ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಚಿಂತೆ ಬಿಡಿ ವಿಟಮಿನ್ ಡಿ ವೃದ್ಧಿಸಿ; ಇದು ಹೃದಯದ ವಿಷಯ

|
Google Oneindia Kannada News

ನವದೆಹಲಿ, ಏಪ್ರಿಲ್.09: ಕೊರೊನಾ ವೈರಸ್. ಕೊರೊನಾ ವೈರಸ್. ದೇಶವಷ್ಟೇ ಅಲ್ಲ ವಿಶ್ವದಾದ್ಯಂತ ಕೊರೊನಾ ವೈರಸ್ ನದ್ದೇ ಸದ್ದು. ಯಾವಾಗ ಮಹಾಮಾರಿ ತಮ್ಮ ದೇಹಕ್ಕೆ ಅಂಟಿಕೊಳ್ಳತ್ತದೆಯೋ ಎಂಬ ಆತಂಕದಲ್ಲಿ ಜನರು ದಿನ ಕಳೆಯುವಂತಾ ಸ್ಥಿತಿ ನಿರ್ಮಾಣವಾಗಿದೆ.

ರೋಗ ನಿರೋಧಕ ಶಕ್ತಿ ಹೆಚ್ಚಾಗಿದ್ದಲ್ಲಿ ಕೊರೊನಾ ವೈರಸ್ ನಿಂದಲೂ ಪಾರಾಗಬಹುದು ಎಂದು ವೈದ್ಯರು ಮತ್ತು ವಿಜ್ಞಾನಿಗಳೇ ಸಲಹೆ ನೀಡುತ್ತಿದ್ದಾರೆ. ಹಾಗಿದ್ದಲ್ಲಿ ವಿಟಮಿನ್ ಡಿ ವೃದ್ಧಿಸಿಕೊಳ್ಳುವುದು ಹೇಗೆ ಅದರಿಂದ ಏನು ಲಾಭ ಎಂಬುದನ್ನು ಸಂಶೋಧನಾ ವರದಿಯೊಂದು ಬಿಚ್ಚಿಟ್ಟಿದೆ.

ಕಾರ್ ಡ್ರೈವಿಂಗ್ ನಲ್ಲಿ ಪುರುಷರಿಗಿಂತ ಮಹಿಳೆಯರೇ ಸೂಪರ್ ಗುರೂ! ಕಾರ್ ಡ್ರೈವಿಂಗ್ ನಲ್ಲಿ ಪುರುಷರಿಗಿಂತ ಮಹಿಳೆಯರೇ ಸೂಪರ್ ಗುರೂ!

ವಿಟಮಿನ್ ಡಿ ಹೆಚ್ಚಿಸಿಕೊಳ್ಳಲು ಪೋಷ್ಠಕಾಂಶಗಳುಳ್ಳ ಆಹಾರ ಮತ್ತು ಹಣ್ಣು ತರಕಾರಿಗಳನ್ನು ಸೇವಿಸಲು ವೈದ್ಯರು ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಹೃದಯವನ್ನು ಆರೋಗ್ಯಕರವಾಗಿ ಇಡಲು ಹಾಗೂ ಮೂಳೆಗಳನ್ನು ಬಲಿಷ್ಠವಾಗಿ ಇರಿಸಲು ಈ ವಿಟಮಿನ್ ಡಿ ಸಹಾಯಕವಾಗಿದೆ.

ವಿಟಮಿನ್ ಡಿ ಹೆಚ್ಚಾಗಿರುವ ಆಹಾರಗಳು

ವಿಟಮಿನ್ ಡಿ ಹೆಚ್ಚಾಗಿರುವ ಆಹಾರಗಳು

ಇನ್ನು, ಸಾಲ್ಮನ್ ಫಿಶ್, ಗಿಣ್ಣು, ಮೀನಿನ ಎಣ್ಣೆ, ಅಣಬೆ, ಹಳದಿ ಮೊಟ್ಟೆ ಸೇರಿದಂತೆ ಹಲವು ವಿಧದ ಆಹಾರಗಳಲ್ಲಿ ವಿಟಮಿನ್ ಡಿ ಅಂಶ ಹೆಚ್ಚಾಗಿರುತ್ತದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ಮನುಷ್ಯರಲ್ಲಿ ವಿಟಮಿನ್ ಡಿ ವೃದ್ಧಿಸುವುದರಿಂದ ದೇಹದ ಮೂಳೆಗಳು ಬಲಶಾಲಿಯಾಗಿರುತ್ತದೆ.

