ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಮೆರಿಕಾ ವಿರುದ್ಧ 'ಪೊಲಿಟಿಕಲ್ ವೈರಸ್' ಹರಿಬಿಟ್ಟಿತಾ ಚೀನಾ?

|
Google Oneindia Kannada News

ಬೀಜಿಂಗ್, ಮೇ.24: ಚೀನಾ. ಜಾಗತಿಕ ಮಟ್ಟದಲ್ಲಿ ದೈತ್ಯ ರಾಷ್ಟ್ರಗಳ ಕೆಂಗಣ್ಣಿಗೆ ಗುರಿಯಾಗಿರುವ ವಿಶ್ವದ ಮತ್ತೊಂದು ಪ್ರಬಲ ರಾಷ್ಟ್ರ. ಅಮೆರಿಕಾ, ಇಂಗ್ಲೆಂಡ್, ಇಟಲಿ, ಬ್ರೆಜಿಲ್, ಸ್ಪೇನ್ ಮತ್ತು ರಷ್ಯಾ ಸೇರಿದಂತೆ ದೈತ್ಯ ರಾಷ್ಟ್ರಗಳಲ್ಲಿ ಮರಣ ಮೃದಂಗ ಬಾರಿಸಲು ಕಾರಣವಾಗಿದ್ದೇ ಈ ಚೀನಾ.

ಚೀನಾದ ವುಹಾನ್ ನಲ್ಲೇ ಮೊದಲು ಕಾಣಿಸಿಕೊಂಡ ಕೊರೊನಾ ವೈರಸ್ ವಿಶ್ವದಾದ್ಯಂತ ಹರಡಿಕೊಂಡಿದೆ. 54,27,555 ಮಂದಿಗೆ ಅಂಟಿಕೊಂಡಿರುವ ಕೊವಿಡ್-19 ಇದುವರೆಗೂ ಪ್ರಪಂಚದಲ್ಲಿ 3,44,417 ಜನರನ್ನು ಬಲಿ ತೆಗೆದುಕೊಂಡಿದೆ. ಇಷ್ಟೆಲ್ಲಾ ಅವಾಂತರಕ್ಕೆ ಕಾರಣವಾಗಿರುವ ಚೀನಾ ಇದೀಗ ವೇದಾಂತದ ಮಾತುಗಳನ್ನು ಹೇಳುತ್ತಿದೆ.

ಶತ್ರುವಿನ ಶತ್ರು ಮಿತ್ರ: ಭಾರತದ ಜೊತೆ ಕೈ ಜೋಡಿಸಲು ಅಮೆರಿಕಾ ಮಂತ್ರ!ಶತ್ರುವಿನ ಶತ್ರು ಮಿತ್ರ: ಭಾರತದ ಜೊತೆ ಕೈ ಜೋಡಿಸಲು ಅಮೆರಿಕಾ ಮಂತ್ರ!

ಭಾನುವಾರ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ವೇದಾಂತಿಯಂತೆ ಮಾತನಾಡಿದ್ದಾರೆ. ದೈತ್ಯ ರಾಷ್ಟ್ರಗಳು ಚೀನಾವನ್ನು ದೂಷಿಸುವುದು ಬಿಟ್ಟು ಕೊರೊನಾ ವೈರಸ್ ವಿರುದ್ಧ ಹೋರಾಟಕ್ಕೆ ಕೈಜೋಡಿಸುವಂತೆ ಹೇಳಿದ್ದಾರೆ. ಚೀನಾ ವಿದೇಶಾಂಗ ಸಚಿವರ ಮಾತುಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ವಾಂಗ್ ಯಿ ಹೇಳಿದ್ದೇನು ಎನ್ನುವುದರ ಕುರಿತು ಸಂಪೂರ್ಣ ವರದಿ ನಿಮಗಾಗಿ.

