ಪಾಕ್‌ನ ಎಫ್-16 ವಿಮಾನವನ್ನು ಭಾರತ ಹೊಡೆದುರುಳಿಸಿಲ್ಲ: ಅಮೆರಿಕದ ನಿಯತಕಾಲಿಕೆ ವರದಿ
ವಾಷಿಂಗ್ಟನ್, ಏ.6: ಪಾಕಿಸ್ತಾನದ ಯಾವ ಎಫ್-16 ವಿಮಾನಕ್ಕೂ ಹಾನಿಯಾಗಿಲ್ಲ ಎಲ್ಲವೂ ಸುರಕ್ಷಿತವಾಗಿದೆ ಎಂದು ಅಮೆರಿಕದ ನಿಯತಕಾಲಿಕೆಯೊಂದು ವರದಿ ಮಾಡಿದೆ. ನಿಯತ ಕಾಲಿಕೆ ವರದಿಯೂ ಭಾರತ ಈ ಮೊದಲು ಹೇಳಿದ್ದ ಎಫ್-16 ಯುದ್ಧ ವಿಮಾನವನ್ನು ಉರುಳಿಸಿದ್ದೇವೆ ಎನ್ನುವ ವರದಿಗೆ ತದ್ವಿರುದ್ಧವಾಗಿದೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಪಾಕಿಸ್ತಾನವು ಅಮೆರಿಕದವರಿಗೆ ಆಹ್ವಾನ ನೀಡಿ ಎಫ್-16 ವಿಮಾನಗಳನ್ನು ಎಣಿಕೆ ಮಾಡುವಂತೆ ಕೋರಿತ್ತು. ಎಲ್ಲ ಎಫ್-16 ವಿಮಾನಗಳು ಸುರಕ್ಷಿತವಾಗಿದೆ. ಯಾವುದೇ ವಿಮಾನ ಕಾಣೆಯಾಗಿಲ್ಲ ಎಂದು ಅಮೆರಿಕ ಹೇಳಿರುವುದಾಗಿ ನಿಯತಕಾಲಿಕೆ ವರದಿಯಲ್ಲಿ ತಿಳಿಸಿದೆ.
ಉಗ್ರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಪಾಕ್ ಭರವಸೆ : ಅಮೆರಿಕ
ಪುಲ್ವಾಮಾ ದಾಳಿಗೆ ಪ್ರತಿಯಾಗಿ ಭಾರತೀಯ ವಾಯುಸೇನೆ ಪಾಕಿಸ್ತಾನ ಬಾಲಕೋಟ್ ಪ್ರದೇಶದ ಮೇಲೆ ಫೆ.26ರಂದು ದಾಳಿ ನಡೆಸಿತ್ತು. ಇದಾದ ಮರುದಿನವೇ ಪಾಕ್‌ನ ಎಫ್-16 ವಿಮಾನವನ್ನು ಭಾರತ ಹೊಡೆದುರಿಳಿಸಿತ್ತು.
ಅದೇ ದಿನ ಸಂಜೆ ಸುದ್ದಿಗೋಷ್ಠಿ ನಡೆಸಿದ ಭಾರತೀಯ ರಕ್ಷಣಾ ಇಲಾಖೆ, ಹೊಡೆದುರುಳಿಸಿದ ಎಫ್-16 ವಿಮಾನದ ಭಾಗಗಳ ತೋರಿಸಿತ್ತು. ಆದರೆ, ಈ ಆರೋಪವನ್ನು ಪಾಕ್ ಅಲ್ಲಗಳೆದಿತ್ತು. ಇದೀಗ ಅಮೆರಿಕ ನಿಯಮಕಾಲಿಕೆ ವರದಿ ಕೂಡ ಯಾವುದೇ ಯುದ್ಧ ವಿಮಾನವನ್ನು ಭಾರತ ಹೊಡೆದುರಿಳಿಸಿಲ್ಲ ಎಂದು ಹೇಳುತ್ತಿದೆ.