ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತೂಫಾನಿಗೆ ತತ್ತರಿಸಿದ ಜಪಾನ್: ಭಾರಿ ಮಳೆ ಗಾಳಿಯಿಂದ ಅನಾಹುತ

|
Google Oneindia Kannada News

ಟೋಕಿಯೊ, ಅಕ್ಟೋಬರ್ 12: ಸತತ ಪ್ರಕೃತಿ ವಿಕೋಪಗಳಿಂದ ತತ್ತರಿಸುತ್ತಿರುವ ಜಪಾನ್‌ಗೆ ಮತ್ತೊಂದು ಆಘಾತ ಎದುರಾಗಿದೆ. ರಾಜಧಾನಿ ಟೋಕಿಯೋ ಸೇರಿದಂತೆ ಹಲವೆಡೆ ಹಗಿಬಿಸ್ ತೂಫಾನು ಅಪ್ಪಳಿಸುತ್ತಿದೆ. ಅದಕ್ಕೂ ಮುನ್ನ ಬಿರುಗಾಳಿ ಮಳೆಗೆ ಜನತೆ ಕಂಗಾಲಾಗಿದ್ದಾರೆ.

ಉತ್ತರ ಕರ್ನಾಟಕದಾದ್ಯಂತ ಮತ್ತೆ ವರುಣನ ಆರ್ಭಟಉತ್ತರ ಕರ್ನಾಟಕದಾದ್ಯಂತ ಮತ್ತೆ ವರುಣನ ಆರ್ಭಟ

ಟೋಕಿಯೋ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಭಾರಿ ಶಕ್ತಿಶಾಲಿ ಗಾಳಿಯ ಜತೆಗೆ ರಚ್ಚೆಹಿಡಿದಂತೆ ತೀವ್ರ ಮಳೆ ಸುರಿದಿದೆ. ಜಪಾನ್‌ನಲ್ಲಿ ಕಳೆದ ಆರು ದಶಕಗಳಲ್ಲಿಯೇ ಅತ್ಯಂತ ಭೀಕರ ತೂಫಾನು ಇದಾಗಿದೆ. ರಸ್ತೆಗಳು ಕುಸಿದುಹೋಗಿದ್ದು, ಬೀಚ್‌, ರೈಲ್ವೆ ನಿಲ್ದಾಣಗಳು ಹಾನಿಗೊಳಗಾಗಿವೆ.

Hagibis Typhoon Hits Japan Heavy Rain Winds Killed One

ನೈಸರ್ಗಿಕ ವಿಕೋಪಕ್ಕೆ ಕನಿಷ್ಠ ಒಂದು ಜೀವ ಬಲಿಯಾಗಿದೆ. ರಾಜಧಾನಿ ಸೇರಿದಂತೆ ಹಲವೆಡೆ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ. ಅನೇಕ ಕಡೆ ಈಗಾಗಲೇ ಪ್ರವಾಹ ಪರಿಸ್ಥಿತಿ ಉಂಟಾಗಿದೆ. ಆರು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸಾಗಿಸಲು ಆದೇಶಿಸಲಾಗಿದೆ.

ಈಶಾನ್ಯ ಜಪಾನ್ ಗೆ ಅಪ್ಪಳಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನಈಶಾನ್ಯ ಜಪಾನ್ ಗೆ ಅಪ್ಪಳಿಸಿದ 6.3 ತೀವ್ರತೆಯ ಪ್ರಬಲ ಭೂಕಂಪನ

ಗಂಟೆಗೆ 870 ಮೈಲು (1,400 ಕಿಮೀ) ವೇಗದಲ್ಲಿ ಚಂಡಮಾರುತ ಬೀಸುತ್ತಿದ್ದು, ಅದರ ನಡುವೆ 100 ಮೈಲು ವೇಗದಲ್ಲಿ ಗಾಳಿ ಬೀಸುತ್ತಿದೆ. 1958ರಲ್ಲಿ ಬೀಸಿದ್ದ ತೂಫಾನು ಟೋಕಿಯೊ ಮತ್ತು ಶಿಝೌಕಾ ಪ್ರದೇಶಗಳನ್ನು ಛಿದ್ರಗೊಳಿಸಿ 1,200 ಮಂದಿಯನ್ನು ಬಲಿತೆಗೆದುಕೊಂಡಿತ್ತು. ಹಗಿಬಿಸ್ ತೂಪಾನು ಕೂಡ ಇಷ್ಟೇ ಭೀಕರವಾಗಿದೆ. ಇದು ಮುಂದುವರಿದರೆ ದೊಡ್ಡ ಅನಾಹುತವೇ ಉಂಟಾಗಲಿದೆ ಎಂದು ಎಚ್ಚರಿಕೆ ನೀಡಲಾಗಿದೆ.

Hagibis Typhoon Hits Japan Heavy Rain Winds Killed One

ನೀವು ಹಿಂದೆಂದೂ ನೋಡದ ರೀತಿಯಲ್ಲಿ ಮಳೆ ಎದುರಾಗಲಿದ್ದು, ಅದಕ್ಕಾಗಿ ಸಿದ್ಧರಾಗಿ ಎಂದು ಹವಾಮಾನ ಇಲಾಖೆ ತಿಳಿಸಿದೆ. ಶಿಝೌಕಾದಲ್ಲಿ ವಿಪರೀತ ಮಳೆಯಿಂದ ಭೂಕುಸಿತ ಉಂಟಾಗಿದ್ದು, ಅದಕ್ಕೂ ಮುನ್ನ ಈ ಭಾಗದಲ್ಲಿ ರಿಕ್ಟರ್ ಮಾಪಕದಲ್ಲಿ 5.3 ತೀವ್ರತೆಯ ಭೂಕಂಪ ಉಂಟಾಗಿತ್ತು.

ಟೋಕಿಯೊ, ಸೈತಮಾ, ಗುನ್ಮಾ, ಯಮನಶಿ, ನಾಗಾನೊ, ಶಿಜುವಾಕಾ, ಕನಗಾವಾ ಪ್ರದೇಶಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಟೋಕಿಯೋಗೆ ಚಂಡಮಾರುತ ಅಪ್ಪಳಿಸುವ ಸಾಧ್ಯತೆ ಇದೆ.

ಚಂಡಮಾರುತದ ಅಬ್ಬರವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ

English summary
Japan witnessing a worst typhoon in six decades as powerful Hagibis brings heavy rainfall and strong winds killed at least one person on Saturday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X