ಚೀನಾ ವಿರುದ್ಧ ಬೊಟ್ಟು ಮಾಡದಂತೆ ಪರೋಕ್ಷ ಹೇಳಿಕೆ

ಚೀನಾ ವಿರುದ್ಧ ಬೊಟ್ಟು ಮಾಡದಂತೆ ಪರೋಕ್ಷ ಹೇಳಿಕೆ

ನೊವೆಲ್ ಕೊರೊನಾ ವೈರಸ್ ಸೋಂಕು ಹರಡುವಿಕೆಗೆ ಚೀನಾ ಕಾರಣ ಎಂದು ದೂಷಿಸುವುದರಿಂದ ಯಾವುದೇ ಪರಿಹಾರ ಸಿಗುವುದಿಲ್ಲ. ಮೊದಲು ಚೀನಾದತ್ತ ಬೊಟ್ಟು ಮಾಡುವುದನ್ನು ಬಿಡಬೇಕು. ಇದರಿಂದ ರಾಷ್ಟ್ರಗಳ ನಡುವಿನ ಕಾನೂನುಬದ್ಧ ಹಕ್ಕು ಮತ್ತು ಆಸಕ್ತಿ ಕಡಿಮೆಯಾಗುತ್ತದೆಯೇ ವಿನಃ, ಕೊರೊನಾ ವೈರಸ್ ಸೋಂಕಿಗೆ ಮದ್ದು ಸಿಕ್ಕಂತೆ ಆಗುವುದಿಲ್ಲ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಹೇಳಿದ್ದಾರೆ.

ಕೊರೊನಾ ವೈರಸ್ ವಿರುದ್ಧ ಹೋರಾಡುವವರಿಗೆ ಧನ್ಯವಾದ

ಕೊರೊನಾ ವೈರಸ್ ವಿರುದ್ಧ ಹೋರಾಡುವವರಿಗೆ ಧನ್ಯವಾದ

ವಿಶ್ವವನ್ನು ಕೊರೊನಾ ವೈರಸ್ ಸೋಂಕಿನ ಸುಳಿಯಿಂದ ರಕ್ಷಿಸಲು ಹಗಲು ರಾತ್ರಿ ಶ್ರಮಿಸುತ್ತಿರುವ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಗೆ ಚೀನಾ ವಿದೇಶಾಂಗ ಸಚಿವ ವಾಂಗ್ ಯಿ ಧನ್ಯವಾದ ಅರ್ಪಿಸಿದ್ದಾರೆ. ಕೊವಿಡ್-19 ಸೋಂಕಿನಿಂದ ಪ್ರಾಣ ಬಿಟ್ಟಿರುವ ಲಕ್ಷಾಂತರ ಜನರ ಸಾವಿಗೆ ಸಂತಾಪ ಸೂಚಿಸಿದ್ದಾರೆ. ಕೊರೊನಾ ವೈರಸ್ ಮಾನವೀಯತೆಯನ್ನು ಸೋಲಿಸಲು ಸಾಧ್ಯವಿಲ್ಲ; ಕರಾಳ ದಿನಗಳು ಮರೆಯಾದ ನಂತರದಲ್ಲಿ ನಾವು ಅಂತಿಮವಾಗಿ ಮೇಲುಗೈ ಸಾಧಿಸುತ್ತೇವೆ ಎಂದು ವಾಂಗ್ ಯಿ ತಿಳಿಸಿದ್ದಾರೆ.

ಶತ್ರುವಿನ ಶತ್ರು ಮಿತ್ರ: ಅಮೆರಿಕಾದ ವಿಶ್ವಾಸ ಕಳೆದುಕೊಂಡಿತಾ ಚೀನಾ?ಶತ್ರುವಿನ ಶತ್ರು ಮಿತ್ರ: ಅಮೆರಿಕಾದ ವಿಶ್ವಾಸ ಕಳೆದುಕೊಂಡಿತಾ ಚೀನಾ?

