ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಲಿಬಾನಿಗಳಿಂದ ಅಫ್ಘಾನ್ ಸರ್ಕಾರಿ ಮಾಧ್ಯಮ ಮುಖ್ಯಸ್ಥರ ಹತ್ಯೆ

|
Google Oneindia Kannada News

ಕಾಬೂಲ್, ಆಗಸ್ಟ್ 06: ತಾಲಿಬಾನಿಗಳು ಅಫ್ಘಾನಿಸ್ತಾನದಲ್ಲಿ ಸರ್ಕಾರಿ ಮಾಧ್ಯಮ ಮುಖ್ಯಸ್ಥರನ್ನು ಹತ್ಯೆಗೈದಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಇತ್ತೀಚಿನ ತಿಂಗಳುಗಳಲ್ಲಿ ಪತ್ರಕರ್ತರು ಮತ್ತು ಮಾನವ ಹಕ್ಕುಗಳ ಹೋರಾಟಗಾರರ ಹತ್ಯೆ ಹೆಚ್ಚುತ್ತಿದ್ದು, ತಾಲಿಬಾನಿಗಳು ಶುಕ್ರವಾರ ಅಫ್ಘಾನಿಸ್ತಾನದ ಸರ್ಕಾರಿ ಮಾಧ್ಯಮ ಕೇಂದ್ರದ ನಿರ್ದೇಶಕರನ್ನು ತಾಲಿಬಾನ್ ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ.

ಸಚಿವರ ನಿವಾಸದ ಬಳಿ ಬಾಂಬ್‌ ಸ್ಫೋಟ: ತಾಲಿಬಾನ್‌ ವಶದಲ್ಲಿರುವ ಪ್ರದೇಶ ತೊರೆಯಲು ನಾಗರಿಕರಿಗೆ ಸೂಚನೆಸಚಿವರ ನಿವಾಸದ ಬಳಿ ಬಾಂಬ್‌ ಸ್ಫೋಟ: ತಾಲಿಬಾನ್‌ ವಶದಲ್ಲಿರುವ ಪ್ರದೇಶ ತೊರೆಯಲು ನಾಗರಿಕರಿಗೆ ಸೂಚನೆ

"ಮುಜಾಹಿದ್ದೀನ್ ವಿಶೇಷ ದಾಳಿಯಲ್ಲಿ ಮೆನಾಪಾಲ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿದೆ" ಎಂದು ಮುಜಾಹಿದ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 Head of Afghanistan governments media department killed by Taliban fighters

ಮುಜಾಹಿದ್ ಅವರು ಘಟನೆ ಬಗ್ಗೆ ಯಾವುದೇ ಹೆಚ್ಚಿನ ವಿವರಗಳನ್ನು ನೀಡಿಲ್ಲ. ಆದರೆ ಅಫ್ಘಾನಿಸ್ತಾನವು ಪತ್ರಕರ್ತರಿಗೆ ವಿಶ್ವದ ಅತ್ಯಂತ ಅಪಾಯಕಾರಿ ದೇಶಗಳಲ್ಲಿ ಒಂದಾಗಿದೆ.

ಇರಾನ್‌ ಅಫ್ಘಾನಿಸ್ತಾನದ ಪ್ರಮುಖ ವ್ಯಾಪಾರ ಮಾರ್ಗದಲ್ಲಿ ಒಂದಾದ ಇಸ್ಲಾಂ ಖುಲಾ ಗಡಿ ಪಟ್ಟಣ ಮತ್ತು ತುರ್ಕ್ ಮೇನಿಸ್ತಾನದ ಮತ್ತೊಂದು ವ್ಯಾಪಾರ ಮಾರ್ಗವಾಗಿರುವ ತೋರ್ಘುಂಡಿ ಗಡಿ ಪಟ್ಟಣವು ತಾಲಿಬಾನ್‌ ವಶವಾಗಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.

ತಾಲಿಬಾನ್ ವಕ್ತಾರ ಜಬೀಹುಲ್ಲಾ ಮುಜಾಹಿದ್ ಅಸೋಸಿಯೇಟೆಡ್ ಪ್ರೆಸ್‌ಗೆ ಈ ಮಾಹಿತಿ ನೀಡಿದ್ದು, ಸ್ಥಳೀಯ ಮತ್ತು ವಿದೇಶಿ ಮಾಧ್ಯಮಗಳಿಗೆ ಸರ್ಕಾರದ ಪತ್ರಿಕಾ ಕಾರ್ಯಾಚರಣೆಗಳನ್ನು ನಡೆಸುತ್ತಿದ್ದ ದವಾ ಖಾನ್ ಮೆನಾಪಾಲ್ ಅವರನ್ನು ಗುಂಪು ಹೋರಾಟಗಾರರು ಹತ್ಯೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ.

