ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಗತಿಕ ತಿನಿಸು ಚಾಕೊಲೇಟ್‌ ಹುಟ್ಟಿದಹಬ್ಬ ಇವತ್ತು!

By Nayana
|
Google Oneindia Kannada News

ಬೆಂಗಳೂರು, ಜು.7: ಎಲ್ಲರ ಹುಟ್ಟಿದ ಹಬ್ಬಕ್ಕೆ ಚಾಕೊಲೇಟ್‌ ಕೊಡೇದು ನಿಮಗೆ ಗೊತ್ತು, ಆದರೆ ಇವತ್ತು ಚಾಕೊಲೇಟ್‌ ಗೇ ಹುಟ್ಟಿದ ದಿನ. ಹ್ಯಾಪಿ ಬರ್ತ್‌ ಡೇ ಚಾಕೊಲೇಟ್‌

ಇಂದು ಪ್ರೇಮಿಗಳ ಪಾಲಿಗೆ ಚಾಕೊಲೇಟ್ ದಿನ. ಚಾಕೊಲೇಟ್ ಅನ್ನು ಯಾವುದೇ ದಿನ ತಿನ್ನಬಹುದಾದರೂ ಇದರ ಮಹತ್ವ ಸಾರಲೆಂದು ಒಂದು ದಿನ ಆಚರಿಸಿದರೆ ಏನೂ ತಪ್ಪಿಲ್ಲ. ಚಾಕೊಲೇಟ್‌ ಎಂದಾಕ್ಷಣ ಎಲ್ಲರ ಬಾಯಲ್ಲೂ ನೀರು, ಅದರಲ್ಲೂ ಮಕ್ಕಳಿಗಂತೂ ಚಾಕಲೇಟ್‌ ಎಂದರೆ ಫೆವರಿಟ್‌.

ಚಾಕೊಲೇಟ್‌ ಮಿಲ್ಕ್, ವೈಟ್‌ ಮತ್ತು ಡಾರ್ಕ್ ಎಂಬ ರುಚಿಗಳಿವೆ, ಚಾಕೊಲೇಟ್‌ ಅನ್ನು ಮಿಲ್ಕ್‌ ಪೌಡರ್‌, ಚಾಕೊಲೇಟ್‌ ಪೌಡರ್‌, ಸಕ್ಕರೆ, ಬೆಣ್ಣೆ ಬಳಸಿ ತಯಾರಿಸಲಾಗುತ್ತದೆ. ಇಂತಹ ಚಾಕೊಲೇಟ್‌ನ್ನು ತಿನ್ನುವುದನ್ನು ಇಷ್ಟ ಪಡುವವರಿಗಾಗಿಯೇ ಒಂದು ದಿನವನ್ನು ಮೀಸಲಿಡಲಾಗಿದೆ

ಈ ಕಳ್ಳರು ತುಂಬಾ ಚೂಸಿ: ಬರೀ ಚಾಕೊಲೇಟ್‌, ಡ್ರೈ ಫ್ರೂಟ್ಸ್‌ ಕದೀತಾರೆಈ ಕಳ್ಳರು ತುಂಬಾ ಚೂಸಿ: ಬರೀ ಚಾಕೊಲೇಟ್‌, ಡ್ರೈ ಫ್ರೂಟ್ಸ್‌ ಕದೀತಾರೆ

ಚಾಕೊಲೇಟ್‌ನಿಂದ ತಯಾರಿಸುವ ಬಿಸ್ಕೇಟ್‌, ಐಸ್‌ಕ್ರೀಂ, ಕೇಕ್‌ ಎಲ್ಲವೂ ಸಖತ್‌ ಫೇಮಸ್‌, ಆದರೆ ಚಾಕೊಲೇಟ್ ಮಹಿಳೆಯರಿಗೇ ಏಕೆ ಹೆಚ್ಚು ಇಷ್ಟ? ಈ ಪ್ರಶ್ನೆಗೆ ಉತ್ತರ ಹುಡುಕಲು ತಲೆಕೆಡಿಸಿಕೊಂಡ ವಿಜ್ಞಾನಿಗಳಿಗೂ ಸರಿಯಾದ ಉತ್ತರ ಸಿಕ್ಕಿಲ್ಲ.

