ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ರವಾಸಿ ಪ್ರಿಯರಿಗೆ ಗುಡ್ ನ್ಯೂಸ್: ನ.1 ರಿಂದ ಹವಾಯಿ ಭೇಟಿಗೆ ಅವಕಾಶ

|
Google Oneindia Kannada News

ನ್ಯೂಯಾರ್ಕ್, ಅಕ್ಟೋಬರ್ 22: ಪ್ರವಾಸಿ ಪ್ರಿಯರಿಗೆ ಇಲ್ಲಿದೆ ಒಂದು ಒಳ್ಳೆಯ ಸುದ್ದಿ. ಹವಾಯಿ ಅತ್ಯಂತ ಆದ್ಯತೆಯ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಹವಾಯಿ ನವೆಂಬರ್ 1 ರಂದು ಅಧಿಕೃತವಾಗಿ ಪ್ರವಾಸಿಗರನ್ನು ಸ್ವಾಗತಿಸುವುದಾಗಿ ಇತ್ತೀಚೆಗೆ ಘೋಷಿಸಿದೆ. ನವೆಂಬರ್ 1 ರಿಂದ ಪ್ರವಾಸಿಗರನ್ನು ಸ್ವಾಗತಿಸಲು ಹವಾಯಿ ಸಿದ್ಧಗೊಳ್ಳುತ್ತಿದ್ದು ನಿಮ್ಮ ರಜಾದಿನವನ್ನು ಹವಾಯಿಯಲ್ಲಿ ಕಳೆಯಬಹುದು.

ಮಂಗಳವಾರ ರಾಜ್ಯದ ಗವರ್ನರ್ ಡೇವಿಡ್ ಈಗೆ ಟ್ವಿಟ್ಟರ್ ಮೂಲಕ ಈ ಮಹತ್ವದ ಘೋಷಣೆ ಮಾಡಿದರು. ಟ್ವೀಟ್‌ನಲ್ಲಿ ಅವರು"ದ್ವೀಪಗಳಲ್ಲಿ ಕೋವಿಡ್‌ನ ಕಡಿಮೆ ಪ್ರಕರಣಗಳು ದಾಖಲಾಗುತ್ತಿವೆ. ಹೀಗಾಗಿ ಪ್ರವಾಸಿ ತಾಣಗಳನ್ನು ತೆರೆಯಲು ನಾನು ಪ್ರೋತ್ಸಾಹಿತನಾಗಿದ್ದೇನೆ. ನಮ್ಮ ಆಸ್ಪತ್ರೆಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ. ಇತ್ತೀಚೆಗೆ ಕಡಿಮೆ ಕೊರೊನಾ ಪ್ರಕರಣಗಳು ದಾಖಲಾಗುತ್ತಿವೆ. ಇದು ಆರ್ಥಿಕ ಚೇತರಿಕೆಗೆ ಸಹಾಯಕ ಸಂದೇಶವಾಗಿದೆ. ಹವಾಯಿ ಸಂಪೂರ್ಣವಾಗಿ ಲಸಿಕೆ ಹಾಕಿದ ದೇಶೀಯ ಪ್ರಯಾಣಿಕರನ್ನು ಸ್ವಾಗತಿಸುತ್ತದೆ" ಎಂದು ಅವರು ಬರೆದಿದ್ದಾರೆ.

ಹವಾಯಿ ವಿಶ್ವದ ಅತ್ಯಂತ ಸಕ್ರಿಯ ಜ್ವಾಲಾಮುಖಿಗಳಿಗೆ ನೆಲೆಯಾಗಿದೆ. ಇದು ವ್ಯಾಪಾರ ಪ್ರಯಾಣಿಕರಿಗೆ ದ್ವೀಪಕ್ಕೆ ಭೇಟಿ ನೀಡಲು ಅನುವು ಮಾಡಿಕೊಡುತ್ತದೆ. ಇದಕ್ಕೆ ಸಂಬಂಧಿಸಿದಂತೆ ಸರಣಿ ಟ್ವೀಟ್‌ಗಳನ್ನು ಮಾಡಿ ರಾಜ್ಯಪಾಲರು ನಿವಾಸಿಗಳ ಆರೋಗ್ಯ ಮತ್ತು ಸುರಕ್ಷತೆ ಅತ್ಯಂತ ಮುಖ್ಯವಾಗಿದೆ. ಹೀಗಾಗಿ ದ್ವೀಪಗಳಲ್ಲಿ ಪ್ರಕರಣಗಳ ಎಣಿಕೆ ಮತ್ತು ಆಸ್ಪತ್ರೆಗೆ ದಾಖಲಾಗುವುದನ್ನು ಮೇಲ್ವಿಚಾರಣೆ ಮಾಡಲಾಗುತ್ತದೆ ಎಂದು ಬರೆದಿದ್ದಾರೆ.

