• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಪ್ರತಿಭಾವಂತ ಭಾರತೀಯರಿಗೆ ಟ್ರಂಪ್ ಸಿಹಿಸುದ್ದಿ?!

|

ವಾಷಿಂಗ್ಟನ್, ಜನವರಿ 31: 'ಅಮೆರಿಕದ ವಲಸೆ ನಿಯಮ ಬದಲಾಗಬೇಕಿದೆ. ಪ್ರತಿಭಾವಂತರಿಗೆ, ಬುದ್ಧಿವಂತರಿಗೆ ಅಮೆರಿಕ ಸದಾ ಅವಕಾಶ ನೀಡುತ್ತದೆ. ಆದರೆ ವಿದೇಶದಿಂದ ಅಮೆರಿಕಕ್ಕೆ ಬರುವವರು ಈ ದೇಶದ ಮೇಲೆ ಪ್ರೀತಿ ತೋರಬೇಕು ಮತ್ತು ಗೌರವ ಇಟ್ಟುಕೊಳ್ಳಬೇಕು' ಎಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಾತು ಪ್ರತಿಭಾವಂತ ಭಾರತೀಯರಿಗೆ ಸಿಹಿಸುದ್ದಿಯೇ.

ಅಧ್ಯಕ್ಷರಾದ ಮೇಲೆ ತಮ್ಮ ಮೊಟ್ಟ ಮೊದಲ ಔಪಚಾರಿಕ ಸ್ಟೇಟ್ ಆಫ್ ಯೂನಿಯನ್ ಭಾಷಣದಲ್ಲಿ ಡೊನಾಲ್ಡ್ ಟ್ರಂಪ್ ಹಲವು ವಿಷಯಗಳನ್ನು ಉಲ್ಲೇಖಿಸಿದರು. ಜ.30 ರಂದು ನೀಡಿದ ಭಾಷಣದಲ್ಲಿ ಅವರು ಅಮೆರಿಕ ಆರ್ಥಿಕತೆ ಮತ್ತಷ್ಟು ಸುಧಾರಿಸಲು ಏನೆಲ್ಲ ಮಾಡಬೇಕು ಎಂಬ ಬಗ್ಗೆಯೂ ಚರ್ಚೆ ನಡೆಸಿದರು.

"ಐಸಿಸ್ ನ ಹುಟ್ಟಡಗಿಸುವವರೆಗೂ ನಾವು ಹೋರಾಡುತ್ತಲೇ ಇರುತ್ತೇವೆ. ನಮ್ಮ ಮೊದಲ ಗುರಿ ಭಯೋತ್ಪಾದನೆ ದಮನ" ಎಂದು ಸಹ ಅವರು ಇದೇ ಸಂದರ್ಭದಲ್ಲಿ ಹೇಳಿದರು.

ಬಟಾಬಯಲಾಯ್ತು ಡೊನಾಲ್ಡ್ ಟ್ರಂಪ್ ಎಂಬ ಆವೇಶದ ಕಿಡಿಯ ಗುಟ್ಟು!

ದಶಕಗಳ ಕಾಲ ನಡೆದ ಸಮರ್ಪಕವಲ್ಲದ ವ್ಯಾಪಾರ ವ್ಯವಹಾರಗಳ ಕುರಿತೂ ಅವರು ಮಾತನಾಡಿದರು. ಅಮೆರಿಕದ ವಲಸೆ ನಿಯಮಗಳು, ಇದು ಅಮೆರಿಕದ ನಾಗರಿಕರಿಗೆ, ಕುಟುಂಬದ ಮೇಲೆ ಬೀರುವ ಪರಿಣಾಮ ಎಂಬಿತ್ಯಾದಿ ವಿಷಯಗಳ ಕುರಿತು ಸುಲಲಿತವಾಗಿ ಮಾತನಾಡಿದ ಟ್ರಂಪ್ ಅವರ ಭಾಷಣ ಎಲ್ಲರ ಮೆಚ್ಚುಗೆ ಗಳಿಸಿತು.

ಅವರ ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ. (ಚಿತ್ರಕೃಪೆ: ಎಎನ್ ಐ)

ಐಸಿಸ್ ನ ಸೊಲ್ಲಡಗಿಸುವವರೆಗೂ ನೆಮ್ಮದಿಯಿಲ್ಲ!

ಐಸಿಸ್ ನ ಸೊಲ್ಲಡಗಿಸುವವರೆಗೂ ನೆಮ್ಮದಿಯಿಲ್ಲ!