ಇದೀಗ 85 ಪ್ರತಿಶತದಷ್ಟು ಅಫ್ಘಾನ್ ಪ್ರಾಂತ್ಯವನ್ನು ನಾವು ನಿಯಂತ್ರಿಸುತ್ತಿದ್ದೇವೆ ಎಂದು ತಾಲಿಬಾನ್ ಹೇಳಿದೆ.

ಎರಡೂ ಪ್ರಮುಖ ಗಡಿ ಪಟ್ಟಣಗಳು ದೇಶದ ಹೆರಾತ್ ಪ್ರಾಂತ್ಯದಲ್ಲಿವೆ. ದೇಶದಲ್ಲಿ ಭದ್ರತಾ ಪರಿಸ್ಥಿತಿ ಹದಗೆಡುತ್ತಿರುವುದರಿಂದ, ಇರಾನ್, ತಜಿಕಿಸ್ತಾನ್, ತುರ್ಕ್ ಮೆನಿಸ್ತಾನ್, ಚೀನಾ ಮತ್ತು ಪಾಕಿಸ್ತಾನ- ಐದು ದೇಶಗಳ ಗಡಿಯಲ್ಲಿನ ಪ್ರದೇಶಗಳನ್ನು ತಾಲಿಬಾನ್ ಆಕ್ರಮಿಸಿದೆ ಎಂದು ಅರಿಯಾನಾ ನ್ಯೂಸ್ ವರದಿ ಮಾಡಿದೆ.

ಇಸ್ಲಾಂ ಖುಲಾ ತಾಲಿಬಾನ್ ಗೆ ವಶವಾದ ನಂತರ ವ್ಯಾಪಾರ ಚಟುವಟಿಕೆಗಳನ್ನು ನಿಲ್ಲಿಸಲಾಗಿದೆ ಎಂದು ಹೆರಾತ್ ಕಸ್ಟಮ್ಸ್ ವಿಭಾಗದ ಹಿರಿಯ ಅಧಿಕಾರಿ ನಿಸಾರ್ ಅಹ್ಮದ್ ನಾಸೇರಿ ಹೇಳಿದ್ದಾರೆ.

ತಾಲಿಬಾನ್ ಎರಡು ಮಹತ್ವದ ಗಡಿ ಪಟ್ಟಣಗಳನ್ನು ವಶಪಡಿಸಿಕೊಂಡಿದೆ ಎಂದು ಪ್ರಾಂತ್ಯದ ಮೂಲಗಳು ಟೋಲೋ ಸುದ್ದಿಸಂಸ್ಥೆಗೆ ತಿಳಿಸಿವೆ, ಅಲ್ಲಿ ಬೀಡುಬಿಟ್ಟಿರುವ ಭದ್ರತಾ ಪಡೆಗಳು ಈ ಪ್ರದೇಶಕ್ಕೆ ತಾಲಿಬಾನ್ ಪ್ರವೇಶಿಸಿದ ನಂತರ ಇರಾನ್‌ಗೆ ಗಡಿ ದಾಟಿ ಹೋಗಿವೆ.

ಯುಎಸ್ ಮಿಲಿಟರಿ ಪಡೆಗಳು 2021ರ ಆಗಸ್ಟ್ 31ರಂದು ಅಪಘಾನಿಸ್ತಾನದಿಂದ ಹೊರ ಬರಲಿವೆ, ಅದಕ್ಕಿಂತ ಒಂದು ತಿಂಗಳು ಮೊದಲೇ, ತಾಲಿಬಾನ್ ನಿಯೋಗವೊಂದು ಚೀನಾದ ಟಿಯಾಂಜಿನ್‍ನಲ್ಲಿ ಜುಲೈ 28ರಂದು ಸ್ನೇಹ ಸಂಬಂಧದ ಮಾತುಕತೆ ನಡೆಸಿದೆ.