Hawaii Welcome to Tourists From November 1

ಈ ಹಿಂದೆ, ರಾಜ್ಯಪಾಲರು ಹವಾಯಿಗೆ ಪ್ರಯಾಣಿಕರನ್ನು ದ್ವೀಪದಲ್ಲಿ ಹೆಚ್ಚುತ್ತಿರುವ COVID-19 ಪ್ರಕರಣಗಳಿಂದಾಗಿ ತಮ್ಮ ಪ್ರಯಾಣದ ಯೋಜನೆಗಳನ್ನು ವಿಳಂಬಗೊಳಿಸುವಂತೆ ಕೇಳಿದ್ದರು. ಆದರೆ ಅವರು ಅಧಿಕೃತವಾಗಿ ರಾಜ್ಯದ ಸುರಕ್ಷಿತ ಪ್ರಯಾಣ ಕಾರ್ಯಕ್ರಮವನ್ನು ಎಂದಿಗೂ ನಿಲ್ಲಿಸಲಿಲ್ಲ. ಈಗ ದೇಶೀಯ ಸಂದರ್ಶಕರು ಕೋವಿಡ್ ವಿರುದ್ಧ ಲಸಿಕೆಯ ಪುರಾವೆ ಅಥವಾ ಋಣಾತ್ಮಕ ಪರೀಕ್ಷೆಯ ಪುರಾವೆಗಳೊಂದಿಗೆ ಬಂದರೆ ಕೋವಿಡ್-ಸಂಬಂಧಿತ ಸಂಪರ್ಕತಡೆಯೊಂದಿಗೆ ಹವಾಯಿಗೆ ಭೇಟಿ ನೀಡಲು ಅನುಮತಿಸಲಾಗಿದೆ.

ಹವಾಯಿ ಬಗ್ಗೆ: ಹವಾಯಿ ಜಗತ್ತಿನ ಅತ್ಯಂತ ಸುದಂರವಾದ ಪ್ರವಾಸಿ ತಾಣಗಳಲ್ಲಿ ಒಂದಾಗಿದೆ. ಒಂದೆಡೆ ಭೋರ್ಗರೆಯುವ ಜಲಪಾತ, ಇನ್ನೊಂದೆಡೆ ಶಾಂತವಾಗಿ ಹರಿಯುವ ಸರೋವರವನ್ನು ಹೊಂದಿದೆ. ಬಣ್ಣಬಣ್ಣದ ಮರಳುಗಳ ರಾಶಿ ತನ್ನತ್ತ ಸೆಳೆಯುತ್ತಲೇ ಇಡೀ ಜಗತ್ತಿನ ಸೌಂದರ‍್ಯವನ್ನು ತನ್ನೊಳಗೆ ಅಡಗಿಸಿಕೊಂಡಿದೆ ಹವಾಯಿ ದ್ವೀಪ. ಡಿಸೆಂಬರ್‌ ಸಮಯದಲ್ಲಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಹವಾಯಿ ಈ ಸಮಯದಲ್ಲಿ ತನ್ನೆಲ್ಲ ಸೌಂದರ್ಯವನ್ನು ತೆರೆದಿಟ್ಟು ಪ್ರವಾಸಿಗರಿಗೆ ಖುಷಿಯನ್ನು ಉಣಬಡಿಸುತ್ತದೆ. ಕ್ರಿಸ್‌ಮಸ್‌ನಿಂದ ನ್ಯೂ ಇಯರ್‌ ತನಕ ನಿರತವಾಗಿರುವ ಪ್ರವಾಸಿ ತಾಣ ಇದಾಗಿದೆ. ಈ ದ್ವೀಪವು ಮಧ್ಯ ಪೆಸಿಫಿಕ್‌ ಸಾಗರದಲ್ಲಿರುವ ದ್ವೀಪ ಸಮುದಾಯದ ಬಹುತೇಕ ಭಾಗವನ್ನು ವ್ಯಾಪಿಸಿದೆ. ಯುನೈಟೆಡ್‌ ಸ್ಟೇಟ್ಸ್‌ ಭೂಖಂಡದ ಈಶಾನ್ಯ, ಜಪಾನ್‌ನ ಆಗ್ನೇಯ ಮತ್ತು ಆಸ್ಪ್ರೇಲಿಯಾದ ನೈರುತ್ಯ ದಿಕ್ಕಿನ ಪ್ರದೇಶಗಳನ್ನು ಒಳಗೊಂಡಿದೆ. ಅಪರೂಪ ರಮಣೀಯವಾದ ಅತಿ ದೊಡ್ಡ ದ್ವೀಪವೇ ಹವಾಯಿ ದ್ವೀಪ. ಮಾತ್ರವಲ್ಲದೇ ಹವಾಯಿ ದ್ವೀಪವು ಜ್ವಾಲಾಮುಖಿಗಳಿಗೆ ಹೆಸರುವಾಸಿಯಾಗಿದೆ.

