ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅರ್ಮೇನಿಯಾ- ಅಜರ್ ಬೈಜಾನ್ ನಡುವೆ ಯುದ್ಧ ಸ್ಫೋಟ

|
Google Oneindia Kannada News

ಯೆರೆವಾನ್, ಸೆ. 28: ಸೋವಿಯತ್ ಒಕ್ಕೂಟ ಕುಸಿದ ಬಳಿಕ ಸ್ವತಂತ್ರ ದೇಶಗಳಾಗಿ ರೂಪುಗೊಂಡ ಅರ್ಮೇನಿಯಾ ಹಾಗೂ ಅಜರ್ ಬೈಜಾನ್ ಈಗ ಪರಸ್ಪರ ಯುದ್ಧ ಘೋಷಿಸಿವೆ. ಮೂರು ದಶಕಗಳಿಂದ ನಗೊರ್ನೊ-ಕರಬಾಖ್‌ಗಾಗಿ ಎರಡು ದೇಶಗಳು ಸಂಘರ್ಷದಲ್ಲಿ ತೊಡಗಿವೆ. ಆದರೆ ವಿವಾದ ಬಗೆಹರಿದಿಲ್ಲ.

ಪ್ರತ್ಯೇಕತೆ ಬಯಸಿರುವ ನಗೊರ್ನೊ-ಕರಬಾಖ್‌ ಪ್ರದೇಶಕ್ಕಾಗಿ ಮತ್ತೊಮ್ಮೆ ಕದನ ಜಾರಿಯಲ್ಲಿದ್ದು, ಸ್ಥಳೀಯ ಕಾಲಮಾನದ ಪ್ರಕಾರ ಭಾನುವಾರದಂದು ನಡೆದ ದಾಳಿಯಲ್ಲಿ ಸುಮಾರು 23 ಮಂದಿ ಮೃತಪಟ್ಟಿದ್ದು, 100ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. 16 ಮಂದಿ ಪ್ರತ್ಯೇಕತಾವಾದಿ ಅರ್ಮೇನಿಯಾ ಹೋರಾಟಗಾರರು ಮೃತಪಟ್ಟಿದ್ದಾರೆ, ನೂರಾರು ಮಂದಿ ಗಾಯಗೊಂಡಿದ್ದಾರೆ ಎಂದು ಬಂಡಾಯಗಾರರು ಅಲ್ ಜಜೀರಾಗೆ ತಿಳಿಸಿದ್ದಾರೆ.

ಅಜರ್ ಬೈಜಾನಿಗಳು ಶೆಲ್ ದಾಳಿಗೆ ಅರ್ಮೆನಿಯಾ ಪ್ರತ್ಯೇಕತಾವಾದಿಗಳ ಒಂದೇ ಕುಟುಂಬದ ಐವರು ಮೃತಪಟ್ಟಿದ್ದನ್ನು ಪ್ರತ್ಯಕ್ಷದರ್ಶಿಯೊಬ್ಬ ವಿವರಿಸಿದ್ದಾನೆ.

ನಗೊರ್ನೊ-ಕರಬಾಖ್ ವಲಯಕ್ಕಾಗಿ ಯುದ್ಧ

ನಗೊರ್ನೊ-ಕರಬಾಖ್ ವಲಯಕ್ಕಾಗಿ ಯುದ್ಧ

ನಗೊರ್ನೊ-ಕರಬಾಖ್ ವಲಯದಲ್ಲಿ ನಾಗರಿಕರ ಹಕ್ಕು, ಅಸ್ತಿತ್ವವನ್ನು ಅಜರ್ ಬೈಜಾನ್ ಕಿತ್ತುಕೊಳ್ಳತೊಡಗಿದೆ. ಗಡಿಯಲ್ಲಿ ನಡೆಯುತ್ತಿರುವ ಶೆಲ್ ದಾಳಿಗಳಿಗೆ ತಾನು ಪ್ರತಿಕ್ರಿಯೆ ಮಾತ್ರ ನೀಡುತ್ತಿದ್ದೇವೆ ಎಂದು ಅರ್ಮೇನಿಯಾ ಪ್ರತಿಕ್ರಿಯಿಸಿದೆ. ಶೆಲ್ ದಾಳಿ, ಫಿರಂಗಿ ದಾಳಿ ನಡೆದಿದೆ, ಅಮಾಯಕರ ಮೇಲೆ ದಾಳಿ ಎಷ್ಟು ಸರಿ ಎಂದು ತೀವ್ರವಾಗಿ ಖಂಡಿಸಲಾಗಿದೆ.

