್ಯಾರೀಸ್, ಏ. 10: ಪ್ರಧಾನಿ ನರೇಂದ್ರ ಮೋದಿ ವಿದೇಶ ಪ್ರವಾಸದಲ್ಲಿದ್ದು ಪ್ಯಾರಿಸ್ ನಲ್ಲಿ ಯುನೆಸ್ಕೋ ದೇಶಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಮೂರು ರಾಷ್ಟ್ರಗಳ ವಿದೇಶ ಪ್ರವಾಸ ನಿಮಿತ್ತ ಫ್ರಾನ್ಸ್ ಗೆ ತೆರಳಿದ ಪ್ರಧಾನಿಗೆ ಭವ್ಯ ಸ್ವಾಗತ ದೊರೆಯಿತು.

ಯುನೆಸ್ಕೋ ರಾಷ್ಟ್ರಗಳ ಕೇಂದ್ರ ಕಚೇರಿಯಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ವಿಭಿನ್ನ ಸಂಸ್ಕೃತಿಗಳು ದೇಶವನ್ನು ಒಂದು ಮಾಡುತ್ತವೆ. ಸ್ನೇಹ ಸಹಕಾರದ ಬಾಳ್ವೆಗೆ ಇಂಥ ಕಾರ್ಯಕ್ರಮಗಳು ಬುನಾದಿಯಾಗಬೇಕು. ಪ್ರತಿಯೊಂದು ಸಮಾಜ ಮತ್ತು ವ್ಯಕ್ತಿಗೂ ಆತನದೇ ಆದ ಸ್ಥಾವ ಮತ್ತು ಮಾನವನ್ನು ಕಲ್ಪಿಸಿಕೊಡಬೇಕಾದ ಜವಾಬ್ದಾರಿ ಸರ್ಕಾರಗಳ ಮೇಲಿದೆ ಎಂದು ಹೇಳಿದರು.

ಮೇಕ್ ಇನ್ ಇಂಡಿಯಾ, ಪರಿಸರ ಸಂರಕ್ಷಣೆ, ವಿಶ್ವಸಂಸ್ಥೆ ಸ್ಥಾನ ಮಾನ, ಜಾಗತಿಕ ಶಾಂತಿ, ಯುದ್ಧ ಉಪಕರಣಗಳಲ್ಲಿ ಸಹಕಾರ ಸೇರಿದಂತೆ ಹತ್ತು ಹಲವು ವಿಚಾರಗಳನ್ನು ಪ್ರಧಾನಿ ವಿವಿಧ ದೇಶಗಳ ಮುಖಂಡರೊಂದಿಗೆ ಚರ್ಚೆ ಮಾಡಲಿದ್ದಾರೆ. ಫ್ರಾನ್ಸ್ ಅಧ್ಯಕ್ಷ ಹೋಲಾಂಡೇ ಜತೆ ಪ್ರಧಾನಿ ಈಗಾಗಲೇ ಮಾತುಕತೆ ನಡೆಸಿದ್ದಾರೆ.(ಪಿಟಿಐ ಚಿತ್ರಗಳು)

ಪ್ರಧಾನಿ ಭಾಷಣದಲ್ಲಿ ಉಲ್ಲೇಖಿಸಿದ ಪ್ರಮುಖ ಅಂಶಗಳನ್ನು ಮುಂದೆ ನೀಡಲಾಗಿದೆ.

ಶಾಂತಿ ಕಾಪಾಡಿಕೊಳ್ಳೋಣ

ಶಾಂತಿ ಕಾಪಾಡಿಕೊಳ್ಳೋಣ

ಜಗತ್ತಿನ ಶಾಂತಿ ಮತ್ತು ಅಭಿವೃದ್ಧಿಗೆ ಪರಸ್ಪರ ಎಲ್ಲರೂ ಕೈ ಜೋಡಿಸಬೇಕಾಗಿದೆ. ಸಂಘಟನೆಯ 70 ನೇ ವರ್ಷಾಚರಣೆ ಸಂದರ್ಭ ಪ್ರತಿಯೊಬ್ಬರು ಈ ಬಗ್ಗೆ ಚಿಂತಿಸಬೇಕಾಗಿದೆ. ಜಗತ್ತನ್ನು ಕಾಡುತ್ತಿರುವ ಪಿಡುಗುಗಳ ವಿರುದ್ಧ ಹೋರಾಟ ನಡೆಸೋಣ.