Hawaii Welcome to Tourists From November 1

ನೂರಾರು ದ್ವೀಪಗಳನ್ನು ಹವಾಯಿ ಒಳಗೊಂಡಿದೆ. ಸುಂದರ ಕಡಲ ತೀರ, ಅಪರೂಪದ ಉಡುಗೆ ತೊಡುಗೆ, ವಿಶಿಷ್ಟ ಆಚರಣೆಗಳು ಗಮನ ಸೆಳೆಯುತ್ತವೆ. ಇಲ್ಲಿನ ದ್ವೀಪಗಳ ವೈಶಿಷ್ಟ್ಯಗಳು ಹಲವು. ನೋಡಿದಷ್ಟು ಮುಗಿಯದ ಅದ್ಭುತಗಳನ್ನು ತನ್ನಲ್ಲಿ ಅಡಗಿಸಿಕೊಂಡಿದೆ.

ಇಲ್ಲಿನ ನೈಸರ್ಗಿಕ ಸೌಂದರ್ಯ, ಬೆಚ್ಚಗಿನ ಹವಾಮಾನ, ಜೀವಂತ ಅಗ್ನಿ ಪರ್ವತಗಳು, ಜಲಕ್ರೀಡೆಗಳು, ವಿಶಿಷ್ಟ ಸಂಸ್ಕೃತಿ ಎಲ್ಲವೂ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ನಂಬಲು ಅಸಾಧ್ಯವಾದ, ನೋಡಲು ಕಣ್ಣಿಗೆ ರಮಣೀಯವಾದ ಕಪ್ಪು, ಕೆಂಪು, ಹಸಿರು, ಬಣ್ಣ ಬಣ್ಣದ ಮರಳುಗಳ ಬೀಚ್‌ನಲ್ಲಿ ಕಾಲ ಕಳೆದಷ್ಟು ಬಾರಿ ಸಮಯ ಸರಿದು ಹೋಗುವುದೇ ಬೇಡ ಎನಿಸುತ್ತದೆ. ಹವಾಯ್‌ನಲ್ಲಿ ಪ್ರಮುಖವಾಗಿ ಎಂಟು ದ್ವೀಪಗಳಿವೆ. ಈ ದ್ವೀಪದ ಸುತ್ತಳತೆ ಸುಮಾರು 350 ಮೈಲಿ. ಇಲ್ಲಿ ಸುಮಾರು ಎಲ್ಲಾ ರೀತಿಯ ಹವಾಮಾನಗಳನ್ನು ಕಾಣಬಹುದು. ಯಾವಾಗಲೂ ತುಂಬಿದ ಹಸಿರು, ಜ್ವಾಲಾಮುಖಿ , ಹಸಿಯಾದ ಜೌಗು ಪ್ರದೇಶ, ಮರುಭೂಮಿ, ಹಿಮಪಾತ ಹೀಗೆ ಭೂಮಿ ಮೇಲಿನ ಬಹುತೇಕ ಹವಾಮಾನ ಸ್ಥಿತಿಯನ್ನು ಇಲ್ಲಿ ನೋಡಬಹುದು.

English summary
Hawaii has recently announced that it will officially welcome tourists back on November 1. On Tuesday, the governor of the state David Ige took to Twitter to make the important announcement.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X