ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮನಕಲಕುವ ಮೆಕ್ಸಿಕೋ ಭೂಕಂಪದ ಭಯಾನಕ ವಿಡಿಯೋ

|
Google Oneindia Kannada News

ಮೆಕ್ಸಿಕೋ, ಸೆಪ್ಟೆಂಬರ್ 20: ಇತ್ತೀಚೆಗಷ್ಟೇ(ಸೆ.8) ಶತಮಾನದ ಅತ್ಯಂತ ಭೀಕರ ಭೂಕಂಪಕ್ಕೆ ಸಾಕ್ಷಿಯಾಗಿದ್ದ ಮೆಕ್ಸಿಕೋ ನಿನ್ನೆ(ಸೆ.19) ಮಧ್ಯರಾತ್ರಿ ಮತ್ತೊಂದು ಪ್ರಬಲ ಭೂಕಂಪಕ್ಕೆ ತತ್ತರಿಸಿದೆ.

ಸೆ.8 ರಂದು ಸಂಭವಿಸಿದ್ದ 8.1 ತೀವ್ರತೆಯ ಭೂಕಂಪದಲ್ಲಿ 90 ಕ್ಕೂ ಹೆಚ್ಚು ಜನ ಮೃತರಾಗಿದ್ದರೆ, ಸೆ. 19 ರಂದು ಸಂಭವಿಸಿದ ಭೂಕಂಪದಲ್ಲಿ 139 ಜನ ಬಲಿಯಾಗಿದ್ದು, ರಿಕ್ಟರ್ ಮಾಪನದಲ್ಲಿ 7.1 ತೀವ್ರತೆ ದಾಖಲಾಗಿದೆ.

ಮೆಕ್ಸಿಕೋ ಭೂಕಂಪ: ಸಾವಿನ ಸೂಚ್ಯಂಕ 139ಕ್ಕೆ ಏರಿಕೆ ಮೆಕ್ಸಿಕೋ ಭೂಕಂಪ: ಸಾವಿನ ಸೂಚ್ಯಂಕ 139ಕ್ಕೆ ಏರಿಕೆ

ಮೆಕ್ಸಿಕೋ ಭೂಕಂಪದ ಭಯಾನಕ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿ, ಭೂಕಂಪದ ತೀವ್ರತೆಯನ್ನು ಮನದಟ್ಟುಮಾಡುತ್ತಿದೆ.

ಭಯ ಹುಟ್ಟಿಸುವ ಮೆಕ್ಸಿಕೋ ಭೂಕಂಪದ ವೈರಲ್ ವಿಡಿಯೋಭಯ ಹುಟ್ಟಿಸುವ ಮೆಕ್ಸಿಕೋ ಭೂಕಂಪದ ವೈರಲ್ ವಿಡಿಯೋ

ಇನ್ನೂ ಅಚ್ಚರಿಯ ವಿಷಯವೆಂದರೆ, ಮೆಕ್ಸಿಕೋ ಜನರು ಎಂದಿಗೂ ಮರೆಯಲಾರದ 1985 ರಲ್ಲಿ ಸಾವಿರಾರು ಜನರನ್ನು ಬಲಿಪಡೆದಿದ್ದ ಭೂಕಂಪ ಸಂಭವಿಸಿದ್ದೂ ಸೆ.19 ರಂದೇ. ಆ ಕಹಿ ಘಟನೆಯನ್ನು ನೆನಪಿಸಿಕೊಂಡು, ಮಡಿದವರಿಗೆ ಶೃದ್ಧಾಂಜಲಿ ಅರ್ಪಿಸಲು ಸಿದ್ಧರಾಗಿದ್ದ ಜನರು ಇದೀಗ ಮತ್ತೊಂದು ಘೋರ ದುರಂತಕ್ಕೆ ಸಾಕ್ಷಿಯಾಗಿದ್ದು ವಿಪರ್ಯಾಸವೇ ಸರಿ.