ಆದರೆ ಚಾಕೊಲೇಟ್ ಉಡುಗೊರೆಯಾಗಿ ನೀಡಿದಾಗ ಮಾತ್ರ ಆಕೆಯ ಕಣ್ಣುಗಳು ಹೊಳೆಯುವುದನ್ನು ನೋಡಿದರೆ ಮಾತ್ರ, ಆಕೆಯ ಹೃದಯ ಗೆಲ್ಲಲು ಇದೊಂದು ಉತ್ತಮ ಸಾಧನ ಎಂದು ಪುರುಷರಿಗೆ ತಿಳಿಸಲು ಯಾವ ವಿಜ್ಞಾನಿಯೂ ಬೇಕಾಗಿಲ್ಲ ಅನಿಸುತ್ತದೆ.

ಮೊದಲು ಚಾಕೊಲೇಟ್‌ ಪರಿಚಯ ಮಾಡಿದ್ದು ಎಲ್ಲಿ

ಮೊದಲು ಚಾಕೊಲೇಟ್‌ ಪರಿಚಯ ಮಾಡಿದ್ದು ಎಲ್ಲಿ

ಜುಲೈ 7, 1550ರಂದು ಮೊದಲ ಬಾರಿಗೆ ಚಾಕೊಲೇಟ್‌ ಅನ್ನು ಯೂರೋಪಿನಲ್ಲಿ ಪರಿಚಯಿಸಲಾಯಿತು ಹಾಗಾಗಿ ಜುಲೈ 7 ರಂದು ವಿಶ್ವ ಚಾಕೊಲೇಟ್‌ ದಿನವನ್ನು ಆಚರಿಸಲಾಗುತ್ತಿದೆ ಎಂದು ಹೇಳಲಾಗುತ್ತದೆ. ವಿದೇಶಿಯರಿಗೆ ಚಾಕೊಲೇಟ್‌ ಮೇಲೆ ಎಷ್ಟು ಪ್ರೇಮ ಎಂದರೆ ಚಾಕೊಲೇಟ್‌ ಥೀಮ್‌ ಇಟ್ಟುಕೊಂಡು ಚಾಕೊಲೇಟ್‌ ಐಸ್‌ಕ್ರೀಮ್‌ ಡೇ, ಚಾಕೊಲೇಟ್‌ ಕೇಕ್‌ ಡೇ, ಮಿಲ್ಕ್‌ ಚಾಕೊಲೇಟ್‌ ಡೇ ವೈಟ್‌ ಚಾಕೊಲೇಟ್‌ ಡೇ, ಚಾಕೊಲೇಟ್‌ ಕವರ್ಡ್‌ ಎನಿಥಿಂಗ್‌ ಡೇಗಳಂಥ ದಿನಗಳನ್ನು ಆಚರಿಸುತ್ತಾರೆ.

ಈ ಪುಟಾಣಿ ಗ್ಲೋರಿಯಸ್ ಚಾಕಲೇಟ್ ಬೆಲೆ ಎಷ್ಟು ಗೊತ್ತಾ? ಈ ಪುಟಾಣಿ ಗ್ಲೋರಿಯಸ್ ಚಾಕಲೇಟ್ ಬೆಲೆ ಎಷ್ಟು ಗೊತ್ತಾ?

ಮಕ್ಕಳಿಗೆ ಚಾಕೊಲೇಟ್‌ ನೀಡಿದೆ ಮಾತು ಕೇಳುತ್ತಾರೆ

ಮಕ್ಕಳಿಗೆ ಚಾಕೊಲೇಟ್‌ ನೀಡಿದೆ ಮಾತು ಕೇಳುತ್ತಾರೆ

ಮಕ್ಕಳಿಗೆ ಚಾಕೊಲೇಟ್‌ ಎಂದರೆ ಅಚ್ಚುಮೆಚ್ಚು, ಏನೇ ಹಠ ಮಾಡುತ್ತಿರಲಿ, ತಂದೆ-ತಾಯಿತರ ಮಾತು ಕೇಳದೆ ಇರುವ ಸಂದರ್ಭದಲ್ಲಿ ನೀನು ಈ ಕೆಲಸ ಮಾಡಿಲ್ಲ ಎಂದರೆ ಚಾಕೊಲೇಟ್‌ ಕೊಡಲ್ಲ ಎಂದು ಹೇಳಿದರೆ ಸಾಕು ಸುಮ್ಮನಾಗಿ ಹೇಳಿದ ಕೆಲಸವನ್ನೆಲ್ಲ ಮಾಡಿಬಿಡುತ್ತಾರೆ ಮಕ್ಕಳಿಗೆ ಚಾಕೊಲೇಟ್‌ ಎಂದರೆ ಅಷ್ಟು ಅಚ್ಚುಮೆಚ್ಚು.