"ಐಸಿಸ್(ಇಸ್ಲಾಮಿಕ್ ಸ್ಟೇಟ್ಸ್ ಆಫ್ ಇರಾಕ್ ಅಂಡ್ ಸಿರಿಯಾ) ಜಗತ್ತಿಗೆ ಮುಳುವಾಘಿರುವ ಭಯೋತ್ಪಾದಕ ಸಂಘಟನೆ. ಇದರ ಸೊಲ್ಲಡಗಿಸುವವರೆಗೂ ಅಮೆರಿಕಕ್ಕೆ ನೆಮ್ಮದಿಯಿಲ್ಲ. ಅಮೆರಿಕದ ಹೋರಾಟ ಭಯೋತ್ಪಾದನೆಯನ್ನು ದಮನ ಮಾಡುವ ವರೆಗೂ ಮುಂದಿವರಿಸುತ್ತದೆ. "

ತಾಲಿಬಾನ್ ಜೊತೆ ಮಾತುಕತೆಯಿಲ್ಲ!

ತಾಲಿಬಾನ್ ಜೊತೆ ಮಾತುಕತೆಯಿಲ್ಲ!

"ತಾಲಿಬಾನಿಗಳು ಅದೆಷ್ಟು ಮುಗ್ಧ ಜನರನ್ನು ಕೊಂದಿದ್ದಾರೋ ಲೆಕ್ಕವಿಲ್ಲ. ಇತ್ತೀಚೆಗಷ್ಟೇ ಅಫ್ಘಾನಿಸ್ತಾನದ ಕಾಬೂಲ್ ನಲ್ಲಿ ದಾಳಿ ನಡೆಸಿದ್ದ ತಾಲಿಬಾನಿಗಳು 130 ಕ್ಕೂ ಹೆಚ್ಚು ಅಮಾಯಕರನ್ನು ಬಲಿತೆಗೆದುಕೊಂಡಿದ್ದನ್ನು ನೆನೆದರೆ ವಿಷಾದವಾಗುತ್ತದೆ. ಅವರನ್ನು ಸಂಪೂರ್ಣ ನಾಶ ಮಾಡುವುದೇ ನಮ್ಮ ಗುರಿ. ಅವರೊಂದಿಗೆ ಮಾತುಕತೆ ನಡೆಸುವ ಯಾವ ಇರಾದೆಯೂ ನಮಗಿಲ್ಲ"

ವಲಸಿಗರಿಗೆ ಅಮೆರಿಕ

ವಲಸಿಗರಿಗೆ ಅಮೆರಿಕ

ಅಮೆರಿಕ ಹಲವು ದೇಶದ ಜನರನ್ನು ಸ್ವಾಗತಿಸಿದೆ. ಆದರೆ ನಾವು ಪ್ರತಿಭೆ ಮತ್ತು ಬುದ್ಧಿವಂತಿಕೆಯನ್ನು ಆಧರಿಸಿ ವಲಸೆಗೆ ಅನುಮತಿ ನೀಡುವ ಕೆಲಸ ಮಾಡಬೇಕಿದೆ. ಬೇರೆ ದೇಶದಿಂದ ಬರುವ ಜನರ ಬುದ್ಧಿಮತ್ತೆ ಅಮೆರಿಕಕ್ಕೆ ಉಪಯೋಗವಾಗಬೇಕು. ಹಾಗೆಯೇ ಯಾರಿಗೆ ಅಮೆರಿಕದ ಮೇಲೆ ಪ್ರೀತಿ ಮತ್ತು ಗೌರವವಿರುತ್ತದೋ ಅಂಥವರಿಗೆ ನಾವು ಅವಕಾಶ ನೀಡಬೇಕು.

ಎಲ್ಲರೂ ಒಟ್ಟಾಗಿ ಕನಸುಕಾಣೋಣ, ಸಾಕಾರಗೊಳಿಸೋಣ

ಎಲ್ಲರೂ ಒಟ್ಟಾಗಿ ಕನಸುಕಾಣೋಣ, ಸಾಕಾರಗೊಳಿಸೋಣ

"ಅಮೆರಿಕದ ಕನಸು ಕಾಣುವುದಕ್ಕೆ ಇದಕ್ಕಿಂತ ಉತ್ತಮ ಕಾಲ ಬೇರೆ ಇಲ್ಲ. ನೀವು ಎಲ್ಲಿಂದ ಬಂದಿದ್ದೀರಿ, ಎಲ್ಲಿದ್ದೀರಿ ಎಂಬುದು ಮಹತ್ವದ್ದಲ್ಲ. ಆದರೆ ಇದು ನಿಮ್ಮ ಕಾಲ ಎಂಬುದನ್ನು ತಿಳಲಿಯಿರಿ. ನೀವು ಕಠಿಣ ಶ್ರಮ ವಹಿಸಿ ಕೆಲಸ ಮಾಡಿದರೆ ನೀವು ಏನು ಬೇಕಾದರೂ ಕನಸು ಕಾಣಬಹುದು ಮತ್ತು ಅದನ್ನು ನಾವೆಲ್ಲರೂ ಸೇರಿ ಸಾಕಾರಗೊಳಿಸಬಹುದು"