ಮಾನವೀಯ ಕ್ಷಣ

ಅರೆಕ್ಷಣ ಭೂಮಿ ಕಂಪಿಸಿದ್ದಕ್ಕೆ ಮೆಕ್ಸಿಕೋದಲ್ಲಿ ಸಂಭವಿಸಿದ ಭೂಕಂಪ ಹಲವು ಮಾನವೀಯ ಕ್ಷಣಗಳಿಗೂ ಸಾಕ್ಷಿಯಾಯಿತು. ರಕ್ಷಣಾ ಕಾರ್ಯ ನಡೆಸುತ್ತಿದ್ದ ತಂಡ, ನಾಯಿಯೊಂದನ್ನು ರಕ್ಷಿಸುವ ಮೂಲಕ ಜೀವವಿರುವ ಎಲ್ಲ ಜಂತುಗಳ ರಕ್ಷಣೆಯೂ ತನ್ನ ಹೊಣೆ ಎಂಬುದನ್ನು ಸಾಬೀತುಪಡಿಸಿತು.

ಧರೆಗುರುಳಿದ ಕಟ್ಟಡ

ಮೆಕ್ಸಿಕೋ ಭೂಕಂಪದಲ್ಲಿ ನೋಡುನೋಡುತ್ತಿದ್ದಂತೆಯೇ ಕಟ್ಟಡವೊಂದು ಧರೆಗುರುಳುತ್ತಿರುವ ದೃಶ್ಯವನ್ನು ವ್ಯಕ್ತಿಯೊಬ್ಬರು ಸೆರೆಹಿಡಿದು ಸಾಮಾಜಿಕ ತಾಣಗಳಲ್ಲಿ ಹರಿಬಿಟ್ಟಿದ್ದು, ಈ ದೃಶ್ಯ ಅಲ್ಲಿನ ಭೂಕಂಪದ ಭೀಕರತೆಗೆ ಸಾಕ್ಷಿಯಾಗಿದೆ.

ಅಲುಗಾಡುವ ಕಟ್ಟಡ

ಮೆಕ್ಸಿಕೋ ನಗರದಲ್ಲಿ ಸಂಭವಿಸಿದ 7.1 ತೀವ್ರತೆಯ ಭೂಕಂಪಕ್ಕೆ ಕಟ್ಟಡವೊಂದು ಅಲುಗಾಡುತ್ತಿರುವ ಭಯಂಕರ ದೃಶ್ಯ.

ತಲೆಬಾಗುತ್ತಿದೆ ಗಗನಚುಂಬಿ ಕಟ್ಟಡ!

ಮೆಕ್ಸಿಕೋ ನಗರದ ಹಲವು ಗಗನಚುಂಬಿ ಕಟ್ಟಡಗಳು ಭೂಕಂಪದಿಂದಾಗಿ ತಲೆಬಾಗುತ್ತಾ ನಿಂತ ದೃಶ್ಯ.

ಸಂತ್ರಸ್ತರಿಗಾಗಿ ಪ್ರಾರ್ಥಿಸೋಣ

ಬೃಹತ್ ಕಟ್ಟಡಗಳು ನಿರ್ದಾಕ್ಷಿಣ್ಯವಾಗಿ ಧರೆಗುರುಳಿರುವ ದೃಶ್ಯವೊಂದನ್ನು ಶೇರ್ ಮಾಡಿರುವ ಟ್ವಿಟ್ಟಿಗರೊಬ್ಬರು, ಸಂತ್ರಸ್ಥರಿಗಾಗಿ ಪ್ರಾರ್ಥಿಸೋಣ ಎಂದು ಮನವಿ ಮಾಡಿಕೊಂಡಿದ್ದಾರೆ.

ತೂಗುಯ್ಯಾಲೆಯಾಯ್ತು ಟ್ರೈನು!

ಭುಕಂಪದ ಸಮಯದಲ್ಲಿ ನಿಂತಿದ್ದ ರೈಲೊಂದು ತೂಗುಯ್ಯಾಲೆಯಂತೆಯೇ ತೂಗಾಡುತ್ತಿತ್ತು!

ಕಟ್ಟಡ ಹೊತ್ತುರಿದ ದೃಶ್ಯ

ಭೂಕಂಪದ ಸಮಯದಲ್ಲಿ ಕಟ್ಟಡವೊಂದು ಹೊತ್ತಿ ಉರಿದ ಭಯಾನಕ ದೃಶ್ಯ ಕಂಡುಬಂದಿದ್ದು ಹೀಗೆ!

English summary
Nearly 139 people have reportedly been killed after a powerful earthquake of magnitude 7.1 on Richter scale struck Mexico on 19th of September, causing serious damage to lives and property in the region. Here are some viral videos of the earthquake.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X