ಅಮೆರಿಕಾಗೆ ಚೀನಾ ವಿದೇಶಾಂಗ ಸಚಿವರ ತಿರುಗೇಟು

ಅಮೆರಿಕಾಗೆ ಚೀನಾ ವಿದೇಶಾಂಗ ಸಚಿವರ ತಿರುಗೇಟು

ಕೊರೊನಾ ವೈರಸ್ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಕ್ರಮ ತೆಗೆದುಕೊಳ್ಳಬೇಕಿತ್ತು. ಅದನ್ನು ಬಿಟ್ಟು ಬೇರೊಂದು ರಾಷ್ಟ್ರದತ್ತ ಬೊಟ್ಟು ಮಾಡಿ ಆರೋಪಿಸುವುದು ಸರಿಯಲ್ಲ. ಆರೋಪ ಮಾಡುವ ರಾಷ್ಟ್ರಗಳೇ ತಮ್ಮ ಗೌರವ ಕಳೆದುಕೊಳ್ಳುತ್ತವೆ ಎಂದು ವಾಂಗ್ ಯಿ ತಿಳಿಸಿದರು. ಆ ಮೂಲಕ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆರೋಪಕ್ಕೆ ಪರೋಕ್ಷವಾಗಿ ತಿರುಗೇಟು ಕೊಟ್ಟಿದ್ದಾರೆ.

ಚೀನಾ ಮತ್ತು ಅಮೆರಿಕಾ ನಡುವಿನ ವ್ಯತ್ಯಾಸದ ಮಾತು

ಚೀನಾ ಮತ್ತು ಅಮೆರಿಕಾ ನಡುವಿನ ವ್ಯತ್ಯಾಸದ ಮಾತು

ಕೊರೊನಾ ವೈರಸ್ ಸೋಂಕು ಹರಡಲು ಚೀನಾ ಕಾರಣ ಎಂಬ ಹಣೆಪಟ್ಟಿಯನ್ನು ಅಮೆರಿಕಾದ ಕೆಲವು ರಾಜಕಾರಣಿಗಳು ಅಂಟಿಸುವ ಪ್ರಯತ್ನದಲ್ಲಿದ್ದಾರೆ. ಕೊವಿಡ್-19 ವೈಜ್ಞಾನಿಕ ಸವಾಲು ಎಂದು ಸೂಕ್ಷ್ಮ ಅಧ್ಯಯನ ನಡೆಸಿದ ಜಾಗತಿಕ ಸಾಂಕ್ರಾಮಿಕ ರೋಗಶಾಸ್ತ್ರಜ್ಞರು, ತಜ್ಞರೇ ಹೇಳಿದ್ದಾರೆ. ಇದರ ನಡುವೆ ಅಮೆರಿಕಾ ಮತ್ತು ಚೀನಾದ ನಡುವೆ ಕೆಲವು ವ್ಯತ್ಯಾಸಗಳಿವೆ. ಯಾವುದು ಸುಳ್ಳು ಮತ್ತು ಯಾವುದು ಸತ್ಯ ಎಂದು ಪತ್ತೆ ಮಾಡಬೇಕಿದೆ. ಚೀನಾ ವೈಜ್ಞಾನಿಕ ಕಾರಣ ಹುಡುಕುತ್ತಿದ್ದರೆ ಅಮೆರಿಕಾದ ರಾಜಕಾರಣಿಗಳು ಪೂರ್ವಾಗ್ರಹ ಪೀಡಿತರಾಗಿ ಆರೋಪಿಸುತ್ತಿದ್ದಾರೆ.

