ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಉಕ್ರೇನ್‌ನಲ್ಲಿ ಕೊರೊನಾವೈರಸ್‌ನ 5 ತಳಿಗಳು ಸಕ್ರಿಯ

|
Google Oneindia Kannada News

ಉಕ್ರೇನ್, ಡಿಸೆಂಬರ್ 31: ಉಕ್ರೇನ್‌ನಲ್ಲಿ ಕೊರೊನಾವೈರಸ್‌ನ 5 ತಳಿಗಳು ಸಕ್ರಿಯವಾಗಿವೆ ಎಂಬ ಮಾಹಿತಿ ಲಭ್ಯವಾಗಿದೆ. ಈ ಕುರಿತು ವಿಶ್ವ ಆರೋಗ್ಯ ಸಂಸ್ಥೆಯೂ ಎಚ್ಚರಿಕೆ ಸಂದೇಶ ರವಾನಿಸಿದೆ.

ಚೀನಾದಲ್ಲಿ ಕಳೆದ ವರ್ಷ ಹರಡಿದ್ದ ಕೊರೊನಾ ವೈರಾಣು ಈಗಾಗಲೇ ಹಲವು ದೇಶಗಳಲ್ಲಿ ರೂಪಾಂತರಗೊಂಡಿದ್ದು, ಹೊಸ ಆತಂಕ ಸೃಷ್ಟಿಸಿದೆ. ದಕ್ಷಿಣ ಆಫ್ರಿಕಾ, ಬ್ರಿಟನ್ ಗಳಲ್ಲಿ ಪ್ರಮುಖವಾಗಿ ಈ ಹೊಸ ಸೋಂಕು ಕಂಡುಬಂದಿರುವ ಬೆನ್ನಲ್ಲೆ ಉಕ್ರೇನ್ ನಲ್ಲಿ ಹೊಸ ತಳಿಗಳು ಪತ್ತೆಯಾಗಿವೆ.

ದೇಶದಲ್ಲಿ ರೂಪಾಂತರ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆದೇಶದಲ್ಲಿ ರೂಪಾಂತರ ಸೋಂಕಿನ ಪ್ರಕರಣಗಳ ಸಂಖ್ಯೆ ಏರಿಕೆ

ಈ ದೇಶದ 9 ಪ್ರದೇಶಗಳಲ್ಲಿ 50 ಪರೀಕ್ಷೆ ಸ್ಯಾಂಪಲ್ ಗಳನ್ನು ಸಂಗ್ರಹಿಸಿ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಈ ಮಾಹಿತಿಯನ್ನು ಬಹಿರಂಗಪಡಿಸಿದೆ.

Health Ministry Says Five Coronavirus Strains Circulating In Ukraine

ಉಕ್ರೇನ್ ನಲ್ಲಿ ಹರಡುತ್ತಿರುವ ವೈರಾಣು ಜಾಗತಿಕ ಜೆನೆಟಿಕ್ ಲೈನ್ ಬಿ ಗೆ ಸೇರಿದ್ದಾಗಿದ್ದು, ಚೀನಾ ಮೂಲವನ್ನು ಹೊಂದಿದೆ. ಇದರ ಮುಂದುವರೆದ ಭಾಗವಾಗಿ B1; B1.1; B1.1.1; V1.5 ಹಾಗೂ V2 ಪ್ರಬೇಧಗಳು ಕಂಡುಬಂದಿವೆ.

ಬ್ರಿಟನ್ ನ ಕೊರೊನಾ ರೂಪಾಂತರ ಸೋಂಕಿನ ಪ್ರಕರಣಗಳು ದೇಶದಲ್ಲಿಯೂ ಕಂಡುಬರುತ್ತಿದ್ದು, ಗುರುವಾರ ಐದು ಹೊಸ ಪ್ರಕರಣಗಳು ಪತ್ತೆಯಾಗಿರುವುದಾಗಿ ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಗುರುವಾರ ರೂಪಾಂತರ ಸೋಂಕಿನ ಐದು ಹೊಸ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ದೇಶದಲ್ಲಿ 25 ಮಂದಿಗೆ ಸೋಂಕು ತಗುಲಿರುವುದಾಗಿ ತಿಳಿದುಬಂದಿದೆ. ಪುಣೆಯ ಎನ್ ಐವಿ ಸ್ ಸಂಸ್ಥೆ ನಾಲ್ಕು, ದೆಹಲಿಯ ಐಬಿಐಬಿ ಸಂಸ್ಥೆ ಒಂದು ಪ್ರಕರಣವನ್ನು ಪತ್ತೆ ಹಚ್ಚಿವೆ. 25 ಮಂದಿಯನ್ನೂ ಐಸೊಲೇಷನ್ ನಲ್ಲಿರಿಸಿ ಸರ್ಕಾರ ಚಿಕಿತ್ಸೆ ವ್ಯವಸ್ಥೆ ಮಾಡಿದೆ.

ಬುಧವಾರ ಭಾರತದಲ್ಲಿ ಬ್ರಿಟನ್ ರೂಪಾಂತರದ 14 ಕೊರೊನಾ ವೈರಸ್ ಪ್ರಕರಣಗಳು ಪತ್ತೆಯಾಗಿದ್ದವು. ಮಂಗಳವಾರ ಆರು ಮಂದಿಯಲ್ಲಿ ಪತ್ತೆಯಾಗಿತ್ತು.

English summary
Five strains of new coronavirus infection are circulating in Ukraine, the relevant data were obtained from the World Health Organization (WHO) after examining 50 test samples from nine regions of Ukraine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X