ಚೀನಾದ ವಿದೇಶಿ ಸಚಿವಾಲಯದ ವೆಬ್‍ಸೈಟ್‍ನಲ್ಲಿ, ಚೀನಾದ ವಿದೇಶಾಂಗ ಮಂತ್ರಿ ವಾಂಗ್ ಯಿ ಜೊತೆ ತಾಲಿಬಾನ್‍ ಸಂಸ್ಥಾಪಕ ಮುಲ್ಲಾ ಓಮರ್‌ನ ನಿಕಟ ಸಹವರ್ತಿ ಮತ್ತು ಸಹ ಸಂಸ್ಥಾಪಕ ಮುಲ್ಲಾ ಅಬ್ದುಲ್ ಘನಿ ಬರಾದರ್ ಪೋಸ್ ನೀಡಿರುವ ಫೋಟೋವೊಂದನ್ನು ಪೋಸ್ಟ್ ಮಾಡಲಾಗಿದೆ.ಇನ್ನೊಂದು ಚಿತ್ರದಲ್ಲಿ ಚೀನಾದ ಅಧಿಕಾರಿಗಳು ಮತ್ತು ಇಡೀ ತಾಲಿಬಾನ್ ನಿಯೋಗವಿದೆ.

ಆ ಫೋಟೋಗೆ "ಸಹಾಯಕ ವಿದೇಶಾಂಗ ಮಂತ್ರಿ ವೂ ಜಿಯಾಂಗವೋ , ಬರಾದಾರ್ ಮತ್ತು ಅವರ ನಿಯೋಗದೊಂದಿಗೆ , ಸಾಮಾನ್ಯ ಸಂಗತಿಗಳ ವಿಷಯಗಳ ಕುರಿತು ಆಳವಾದ ಅಭಿಪ್ರಾಯಗಳ ವಿನಿಮಯದ ಕುರಿತು ಮಾತುಕತೆ ನಡೆಸಿದರು, ಅದು ಪರಸ್ಪರ ತಿಳುವಳಿಕೆ ಹೆಚ್ಚಿಸಲು ಮತ್ತು ಹೊಂದಾಣಿಕೆ ವಿಸ್ತರಿಸಲು ಸಹಾಯ ಮಾಡಿತು" ಎಂಬ ಅಡಿಬರಹ ನೀಡಲಾಗಿದೆ.

ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾವು, ಎಲ್ಲಾ ಪ್ರಾಯೋಗಿಕ ಉದ್ದೇಶಗಳಿಗಾಗಿ ತಾಲಿಬಾನ್‍ಗೆ ಕಾನೂಬದ್ಧತೆ ನೀಡಲು ಆತುರ ತೋರುತ್ತಿದೆ ಎಂದು ಕಂಡು ಬರುತ್ತಿದೆ. ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ ತಾಲಿಬಾನ್ ಜೊತೆ ಮಾತುಕತೆ ನಡೆಸಿರುವ ರೀತಿಯಲ್ಲಿ ಇದು ಸ್ಪಷ್ಟವಾಗಿ ಕಂಡುಬಂದಿದೆ.

ಈ ಮಧ್ಯೆ ಪುನರುಜ್ಜೀವನಗೊಂಡಿರುವ ತಾಲಿಬಾನ್, ಮತ್ತೆ ಅಫ್ಘಾನಿಸ್ತಾನವನ್ನು ತನ್ನ ತೆಕ್ಕೆಗೆ ಪಡೆಯುವ ಗುರಿ ಸಾಧಿಸಲು ಹೊರಟಿದೆ. ಅವರ ಪಡೆಗಳು ದೇಶದ ಅರ್ಧದಷ್ಟು ಭಾಗದ ಮೇಲೆ ಹಿಡಿತ ಸಾಧಿಸಿದ್ದು, ಈಗ ನಡೆಯುತ್ತಿರುವ ಶಾಂತಿ ಮಾತುಕತೆಯಲ್ಲಿ ಅಫ್ಘಾನ್‌ ಸರಕಾರದ ಜೊತೆ ಷರತ್ತುಗಳನ್ನು ನಿಗದಿಪಡಿಸುವಲ್ಲಿಯೂ ಮೇಲುಗೈ ಸಾಧಿಸಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ, ಬೆಂಬಲ ಮತ್ತು ಮನ್ನಣೆ ಕೋರಿ, ಕೆಲವೊಂದು ದೇಶಗಳಿಗೆ ರಾಜತಾಂತ್ರಿಕ ನಿಯೋಗಗಳನ್ನು ಕಳುಹಿಸುತ್ತಿದೆ.

English summary
Taliban fighters on Friday assassinated Afghanistan government's top media and information officer Dawa Khan Minapal in the capital city of Kabul on Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X