ಕೊವಿಡ್-19 ವಿರುದ್ಧ ಹೋರಾಡಲು ಚೀನಾ ಬೆಂಬಲ

ಕೊವಿಡ್-19 ವಿರುದ್ಧ ಹೋರಾಡಲು ಚೀನಾ ಬೆಂಬಲ

ಜಗತ್ತನ್ನು ಕಾಡುತ್ತಿರುವ ಕೊರೊನಾ ವೈರಸ್ ಸೋಂಕಿನ ಮೂಲವನ್ನು ಪತ್ತೆ ಹಚ್ಚಿ ಅದರ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ ಅಂತಾರಾಷ್ಟ್ರೀಯ ವೈಜ್ಞಾನಿಕ ಸಮುದಾಯದ ಜೊತೆಗೆ ಕೈ ಜೋಡಿಸಲು ಚೀನಾ ಸಿದ್ಧವಿದೆ. ಇದೊಂದು ನಿಷ್ಪಕ್ಷಪಾತ, ರಚನಾತ್ಮಕ ಹಾಗೂ ರಾಜಕೀಯ ಮುಕ್ತ ಪ್ರಕ್ರಿಯೆ ಆಗಬೇಕಿದೆ. ಎಲ್ಲ ರಾಷ್ಟ್ರಗಳು ಅಪರಾಧದ ಮನೋಭಾವವನ್ನು ತೊರೆದು ಪರಸ್ಪರ ರಾಷ್ಟ್ರಗಳು ಸಮಾನತೆ, ಸಾರ್ವಭೌಮತೆಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಿದೆ ಎಂದು ವಾಂಗ್ ಯಿ ಹೇಳಿದ್ದಾರೆ.

ಚೀನಾದಿಂದ ಟೆಂಡ್ರಸ್ ಅಧನಮ್ ಗೆಬ್ರಿಯಸಸ್ ಗುಣಗಾನ

ಚೀನಾದಿಂದ ಟೆಂಡ್ರಸ್ ಅಧನಮ್ ಗೆಬ್ರಿಯಸಸ್ ಗುಣಗಾನ

ವಿಶ್ವ ಆರೋಗ್ಯ ಸಂಸ್ಥೆ ಮುಖ್ಯಸ್ಥ ಟೆಂಡ್ರಸ್ ಅಧನಮ್ ಗೆಬ್ರಿಯಸಸ್ ಗುಣಗಾನ ಮಾಡಿದೆ. ಕೊರೊನಾ ವೈರಸ್ ವಿರುದ್ಧ ಹೋರಾಟದಲ್ಲಿ ಟೆಂಡ್ರಸ್ ಅಧನಮ್ ಗೆಬ್ರಿಯಸಸ್ ಉತ್ತಮ ಕಾರ್ಯವನ್ನು ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಜಾಗತಿಕ ಆರೋಗ್ಯ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಪ್ರಮುಖ ಪಾತ್ರ ವಹಿಸಲಿದೆ. ಸಂದಿಗ್ಘ ಪರಿಸ್ಥಿತಿಯಲ್ಲಿ ಜನರ ಪ್ರಾಣ ಉಳಿಸುವ ನಿಟ್ಟಿನಲ್ಲಿ ಎಲ್ಲ ರಾಷ್ಟ್ರಗಳು WHO ಜೊತೆ ಕೈಜೋಡಿಸುವಂತೆ ವಾಂಗ್ ಯಿ ಮನವಿ ಮಾಡಿಕೊಂಡರು.

ಕೊವಿಡ್19 ವಿರುದ್ಧ ಹೋರಾಡಲು ಅಮೆರಿಕಾಗೆ ಚೀನಾ ನೆರವು

ಕೊವಿಡ್19 ವಿರುದ್ಧ ಹೋರಾಡಲು ಅಮೆರಿಕಾಗೆ ಚೀನಾ ನೆರವು

ನೊವೆಲ್ ಕೊರೊನಾ ವೈರಸ್ ಎನ್ನುವುದು ಚೀನಾ ಹಾಗೂ ಅಮೆರಿಕಾ ಪಾಲಿನ ಸಾಮಾನ್ಯ ವೈರಿ. ಎರಡು ರಾಷ್ಟ್ರಗಳ ನಡುವೆ ಸೌಹಾರ್ದಯುತ ಸಂಬಂಧವಿದ್ದು, ಸೋಂಕು ಕಡಿವಾಣಕ್ಕೆ ಪರಸ್ಪರ ಸಹಕಾರ ನೀಡಿದ್ದೆವು. ಕೊರೊನಾ ವೈರಸ್ ಸೋಂಕು ಹರಡುವಿಕೆ ಆರಂಭದಲ್ಲಿ ಅಮೆರಿಕಾಗೆ ಚೀನಾದಿಂದ ಸಾಕಷ್ಟು ಪ್ರಮಾಣದ ವೈದ್ಯಕೀಯ ಸಾಮಗ್ರಿಗಳನ್ನು ರಫ್ತು ಮಾಡಲಾಗಿತ್ತು. ಅಮೆರಿಕಾದ ಪ್ರತಿಯೊಬ್ಬ ಪ್ರಜೆಗೆ 40 ಮಾಸ್ಕ್ ಗಳಂತೆ ಒಟ್ಟು 12 ಮಿಲಿಯನ್ ಗಿಂತಲೂ ಹೆಚ್ಚು ಮಾಸ್ಕ್ ಗಳನ್ನು ಚೀನಾದಿಂದ ಕಳುಹಿಸಿಕೊಡಲಾಗಿತ್ತು.

