• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಿಶ್ವ ಸೃಷ್ಟಿಸಿದ ದೇವಕಣ ವಿಶ್ವವನ್ನೇ ನಾಶ ಮಾಡಬಲ್ಲದೆ?

|

ಲಂಡನ್‌, ಸೆ. 9 : ವಿಶ್ವ ಸೃಷ್ಟಿಸಿದ ದೇವಕಣ ಪ್ರಪಂಚವನ್ನೇ ನಾಶ ಮಾಡಬಲ್ಲದೆ? ಹೀಗೊಂದು ಪ್ರಶ್ನೆ ಉದ್ಭವವಾಗಿದೆ. ಖ್ಯಾತ ಖಗೋಳ ಶಾಸ್ತ್ರಜ್ಞ ಸ್ಟೀಫನ್‌ ಹಾಕಿಂಗ್‌ ಇಂಥದ್ದೊಂದು ಆತಂಕಕಾರಿ ಮಾಹಿತಿಯನ್ನು ಹೊರಗೆಡವಿದ್ದಲ್ಲದೇ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚೆಗೆ ಪುಸ್ತಕವೊಂದಕ್ಕೆ ಮುನ್ನುಡಿ ಬರೆದು ಮಾತನಾಡಿದ ಅವರು, ದೇವಕಣ ಪ್ರಪಂಚವನ್ನೇ ನಾಶ ಮಾಡುವ ಶಕ್ತಿ ಹೊಂದಿದೆ ಎಂದಿದ್ದಾರೆ.

ಶಕ್ತಿಯ ವಿಶ್ವರೂಪ ಸಮಯದಲ್ಲಿ ದೇವಕಣ ನಶ್ವರವಾಬಲ್ಲದು. ಅಸ್ತಿತ್ವದಲ್ಲಿರುವ ಪ್ರತಿಯೊಂದು ವಸ್ತುವಿಗೂ ಆಕಾರ ಮತ್ತು ಗಾತ್ರ ಒದಗಿಸಿರುವ ದೇವಕಣಗಳಲ್ಲಿ ಅತಿಹೆಚ್ಚಿನ ಶಕ್ತಿ ತುಂಬಿಕೊಂಡರೆ ಅದು ಸ್ವತಃ ಅಸ್ತಿತ್ವ ಕಳೆದುಕೊಳ್ಳುತ್ತದೆ ಎಂದು 72 ವರ್ಷದ ವಿಜ್ಞಾನಿ ವಿವರಿಸಿದ್ದಾರೆ.

ಇದೆಲ್ಲದರ ಪರಿಣಾಮ ನಿರ್ವಾತ ಪರಿಸ್ಥಿತಿ ಛಿದ್ರಗೊಂಡು ಅವಕಾಶ ಮತ್ತು ಸಮಯ ಕುಸಿಯಲು ಕಾರಣವಾಗುತ್ತದೆ. ದೇವಕಣದ ಶಕ್ತಿ ಚಿಂತೆಗೀಡು ಮಾಡುವ ಲಕ್ಷಣ ಹೊರಹಾಕಿದೆ ಎಂದು ವಿವರಿಸಿದ್ದಾರೆ.(ಬ್ರಹ್ಮ ರಹಸ್ಯ ಬಯಲು : ಸೃಷ್ಟಿಗೆ ಕಾರಣವಾದ ದೇವಕಣ ಪತ್ತೆ)

100 ಶತಕೋಟಿ ಗಿಗಾ ಎಲೆಕ್ಟ್ರಾನ್‌ ವೋಲ್ಟ್‌ಗಿಂತ ಹೆಚ್ಚಿನ ಶಕ್ತಿಯಲ್ಲಿ ದೇವಕಣಗಳು ಬಾರಿ ಶಕ್ತಿ ಪಡೆದುಕೊಳ್ಳುತ್ತವೆ. ನಿರ್ವಾತದ ವೇಗ ಬೆಳಕಿನ ವೇಗಕ್ಕಿಂತ ಹೆಚ್ಚಿನ ಉತ್ಕರ್ಷ ಪಡೆದುಕೊಳ್ಳುತ್ತದೆ. ಇದು ಯಾವುದೇ ಸಂದರ್ಭದಲ್ಲಿ ಘಟಿಸಬಹುದು. ನಮಗೆ ಇದನ್ನು ನೋಡಲು ಕೂಡ ಅವಕಾಶ ಸಿಗುವುದಿಲ್ಲ ಎಂದು ಎಚ್ಚರಿಸಿದ್ದಾರೆ.('God Particle' ಎಂಬ ಅರ್ಥವಿಲ್ಲದ ಪದ)

ಸದ್ಯದಲ್ಲಿ ಈ ವಿದ್ಯಮಾನ ನಡೆಯುವ ಸಾಧ್ಯತೆ ತುಂಬಾ ಕಡಿಮೆ ಇದೆ. ಆದರೆ ಅತಿ ಹೆಚ್ಚಿನ ಶಕ್ತಿ ಸಂಚಯವಾದಾಗ ದೇವಕಣ ಅಸ್ಥಿರಗೊಳ್ಳುವುದನ್ನು ತಡೆಯಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಏನಿದು ದೇವಕಣ?

ಯುರೋಪ್‌ ಪರಮಾಣು ಸಂಶೋಧನಾ ಸಂಸ್ಥೆಯು ಜಗತ್ತಿನ ಅತಿ ದೊಡ್ಡ ಭೌತ ಕಣ ವಿಜ್ಞಾನ ಪ್ರಯೋಗಾಲಯದಲ್ಲಿ ದೇವಕಣವನ್ನು ಶೋಧಿಸಿತ್ತು.

2012 ರ ಜೂನ್‌ದಲ್ಲಿ ನಡೆದ ಸಂಶೋಧನೆ ವಿಜ್ಞಾನದ ಇತಿಹಾಸದಲ್ಲೊಂದು ಮೈಲುಗಲ್ಲಾಯಿತು.(ದೈವಕಣದಲ್ಲಿ ದೈವತ್ವವನ್ನು ಹುಡುಕುತ್ತಾ...)

ಫ್ರಾನ್ಸ್‌ ಗಡಿ ಪ್ರದೇಶದಲ್ಲಿ ಬೃಹತ್ ಹ್ಯಾಡ್ರನ್ ಕೊಲೈಡರ್(Large Hadron Collider (LHC) ) ನಲ್ಲಿ ಅತ್ಯಧಿಕ ಶಕ್ತಿಯುಳ್ಳ ಪ್ರೋಟಾನ್ ಗಳನ್ನು ಡಿಕ್ಕಿ ಹೊಡೆಸಿ ದೇವಕಣದ ಇರುವಿಕೆಯ ಬಗ್ಗೆ ಖಾತ್ರಿ ಪಡಿಸಿಕೊಳ್ಳಲಾಗಿತ್ತು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The 72-year-old cosmologist Stephen Hawking has recently warned that the God particle or Higgs boson has the potential to obliterate the universe. .Higgs boson could become unstable at very high energy levels, which would lead to a "catastrophic vacuum decay" causing space and time to collapse, he said.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more