ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ: ಭಾರತಕ್ಕಿಂತ ಬ್ರಿಟನ್‌ನಲ್ಲಿ ಹೆಚ್ಚು ಮಂದಿ ಭಾರತೀಯರ ಸಾವು?

|
Google Oneindia Kannada News

ಲಂಡನ್, ಏಪ್ರಿಲ್ 27: ಭಾರತಕ್ಕಿಂತ ಬ್ರಿಟನ್‌ನಲ್ಲಿ ಹೆಚ್ಚು ಮಂದಿ ಭಾರತೀಯರು ಮೃತಪಟ್ಟಿರುವ ಸಂಗತಿ ಬೆಳಕಿಗೆ ಬಂದಿದೆ.

ಭಾರತದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ ಸಾವಿರದ ಗಡಿಯಲ್ಲಿದೆ, ಹಾಗಾದರೆ ಬ್ರಿಟನ್‌ನಲ್ಲಿ ಅದಕ್ಕಿಂತ ಹೆಚ್ಚು ಮಂದಿ ಮೃತಪಟ್ಟಿದ್ದಾರೆಯೇ ಎನ್ನುವ ಸಂಶಯ ವ್ಯಕ್ತವಾಗಿದೆ.

ಆದರೆ ಅಲ್ಲಿನ ಆರೋಗ್ಯ ಇಲಾಖೆ ಅಧಿಕಾರಿಗಳು ಮೃತರ ಸಂಖ್ಯೆಯನ್ನು ನಿಖರವಾಗಿ ಹೇಳಲು ಹಿಂದೇಟು ಹಾಕಿದ್ದಾರೆ. ಮಾಹಿತಿಯನ್ನು ಇಷ್ಟು ಬೇಗ ಅವರು ನೀಡುವುದೂ ಇಲ್ಲ.

 ಮಾಸ್ಕ್‌ ಧರಿಸಿಲ್ಲ ಎಂದು ಸಿಆರ್‌ಪಿಎಫ್ ಯೋಧನಿಗೆ ಇದೆಂಥಾ ಶಿಕ್ಷೆ ಮಾಸ್ಕ್‌ ಧರಿಸಿಲ್ಲ ಎಂದು ಸಿಆರ್‌ಪಿಎಫ್ ಯೋಧನಿಗೆ ಇದೆಂಥಾ ಶಿಕ್ಷೆ

ಇಡೀ ದೇಶದಲ್ಲಿ ಆಸ್ಪತ್ರೆಗಳ ಅಂಕಿಅಂಶದಂತೆ 20,732 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿಸಿದೆ. ಮನೆಯಲ್ಲಿ ಮೃತಪಟ್ಟವರ ಕುರಿತು ಯಾವುದೇ ಅಂಕಿ ಅಂಶ ಇನ್ನೂ ಲಭ್ಯವಾಗಿಲ್ಲ. ಮನೆ ಹಾಗೂ ಕೇರ್ ಹೋಮ್‌ಗಳಲ್ಲಿ ಇದ್ದವರೆಲ್ಲರನ್ನು ಸೇರಿಸಿದರೆ ಸುಮಾರು 23 ಸಾವಿರ ಮಂದಿ ಮೃತಪಟ್ಟಿರಬಹುದು ಎಂದು ಅಂದಾಜಿಸಲಾಗಿದೆ.

Have More Indians Died in Britain than in India?

ಯುಕೆಯಲ್ಲಿರುವ ಇಂಟೆನ್ಸೀವ್ ಕೇರ್ ಹಾಸಿಗೆಗಳಲ್ಲಿ ಶೇ.40ರಷ್ಟು ಭಾಗವನ್ನು ಅಲ್ಲಿನ ಅಲ್ಪಸಂಖ್ಯಾತರಿದ್ದಾರೆ. ಹಾಗಾಗಿ 20 ಸಾವಿರ ಮಂದಿ ಮೃತರ ಪೈಕಿ ಸುಮಾರು 10 ಮಂದಿ ಅಲ್ಪಸಂಖ್ಯಾತರ ಸಾವಾಗಿದೆ ಎಂದು ತಿಳಿದುಬಂದಿದೆ.

ವಿದೇಶಗಳಲ್ಲಿ ಸಿಲುಕಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆತರಲು ಕೇಂದ್ರ ಮುಂದಾಗಿದೆ. ಅದೇ ಸಂದರ್ಭದಲ್ಲಿ ಹೊಸ ಸವಾಲೊಂದು ಎದುರಾಗಿದೆ.

ಐವತ್ತು ದೇಶಗಳಲ್ಲಿರುವ ಸರಿ ಸುಮಾರು 6,300 ಭಾರತೀಯರಿಗೆ ಕೊವಿಡ್ ಸೋಂಕು ದೃಢಪಟ್ಟಿದೆ. ಅವರನ್ನು ಕರೆತರುವುದು ಹೇಗೆ ಎಂಬ ಚಿಂತೆ ಕಾಡ ತೊಡಗಿದೆ. ಅಲ್ಲದೆ, ಕೇವಲ 10 ದಿನಗಳ ಅವಧಿಯಲ್ಲಿ ಸೋಂಕು ತಗುಲಿದ ಭಾರತೀಯರ ಸಂಖ್ಯೆ ದ್ವಿಗುಣವಾಗಿದೆ.

ವಸತಿ ನಿಲಯಗಳಲ್ಲಿ ವ್ಯಾಪಿಸಿದ ಸೋಂಕು
ಸಿಂಗಾಪುರದಲ್ಲಿ ಶೇ.90ರಷ್ಟು ಭಾರತೀಯರಿಗೆ ವಸತಿ ನಿಲಯದ ಮೂಲಕವೇ ಸೋಂಕು. ಜನಸಂದಣಿ ಪ್ರದೇಶದಲ್ಲಿ ಹೆಚ್ಚಿನ ವಸತಿ ನಿಲಯಗಳು ಇರುವುದರಿಂದ ಸೋಂಕು ಬೇಗ ಹಬ್ಬುತ್ತದೆ. ಕುವೈಟ್‌, ಬಹರೈನ್‌, ಒಮಾನ್‌, ಕತಾರ್‌, ಸೌದಿ ಅರೇಬಿಯಾ, ಯುಎಇ ಸೇರಿದಂತೆ ಕೊಲ್ಲಿ ರಾಷ್ಟ್ರಗಳಲ್ಲಿ ಸುಮಾರು 2 ಸಾವಿರ ಭಾರತೀಯರಿಗೆ ಸೋಂಕು. ಇರಾನ್‌ನಲ್ಲಿರುವ 100ಕ್ಕೂ ಅಧಿಕ ಮಂದಿ ಭಾರತೀಯರಿಗೆ ಕೊರೊನಾ ದೃಢ.

English summary
Could more Indians have died of coronavirus in Britain than in India? So that, speaking at a time when the official tally of coronavirus deaths in India is under a thousand, the number of deaths of people of Indian origin in Britain could be a thousand or more?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X