'ಪೊಲಿಟಿಕಲ್ ವೈರಸ್' ಬಗ್ಗೆ ವಾಂಗ್ ಯಿ ಉಲ್ಲೇಖ

'ಪೊಲಿಟಿಕಲ್ ವೈರಸ್' ಬಗ್ಗೆ ವಾಂಗ್ ಯಿ ಉಲ್ಲೇಖ

ಕೊರೊನಾ ವೈರಸ್ ಗಿಂತಲೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾದಲ್ಲಿ ಕೆಲವು ರಾಜಕಾರಣಿಗಳು ಹುಟ್ಟುಹಾಕಿರುವ ಪೊಲಿಟಿಕಲ್ ವೈರಸ್ ಹೆಚ್ಚು ಅಪಾಯಕಾರಿಯಾಗಿದೆ. ಅಮೆರಿಕಾ ಮತ್ತು ಚೀನಾ ನಡುವಿನ ಸಂಬಂಧವನ್ನು ಹಾಳುಗೆಡುವ ಉದ್ದೇಶದಿಂದ ಈ ಪೊಲಿಟಿಕಲ್ ವೈರಸ್ ನ್ನು ಹರಡಿಸಲಾಗುತ್ತಿದೆ ಎಂದು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಆರೋಪಿಸಿದ್ದಾರೆ.

ರಷ್ಯಾ-ಚೀನಾ ಸಂಬಂಧ ವೃದ್ಧಿಸಿತಾ ಕೊರೊನಾ ವೈರಸ್?

ರಷ್ಯಾ-ಚೀನಾ ಸಂಬಂಧ ವೃದ್ಧಿಸಿತಾ ಕೊರೊನಾ ವೈರಸ್?

ಕೊರೊನಾ ವೈರಸ್ ಸೋಂಕು ಕಾಣಿಸಿಕೊಂಡ ನಂತರದಲ್ಲಿ ಚೀನಾ ಮತ್ತು ರಷ್ಯಾ ನಡುವಿನ ದ್ವಿಪಕ್ಷೀಯ ಸಂಬಂಧ ಮತ್ತಷ್ಟು ವೃದ್ಧಿಸಿದೆ. ಅಮೆರಿಕಾದ ಪ್ರಾಬಲ್ಯ ವಿರುದ್ಧ ಚೀನಾ ಮತ್ತು ರಷ್ಯಾ ರಾಷ್ಟ್ರಗಳು ಒಂದಾಗಬೇಕಿದೆ. ಜಾಗತಿಕ ಮಟ್ಟದಲ್ಲಿ ಹರಡುತ್ತಿರುವ ಪೊಲಿಟಿಕಲ್ ವೈರಸ್ ತೊಡೆದು ಹಾಕುವ ನಿಟ್ಟಿನಲ್ಲಿ ಈ ದ್ವಿಪಕ್ಷೀಯ ಸ್ನೇಹ ಸಂಬಂಧ ಹೆಚ್ಚು ಸಹಕಾರಿಯಾಗಲಿದೆ ಎಂದು ವಾಂಗ್ ಯಿ ತಿಳಿಸಿದ್ದಾರೆ.

English summary
Highlights Of China foreign Minister Wang Yi Media Briefs: China Again Attack Against United States Of America.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X