ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಕ್ಕಾನಿ ಸ್ಥಾಪಕ ಜಲಾಲುದ್ದೀನ್ ಸಾವಿನ ಸುದ್ದಿ ಖಚಿತ ಪಡಿಸಿದ ತಾಲಿಬಾನ್

|
Google Oneindia Kannada News

ಅಫ್ಘಾನಿಸ್ತಾನದ ಉಗ್ರಗಾಮಿ ಸಂಘಟನೆಗಳಲ್ಲೇ ಅತ್ಯಂತ ಕ್ರೂರವಾದ ಹಕ್ಕಾನಿ ಸಂಘಟನೆಯ ಸ್ಥಾಪಕ ಜಲಾಲುದ್ದೀನ್ ಹಕ್ಕಾನಿ ಮೃತಪಟ್ಟಿದ್ದಾನೆ ಎಂದು ತಾಲಿಬಾನ್ ಸಂಘಟನೆ ಮಂಗಳವಾರ ಹೇಳಿದೆ. ರಷ್ಯಾದ ವಿರುದ್ಧ ಅಫ್ಘಾನಿಸ್ತಾನದಲ್ಲಿ ನಡೆದ ಯುದ್ಧದಲ್ಲಿ ಮುಂಚೂಣಿಯಲ್ಲಿ ಇದ್ದವನು ಜಲಾಲುದ್ದೀನ್ ಹಕ್ಕಾನಿ.

ಹತ್ತು ವರ್ಷಗಳಿಂದ ಅವನು ಪಾರ್ಶ್ವವಾಯುವಿನಿಂದ ಬಳಲುತ್ತಿದ್ದ. ದೀರ್ಘ ಕಾಲದ ಅನಾರೋಗ್ಯದಿಂದ ಈತ ಸಾವನ್ನಪ್ಪಿದ್ದಾನೆ. 1970ನೇ ಇಸವಿಯಲ್ಲಿ ಈ ಸಂಘಟನೆ ಆರಂಭಿಸಿದ ಹಕ್ಕಾನಿ, 1995ರಲ್ಲಿ ತಾಲಿಬಾನ್ ಭಯೋತ್ಪಾದನೆ ಸಂಘಟನೆ ಜತೆಗೆ ಸೇರಿದ. "ಸಮಕಾಲೀನ ಜೆಹಾದಿಗಳಲ್ಲೇ ಹಕ್ಕಾನಿ ಮಹೋನ್ನತ ವ್ಯಕ್ತಿತ್ವದವನು" ಎಂದು ತಾಲಿಬಾನ್ ತನ್ನ ಹೇಳಿಕೆಯಲ್ಲಿ ಆತನನ್ನು ಹೊಗಳಿದೆ.

ಡ್ರೋನ್ ದಾಳಿಯಲ್ಲಿ ಪಾಕಿಸ್ತಾನ ತಾಲಿಬಾನ್ ಮುಖ್ಯಸ್ಥನ ಹತ್ಯೆಡ್ರೋನ್ ದಾಳಿಯಲ್ಲಿ ಪಾಕಿಸ್ತಾನ ತಾಲಿಬಾನ್ ಮುಖ್ಯಸ್ಥನ ಹತ್ಯೆ

ಸದ್ಯಕ್ಕೆ ಹಕ್ಕಾನಿ ಸಂಘಟನೆಯನ್ನು ಜಲಾಲುದ್ದೀನ್ ನ ಮಗ ಸಿರಾಜುದ್ದೀನ್ ಮುನ್ನಡೆಸುತ್ತಿದ್ದಾನೆ. ಆತ ತಾಲಿಬಾನ್ ನಲ್ಲೂ ಪ್ರಮುಖ ನಾಯಕ. ಅಫ್ಘಾನಿಸ್ತಾನದ ಸಂಸತ್ ಮೇಲಿನ ದಾಳಿ, ಅಮೆರಿಕದ ಸೇನಾ ನೆಲೆಗಳ ಮೇಲಿನ ದಾಳಿ ಸೇರಿದ ಹಾಗೆ ಪ್ರಮುಖ ದಾಳಿಗಳನ್ನು ಹಕ್ಕಾನಿ ಸಂಘಟನೆ ನಡೆಸಿತ್ತು.