ಶಕ್ತಿ ಸಂಚಯ ಮತ್ತು ಪುನರ್ ಬಳಕೆ

ಶಕ್ತಿ ಸಂಚಯ ಮತ್ತು ಪುನರ್ ಬಳಕೆ

ಜಾಗತಿಕ ಶಕ್ತಿ ತತ್ವದ ಆಧಾರದ ಮೇಲೆ ಒಟ್ಟಾಗಿ ಕೆಲಸ ಮಾಡೋಣ. ಮಾನವ ಕಲ್ಯಾಣದ ಮತ್ತು ವಿಜ್ಞಾನಕ್ಕೆ ಸಂಬಂಧಿಸಿದ ವಿಷಯ ವಸ್ತುಗಳಿಗೆ ಒತ್ತು ನೀಡೋಣ. ಸಂಶೋಧನೆ ಮತ್ತು ಚಿಂತನೆಗೆ ಸೌಲಭ್ಯಗಳನ್ನು ಕಲ್ಪಿಸಿಕೊಡೋಣ.

ಆಹಾರ ಭದ್ರತೆ

ಆಹಾರ ಭದ್ರತೆ

ಪ್ರತಿಯೊಂದು ದೇಶ ಒಂದಿಲ್ಲೊಂದು ಸಂದರ್ಭದಲ್ಲಿ ಆಹಾರ ಸಮಸ್ಯೆ ಎದುರಿಸುತ್ತದೆ. ಅದನ್ನು ಮೀರಿ ನಡೆಯಲು ಒಟ್ಟಾಗಿ ಕೆಲಸ ಮಾಡುವುದೇ ಪರಿಹಾರ.

ಪರಿಸರ ಸಂರಕ್ಷಣೆ

ಪರಿಸರ ಸಂರಕ್ಷಣೆ

ಬಿಸಿಯಾಗುತ್ತಿರುವ ವಾತಾವರಣ, ಹದಗೆಡುತ್ತಿರುವ ಹವಾಮಾನ ಎಲ್ಲವನ್ನು ನಾವು ತಡೆಯಬೇಕಿದೆ. ಮಾನವನ ದೈನಂದಿನ ಕಾರ್ಯಚಟುವಟಿಕೆಯಲ್ಲಿ ಕೆಲ ಬದಲಾವಣೆ ಮಾಡಿಕೊಳ್ಳಬೇಕು.

ಡಿಜಿಟಲ್ ಇಂಡಿಯಾ

ಡಿಜಿಟಲ್ ಇಂಡಿಯಾ

ಇಂದಿನ ಪ್ರಪಂಚಕ್ಕೆ ಅಗತ್ಯವಾದ ರೀತಿಯಲ್ಲಿ ಡಿಜಿಟಲ್ ಪರಿಕಲ್ಪನೆಯನ್ನು ಮೂಡಿಸಬೇಕಾಗಿದೆ. ಶಿಕ್ಷಣ ಮತ್ತು ಮಾಹಿತಿ ತಂತ್ರಜ್ಞಾನ, ಬಾಹ್ಯಾಕಾಶ ಕ್ಷೇತ್ರದಲ್ಲಿಯೂ ಅಪರಿಮಿತವಾದ್ದನ್ನು ಸಾಧಿಸಬೇಕಿದೆ.

ನಮ್ಮ ಯೋಜನೆಗಳು ಸ್ಪಷ್ಟ

ನಮ್ಮ ಯೋಜನೆಗಳು ಸ್ಪಷ್ಟ

ಮಹಾತ್ಮ ಗಾಂಧೀಜಿಯವರ ಹೇಳಿಕೆಗಳನ್ನು ಮತ್ತೆ ಇಲ್ಲಿ ಉಲ್ಲೇಖಿಸಬಹುದು. ರಾಷ್ಟ್ರಗಳಲ್ಲಿನ ಸಹಕಾರ ಸಂಬಂಧಗಳನ್ನು ಗಟ್ಟಿಗೊಳಿಸಬೇಕು. ನಮಗೆ ಈ ಸಂಘಟನೆಯಲ್ಲಿ ಇರುವುದಕ್ಕೆ ಹೆಮ್ಮೆಯಾಗುತ್ತಿದೆ.

ಸ್ನೇಹ ವೃದ್ಧಿಸಲಿರುವ ಭೇಟಿ

ಪ್ರಧಾನಿ ನರೇಂದ್ರ ಮೋದಿ ಫ್ರಾನ್ಸ್ ನ ಹಿರಿಯ ಅಧಿಕಾರಿಗಳು, ರಾಜಕಾರಣಿಗಳ ಜತೆ ಮಾತನಾಡಿದ್ದು ಪರಸ್ಪರ ಸ್ನೇಹ ಸಂಬಂಧಗಳ ವೃದ್ಧಿ ಕುರಿತಂತೆ ಮಾತುಕತೆ ನಡೆಸಿದರು.

English summary
PM Narendra Modi, who landed in Paris on late Thursday night, addressed the United Nations Educational, Scientific and Cultural Organization (UNESCO). Later in the day, he will have a 'naav pe charcha' (chat on boat) with French President Francois Hollande, on a cruise on the La Seine river that flows through Paris.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X