ಚಾಕೊಲೇಟ್‌ ತುಂಬಾ ರುಚಿಕರ

ಚಾಕೊಲೇಟ್‌ ತುಂಬಾ ರುಚಿಕರ

ಚಾಕೊಲೇಟ್‌ನಲ್ಲಿರುವ ಕೋಕೋ ತುಂಬಾ ರುಚಿಕರವಾಗಿದ್ದು, ಅದರಿಂದಲೇ ಎಲ್ಲರಿಗೂ ಚಾಕೊಲೇಟ್‌ ಪ್ರಿಯವೆನಿಸುತ್ತದೆ. ಇದನ್ನು ಹೆಣ್ಣುಮಕ್ಕಳು ಮಾತ್ರವಲ್ಲ ಪುರುಷರೂ ಕೂಡ ಹೆಚ್ಚು ಇಷ್ಟಪಡುತ್ತಾರೆ.

ಪ್ರಿಯತಮೆಯ ಹೃದಯ ಗೆಲ್ಲಲು ಚಾಕೊಲೇಟ್‌ನಿಂದ ಸಾಧ್ಯ

ಪ್ರಿಯತಮೆಯ ಹೃದಯ ಗೆಲ್ಲಲು ಚಾಕೊಲೇಟ್‌ನಿಂದ ಸಾಧ್ಯ

ಒಂದು ವೇಳೆ ಪ್ರಿಯತಮೆಯ ಹೃದಯ ಗೆಲ್ಲುವ ಪ್ರಯತ್ನದಲ್ಲಿದ್ದರೆ ಮೊದಲು ಆಕೆಗೆ ಚಾಕೊಲೇಟ್‌ ನೀಡಿ, ನಿಮ್ಮ ಪ್ರೀತಿಯ ನಿವೇದನೆ ಅನುಮೋದನೆ ಪಡೆಯುವ ಸಾಧ್ಯತೆ ಹೆಚ್ಚಿರುತ್ತದೆ.

ಮಹಿಳೆಯರ ಮನೋಭಾವವನ್ನು ಸ್ಥಿರಗೊಳಿಸುವ ಶಕ್ತಿ ಚಾಕೊಲೇಟ್‌ಗಿದೆ

ಮಹಿಳೆಯರ ಮನೋಭಾವವನ್ನು ಸ್ಥಿರಗೊಳಿಸುವ ಶಕ್ತಿ ಚಾಕೊಲೇಟ್‌ಗಿದೆ

ಮಹಿಳೆಯರ ಮನೋಭಾವ ಬದಲಾಗುತ್ತಾ ಇರುತ್ತದೆ. ಅದರಲ್ಲೂ ಮಾಸಿಕ ದಿನಗಳಲ್ಲಿ ವಿಪರೀತವಾಗಿರುತ್ತದೆ. ಹಾಗಾಗಿ ಆಕೆಯ ಮನೋಭಾವ ಈ ದಿನಗಳಲ್ಲಿ ಹೆಚ್ಚು ಬದಲಾಗದೇ ಸ್ಥಿರವಾಗಿರಲು ಈ ದಿನಗಳಲ್ಲಿ ಚಾಕೊಲೇಟ್ ತಿನ್ನುವ ಮೂಲಕ ಸಾಧ್ಯವಾಗುತ್ತದೆ. ಇದು ಎಷ್ಟರ ಮಟ್ಟಿಗೆ ನಿಜವಾಗುತ್ತದೆ ಎಂದು ಕಂಡುಕೊಳ್ಳಲಾದರೂ ಆಕೆಗೆ ಚಾಕಲೇಟುಗಳನ್ನು ಉಡುಗೊರೆಯಾಗಿ ನೀಡಿ ಆಕೆಯ ಹೃದಯವನ್ನು ಗೆಲ್ಲಬಹುದು.

English summary
From children to old age, everybody loves chocolate. And the chocolate is undisputed symbol of birthday celebration. Interestingly today is birthday of chocolate. Here is the story about.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X