1990ರ ದಶಕದಿಂದಲೂ ಸಂಘರ್ಷ

1990ರ ದಶಕದಿಂದಲೂ ಸಂಘರ್ಷ

1990ರ ದಶಕದಲ್ಲಿ ಎರಡು ದೇಶಗಳ ನಡುವೆ ನಡೆದ ಯುದ್ಧದಲ್ಲಿ ಆರ್ಮೇನಿಯನ್ ಜನಾಂಗೀಯ ಪ್ರತ್ಯೇಕತಾವಾದಿಗಳು ನಗೋರ್ನಿ-ಕರಬಾಖ್ ವಲಯವನ್ನು ಅಜರ್‌ಬೈಜಾನ್‌ನಿಂದ ವಶಪಡಿಸಿಕೊಂಡಿದ್ದರು. ಈ ಯುದ್ಧದಲ್ಲಿ 30,000ಕ್ಕೂ ಅಧಿಕ ಮಂದಿ ಪ್ರಾಣ ಕಳೆದುಕೊಂಡಿದ್ದರು.

ಮೂರು ದಶಕಗಳಿಂದ ಬಗೆಹರಿಯದ ಸಮಸ್ಯೆ

ಮೂರು ದಶಕಗಳಿಂದ ಬಗೆಹರಿಯದ ಸಮಸ್ಯೆ

2016ರ ಎಪ್ರಿಲ್‌ ತಿಂಗಳಿನಲ್ಲಿ ಮತ್ತೊಮ್ಮೆ ಇದೇ ಪ್ರದೇಶಕ್ಕಾಗಿ ನಡೆದ ಸಂಘರ್ಷದಲ್ಲಿ ಸುಮಾರು 110 ಮಂದಿ ಮೃತಪಟ್ಟರು. ಜುಲೈ ತಿಂಗಳಲ್ಲೂ ಸಂಘರ್ಷ ನಡೆದಿದ್ದು, ಕನಿಷ್ಠ 16 ಮಂದಿ ಅಸುನೀಗಿದರು. ಭಾನುವಾರ (ಸೆ. 27) ಎರಡೂ ಕಡೆಗಳಲ್ಲಿ ಸೈನಿಕರು ಮತ್ತು ನಾಗರಿಕರು ಮೃತಪಟ್ಟಿದ್ದಾರೆ .

Recommended Video

Armenia Azerbaijan ನಡುವೆ ಯುದ್ಧ ಸ್ಫೋಟ | Nagorno-Karabakh region | Oneindia Kannada
2 ಹೆಲಿಕಾಪ್ಟರ್, 3 ಡ್ರೋನ್ ನಾಶ

2 ಹೆಲಿಕಾಪ್ಟರ್, 3 ಡ್ರೋನ್ ನಾಶ

ವಿವಾದಿತ ನಗೊರ್ನೊ-ಕರಬಾಖ್ ಪ್ರದೇಶದಲ್ಲಿ ಅಜರ್ ಬೈಜಾನ್ ಗೆ ಸೇರಿದ ಎರಡು ಹೆಲಿಕಾಪ್ಟರ್ ಹಾಗೂ ಮೂರು ಡ್ರೋನ್ ಗಳನ್ನು ನಾಶಪಡಿಸಿರುವುದಾಗಿ ಅರ್ಮೇನಿಯಾದ ರಕ್ಷಣಾ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ಈ ಪ್ರದೇಶದ ನಾಗರಿಕ ವಸಾಹತುಗಳ ಮೇಲೆ ಅಜರ್ ಬೈಜಾನ್ ದಾಳಿ ನಡೆಸಿದ ಎಂದು ಅರ್ಮೇನಿಯಾ ಆರೋಪಿಸಿದೆ. ಆದರೆ, ಪ್ರತಿದಾಳಿಗೆ ಉತ್ತರಿಸುತ್ತಿರುವಾಗಿ ಅಜರ್ ಬೈಜಾನ್ ಸಮರ್ಥಿಸಿಕೊಂಡಿದೆ.

English summary
Heavy fighting between Azerbaijan and Armenian broke out in the disputed Nagorno-Karabakh region. 23 people killed, over 100 injured in the clash.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X