ವಿಟಮಿನ್ ಡಿ ಕೊರತೆಯಿದ್ದಲ್ಲಿ ಇಷ್ಟೆಲ್ಲ ಸಮಸ್ಯೆ

ವಿಟಮಿನ್ ಡಿ ಕೊರತೆಯಿದ್ದಲ್ಲಿ ಇಷ್ಟೆಲ್ಲ ಸಮಸ್ಯೆ

ಜರ್ನಲ್ ಆಫ್ ನ್ಯಾಷನಲ್ ಹ್ಯೂಮನ್ ನ್ಯೂಟ್ರಿಷನ್ ಆಂಡ್ ಡಯೆಟಿಕ್ಸ್ ನಡೆಸಿದ ಅಧ್ಯಯನ ವರದಿಯಲ್ಲಿ ಈ ಬಗ್ಗೆ ಉಲ್ಲೇಖಿಸಲಾಗಿದೆ. ಕಳೆದ 10 ವರ್ಷಗಳಲ್ಲಿ ವಿಟಮಿನ್ ಡಿ ಕೊರತೆಯಿಂದಲೇ ಅತಿಹೆಚ್ಚು ಜನರು ಹೃದ್ರೋಗಕ್ಕೆ ಗುರಿಯಾಗಿರುವುದು ಕಂಡು ಬಂದಿದೆ. ಇದರ ಜೊತೆಗೆ ಉರಿಯೂತ, ರಕ್ತ ಹೆಪ್ಪುಗಟ್ಟುವಿಕೆ, ಕಿಡ್ನಿ ವೈಫಲ್ಯದಂತ ಸಮಸ್ಯೆಗಳನ್ನು ಎದುರಿಸಿದ್ದು ತಿಳಿದು ಬಂದಿದೆ.

ಹ್ಯಾರೋಕೋಪಿಯೋ ವಿವಿಯಲ್ಲಿ ನಡೆದ ಸಂಶೋಧನೆ

ಹ್ಯಾರೋಕೋಪಿಯೋ ವಿವಿಯಲ್ಲಿ ನಡೆದ ಸಂಶೋಧನೆ

ಕಳೆದ 2001 ರಿಂದ 2012ರವರೆಗೂ ಅಂಕಿ-ಅಂಶಗಳನ್ನು ತೆಗೆದುಕೊಂಡು ಹ್ಯಾರೋಕೋಪಿಯೋ ವಿಶ್ವವಿದ್ಯಾಲಯದಲ್ಲಿ ಸಂಶೋಧನೆ ನಡೆಸಲಾಯಿತು. ಈ ವೇಳೆ ಗ್ರೀಸ್ ನಲ್ಲಿರುವ ಗ್ರೇಟರ್ ಅಥೆನ್ಸ್ ಪ್ರದೇಶದಲ್ಲಿ 1,514 ಪುರುಷರು 1,528 ಮಂದಿ ಮಹಿಳೆಯರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು.

ಸಂಶೋಧನೆಯಲ್ಲಿ ಮೂರು ಹಂತಗಳಾಗಿ ವಿಂಗಡನೆ

ಸಂಶೋಧನೆಯಲ್ಲಿ ಮೂರು ಹಂತಗಳಾಗಿ ವಿಂಗಡನೆ

ಜನರು ಸೇವಿಸುವ ಆಹಾರ ಪದ್ಧತಿಯು ವಿಟಮಿನ್ ಡಿ ವೃದ್ಧಿಸಿಕೊಳ್ಳಲು ಸಹಾಯಕಾರಿ ಆಗಿರುತ್ತದೆ. ಇದನ್ನು ಆಧರಿಸಿ ಸಂಶೋಧಕರು ಮೂರು ಹಂತಗಳಾಗಿ ವಿಂಗಡಿಸಿದ್ದಾರೆ. ವಿಟಮಿನ್ ಡಿ ಕೊರತೆಯಿಂದ ಹೃದಯಾಘಾತ ಮತ್ತು ಪಾರ್ಶ್ವವಾಯು ಹೊಡೆಯುವ ಅಪಾಯವಿರುತ್ತದೆ. ಪುರುಷರಲ್ಲಿ ಶೇ.24, ಶೇ.17, ಶೇ.12ರಷ್ಟು ಎಂದು ವಿಂಗಡಿಸಲಾಗಿದೆ. ಇನ್ನು, ಮಹಿಳೆಯರಲ್ಲಿ ಶೇ.14, ಶೇ.10, ಶೇ.11ರಷ್ಟು ಎಂದು ಗುರುತಿಸಲಾಗಿದೆ.

English summary
Health Story: How To Improve Vitamin D And Why.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X