ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವೈದ್ಯಲೋಕಕ್ಕೆ ಶಾಕ್: ಡೆಡ್ಲಿ ವೈರಸ್ ಅಟ್ಯಾಕ್

By Mahesh
|
Google Oneindia Kannada News

ನಾರ್ಥ್ ಕರೋಲಿನಾ, ಜು.28: ಅತ್ಯಂತ ಮಾರಕ ವೈರಾಣು ಎಂದು ಪರಿಗಣಿಸಲಾಗಿರುವ 'ಎಬೋಲಾ' ಪೀಡಿತರಿಗೆ ಚಿಕಿತ್ಸೆ ನೀಡುತ್ತಿದ್ದ ವೈದ್ಯರೊಬ್ಬರಿಗೆ ಸೋಂಕು ತಗುಲಿರುವ ಸುದ್ದಿ ಹೊರ ಬಿದ್ದಿದೆ.

ನಾರ್ಥ್ ಕರೋಲಿನಾ ಮೂಲದ ಡಾ. ಕೆಂಟ್ ಬ್ರಾಂಟ್ಲಿ ಅವರು ಲಿಬೇರಿಯಾದ ಎಬೋಲಾ ವೈರಸ್ ಪೀಡಿತ ರೋಗಿಯೊಬ್ಬರಿಗೆ ಹಲವು ಕಾಲದಿಂದ ಚಿಕಿತ್ಸೆ ನೀಡುತ್ತಿದ್ದರು. ಇತ್ತೀಚಿಗೆ ಡಾ. ಕೆಂಟ್ ಅವರ ದೇಹಾರೋಗ್ಯದಲ್ಲಿ ಇದ್ದಕ್ಕಿದ್ದಂತೆ ವ್ಯತ್ಯಾಸ ಕಂಡು ಬಂದಿತು. ತಕ್ಷಣವೇ ಪರೀಕ್ಷೆಗೆ ಒಳಪಡಿಸಿದ ನಂತರ 'ಪಾಸಿಟಿವ್' ಎಂದು ತಿಳಿದು ಬಂದಿದೆ. ಲಿಬೇರಿಯಾದ ಮೊನ್ರೊವಿಯಾದ ಆಸ್ಪತ್ರೆಯಲ್ಲಿ ಡಾ. ಕೆಂಟ್ ಅವರಿಗೂ ಚಿಕಿತ್ಸೆ ನೀಡಲಾಗುತ್ತಿದೆ.

ಅತ್ಯಂತ ವೇಗವಾಗಿ ಹರಡಬಲ್ಲ ಸಾಂಕ್ರಾಮಿಕ ವೈರಸ್ ವಿಶ್ವದ ಅತ್ಯಂತ ಮಾರಕ ವೈರಾಣುಗಳಲ್ಲಿ ಒಂದೆನಿಸಿದೆ. ಎಬೋಲಾ ವೈರಾಣು ಪೀಡಿತ ರೋಗಿಗಳಿಗೆ ನೀಡುವ ಚಿಕಿತ್ಸೆ ಹಾಗೂ ಪ್ರತ್ಯೇಕ ಕೊಠಡಿಗಳ ಬಗ್ಗೆ 33 ವರ್ಷ ವಯಸ್ಸಿನ ಡಾ. ಕೆಂಟ್ ಅವರು ಸಮರಿಥಾನ್ ಪರ್ಸ್ ಸಂಸ್ಥೆಯ ವೆಬ್ ತಾಣಗಳಲ್ಲಿ ಲೇಖನಗಳನ್ನು ಬರೆಯುತ್ತಿದ್ದರು. ಅಕ್ಟೋಬರ್ 2013ರಿಂದ ಈ ವೈರಾಣು ಪೀಡಿತರಿಂದ ಚಿಕಿತ್ಸೆ ನೀಡುತ್ತಿದ್ದಾರೆ.

Health Shocker: Doctor treating Ebola diagnosed of that deadly virus

ಎಬೋಲಾ ವೈರಾಣು ಕಾಣಿಸಿಕೊಂಡು ಈ ವರ್ಷದಲ್ಲೇ ಆಫ್ರಿಕಾದ ವಿವಿಧ ದೇಶಗಳಲ್ಲಿ ಸುಮಾರು 672 ಮಂದಿಯನ್ನು ಬಲಿ ತೆಗೆದುಕೊಂಡಿದೆ. ಮಲೇರಿಯಾ, ಕಾಲರ, ವೈರಲ್ ಫೀವರ್ ಮಾದರಿಯಲ್ಲೇ ರೋಗದ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ. ಜ್ವರ, ಗಂಟಲು ನೋವು, ಕೈಕಾಲು ನೋವು, ತಲೆನೋವಿನೊಂದಿಗೆ ಆರಂಭವಾಗಿ ಆಮಶಂಕೆ, ಕರಳು ಬೇನೆ, ಕಿಡ್ನಿ ವೈಫಲ್ಯ ಉಂಟಾಗಲಿದೆ. ಕೊನೆ ಕೊನೆಗೆ ರಕ್ತ ಸ್ರಾವ ಉಂಟಾಗಿ ರೋಗಿ ಸಾವನ್ನಪ್ಪುತ್ತಾನೆ.

1976ರಲ್ಲಿ ಎಬೋಲಾ ಜ್ವರ ಜೈರೆ ಹಾಗೂ ಸುಡಾನ್ ಪ್ರಾಂತ್ಯದಲ್ಲಿ ಕಾಣಿಸಿಕೊಂಡಿತ್ತು.[ಇಲ್ಲಿವರೆಗಿನ ಸಾವು ನೋವಿನ ಪಟ್ಟಿ] ಎಬೋಲಾ ನದಿ ಸಮೀಪದಲ್ಲಿ ವಾಸಿಸುವ ಜನರಿಗೆ ಮೊಟ್ಟ ಮೊದಲು ಈ ವೈರಾಣು ಪ್ರಾಣಿಗಳಿಂದ ಹರಡಿದ ಕಾರಣ ಈ ವೈರಸ್ ಗೆ ಎಬೋಲಾ ವೈರಸ್ ಎಂದು ಹೆಸರಿಡಲಾಗಿದೆ. ಎಬೋಲಾ ವೈರಸ್ ಪೀಡಿತರಿಗೆ ಪ್ರತ್ಯೇಕ ಚುಚ್ಚುಮದ್ದು ಇದುವರೆವಿಗೂ ಕಂಡು ಹಿಡಿಯಲಾಗಿಲ್ಲ. ರೋಗಿ ನಿತ್ರಾಣನಾಗದಂತೆ ಎಚ್ಚರಿಕೆವಹಿಸುತ್ತಾ, ಆಮ್ಲಜನಕ ಪ್ರಮಾಣ, ನೋವು ನಿವಾರಣೆ, ಆಂಟಿ ಬಯೋಟಿಕ್ ನೀಡಿಕೆ ಮೂಲಕ ವೈರಾಣು ರೋಗವನ್ನು ಉಲ್ಬಣಗೊಳಿಸದಂತೆ ತಡೆಗಟ್ಟಲಾಗುತ್ತದೆ.

English summary
Shockingly, an American doctor working with Ebola patients in Liberia has tested positive for the deadly virus, an aid organization said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X