ನಮ್ಮ ಅಮೆರಿಕ ಮತ್ತೆ ಮಹಾನ್ ರಾಷ್ಟ್ರವಾಗಲಿ...

ನಮ್ಮ ಅಮೆರಿಕ ಮತ್ತೆ ಮಹಾನ್ ರಾಷ್ಟ್ರವಾಗಲಿ...

"ಆಶಾವಾದದ ದೊಡ್ಡ ಪ್ರವಾಹವೇ ನಮ್ಮ ನೆಲಕ್ಕಪ್ಪಳಿಸಿದೆ. ಪ್ರತಿ ದಿನವೂ ನಾವು ಅಮೆರಿಕದ ಭವಿಷ್ಯಕ್ಕಾಗಿ ಸುಧಾರಣೆಯ ಹಾದಿಯಲ್ಲಿ ನಡೆಯುತ್ತಿದ್ದೇವೆ. ಅಮೆರಿಕವನ್ನು ಎಲ್ಲ ಅಮೆರಿಕನ್ನರ ದೃಷ್ಟಿಯಲ್ಲಿ ಮತ್ತೆ ಮಹಾನ್ ರಾಷ್ಟ್ರವನ್ನಾಗಿ ಮಾಡುವುದೇ ನಮ್ಮ ಗುರಿ"

ಚೀನಾ-ರಷ್ಯಾ ಎಂಬ ಶತ್ರುಗಳು

ಚೀನಾ-ರಷ್ಯಾ ಎಂಬ ಶತ್ರುಗಳು

"ನಾವು ಅಮೆರಿಕವನ್ನು ರಾಷ್ಟ್ರದಲ್ಲಿ ಸದೃಢಗೊಳಿಸುವ ಜೊತೆಯಲ್ಲೇ ಇಡೀ ವಿಶ್ವದ ದೃಷ್ಟಿಯಲ್ಲೂ ಅಮೆರಿಕವನ್ನು ಮತ್ತಷ್ಟು ಬಲಿಷ್ಟಗೊಳಿಸುವ ಅಗತ್ಯವಿದೆ. ಚೀನಾ ಮತ್ತು ರಷ್ಯಾ ಮುಂತಾದ ನಮ್ಮ ಶತ್ರು ರಾಷ್ಟ್ರಗಳು ಯಾವತ್ತಿದ್ದರೂ ನಮ್ಮ ಆರ್ಥಿಕತೆಗೆ ಸವಾಲೇ."

ಉತ್ತರ ಕೋರಿಯಾಕ್ಕೆ ನಿಯಂತ್ರಣ ಹೇರಬೇಕಿದೆ

ಉತ್ತರ ಕೋರಿಯಾಕ್ಕೆ ನಿಯಂತ್ರಣ ಹೇರಬೇಕಿದೆ

"ತನ್ನದೇ ಜನರನ್ನು ಅಷ್ಟೊಂದು ಬರ್ಬರವಾಗಿ ಹತ್ಯೆಗೈದ, ಅಷ್ಟೊಂದು ಕ್ರೂರವಾಗಿ ನಡೆಸಿಕೊಳ್ಳುತ್ತಿರುವ ರಾಷ್ಟ್ರವೆಂದರೆ ಉತ್ತರ ಕೋರಿಯಾ ಮಾತ್ರ. ಆ ಕ್ರೂರ ಸರ್ವಾಧಿಕಾರಕ್ಕೆ ನಿಯಂತ್ರಣ ಹೇರಬೇಕಿದೆ. ಅವರ ಅಣುಬಾಂಬ್ ನಮ್ಮ ನೆಲವನ್ನು ದ್ವಂಸ ಮಾಡದಂತೆ ನೋಡಿಕೊಳ್ಳುವುದು ನಮ್ಮ ಹೊಣೆಯಾಗಿದೆ."

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
We will continue our fight until ISIS is defeated. Terrorists are not merely criminals. They are unlawful enemy combatants. And when captured overseas, they should be treated like the terrorists they are: US President Donald J Trump said in his first official State of Union speech in Washington DC, US.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more