ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಸಿ ಹವೆಯಲ್ಲಿ ಬೇಯುತ್ತಿದೆ ಜಪಾನ್: ವಾರಾಂತ್ಯದಲ್ಲಿ 14 ಬಲಿ

|
Google Oneindia Kannada News

ಟೋಕಿಯೋ, ಜುಲೈ 17: ಜಪಾನ್‌ನಲ್ಲಿ ವಿಪರೀತ ಬಿಸಿ ಗಾಳಿ ವಾತಾವರಣ ಸೃಷ್ಟಿಯಾಗಿದ್ದು, ವಾರಾಂತ್ಯದ ಕಳೆದ ಮೂರು ದಿನಗಳಂದು ಕನಿಷ್ಠ 14 ಮಂದಿ ಬಲಿಯಾಗಿದ್ದಾರೆ.

ಕಳೆದ ವಾರ ಭಾರಿ ಪ್ರವಾಹವು ಸುಮಾರು 200 ಮಂದಿಯನ್ನು ಬಲಿ ತೆಗೆದುಕೊಂಡ ಪ್ರದೇಶಗಳಲ್ಲಿ ಈಗ ಅತ್ಯಧಿಕ ಉಷ್ಣಾಂಶ ಜನರನ್ನು ಸುಡುತ್ತಿದೆ.

ರಷ್ಯಾದೊಂದಿಗೆ ಸಂಬಂಧ ಸುಧಾರಿಸಲು ಉತ್ತಮ ಆರಂಭವಿದು: ಟ್ರಂಪ್ರಷ್ಯಾದೊಂದಿಗೆ ಸಂಬಂಧ ಸುಧಾರಿಸಲು ಉತ್ತಮ ಆರಂಭವಿದು: ಟ್ರಂಪ್

ದೇಶದ ಒಳನಾಡಿನ ಕೆಲವು ಪ್ರದೇಶಗಳಲ್ಲಿ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ಮೀರಿದ್ದು, ಅದರ ಜತೆಗೆ ಬಿಸಿ ತಾಪಮಾನ ಅಪಾಯಕಾರಿ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಜಪಾನ್‌ನ ಹವಾಮಾನ ಇಲಾಖೆ ತಿಳಿಸಿದೆ.

heat wave in japan killed 14 in weekend

ತಮ್ಮ ಹೊಲದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಪತ್ತೆಯಾಗಿದ್ದ 90 ವರ್ಷದ ಮಹಿಳೆಯೊಬ್ಬರು ಸೇರಿದಂತೆ ವಾರಾಂತ್ಯದಲ್ಲಿ 14 ಮಂದಿ ಮೃತಪಟ್ಟಿದ್ದಾರೆ.

ಬಿಸಿ ವಾತಾವರಣದಿಂದಾಗಿ ಸಾವಿರಾರು ಜನರು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ.

ಜಿಫು ಮುಂತಾದ ಭೂಪ್ರದೇಶಗಳಲ್ಲಿ ಬಿಸಿ ಗಾಳಿಯ ತೀವ್ರತೆ ವಿಪರೀತವಾಗಿದ್ದು, ಇಬಿಗವಾ ಪಟ್ಟಣದಲ್ಲಿ ಸೋಮವಾರ 39.3 ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ದೇಶದಲ್ಲಿಯೇ ಅತ್ಯಧಿಕ ಎನಿಸಿಕೊಂಡಿದೆ.

ರಾಜಧಾನಿ ಟೋಕಿಯೋದಲ್ಲಿ ಸೋಮವಾರ 34 ಡಿಗ್ರಿ ಸೆಲ್ಸಿಯಸ್ ಉಷ್ಣತೆ ದಾಖಲಾಗಿತ್ತು.

ಪೂರ್ವ ಜಪಾನ್‌ನ ಪ್ರವಾಹ ಪೀಡಿತ ಪ್ರದೇಶಗಳಲ್ಲಿಯೂ ಉಷ್ಣಾಂಶ ಮಂಗಳವಾರ 34.3 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದರಿಂದ ಕೆಸರು ಹಾಗೂ ಅವಶೇಷಗಳನ್ನು ತೆರವುಗೊಳಿಸುತ್ತಿರುವ ಸೇನಾ ಸಿಬ್ಬಂದಿ ಹಾಗೂ ಕಾರ್ಯಕರ್ತರಿಗೆ ಅಪಾಯ ಎದುರಾಗಿದೆ.

ದೇಶದ ಸುಮಾರು 200 ಪ್ರದೇಶಗಳಲ್ಲಿ ತೀವ್ರವಾದ ಬಿಸಿ ವಾತಾವರಣ ಸೃಷ್ಟಿಯಾಗಿದೆ. ಮಳೆ ಬೀಳುವ ಜುಲೈ ತಿಂಗಳಲ್ಲಿ ಈ ಪ್ರಮಾಣದ ಬಿಸಿಲು ಜನರನ್ನು ಕಂಗಾಲಾಗಿಸಿದೆ.

2014ರ ಜುಲೈನಲ್ಲಿ ಸುಮಾರು 213 ಪ್ರದೇಶಗಳಲ್ಲಿ ಇದೇ ರೀತಿಯ ವಾತಾವರಣ ಉಂಟಾಗಿತ್ತು. ಕಳೆದ ವರ್ಷ ಮೇ ತಿಂಗಳಿನಿಂದ ಸೆಪ್ಟೆಂಬರ್ ಅವಧಿಯಲ್ಲಿ ಬಿಸಿ ಹವೆ ತಡೆಯಲಾಗದೆ 48 ಮಂದಿ ಮೃತಪಟ್ಟಿದ್ದರು.

English summary
An intense Heatwave killed at least 14 people over the weekend in Japan. Thousands more were treated in hospitals for heat related conditions.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X