Haqqani network founder Jalaluddin Haqqani dead: Afghan Taliban

ಅಫ್ಘಾನಿಸ್ತಾನದಲ್ಲಿ ಭಾರತವು ಕೈಗೊಂಡಿದ್ದ ಅಭಿವೃದ್ಧಿ ಕಾರ್ಯಗಳನ್ನು ಗುರಿ ಮಾಡಿಕೊಂಡು ಸಹ ದಾಳಿ ನಡೆಸಿತ್ತು ಹಕ್ಕಾನಿ ಉಗ್ರ ಸಂಘಟನೆ. 2008ರಲ್ಲಿ ಕಾಬೂಲ್ ನಲ್ಲಿ ನಡೆದ ಆ ದಾಳಿಯಲ್ಲಿ ಐವತ್ತೆಂಟು ಮಂದಿ ಮೃತಪಟ್ಟಿದ್ದರು. 1996ರಲ್ಲಿ ‌ಕಾಬೂಲ್ ಅನ್ನು ತಾಲಿಬಾನ್ ವಶಪಡಿಸಿಕೊಳ್ಳಲು ಹಕ್ಕಾನಿ ಸಂಘಟನೆ ನೆರವಾಗಿತ್ತು.

ಆಗ ಜಲಾಲುದ್ದೀನ್ ಹಕ್ಕಾನಿಯನ್ನು ಬುಡಕಟ್ಟು ಸಮುದಾಯದ ವ್ಯವಹಾರಗಳ ಸಚಿವನಾಗಿ ನೇಮಿಸಲಾಗಿತ್ತು. ಆತ 2001ರವರೆಗೆ ಆ ಹುದ್ದೆಯನ್ನು ನಿರ್ವಹಿಸಿದ. ಅದೇ ವರ್ಷ ಅಮೆರಿಕವು ತಾಲಿಬಾನ್ ಅನ್ನು ಅಫ್ಘಾನಿಸ್ತಾನದ ಅಧಿಕಾರ ಸ್ಥಾನದಿಂದ ಹೊರಹಾಕಲು ಸಫಲವಾಯಿತು.

ಪಾಕಿಸ್ತಾನದ ದರ್ ಅಲ್-ಉಲೂಮ್ ಹಕ್ಕಾನಿಯಾ ಮದರಸಾದಲ್ಲಿ ಜಲಾಲುದ್ದೀನ್ ಹಕ್ಕಾನಿ ವಿದ್ಯಾಭ್ಯಾಸ ಮಾಡಿದ್ದ ಎಂದು ನಂಬಲಾಗಿತ್ತು. ಆ ಸಂಸ್ಥೆ ತಾಲಿಬಾನ್ ಜತೆಗಿನ ನಂಟಿನ ಕಾರಣಕ್ಕೆ ಪ್ರಚಾರದಲ್ಲಿದೆ. ಅಸ್ಖಲಿತವಾಗಿ ಅರೇಬಿಕ್ ಮಾತನಾಡುತ್ತಿದ್ದ ಜಲಾಲುದ್ದೀನ್ ಗೆ ಅಲ್ ಕೈದಾ ಮುಖ್ಯಸ್ಥನಾಗಿದ್ದ ಒಸಾಮಾ ಬಿನ್ ಲಾಡೆನ್ ಜತೆಗೆ ನಿಕಟ ನಂಟಿತ್ತು.

2011ರಲ್ಲಿ ಅಮೆರಿಕ ಸೇನೆ ಪಾಕಿಸ್ತಾನದ ಅಬೋಟಾಬಾದ್ ನಲ್ಲಿ ದಾಳಿ ನಡೆಸಿ, ಒಸಾಮಾ ಬಿನ್ ಲಾಡೆನ್ ನನ್ನು ಕೊಂದುಹಾಕಿತ್ತು.

English summary
Jalaluddin Haqqani, the founder of the Haqqani Network, one of Afghanistan’s most feared militant groups, has died after a long illness, the Afghan Taliban said on Tuesday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X